Lakshmi Baramma: ಕಾವೇರಿಯ ಶಾಪದ ಗಾಯಕ್ಕೆ ಅಮ್ಮನ ತಾಳಿಕೊಟ್ಟು ಬರೆ ಎಳೆದಳು ಸುಪ್ರೀತಾ.. ಮುಂದೇನು?

By ಎಸ್ ಸುಮಂತ್

ಕಾವೇರಿ, ಕೃಷ್ಣನನ್ನು ಮದುವೆಯಾದ ಮೇಲೆ ತಾನೇ ಪ್ರಭಾವಿಯಾದಳು. ಕಾವೇರಿಯ ಪ್ರೀತಿಗೆ ಕೃಷ್ಣ ಸೋತಿದ್ದ. ಅವಳು ಹೇಳುವ ಸುಳ್ಳುಗಳು ಯೋಚನೆಗೆ ಹೋಗಿರಲಿಲ್ಲ. ತಾಯಿಯಿಂದ ದೂರ ಮಾಡಿದಾಗಲೂ ಅದರ ಹಿಂದೊಂದು ಏನೋ ವಿಚಾರ ಇದೆ ಅಂತ ಕೂಡ ಯೋಚಿಸಿರಲಿಲ್ಲ. ಕಾವೇರಿ ಅಂದು ಸಲೀಸಾಗಿ ತನ್ನ ಕೆಲಸವನ್ನು ಮುಗಿಸಿದ್ದಳು. ತನ್ನ ಖಾಸಗಿ ಜೀವನಕ್ಕಾಗಿ ಅಮ್ಮ ಮಗನನ್ನು ದೂರ ಮಾಡಿದ್ದಳು.

ಆದರೆ, ಆ ಅತ್ತೆಯ ಮಾತು ಕಾವೇರಿಗೆ ಯಾವಾಗಲೂ ಶಾಪವಾಗಿಯೇ ಕಾಡುತ್ತಿದೆ. ಮಗ-ಸೊಸೆ ತನ್ನ ವ್ಯಾಪ್ತಿ ಮೀರಿ ಹೋಗ್ತಿದ್ದಾರೆ ಎನಿಸಿದಾಗೆಲ್ಲ ಕಾವೇರಿಗೆ ತನ್ನ ಅತ್ತೆ ಶಾಪ ಹಾಕಿದರೇನೋ ಎಂಬ ಫೀಲ್ ಬರುತ್ತೆ. ಅಂದು ಅತ್ತೆಯ ಬೇಸರದ ಮಾತುಗಳು ಕೇಳಿಸುತ್ತವೆ. ನನಗೂ ಮುಂದೊಂದು ದಿನ ಇಂಥದ್ದೇ ಗತಿಯಾಗಬಹುದಾ ಎಂಬ ಯೋಚನೆಯಲ್ಲಿ ಮುಳುಗುತ್ತಾಳೆ.

Lakshmi Baramma serial Written Update on August 2nd episode

ಕೀರ್ತಿ ಕೈಯಲ್ಲಿ ಲಕ್ಷ್ಮೀಯ ತಾಳಿ

ತಾಳಿ ಶಾಸ್ತ್ರದ ಬಗ್ಗೆ ಅದ್ಯಾವಾಗ ಸುಪ್ರೀತಾ, ಕೀರ್ತಿಗೆ ಮುಟ್ಟಿಸಿದಳೋ, ಹೇಳದೇ ಕೇಳದೇ ಕೀರ್ತಿ, ಕಾವೇರಿಯ ಬೆಡ್ ರೂಮಿಗೆ ನುಗ್ಗಿದಳು. ಹೊಸ ತಾಳಿ ಸರ ಎಲ್ಲಿದೆ ಅಂತ ಹುಡುಕಿ ತನ್ನ ಕೈ ವಶ ಮಾಡಿಕೊಂಡಿದ್ದಳು. ಇದೀಗ ತಾಳಿ ಕೊಡು ಎಂದು ಕಾವೇರಿ ಕೇಳಿದರೂ ಕೊಡುವುದಕ್ಕೆ ಸಿದ್ಧವಿರಲಿಲ್ಲ. ಕಾವೇರಿಯ ಮಾತನ್ನು ಕೇಳಿಸಿಕೊಳ್ಳದೆ, ಮುಂದಕ್ಕೆ ನಡೆದೇ ಬಿಟ್ಟಳು ಕೀರ್ತಿ.

