Lakshmi Baramma Serial: ಕಾವೇರಿಯ ಕರ್ಮ ರಿಟರ್ನ್.. ಮನೆಯ ಅಧಿಕಾರ ಸೊಸೆ ಕೈಗೆ..ಮುಂದೇನು?

By ಎಸ್ ಸುಮಂತ್

ಕಶ್ಯಪ್ ಮನೆಯಲ್ಲಿ ಏನೂ ಆಗಬಾರದಾಗಿತ್ತೋ ಅದೇ ನಡೆದು ಹೋಗಿದೆ. ಕೋಪದ ಕೈಯಲ್ಲಿ ಮೂಗು ಕೊಯ್ದುಕೊಂಡರೆ ಆ ಮೂಗು ಮತ್ತೆ ಬರುತ್ತಾ ಹೇಳಿ. ಪಾಪ ಕಾವೇರಿಯದ್ದೂ ಅಂಥದ್ದೇ ಪಾಡಾಗಿದೆ‌. ಸೊಸೆಯನ್ನು ಗದರಿಸಲು ಹೋಗಿ, ಭಯಪಡಿಸಲು ಹೋಗಿ ಈಗ ಅಧಿಕಾರ ಕಳೆದುಕೊಂಡು ಕೂತಿದ್ದಾಳೆ‌. ಅದಕ್ಕಾಗಿಯೇ ಇಷ್ಟೆಲ್ಲ ಒದ್ದಾಡಿದ, ಹೊಡೆದಾಡಿದ ಕಾವೇರಿ ಈಗ ಸುಮ್ಮನೆ ಇರುತ್ತಾಳಾ..?

ವೈಷ್ಣವ್‌ನನ್ನು ಮದುವೆಯಾದ ಮೇಲೆ ಲಕ್ಷ್ಮೀ ಆದಷ್ಟು, ಜವಾಬ್ದಾರಿಗಳನ್ನು ಹೊತ್ತುಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾಳೆ. ವೈಷ್ಣವ್ ಏನು ಬೇಕು, ಏನು ಬೇಡ ಎಂಬುದನ್ನು ತಿಳಿದುಕೊಳ್ಳುವ ಜೊತೆಗೆ ಮನೆಯವರಿಗೆಲ್ಲಾ ಆತ್ಮೀಯಳಾಗಿ ಬಿಟ್ಟಿದ್ದಾಳೆ. ಆದರೆ, ಈಗ ಯೋಚಿಸಿದ್ದೆಲ್ಲವೂ ಉಲ್ಟಾ ಆಗಿದೆ.

Lakshmi Baramma serial written update on August 23rd episode

ಕಾವೇರಿಗೆ ಕಾಡಿದ ಕರ್ಮ

ಕಾವೇರಿಗೆ ತಾನೂ ಮಾಡಿದ ಪಾಪ ಕರ್ಮದ ಬಗ್ಗೆ ಕೊಂಚ ಹೆಚ್ಚಾಗಿಯೇ ಅರಿವಿದೆ. ಸಣ್ಣದೊಂದು ತಪ್ಪಾದಾಗಲೂ ಅತ್ತೆಯ ಬಗ್ಗೆ ನೆನಪಿಸಿಕೊಂಡು ಭಯಪಡುತ್ತಾಳೆ. ಲಕ್ಷ್ಮೀಯ ಕುತ್ತಿಗೆಗೆ ಅತ್ತೆಯ ತಾಳಿ ಬಿದ್ದಾಗಲೂ ತಲೆ ಸುತ್ತಿ ಬಿದ್ದಿದ್ದಳು. ಇದೀಗ ಮತ್ತೆ ಅತ್ತೆಯ ಮಾತುಗಳು ನೆನಪಾಗಿದೆ. ಸುಪ್ರೀತಾ ಹಳೆಯ ದಿನಗಳನ್ನು‌ ಮೆಲುಕು ಹಾಕಿದ್ದಾಳೆ. ಮದುವೆಯಾಗಿ ಬಂದಾಗ ಕಾವೇರಿ, ತನ್ನ ಅತ್ತೆಗೆ ಯಾವ ಬೆಲೆಯನ್ನು ಕೊಟ್ಟಿರಲಿಲ್ಲ. ಅತ್ತೆ ಕೈಯಿಂದ ಆದಷ್ಟು ಅಧಿಕಾರವನ್ನು ಕಿತ್ತುಕೊಂಡಿದ್ದಳು. ಈಗ ಅದೇ ಕರ್ಮ ರಿಟರ್ನ್ ಆಗಿದೆ.

