Lakshmi Baramma: ಕೀರ್ತಿ ಕದ್ದ ತಾಳಿ ಬಗ್ಗೆ ಲಕ್ಷ್ಮೀಗೆ ಗೊತ್ತಾಗೇ ಬಿಡ್ತು.. ಈಗ ಕಾವೇರಿಯ ಕಥೆ ಏನು?

By ಎಸ್ ಸುಮಂತ್

ಕಾವೇರಿ ಒಂದು ತಪ್ಪು ಮುಚ್ಚಲು ಹೋಗಿ ಪದೇ ಪದೇ ತಪ್ಪುಗಳನ್ನು ಮಾಡುತ್ತಲೇ ಇದ್ದಾಳೆ. ಕೀರ್ತಿಯ ಬಾಹುಗಳಲ್ಲಿ ಸೆರೆಯಾಗಿದ್ದಾಳೆ. ಏನೇ ಮಾಡದರೂ ಅದರಿಂದ ಹೊರ ಬರುವುದಕ್ಕೆ ಸಾಧ್ಯವೇ ಅಗುತ್ತಿಲ್ಲ. ಇನ್ನೇನು ಕೀರ್ತಿಯನ್ನು ಎದುರಿಸಿ‌ ನಿಲ್ಲಬೇಕು ಎನ್ನುವಷ್ಟರಲ್ಲಿ ಮತ್ತೊಂದು ಬ್ಲಾಕ್ ಮೇಲ್ ಆಡಿಯೋ ಬರುತ್ತಿದೆ. ಅದರಿಂದ ಕಾವೇರಿ ರೋಷವೆಲ್ಲಾ ಕರಗಿ ಹೋಗುತ್ತಿದೆ.

ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ಇರುವ ಹೊತ್ತು. ಮಗ-ಸೊಸೆಯ ವಿಶೇಷ ದಿನ. ಆದರೆ, ಅದಕ್ಕೂ ಕೀರ್ತಿ ಕಲ್ಲು ಹಾಕುವುದಕ್ಕೆ ಕಾದಿದ್ದಳು. ಅದರಿಂದ ಸಂಕಷ್ಟಕ್ಕೆ ಸಿಲುಕಿದ್ದು ಮಾತ್ರ ಕಾವೇರಿಯೇ‌. ಯಾವುದು ಬೇಡ ಎನ್ನುತ್ತಿದ್ದಳೊ ಅದೇ ಕೆಲಸವಾಗಿದೆ. ಅತ್ತೆಯ ನೆರಳಿಗೆ ಹೆದರುತ್ತಿದ್ದ ಕಾವೇರಿಗೆ, ಇನ್ಮುಂದೆ ಪ್ರತಿ ದಿನ ಅತ್ತೆಯ ತಾಳಿಯನ್ನೇ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ.

Lakshmi Baramma serial Written Update on August 4th episode

ಮಗಳ ಮಾತು ಮೀರಿದ ಕಾರುಣ್ಯ

ಕಾರುಣ್ಯಗೆ ಮಗಳ ಅವತಾರ ನೋಡಿ‌ ನೋಡಿ‌ ಸಾಕಾಗಿದೆ. ಅದರಲ್ಲೂ ಗತಿಗೆಟ್ಟವರ ಥರ ಆಡುವುದು ಕಾರುಣ್ಯಗೆ ಇಷ್ಟವಿಲ್ಲ. ಸಾಕಷ್ಟು ಬಾರಿ ಮಗಳಿಗೆ ಬುದ್ದಿ‌ ಹೇಳಲು ಪ್ರಯತ್ನಿಸಿದ್ದಾಳೆ. ಆದರೂ, ಅವಳು ಕೇಳುವ ಗೋಜಿಗೆ ಹೋಗಿಲ್ಲ. ವೈಷ್ಣವ್ ಬೇಕು ಅಂತಾನೇ ಕೂತಿದ್ದಾಳೆ. ಈಗಲೂ ಅವನ ಹೆಸರಲ್ಲಿ ತಾಳು ಕಟ್ಟಿಕೊಳ್ಳಲು ಹೊರಟಿದ್ದಳು. ಈ ಹಿಂದೆಯೇ ಕಾವೇರಿ‌ ಮನೆಗೆ ಯಾವುದೇ ಕಾರಣಕ್ಕೂ ಹೋಗಬಾರದು ಎಂದು ಕೀರ್ತಿ ವಾರ್ನಿಂಗ್ ಮಾಡಿದ್ದಳು. ಆದರೀಗ ಕಾರುಣ್ಯ ಈ ಬಾರಿ ಮಗಳ ಮಾತನ್ನು ಮೀರಿ‌ ಕಾವೇರಿಯ ಮನೆಗೆ ಹೋಗಿಯೇ ಬಿಟ್ಟಿದ್ದಾಳೆ.