ಕಾವೇರಿಯಿಂದ ಏನು ಮಾಡಲಾಗದ ಸ್ಥಿತಿ

ಕೀರ್ತಿಯ ಹುಚ್ಚಾಟದಿಂದ ಸಾಕಷ್ಟು ಬಾರಿ ಸಿಕ್ಕಿ ಬಿದ್ದಿರುವುದು ಕಾವೇರಿಯೇ. ಈಗ ಮತ್ತೊಮ್ಮೆ ಸಿಕ್ಕಿ ಬಿದ್ದಿದ್ದಾಳೆ‌. ಕೀರ್ತಿ ತಾಳಿ ತೆಗೆದುಕೊಂಡು ಹೋಗಿದ್ದಾಗಿದೆ. ಈಗ ಮನೆಯವರೆಲ್ಲಾ ಕಾವೇರಿಗೆ ಪ್ರಶ್ನೆ ಮಾಡುತ್ತಿದ್ದಾರೆ. ತಾಳಿ ಕೊಡು ಮುಹೂರ್ತ ಹತ್ತಿರವಾಗುತ್ತಿದೆ ಎನ್ನುತ್ತಿದ್ದಾರೆ. ಮನೆಯವರಿಗೆಲ್ಲಾ ತಾಳಿ ಕಾಣಿಸುತ್ತಿಲ್ಲ ಕಳೆದು ಹೋಗಿದೆ ಎಂದೇ ಹೇಳುತ್ತಿದ್ದಾಳೆ. ಮಕ್ಕಳೆಲ್ಲಾ ನಾನು ಹುಡುಕ್ಲಾ, ನಾನು ನೋಡ್ಲಾ ಎಂಬ ಮಾತುಗಳು ಕಾವೇರಿಗೆ ಕಿರಿಕಿರಿ ಮಾಡುತ್ತಿದೆ.

Lakshmi Baramma serial Written Update on August 2nd episode

ಕೀರ್ತಿಯ ಬಗ್ಗೆ ಸತ್ಯ ಹೇಳಿದ ಸುಪ್ರೀತಾ

ಸುಪ್ರೀತಾಗೆ ಪ್ರತಿಯೊಂದು ವಿಚಾರ ಗೊತ್ತಿತ್ತು. ಕೀರ್ತಿ ಮನೆಗೆ ಬಂದು ಹೋಗಿದ್ದು, ತಾಳಿ ಕೈಯಲ್ಲಿ ಹಿಡಿದುಕೊಂಡಿದ್ದು, ಎಲ್ಲವೂ. ಆದ್ರೆ ಕಾವೇರಿ ಮಾತ್ರ ಸುಳ್ಳು ಹೇಳಿದ್ದು, ಅನುಮಾನಕ್ಕೆ ಮತ್ತಷ್ಟು ಬಲ ನೀಡಿತ್ತು. ಸುಪ್ರೀತಾಳೆ, ಕಾವೇರಿಗೆ, ಕೀರ್ತಿ ಬಗ್ಗೆ ಕೇಳಿದ್ದಳು. ಅವಳನ್ನ ರೂಮಲ್ಲಿ ನೋಡಿದ ಹಾಗೇ ಆಯ್ತಲ್ಲ ಅಂತ. ಅದಕ್ಕೂ ಕಾವೇರಿ ಏನೋ ಸಮಜಾಯಿಷಿ ಕೊಟ್ಟಳು. ಈ ಗಲಾಟೆಯ ನಡುವೆ ಸುಪ್ರೀತಾಳೇ ಒಂದು ಐಡಿಯಾ ಕೊಡ್ತೀನಿ ಅಂದ್ಲು. ಸುಪ್ರೀತಾ ಕೊಟ್ಟ ಐಡಿಯಾಗೆ ಒಕೆ ಮನೆಯವರೆಲ್ಲ ಓಕೆ ಎಂದರು.

ಮನೆಯವರಿಗೆಲ್ಲಾ ಖುಷಿ.. ಆದ್ರೆ ಕಾವೇರಿಗೆ?

ಸುಪ್ರೀತಾ, ಲಕ್ಷ್ಮೀ ವಿಚಾರದಲ್ಲಿ ಸಾಕಷ್ಟು ಬದಲಾಗಿದ್ದಾಳೆ. ಹೀಗಾಗಿಯೇ ತನ್ನ ಅಮ್ಮನ ತಾಳಿ, ಬಳೆಗಳನ್ನು ಲಕ್ಷ್ಮೀಗೆ ಕೊಡುವುದಕ್ಕೆ ಒಪ್ಪಿದಳು. ಅದರಂತೆ ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡಿ, ವೈಷ್ಣವ್ ಕೈಗೆ ತಾಳಿಯನ್ನು ಕೊಡುವುದಕ್ಕೆ ಹೋದಳು. ಇದು ನನ್ನ ತಾಯಿ ತಾಳಿ. ಇದನ್ನು ಹಾಕುವುದರಿಂದ ಮನೆಯ ಹಿರಿಯರ ಆಶೀರ್ವಾದವೂ ಮಕ್ಕಳಿಗೆ ಸಿಕ್ಕಂತೆ ಆಗುತ್ತೆ ಎಂದೇ ಸುಪ್ರೀತಾ ಅಭಿಪ್ರಾಯ ಪಟ್ಟಳು. ಇದಕ್ಕೆ ಕೃಷ್ಣ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾನೆ. ಯಾಕಂದ್ರೆ ಅಮ್ಮನ ನೆನಪಾಗಿದೆ. ಅದೇ ಸಮಯಕ್ಕೆ ಕಾವೇರಿಗೆ ಅತ್ತೆಯ ನೆನಪಾಗಿದೆ. ಶಾಪದ ನೆನಪಾಗಿದೆ. ಅದಕ್ಕೆ ತಕ್ಷಣ ರಿಯಾಕ್ಟ್ ಆದ ಕಾವೇರಿ, ತಾಳಿ ಸರ ಬೇಡ ಎಂದು ಕಿರುಚಿದ್ದಾಳೆ.

More from Filmibeat

English summary
Lakshmi Baramma serial Written Update on August 2nd episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X