Lakshmi Baramma: ಅತ್ತೆಯ ತಾಳಿ ಸೊಸೆ ಕುತ್ತಿಗೆಯಲ್ಲಿ.. ಶಾಪದ ಭಯಕ್ಕೆ ತಲೆ ತಿರುಗಿ ಬಿದ್ದ ಕಾವೇರಿ !
ಮದುವೆಯಾಗಿ 3 ತಿಂಗಳಾದರೂ ಇನ್ನು ಕೂಡ ವೈಷ್ಣವ್ ಹಾಗೂ ಲಕ್ಷ್ಮೀ ನಡುವೆ ತಾಳಿ ಶಾಸ್ತ್ರ ನಡೆದಿರಲಿಲ್ಲ. ಅರಿಶಿನದ ದಾರದಲ್ಲಿಯೇ ಇದ್ದಳು. ಆದರೆ, ಅದಕ್ಕೊಂದು ಮುಹೂರ್ತ ಇಂದು ನಿಗದಿಯಾಗಿತ್ತು. ಆದರೆ, ಆ ಮುಹೂರ್ತ ಸಕ್ಸಸ್ ಆಗದ ರೀತಿ ಕೀರ್ತಿ ನೋಡಿಕೊಂಡಿದ್ದಳು. ತಂದಿದ್ದ ತಾಳಿಯನ್ನೇ ತೆಗೆದುಕೊಂಡು ಹೋಗಿದ್ದಳು. ಇದು ಕಾವೇರಿಗೆ ಮನೆಯವರೆಲ್ಲರ ಮುಂದೆ ಉತ್ತರ ನೀಡಲಾಗದ ಪರಿಸ್ಥಿತಿಗೆ ತಂದು ನೂಕಿತ್ತು.
ಇದಾದ ಮೇಲೆ ಸುಪ್ರೀತಾ ಈಗ ಲಕ್ಷ್ಮೀಯ ಪರವಾಗಿ ನಿಂತಿದ್ದಾಳೆ. ಹೀಗಾಗಿ ಅಲ್ಲಿನ ಸಮಸ್ಯೆಗೆ ಅವಳೇ ಪರಿಹಾರವನ್ನು ಹುಡುಕಬೇಕಿದೆ. ಹೀಗಾಗಿಯೇ ತನ್ನ ಅಮ್ಮನ ತಾಳಿ ಸರವನ್ನು ತಂದು ಎಲ್ಲರಿಂದ ಶಬ್ಬಾಶ್ ಎನಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲ ಅಜ್ಜಿಯ ಆಶೀರ್ವಾದೊಂದಿಗೆ ಕಾವೇರಿಯ ಅತ್ತೆಯ ತಾಳಿ ಸೊಸೆಯ ಕುತ್ತಿಗೆಗೆ ಬಿದ್ದಿದೆ.

ಅತ್ತೆಯ ತಾಳಿ ಕೊಟ್ಟ ಸುಪ್ರೀತಾ
ಮನೆಯಲ್ಲೆಲ್ಲಾ ಮುಹೂರ್ತದ ಸಮಯ ಮೀರುತ್ತಿದೆ ಎಂದು ಬೇಸರ ಮಾಡಿಕೊಂಡರು. ಆದ್ರೆ ತಕ್ಷಣಕ್ಕೆ ಸುಪ್ರೀತಾ ಮನೆಯವರೆಲ್ಲಾ ಮೆಚ್ಚುವಂತ ಐಡಿಯಾವನ್ನೇ ನೀಡಿದ್ದಾಳೆ. ಅದುವೇ ತನ್ನ ಅಮ್ಮನ ತಾಳಿಯನ್ನೆ ತಂದುಕೊಟ್ಟಿದ್ದಾಳೆ. ಎಷ್ಟೇ ಕಷ್ಟವಿದ್ದರೂ ಅಮ್ಮನ ಒಡವೆಗಳನ್ನು ಮಾರದ ಸುಪ್ರೀತಾಳನ್ನು ಕಂಡು ಕೃಷ್ಣ ಸ್ವಲ್ಪ ಹೆಚ್ಚೇ ಭಾವುಕನಾಗಿದ್ದಾನೆ. ಮನೆಯವರೆಲ್ಲರು ಈ ತಾಳಿ ಲಕ್ಷ್ಮೀ ಕುತ್ತಿಗೆ ಸೇರಲು ಅಸ್ತು ಎಂದಿದ್ದಾರೆ.
ಶಾಪ ನೆನೆದು ಬೇಡವೆಂದ ಕಾವೇರಿ
ಆದರೆ, ಕಾವೇರಿಗೆ ಕ್ಷಣ ಕ್ಷಣಕ್ಕೂ ಅತ್ತೆಯ ಧ್ವನಿಯೇ ಕೇಳಿಸುತ್ತಿತ್ತು. ನಿನ್ನ ಕರ್ಮ ನಿನ್ನನ್ನು ಬಿಡುವುದಿಲ್ಲ ಎಂದೇ ಎಚ್ಚರಿಸುತ್ತಾ ಇತ್ತು. ಹೀಗಾಗಿಯೇ ಅತ್ತೆಯ ತಾಳಿಯನ್ನು ಲಕ್ಷ್ಮೀ ಕುತ್ತಿಗೆಗೆ ಹಾಕುವುದಕ್ಕೆ ಕಾವೇರಿ ಒಪ್ಪಿಗೆ ನೀಡಲಿಲ್ಲ. ಹೊಸ ತಾಳಿಯನ್ನೇ ತರ್ತೀನಿ, ಡೈಮಂಡ್ ಕೊಡಿಸ್ತೀನಿ ಅಂತೆಲ್ಲಾ ಹೇಳಿದಳು. ಆದರೆ, ಇದರ ನಡುವೆ ಕೃಷ್ಣ, ಅಜ್ಜಿ, ವೈಷ್ಣವ್ ಎಲ್ಲರೂ ಒಪ್ಪಿಗೆ ನೀಡಿದ್ದರು. ಲಕ್ಷ್ಮೀಯ ಒಪ್ಪಿಗಾಗಿ ಕಾಯುತ್ತಿದ್ದರು. ಕಾವೇರಿ ಎಷ್ಟೇ ಬೇಡವೆಂದರೂ ಅಜ್ಜಿಯ ತಾಳಿ ಹಾಕಿಕೊಳ್ಳುವುದಕ್ಕೆ ಲಕ್ಷ್ಮೀ ಒಪ್ಪಿಗೆ ಕೊಟ್ಟೆ ಬಿಟ್ಟಳು.

