Lakshmi Baramma Serial: ಅಮ್ಮನ ದ್ವೇಷ ಮಗನ ಮೇಲೆ ಶುರು.. ಸಂಸಾರ ಸುಖಕ್ಕಿಂತ ಕೀರ್ತಿಯ ಭಯವೇ ಹೆಚ್ಚಾಯ್ತು..!

By ಎಸ್ ಸುಮಂತ್

ಕಾವೇರಿ ಎಷ್ಟು ಶಕ್ತಿವಂತ ಹೆಣ್ಣು. ಆದರೆ, ಈಗ ಅಸಹಾಯಕಳಾಗಿ ನಿಂತಿದ್ದಾಳೆ. ತನ್ನ ಮಗನಿಗೆ ಕೀರ್ತಿ ಬೇಡ ಎಂದು ನಿರ್ಧಾರ ಮಾಡಿದ್ದ ಕಾವೇರಿ, ಸಲೀಸಾಗಿ ಮದುವೆಯನ್ನು ಮಾಡಿದಳು. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿದ್ದಂತಹ ಕೀರ್ತಿ ಇದ್ದಕ್ಕಿದ್ದ ಹಾಗೇ ಬದಲಾಗಿದ್ದಳು. ವೈಷ್ಣವ್ ಕಂಡರೆ ಕೋಪ ಮಾಡಿಕೊಳ್ಳುತ್ತಿದ್ದಳು. ದ್ವೇಷ ಮಾಡುತ್ತಿದ್ದಳು. ನೋಡುಗರಿಗೂ ಅದು ವಿಚಿತ್ರವೇ ಆಗಿತ್ತು. ಮದುವೆಯಾದ ಮೇಲೆ ಗೊತ್ತಾಗಿದ್ದು, ಇದರ ಹಿಂದೆ ಕಾವೇರಿಯ ಕೈವಾಡವಿದೆ ಎಂದು.

ಆದರೆ, ಇಷ್ಟೆಲ್ಲಾ ಬುದ್ದಿವಂತಿಕೆಯಿಂದ ಮಾಡಿದ ಕಾವೇರಿ, ದಡ್ಡಿಯಂತೆ ಲಾಕ್ ಆಗಿದ್ದಾಳೆ. ಕೀರ್ತಿ ಬಳಿ ಎಲ್ಲಾ ಸಾಕ್ಷಿಗಳನ್ನು ಬಿಟ್ಟಿದ್ದಾಳೆ. ಕೀರ್ತಿಗೆ ಇದೆ ದೊಡ್ಡ ಬಂಡವಾಳವಾಗಿದೆ. ಈಗ ತಾನು ಅಂದುಕೊಂಡಂತೆ ಕುಣಿಸುತ್ತಿದ್ದಾಳೆ. ಕೀರ್ತಿಯ ಆಟಕ್ಕೆ ಈಗ ಕಾವೇರಿ ಮಗನ ಖುಷಿಯನ್ನೇ ಕಿತ್ತುಕೊಳ್ಳುತ್ತಿದ್ದಾಳೆ.

lakshmi-baramma-kannada-serial

ಮಗನ ಬಗ್ಗೆ ಯೋಚಿಸಿದ ಕಾವೇರಿ

ಮಗನಿಗೆ ಅಮ್ಮನ ಮೇಲೆ ಮೊದಲಿದ್ದ ಪ್ರೀತಿಯೇ ಇದೆ. ಆದರೆ ಅದನ್ನ ಕಾವೇರಿಯೇ ಅರ್ಥ ಮಾಡಿಕೊಳ್ಳುವುದರಲ್ಲಿ ಸೋಲುತ್ತಿದ್ದಾಳೆ. ಮಗ ಹೆಂಡತಿ ಬಂದ ಮೇಲೆ ಬದಲಾಗಿದ್ದಾನೆ ಎಂದೇ ಆರೋಪಿಸುತ್ತಾಳೆ. ಮಗ ಸೊಸೆ ಆತ್ಮೀಯವಾಗಿದ್ದರೆ ಸಹಿಸಿಕೊಳ್ಳುತ್ತಿಲ್ಲ. ಈಗ ವೈಷ್ಣವ್ ತಾನು ಹೊಸದಾಗಿ ಬರೆದ ಹಾಡಿನ ಸಾಲನ್ನು ಅಮ್ಮನಿಗೆ ಓದಲು ಕೊಟ್ಟಿದ್ದಾನೆ. ಓದುವಾಗ ನೂರು ಯೋಚನೆಗಳು ಬಂದಿವೆ. ಹರಿದು ಬಿಸಾಡುವಷ್ಟು ಕೋಪವು ಬಂದಿದೆ. ಆದರೆ ಮಗನ ವಿಚಾರಕ್ಕೆ ಇಷ್ಟೊಂದು ಕೆಟ್ಟದಾಗಿ ಯೋಚಿಸುವುದು ಬೇಡ ಎಂದೇ ಸುಮ್ಮನಾಗಿದ್ದಾಳೆ.

