Lakshmi Baramma Serial: ಕಾವೇರಿಯ ಮಾತು ಮಿತಿ ಮೀರಿದೆ.. ಲಕ್ಷ್ಮೀಗೆ ಹಿಗ್ಗಾಮುಗ್ಗಾ ಬೈದ ಅತ್ತೆ!

By ಎಸ್ ಸುಮಂತ್

ಕಾವೇರಿ ಇತ್ತೀಚೆಗೆ ಜವಾಬ್ದಾರಿ ಇರುವ ಮನೆಯ ಯಜಮಾನಿಯ ರೀತಿ ವರ್ತಿಸುತ್ತಿಲ್ಲ. ಬದಲಿಗೆ ಹುಚ್ಚಿಯಂತೆ ಆಡುತ್ತಿದ್ದಾಳೆ. ಎಲ್ಲರ ಮೇಲೂ ರೇಗುತ್ತಿದ್ದಾಳೆ. ಎಲ್ಲವನ್ನು ತಾನೇ ನಿಭಾಯಿಸಬೇಕು ಎಂಬ ಅಹಂನಿಂದಾಗಿ ಯಾರ ಪ್ರೀತಿಯನ್ನು ಉಳಿಸಿಕೊಳ್ಳುತ್ತಿಲ್ಲ. ಎಲ್ಲರ ನೆಮ್ಮದಿಯನ್ನು ಕಳೆಯುತ್ತಿದ್ದಾಳೆ‌. ಅದರಲ್ಲೂ ಲಕ್ಷ್ಮೀ ಮೇಲಂತು ಸುಮ್ಮನೆ ಸುಮ್ಮನೆ ರೇಗುತ್ತಿದ್ದಾಳೆ.

ಕಾವೇರಿಗೆ ಟೆನ್ಶನ್ ಕಡಿಮೆ ಆಯ್ತು ಅನ್ನೋದೇ ಇಲ್ಲ. ಎಲ್ಲವೂ ಕಳೆದು ನೆಮ್ಮದಿಯಾಗಿರ್ತಾಳೆ ಎನ್ನುವಷ್ಟರಲ್ಲಿ ಮತ್ಯಾರೋ ಸಮಸ್ಯೆ ತಂದೊಡ್ಡುತ್ತಾರೆ. ಸದ್ಯಕ್ಕೆ ಕೀರ್ತಿಯ ಚಿಂತೆ ಮುಗೀತು ಎನ್ನುವಾಗಲೇ ಮನೆಗೆ ಪತ್ರವೊಂದು ಬಂದು, ಮತ್ತೆ ಮದುವೆ ಸೀಕ್ರೆಟ್ ಬಗ್ಗೆ ತಲೆ ಕೆಡಿಸಿದೆ.

Lakshmi Baramma serial Written Update on August 25th episode

ವೈಷ್ಣವ್ ಕಾಣದೆ ಕಾವೇರಿ ಕಂಗಾಲು

ಮಗ.. ಮಗ..ಮಗ.. ಕಾವೇರಿಗೆ ಮಗನ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಕಾಳಜಿ. ಕುಂತ್ರು, ನಿಂತ್ರು ತಾನೇ ಕಾಳಜಿ ತೋರಬೇಕು, ಮಗನ ಎಲ್ಲಾ ಜವಾಬ್ದಾರಿಗಳನ್ನು ತಾನೇ ತೆಗೆದುಕೊಳ್ಳಬೇಕು. ಮಗ ಕೂಡ ಎಲ್ಲದರಲ್ಲೂ ನನ್ನೇ ಕೇಳಬೇಕು ಎಂದೇ ಬಯಸುತ್ತಾಳೆ. ಮನೆಯಲ್ಲಿ ಯಾರಿದ್ದರೂ, ಇಲ್ಲದಿದ್ದರೂ ತಲೆ ಕೆಡಿಸಿಕೊಳ್ಳಲ್ಲ ಕಾವೇರಿ. ಆದರೆ, ವೈಷ್ಣವ್ ಇಲ್ಲ ಅಂದ್ರೆ ತಡೆಯೋದಿಲ್ಲ. ಇದೇ ವಿಧಿಗೆ ಬೇಜಾರು. ವೈಷ್ಣವ್ ರಾತ್ರಿ 10 ಆದರೂ ಮನೆಗೆ ಬಂದಿಲ್ಲ ಅಂತ ಕಾವೇರಿ ಲಕ್ಷ್ಮೀಗೆ ಪ್ರಶ್ನೆ ಮಾಡಿದ್ದಾಳೆ.

ಅಂಕಿತ್ ಮನಸ್ಸಿಗೆ ಬೇಜಾರು ಮಾಡಿದ ಕಾವೇರಿ

ಅಂಕಿತ್ ಯಾವುದೋ ಖುಷಿಗೆ ಸ್ವೀಟ್ ತಂದು ಮನೆಯವರಿಗೆಲ್ಲ ಹಂಚಿದ್ದಾನೆ. ಅಪ್ಪ ಎಲ್ಲಿ ಅಂತ ಕೇಳಿ ಅಮ್ಮನಿಗೆ ಬೇಸರ ಮಾಡಿದ್ದ, ಅಂಕಿತ್ ಅಮ್ಮನಿಗೂ ಸ್ವೀಟ್ ತಿನ್ನಿಸಿದ್ದಾನೆ. ಅಷ್ಟರಲ್ಲಾಗಲೇ ಕಾವೇರಿ ಎಲ್ಲರೂ ಕೂತಿದ್ದ ಜಾಗಕ್ಕೆ ಬಂದಿದ್ದಳು. ಅವರ ಸಂತೋಷ ನೋಡಿ, ಅದಾಗಲೇ ಕೋಪಗೊಂಡಿದ್ದಳು. ಅಂಕಿತ್, ಸ್ವೀಟ್ ಕೊಡೋದಕ್ಕೆ ಹೋದಾಗ, ರೇಗಿದ್ದಾಳೆ. ನಿಮಗೆಲ್ಲಾ ಸ್ವೀಟ್ ತಿನ್ನುವ ಆಸೆ, ಅಲ್ಲಿ ಗಂಟೆ ಹತ್ತಾದ್ರೂ ಪುಟ್ಟ ಮನೆಗೆ ಬಂದಿಲ್ಲ. ಆ ಕಡೆ ಯಾರಿಗೂ ಚಿಂತೆ ಇಲ್ಲ ಅಂತ ಜೋರು ಮಾಡಿದ್ದಾಳೆ. ಇದು ಮನೆಯವರಿಗೆಲ್ಲಾ ಸ್ವಲ್ಪ ಬೇಸರವನ್ನೇ ತರಿಸಿದೆ.