ತಾಳಿ ಬಿದ್ದ ತಕ್ಷಣ ತಲೆ ಸುತ್ತಿ ಬಿದ್ದ ಕಾವೇರಿ
ಎಲ್ಲರ ಆಶೀರ್ವಾದದೊಂದಿಗೆ ವೈಷ್ಣವ್, ಲಕ್ಷ್ಮೀ ಕುತ್ತಿಗೆಗೆ ತಾಳಿಯನ್ನು ಕಟ್ಟಿಯೇ ಬಿಟ್ಟ. ಎಲ್ಲರೂ ನಗುಮುಖದೊಂದಿಗೆ ಮತ್ತೆ ಹರಸಿದರು. ಇದರ ನಡುವೆ ಕಾವೇರಿಗೆ ಬ್ಯಾಕ್ ಟು ಬ್ಯಾಕ್ ಅತ್ತೆಯ ಶಾಪ ನೆನಪಾಗುತ್ತಿತ್ತು. ಮಗ ಬೇರೆ ಸೊಸೆಯ ಮಾತನ್ನೇ ಕೇಳಿದ್ದಕ್ಕೆ ಇನ್ನಷ್ಟು ಟೆನ್ಶನ್ ಆಗಿತ್ತು. ತಾಳಿ ಕಟ್ಟಿದ ಶಾಸ್ತ್ರ ಮುಗಿದ ಮೇಲೆ ಆಶೀರ್ವಾದ ಪಡೆಯಲು ಬಂದಾಗ, ಕಾವೇರಿ ತಲೆ ತಿರುಗಿ ಬಿದ್ದಿದ್ದಾಳೆ.
ಅಮ್ಮನಿಂದ ಕಪಾಳಕ್ಕೆ ತಿಂದ ಕೀರ್ತಿ
ಈ ಕಡೆ ಕೀರ್ತಿಯದ್ದು ಇನ್ನೊಂದು ಡ್ರಾಮಾ ಶುರುವಾಗಿತ್ತು. ಕಾವೇರಿ ತಂದ ತಾಳಿಯನ್ನು ತಂದಿದ್ದ ಕೀರ್ತಿ, ಅದೇ ಮುಹೂರ್ತಕ್ಕೆ ತಾನೇ ತಾಳಿ ಕಟ್ಟಿಕೊಳ್ಳಬೇಕು ಎಂದುಕೊಂಡಳು. ಅದಕ್ಕಾಗಿಯೇ ವೈಷ್ಣವ್ ಫೋಟೋವನ್ನು ಪಕ್ಕದಲ್ಲಿಟ್ಟುಕೊಂಡು, ತಾಳಿಗೆ ಪೂಜೆ ಮಾಡಿದಳು. ಬಳಿಕ ಮೊಬೈಲ್‌ನಲ್ಲಿ ಮಂತ್ರ ಹಾಕಿಕೊಂಡಳು. ನಂತರ ಅಮ್ಮನ ಆಶೀರ್ವಾದ ಪಡೆಯುವುದಕ್ಕೆ ತಾಳು ಸಮೇತ ಹೋಗಿದ್ದಾಳೆ. ಕಾರುಣ್ಯಗೆ ಇದೆಲ್ಲವನ್ನು ಕಂಡು ತಾಳ್ಮೆ ಮಿತಿಮೀರಿದೆ. ಮಗಳ ಹುಚ್ಚಾಟಕ್ಕೆ ಕಾರುಣ್ಯಗೆ ಭಯವಾಗಿದೆ. ಎಷ್ಟೇ ಬುದ್ದಿ ಹೇಳಿದರು ತಿಳಿದುಕೊಂಡು, ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಕೀರ್ತಿ ಕಳೆದುಕೊಂಡಿದ್ದಾಳೆ ಅನ್ನೋದಂತು ಗೊತ್ತಾಗಿದೆ. ಹೀಗಾಗಿಯೇ ಕಪಾಳಕ್ಕೆ ಹೊಡೆದು ಬುದ್ದಿ ಕಲಿಯುವ ಪ್ರಯತ್ನ ಮಾಡಿದ್ದಾಳೆ.


Click it and Unblock the Notifications