ಲಕ್ಷ್ಮೀಗೆ ತಾಯಿ ಸ್ಥಾನದಲ್ಲಿ ನಿಂತ ಸುಪ್ರೀತಾ

ಕಾವೇರಿ ಮಾಡುವುದಕ್ಕೆ ಹೋಗಿದ್ದೇ ಬೇರೆ. ಲಕ್ಷ್ಮೀಯ ಮಾತನ್ನೇ ಮನೆಯವರೆಲ್ಲ ಕೇಳುತ್ತಾರೆ ಎಂಬ ಕೋಪವನ್ನು ಲಕ್ಷ್ಮೀಯ ಮೇಲೆ ಹಾಕಿದ್ದಳು. ಈ ವೇಳೆ ಹೆದರಿಸುವುದಕ್ಕೆ, ಇನ್ನೆಂದು‌ ಮಾತನಾಡಬಾರದು ಎಂಬ ಕಾರಣಕ್ಕೆ ಎಚ್ಚರಿಕೆ ಕೊಡುವುದಕ್ಕೆಂದು, ತಗೋ ಮನೆಯ ಕೀಲಿ ಕೈ. ಇನ್ಮುಂದೆ ಮನೆಯ ಜವಾಬ್ದಾರಿಯನ್ನು ನೀನೆ ತಗೋ ಎಂದಿದ್ದಳು. ಅದೇ ಸಮಯಕ್ಕೆ ಸುಪ್ರೀತಾ ಹಾಗೂ ಕೃಷ್ಣ ಅಲ್ಲಿಗೆ ಬಂದಿದ್ದಾರೆ. ಸುಪ್ರೀತಾಗೆ ಈ ಸನ್ನಿವೇಶ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದೆ. ತಕ್ಷಣ ಓಡಿ ಬಂದು, ಕೀಲಿ ತೆಗೆದುಕೊಂಡು, ತಗೊ ಮಾ ಅತ್ತಿಗೆ ಅಷ್ಟೊಂದು ಪ್ರೀತಿಯಿಂದ ಕೊಡುವಾಗ ಬೇಡ ಎನ್ನಬಾರದು ಎಂದು ಅತ್ತಿಗೆಯಿಂದ ಅಧಿಕಾರ ಕಿತ್ತು ಲಕ್ಷ್ಮೀಗೆ ಕೊಟ್ಟಿದ್ದಾಳೆ.

Lakshmi Baramma serial written update on August 23rd episode

ಕೃಷ್ಣನಿಂದಲೂ ಶಬ್ಬಾಶ್ ಗಿರಿ

ಕೃಷ್ಣ ಹೆಂಡತಿಯ ಕೆಲಸಗಳಿಗೆ ಆಗಾಗ ಹೊಗಳುತ್ತಾ ಇರುತ್ತಾರೆ. ಈಗ ಜವಾಬ್ದಾರಿ ನೀಡುತ್ತಿರುವ ಕೆಲಸ ಕಂಡು ಮತ್ತಷ್ಟು ಖುಷಿ ಪಟ್ಟಿದ್ದಾನೆ‌. ಕಾವೇರಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾನೆ. ನಮ್ಮ ಅಮ್ಮನಂತೆ ಕಾವೇರಿ ಕೂಡ. ಮದುವೆಯಾಗಿ ಬಂದಾಗ ನಮ್ಮ ಅಮ್ಮ ಕೂಡ ಕಾವೇರಿ ಅಧಿಕಾರ ಕೊಟ್ಟು ನೆಮ್ಮದಿಯಾಗಿ ಬಿಟ್ಟಿದ್ಲು. ಈಗ ಕಾವೇರಿ ಕೂಡ ಸೊಸೆಗೆ ಅಧಿಕಾರ ಕೊಟ್ಟು ಈಗ ನೆಮ್ಮದಿಯಾಗಿರುತ್ತಾಳೆ ಎಂದಿದ್ದಾನೆ.

ಕಾವೇರಿಯ ಪಾಡು ನೋಡೋಕೆ ಆಗ್ತಿಲ್ಲ

ಏನೋ ಮಾಡಲೂ ಹೋಗಿ ಏನೂ ಮಾಡಿದೆ ನೀನು ಅಂತ ಕಾವೇರಿ ಕೊರಗುವಂತೆ ಆಗಿದೆ. ಸೊಸೆಯ ಕೈಗೆ ಈಗ ಅಧಿಕಾರದ ಕೀ ಸಿಕ್ಕಿದೆ. ಅದು‌ ಮರೆಯಲ್ಲಿ ಕೊಟ್ಟಿದ್ದೇನು ಅಲ್ಲ. ಎಲ್ಲರ ಮುಂದೆ, ಅದರಲ್ಲೂ ಗಂಡನ ಮುಂದೆಯೇ ಅಧಿಕಾರ ಹಸ್ತಾಂತರ ಮಾಡಿದ್ದಾಳೆ. ಈಗ ಮುಂದೆ‌ ಮಾತಾಡುವ ಹಾಗೆಯೇ ಇಲ್ಲ. ಮತ್ತೆ ಆ ಅಧಿಕಾರ ಕೊಡು ಎನ್ನುವ ಹಾಗಿಲ್ಲ. ಯಾಕಂದ್ರೆ ಲಕ್ಷ್ಮೀ ತೀರಾ ದಡ್ಡಿ ಎನ್ನುವಂತೆ ಅಲ್ಲ. ಲಕ್ಷ್ಮೀಗೆ ಇಡೀ ಸಂಸಾರ ನಿಭಾಯಿಸಿ ಅನುಭವ ಹೆಚ್ಚಾಗಿಯೇ ಇದೆ. ತಾನೇ ದುಡಿದು ಸಂಸಾರ ಸಾಕುತ್ತಿದ್ದ ಹುಡುಗಿ. ಈಗ ಕಾವೇರಿ ಅಧಿಕಾರಕ್ಕಾಗಿ ಗಮನ ಕೊಡ್ತಾಳೋ, ಕೀರ್ತಿಯಿಂದ ತಪ್ಪಿಸಿಕೊಳ್ಳುವಂತ ಗಮನ ಹರಿಸುತ್ತಾಳೊ ಗೊತ್ತಿಲ್ಲ.

More from Filmibeat

English summary
Lakshmi Baramma serial written update on August 23rd episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X