ಲಕ್ಷ್ಮೀನಾ..? ಕೀರ್ತಿನಾ ? ಕಾವೇರಿಗೆ ಗೊಂದಲ

ಆದರೆ, ಕಾವೇರಿಗೆ ಹೆಚ್ಚಾಗಿ ಕಾಟ ಕೊಡ್ತಾ ಇರೋದು ಕೀರ್ತಿ. ಕಶ್ಯಪ್‌ ಮನೆಯಲ್ಲಿ ಏನೆಲ್ಲಾ ಆಗ್ತಾ ಇದೆ ಅನ್ನೋದನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾಳೆ. ಎಲ್ಲಾ ವಿಚಾರವನ್ನು ತಿಳಿದು ಕಾವೇರಿಗೆ ಕಾಟ ಕೊಡುತ್ತಾಳೆ. ವೈಷ್ಣವ್ ಅದಾಗಲೇ ಅವಳಿಗೆ ನಿರ್ಬಂಧ ಹೇರಿದ್ದಾನೆ. ಆದರೂ ವಿಚಾರ ತಿಳಿದು ಮನೆಗೆ ಬಂದಿದ್ದಾಳೆ. ಕಾವೇರಿಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಆ ಲಿರಿಕ್ಸ್ ಮತ್ತೆ ಯಾಕೆ ಬರೆದಿದ್ದು ಅಂತ. ಒಂದು ಕಡೆ ಲಕ್ಷ್ಮೀ ಮತ್ತೊಂದು ಕಡೆ ಕೀರ್ತಿಯ ವಿಚಾರ ತಲೆಯಲ್ಲಿ ಕೊರೆದಿದ್ದು, ಕಡೆಗೂ ಕಾವೇರಿ ಆ ಲಿರಿಕ್ಸ್ ಹಾರಿದು ಹಾಕಿದ್ದಾಳೆ.

lakshmi-baramma-kannada-serial

ಮಗನ ಮೇಲೆ ದ್ವೇಷಕ್ಕೆ ನಿಂತ ಕಾವೇರಿ

ಕಾವೇರಿಗೆ ಸದಾ ಅತ್ತೆಯದ್ದೇ ಚಿಂತೆಯಾಗಿದೆ. ಮಗನ ಮದುವೆ ಮಾಡಿಸುವುದಕ್ಕೂ ಮುನ್ನ ಅತ್ತೆಯ ಬಗ್ಗೆ ತಲೆ ಕೆಡಿಸಿಕೊಂಡವಳಲ್ಲ ಕಾವೇರಿ. ಆದರೆ, ಈಗಂತೂ ಕುಂತ್ರೆ, ನಿಂತ್ರೆ ಅತ್ತೆಯದ್ದೇ ಚಿಂತೆ ಆಗೋಗಿದೆ. ಅತ್ತೆಯ ಶಾಪದ ಭಯವೇ ಕಾಡುತ್ತಿದೆ. ಈಗ ವೈಷ್ಣವ್ ಹಾಡು ಹರಿದಾಗಲೂ ಅತ್ತೆಯೇ ಬಂದು ಹೇಳಿದಂತೆ ಆಗಿದೆ. "ಮಗನ ಮೇಲೆ ದ್ವೇಷಕ್ಕೆ ನಿಂತು ಬಿಟ್ಟೆಯಾ" ಎಂದಿದೆ.

ಲಕ್ಷ್ಮೀ ಇರುವಾಗ ವೈಷ್ಣವ್ ಸೋಲಲ್ಲ

ಲಕ್ಷ್ಮೀ ಇರುವ ತನಕ ವೈಷ್ಣವ್‌ಗೆ ಸೋಲು ಅನ್ನೋದು ಸುಳ್ಳು. ಲಕ್ಷ್ಮೀಗೂ ಸಾಹಿತ್ಯದ ಮೇಲಿನ ಆಸಕ್ತಿ ಜಾಸ್ತಿಯೇ ಇದೆ. ಅದನ್ನ ಈಗಾಗಲೇ ಲಕ್ಷ್ಮೀ ತೋರಿಸಿ ಆಗಿದೆ. ವೈಷ್ಣವ್‌ಗೆ ಹೆಚ್ಚು ಇಷ್ಟವಾಗಿದ್ದೆ ಲಕ್ಷ್ಮೀ ಬರೆದ ಸಾಲುಗಳು. ಈಗ ವೈಷ್ಣವ್ ಕೆಲಸಕ್ಕೆ ಲಕ್ಷ್ಮೀ ಕೂಡ ಜೊತೆಯಾಗಿದ್ದಾಳೆ. ವೈಷ್ಣವ್ ಪ್ರೀತಿ ನೆನೆದು, ಮೊದಲ ಸ್ಪರ್ಶ, ಮೊದಲ ಮಳೆ, ಕೈ ಹಿಡಿದು ನಡೆಸಿದ್ದು ಎಲ್ಲವನ್ನು ನೆನದು ಒಂದು ಸುಂದರ ಹಾಡನ್ನು ಬರೆದಿದ್ದಾಳೆ. ಕಾವೇರಿ ಹರಿದು ಹಾಕಿದ್ದಕ್ಕಿಂತ ಈ ಸಾಲುಗಳು ಇನ್ನಷ್ಟು ಹತ್ತಿರವೆನಿಸದೆ ಇರುವುದಿಲ್ಲ.

More from Filmibeat

English summary
Lakshmi Baramma serial Written Update on August 29th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X