ಲಕ್ಷ್ಮೀ ಮುಂದೆ ಬಯಲಾಯ್ತು ತಾಳಿ ವಿಚಾರ

ಕಾರುಣ್ಯ ಎಂಟ್ರಿಯಾಗುತ್ತಿದ್ದಂತೆ ಕಾವೇರಿ ಮನೆಯ ಹೊರಗೆ ಸಿಕ್ಕಿದ್ದಾಳೆ. ಮಗಳಿಗೆ ಏನನ್ನೋ ಹೇಳಿ ಯಾಮಾರಿಸುತ್ತಿದ್ದಾಳೆ ಅನ್ನೋದಂತು ಕಾರುಣ್ಯಗೆ ಗೊತ್ತಾಗಿದೆ. ಆದರೆ ಅದು ಏನು ಅನ್ನೋ ಸತ್ಯ ಮಾತ್ರ ಗೊತ್ತಾಗಬೇಕಿದೆ. ಮೊದಲೇ ಕೋಪದಿಂದ ಉರಿಯುತ್ತಿದ್ದ ಕಾರುಣ್ಯ, ಕಾವೇರಿ ಸಿಕ್ಕ ಕೂಡಲೇ ಕ್ಲಾಸ್ ತೆಗೆದುಕೊಂಡಿದ್ದಾಳೆ. ಈ ತಾಳಿ ನನ್ನ ಮಗಳ ಬಳಿ ಹೇಗೆ ಬಂತು ಎಂದು ಪ್ರಶ್ನೆ ಮಾಡಿದ್ದಾಳೆ. ಆ ಪ್ರಶ್ನೆ ಕೇಳುವಾಗ ಲಕ್ಷ್ಮೀ ಬಂದಿದ್ದಾಳೆ.

Lakshmi Baramma serial Written Update on August 4th episode

ಕೀರ್ತಿಗೆ ತಿರುಗೇಟು ನೀಡಿದ ಲಕ್ಷ್ಮೀ

ಕಾರುಣ್ಯ ತೋರಿಸಿದ ತಾಳಿ ಲಕ್ಷ್ಮೀ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅತ್ತೆ ಅಲ್ಲಿಯೇ ಇದ್ದ ಕಾರಣ, ಅತ್ತೆ ಈ ತಾಳಿನ ಕೀರ್ತಿಗೆ ನೀವಾ ಕೊಟ್ಟಿದ್ದು ಎಂದೇ ಪ್ರಶ್ನಿಸಿದ್ದಾಳೆ. ಕಾರುಣ್ಯ ಹಿಂದೆಯೇ ಬಂದ ಕೀರ್ತಿ, ಹೌದು ಆಂಟಿನೇ ಆ ತಾಳಿಯನ್ನು ನನಗೆ ಕೊಟ್ಟಿದ್ದು ಏನೀಗ ಎಂದು ಪ್ರಶ್ನೆ ಮಾಡಿದ್ದಾಳೆ. ಲಕ್ಷ್ಮೀ ಯಾವ ವಿಚಾರವನ್ನು ಬೇಕಾದರೂ ಸಹಿಸಿಕೊಳ್ಳುತ್ತಾಳೆ. ತನ್ನ ಗಂಡ, ಮನೆಯವರು ಎಂದು ಬಂದರೆ ಗ್ರಹಚಾರ ಬಿಡಿಸುತ್ತಾಳೆ. ಕೀರ್ತಿಗೆ ಅದಾಗಲೇ ಅದರ ಸತ್ಯದ ಅರಿವಾಗಿದೆ. ಆದರೂ ಲಕ್ಷ್ಮೀಯ ಬಳಿ ಕ್ಲಾಸ್ ತೆಗೆದುಕೊಂಡಿದ್ದಾಳೆ.

ಕಾವೇರಿ ಈಗ ಏನ್ಮಾಡ್ತಾಳೆ..?

ಮನೆಯೊಳಗೆ ಸುಪ್ರೀತಾ ಹಾಗೂ ಕಾವೇರಿ ನಡುವೆ ನಡೆಯುತ್ತಿರುವ ಕೋಲ್ಡ್ ವಾರ್ ಅದಾಗಲೇ ಲಕ್ಷ್ಮೀ ಗಮನಿಸಿ ಆಗಿದೆ. ಏನೋ ಸರಿ ಇಲ್ಲ ಅನ್ನೋದು ಗೊತ್ತಾದಾಗಲೇ ಇಂತಹ ಅಪ್ಡೇಟ್‌ಗಳು ಬೇರೆ ನಡೆಯುತ್ತಿದೆ. ಇನ್ನು ಕಾವೇರಿಗೆ ಇರುವುದು ಒಂದೇ ಅಸ್ತ್ರ. ಆಲ್ಬಂ ಸಾಂಗ್. ಈಗ ಸೊಸೆ ಲಕ್ಷ್ಮೀ ಕೇಳುವ ಪ್ರಶ್ನೆಗೂ ಅದೇ ಉತ್ತರ ನೀಡುತ್ತಾಳೇನೋ. ಅದರಿಂದಾನೇ ಬಚಾವ್ ಆಗೋದು ಕಷ್ಟ. ಇನ್ಮುಂದೆ ತನ್ನ ಅತ್ತೆಯ ಮುಚ್ಚಿಟ್ಟ ರಹಸ್ಯದ ಹಿಂದೆ ಲಕ್ಷ್ಮೀ ನಡೆಯುವ ಸಾಧ್ಯತೆಯೇ ಹೆಚ್ಚು.

More from Filmibeat

English summary
Lakshmi Baramma serial Written Update on August 4th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X