Lakshmi Baramma serial Written Update on August 25th episode

ಮನೆಯಲ್ಲಿ ಹೇಳದೆ ಹೋಗಿಬಿಟ್ನಾ..?

ವೈಷ್ಣವ್ ಒಳ್ಳೆ ಹಾಡುಗಾರ. ಅವನು ಬರೆದ ಹಾಡುಗಳು ರಿಜೆಕ್ಟ್ ಆಗಿದ್ದೇ ಇಲ್ಲ. ಆದರೆ, ಕೀರ್ತಿ ಕಾಟ, ಮನೆ ರಗಳೆಯಿಂದ ಪದ ಹೊಳೆಯುವುದು ಹೇಗೆ? ಈ ಜಂಜಾಟದಲ್ಲಿ ಬರೆದ ಹಾಡೊಂದು ರಿಜೆಕ್ಟ್ ಆಗಿದೆ. ಅದಕ್ಕೆಂದೇ ಈಗ ಒಳ್ಳೆಯ ಹಾಡು ಬರೆಯುವುದಕ್ಕೆ, ಒಳ್ಳೆಯ ಜಾಗ ಹುಡುಕಿ ಹೊರಟಿದ್ದಾನೆ. ಆದರೆ, ಮನೆಯಲ್ಲಿ ಯಾರಿಗೂ ಹೇಳದೆ‌ ಹೋಗಿದ್ದಾನೆ. ಗಂಗಾಳಿಗೆ ಈ ವಿಚಾರ ಗೊತ್ತು. ಆದರೂ ಮನೆಯ ರಂಪಾಟ‌ ಇನ್ನು ಗಂಗಾಳ ಕಿವಿಗೆ ಬಿದ್ದಿಲ್ಲ.

ಲಕ್ಷ್ಮೀಗೆ ಹಿಗ್ಗಾಮುಗ್ಗಾ ಬೈದ ಕಾವೇರಿ

ಕಾವೇರಿಗೆ ಈಗಾಗಲೇ ಲಕ್ಷ್ಮೀ ಮೇಲೆ ಕುತ್ತಿಗೆಯ ತನಕ ಕೋಪ ಇದೆ. ಅದರಲ್ಲೂ ಲಕ್ಷ್ಮೀ ಬಂದ ಮೇಲೆ ವೈಷ್ಣವ್ ಹೆಂಡತಿ ಮಾತನ್ನೇ ಕೇಳುತ್ತಿದ್ದಾನೆ. ಮನೆಯವರು ಕೂಡ ಲಕ್ಷ್ಮೀ ಪರವಾಗಿಯೇ ಇರುವುದಕ್ಕೆ ಕಾವೇರಿಗೆ ಕೋಪ ಹೆಚ್ಚಾಗಿದೆ. ಈಗ ಪುಟ್ಟ ಬೇರೆ ಕಾಣ್ತಿಲ್ಲ. ಈ ವಿಚಾರ ಲಕ್ಷ್ಮೀಗೂ ಗೊತ್ತಿಲ್ಲ. ಫೋನ್ ನಾಟ್ ರೀಚೆಬಲ್ ಬರ್ತಿದೆ. ಇದೆಲ್ಲಾ ಮಿಕ್ಸ್ ಆಗಿ ಇದೀಗ ಲಕ್ಷ್ಮೀಯನ್ನ ಹಿಗ್ಗಾಮುಗ್ಗಾ ಬೈದಿದ್ದಾಳೆ. ಎಲ್ಲಾ ನೋಡ್ಕೊಳ್ತೀನಿ ಅಂತೀಯ. ವೈಷ್ಣವ್ ಎಲ್ಲಿ ಹೋಗಿದ್ದಾನೆ ಅನ್ನೋದೆ ಗೊತ್ತಿಲ್ಲ. ಈಗಲೇ ಹಿಂಗೆ. ಇನ್ನು ಮುಂದಕ್ಕೆ ಸಂಸಾರ ಹೇಗೆ ನಡೆಸ್ತೀಯ ಅಂತ ಲಕ್ಷ್ಮೀ ಮನಸ್ಸಿಗೆ ನೋವಾಗುವಂತೆ ಮಾತಾಡಿದ್ದಾಳೆ. ಲಕ್ಷ್ಮೀಯ ಮುಖದ ಭಾವದಲ್ಲಿ ಇನ್ನೇನು ಕೋಪ ಬರ್ತಿತ್ತು. ತಾಳ್ಮೆ ಅದಾಗಲೇ ಕಳೆದುಕೊಂಡಿದ್ದಳು. ಆದರೂ ಸುಮ್ಮನೆ ಆಗಿದ್ದಾಳೆ.

More from Filmibeat

English summary
Lakshmi Baramma serial Written Update on August 25th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X