Lakshmi Baramma Serial: ಪದೇ ಪದೆ ರೂಮಿಗೆ ಬರಬೇಡಮ್ಮ ಎಂದ ವೈಷ್ಣವ್.. ಉರಿದು ಬಿದ್ದ ಕಾವೇರಿ..?

By ಎಸ್ ಸುಮಂತ್

ವೈಷ್ಣವ್‌ಗೆ ತಾಯಿಯ ಮೇಲೆ ಅಪಾರವಾದ ಪ್ರೀತಿ, ಕಾಳಜಿ ಇದೆ. ಎಲ್ಲಾ ಕೆಲಸವನ್ನು ಅಮ್ಮನೇ ನೋಡಿಕೊಂಡಾಗಲೂ ವೈಷ್ಣವ್‌ಗೆ ಅಷ್ಟಾಗಿ ಏನು ಅನ್ನಿಸಿರಲಿಲ್ಲ. ಈಗ ಮನೆಯವರೆಲ್ಲ ಪ್ರಶ್ನೆ ಮಾಡೋದಕ್ಕೆ ಶುರು ಮಾಡಿದ್ದಾರೆ. ಅಮ್ಮನಿಂದ ಸೇವೆ ಮಾಡಿಸಿಕೊಳ್ಳೋದಕ್ಕೆ ವೈಷ್ಣವ್ ಏನು ಇನ್ನು ಚಿಕ್ಕವನ ಅಂತ.

ವೈಷ್ಣವ್‌ಗೆ ಇತ್ತೀಚೆಗೆ ಅದರಲ್ಲೂ ಲಕ್ಷ್ಮೀ ಬಂದ ಮೇಲೆ ಅದರ ಅರಿವಾಗಿದೆ. ತಾನೂ ಕೂಡ ದೊಡ್ಡವನು ಎಂಬುದು ಅದಕ್ಕೆ ಅಮ್ಮನಿಗೆ ವಿಶ್ರಾಂತಿ ಪಡೆದುಕೊ ಎಂಬ ಭಾವನೆಯಿಂದ ಅಮ್ಮನನ್ನು ದೂರವಿಡಲು ಪ್ರಯತ್ನಿಸುತ್ತಿದ್ದಾನೆ. ಆದರೆ, ಇದನ್ನು ಕಾವೇರಿ ಸಹಿಸಿಕೊಳ್ಳುವುದು ಹೇಗೆ ಅನ್ನೋದೇ ಡೌಟ್ ಆಗಿದೆ.

lakshmi-baramma-kannada-serial

ವೈಷ್ಣವ್ ಕಾಳಜಿ ಮಾಡುತ್ತಿರುವ ಲಕ್ಷ್ಮೀ

ಹಾಡು ಬರೆಯುವುದಕ್ಕೆ ಕಾಡಿಗೆ ಹೋದ ವೈಷ್ಣವ್ ಆಕ್ಸಿಡೆಂಟ್ ಮಾಡಿಕೊಂಡು ಬಂದಿದ್ದಾನೆ. ಕೈ ಗಾಯ ಮಾಡಿಕೊಂಡು, ಬ್ಯಾಂಡೇಜ್ ಹಾಕಿಕೊಂಡು ಬಂದಿದ್ದಾನೆ. ಈಗ ವೈಷ್ಣವ್ ಕಾಳಜಿಯನ್ನು ಲಕ್ಷ್ಮೀಯೇ ಮಾಡಬೇಕಿದೆ. ಕುಡಿಯುವುದಕ್ಕೆ ಅರಿಶಿಣದ ಹಾಲು ಕೊಟ್ಟು, ಟೀ ಶರ್ಟ್ ಕೂಡ ಅವಳೇ ಹಾಕಿದ್ದಾಳೆ. ವೈಷ್ಣವ್ ಕೈಲಿ ಊಟ ಮಾಡುವುದಕ್ಕೆ ಆಗದೆ ಇದ್ದಾಗಲೂ ಲಕ್ಷ್ಮೀಯೇ ಊಟ ಮಾಡಿಸಿದ್ದಾಳೆ. ಗಂಡನ ಪೂರ್ತಿ ಕಾಳಜಿಯನ್ನು ಸದ್ಯಕ್ಕೆ ಲಕ್ಷ್ಮೀಯೇ ಹೊತ್ತುಕೊಂಡಿದ್ದಾಳೆ.

ಅರಿಶಿಣದ ಹಾಲು ತಂದ ಕಾವೇರಿ

ವೈಷ್ಣವ್ ಮತ್ತು ಲಕ್ಷ್ಮೀ ಹೆಚ್ಚು ಕ್ಲೋಸ್ ಆಗಿರುವುದನ್ನು ಕಂಡರೆ ಕಾವೇರಿಗೆ ಸಹಿಸುವುದಕ್ಕೆ ಆಗಲ್ಲ. ಯಾವಾಗಲೂ ಹೊಟ್ಟೆ ಉರಿ ಮಾಡಿಕೊಳ್ಳುತ್ತಲೇ ಇರುತ್ತಾಳೆ‌. ಈಗ ತನ್ನ ಮಗನಿಗೆ ಗಾಯ ಬೇಗ ವಾಸಿಯಾಗಲಿ ಎಂಬ ಕಾರಣಕ್ಕೆ ಅರಿಶಿಣದ ಹಾಲನ್ನು ತಂದುಕೊಡಲು ಬಂದಿದ್ದಾಳೆ. ವೈಷ್ಣವ್‌ಗೆ ಲಕ್ಷ್ಮೀ ಶರ್ಟ್ ಧರಿಸುತ್ತಿದ್ದನ್ನು ಕಂಡು ಹೊಟ್ಟೆ ಉರಿ ಪಟ್ಟುಕೊಂಡು ನಿಂತಿದ್ದಾಳೆ‌. ಬಳಿಕ ಸೌಂಡ್ ಮಾಡಿ, ಇಬ್ಬರನ್ನು ಅಲರ್ಟ್ ಮಾಡಿದ್ದಾಳೆ. ಅದೇ ಸಮಯಕ್ಕೆ ವೈಷ್ಣವ್, ಶರ್ಟ್ ಹಾಕಿಕೊಳ್ತಾ ಇದ್ದೆ ಅಮ್ಮ ಎಂದಿದ್ದಾನೆ.

lakshmi-baramma-kannada-serial

ವೈಷ್ಣವ್ ಮಾತಿಗೆ ಕಾವೇರಿ ಶಾಕ್

ಗಾಯ ಬೇಗ ವಾಸಿ ಆಗಲಿ ಅಂತ ಅರಿಶಿಣದ ಹಾಲು ತಂದೆ ಪುಟ್ಟ ಎಂದಾಗ ವೈಷ್ಣವ್, "ಪದೇ ಪದೆ ಯಾಕಮ್ಮ ರೂಮಿಗೆ ಬರ್ತೀಯಾ. ನೀನು ಆರಾಮಾಗಿ‌ ಮಲಗು. ನೀನೆ ಆರಿಸಿ ತಂದಿರುವ ಸೊಸೆ ಎಲ್ಲಾ ನೋಡಿಕೊಳ್ಳುತ್ತಾಳೆ. ಲಕ್ಷ್ಮೀ ಇರುವಾಗ ಭಯ ಯಾಕೆ ಪಡ್ತೀಯ ಅಮ್ಮ. ಈಗ ಹೋಗಿ ಮಲಗು. ಆಮೇಲೆ ಮತ್ತೆ ಮಧ್ಯರಾತ್ರಿಯಲ್ಲಿ ಎದ್ದು ಬರಬೇಡ. ಪುಟ್ಟ ಏನು ಮಾಡ್ತಾ ಇದ್ದಾನೆ ಅಂತ ಚಿಂತೆಯಿಂದ ಎದ್ದು ಬರಬೇಡ. ಹೋಗು ರೆಸ್ಟ್ ಮಾಡು. ಅರಿಶಿಣ, ಬಾದಾಮಿ ಹಾಲನ್ನು ಮಹಾಲಕ್ಷ್ಮಿ ಕೊಟ್ಟಿದ್ದಾರೆ." ಎಂದಿದ್ದಾನೆ.

ಸುಮ್ಮನೆ ಹೊರಟ ಕಾವೇರಿ ಮನಸ್ಸಲ್ಲಿ ಏನಿದೆ..?

ಕೀರ್ತಿಯನ್ನು ಮದುವೆ ಮಾಡಿಕೊಂಡರೆ ಮಗನನ್ನು ದೂರ ಮಾಡುತ್ತಾಳೆ ಎಂಬ ಭಯ ಇತ್ತು. ಆದ್ರೆ ಈಗ ಲಕ್ಷ್ಮೀ, ವೈಷ್ಣವ್ ಜೊತೆಗೆ ಚೆನ್ನಾಗಿದ್ದರು ಸಹಿಸಿಕೊಳ್ಳುತ್ತಿಲ್ಲ. ಮನೆಯವರೆಲ್ಲಾ ಹೇಳಿ ಆಗಿದೆ. ತನ್ನ ಪೊಸೆಸಿವ್‌ನಿಂದಾನೇ ಕಾವೇರಿ ಸಂಸಾರ ಹಾಳು ಮಾಡಿಕೊಳ್ಳುವ ಸಾಧ್ಯತೆ ಇದೆ. ಮಗ ಹೇಳಿದ್ದೇ ಒಂದಾದರೇ ಕಾವೇರಿ ಅರ್ಥ ಮಾಡಿಕೊಂಡಿದ್ದೆ ಇನ್ನೊಂದಾಗಿದೆ. "ಆಯ್ತು ಬಿಡಪ್ಪ, ಈಗ ಎಲ್ಲದನ್ನು ಲಕ್ಷ್ಮೀಯೇ ನೋಡಿಕೊಳ್ಳುತ್ತಾಳಲ್ಲ" ಅಂತ ಹೇಳಿ ಲಕ್ಷ್ಮೀಯನ್ನೊಮ್ಮೆ ಕೆಕ್ಕರಿಸಿ ನೋಡಿ, ರೂಮಿಂದ ಹೊರ ಹೋಗಿದ್ದಾಳೆ. ಇನ್ನು ಲಕ್ಷ್ಮೀ ಮತ್ತೆ ವೈಷ್ಣವ್ ಮಲಗುವಾಗಲೂ ಅಮ್ಮನ ಬಗ್ಗೆ ಯೋಚನೆ ಮಾಡಿದ್ದಾರೆ.

More from Filmibeat

English summary
Lakshmi Baramma serial Written Update on August 30th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X