Lakshmi Baramma: ಆ ಕಡೆ ವೈಷ್ಣವ್‌ಗೆ ಅವಮಾನ.. ಈ ಕಡೆ ಕೀರ್ತಿಗೆ ಸರಿಯಾದ ಪಾಠ.. ಯಾರಿಗೆ ಕಾದಿದೆ ಗ್ರಹಚಾರ..?

By ಎಸ್ ಸುಮಂತ್

ಕೀರ್ತಿಯ ರಂಪ ರಾಮಾಯಣ ಇನ್ನು ಮುಗಿದಿಲ್ಲ. ಲಕ್ಷ್ಮೀಗೆ ಸೇರಬೇಕಾದ ತಾಳಿಯನ್ನು ಎತ್ತಿಕೊಂಡು ಹೋಗಿದ್ದಳು. ಕಡೆಗೆ ಲಕ್ಷ್ಮೀಗೆ ಅಜ್ಜಿಯ ತಾಳಿಯೇ ಗಟ್ಟಿಯಾಗಿತ್ತು. ಅದನ್ನೇ ಆಶೀರ್ವಾದ ಅಂತ ಹಾಕಿಕೊಂಡಳು. ಆದ್ರೆ, ಮನೆಯಲ್ಲಿ ಕೀರ್ತಿಯ ಹುಚ್ಚಾಟ ನೋಡುವುದಕ್ಕೆ ಕಾರುಣ್ಯ ಕಡೆಯಿಂದ ಆಗಲಿಲ್ಲ. ಇದಕ್ಕೆಲ್ಲ ಕಾರಣ ಕಾವೇರಿಯ ಅನ್ನೋದು ಕಾರುಣ್ಯಗೆ ಗೊತ್ತಿತ್ತು. ಅದಕ್ಕೆಂದೇ ನೇರ ಕಾವೇರಿಗೇ ಕ್ಲಾಸ್ ತೆಗೆದುಕೊಂಡಿದ್ದಾಳೆ.

ಕಾವೇರಿಯ ಬಂಡವಾಳ ಇನ್ನೇನು ಬಯಲಾಗುತ್ತೆ ಎನ್ನುವಷ್ಟರಲ್ಲಿ ಅದು ಕೂಡ ಠುಸ್ ಪಟಾಕಿ ಆಗಿದೆ. ಲಕ್ಷ್ಮೀ ಮತ್ತು ಕೀರ್ತಿಯ ನಡುವೆ ಸ್ಪರ್ಧೆ ಜೋರಾಗಿದೆ. ಆದ್ರೆ ಅಲ್ಲಿ ಸೋತಿದ್ದು ಮಾತ್ರ ಕೀರ್ತಿ. ಇನ್ನೊಂದು ಕಡೆ ವೈಷ್ಣವ್‌ಗೂ ಅವಮಾನವಾಗಿ ಕೋಪ ನೆತ್ತಿಗೇರಿದೆ.

Lakshmi Baramma serial Written Update on August 7th episode

ಲಕ್ಷ್ಮೀ ತಾಳಿಗೆ ಬೆಲೆ ಕಟ್ಟಲು ಹೊರಟ ಕೀರ್ತಿ

ಲಕ್ಷ್ಮೀಗೆ ಅಂತ ತಂದಿದ್ದ ತಾಳಿಯನ್ನು ಕೀರ್ತಿ ತೆಗೆದುಕೊಂಡು ಹೋಗಿದ್ದೇ ಮಹಾಪರಾಧ. ಇನ್ನು ಈ ತಾಳಿಗೆ ಎಷ್ಟು ಬೇಕು ಹೇಳು ಅಷ್ಟು ಬೆಲೆ ಕೊಡ್ತೀನಿ ಅಂತ ಲಕ್ಷ್ಮೀಯನ್ನೇ ರೇಗಿಸಿದ್ದಾಳೆ. ಲಕ್ಷ್ಮೀ ಬುದ್ದಿವಂತೆ ಕೇಳಬೇಕಾ. ಸರಿ ಬರೀ ಅಂತ, ಒಂದು ಕೋಟಿಯಿಂದ ಸೊನ್ನೆ ಸೊನ್ನೆ ಸೇರಿಸಿಕೊಂಡು ಚೆಕ್ ನಲ್ಲಿ ಸೊನ್ನೆ ಬರೆಯುವುದಕ್ಕೆ ಜಾಗವಿರಬಾರದು ಅಷ್ಟು ಸೊನ್ನೆ ಬರೆಸಿದ್ದಾಳೆ.

ತಾಳಿ-ವೈಷ್ಣವ್ ಎರಡೂ ನನ್ನದೇ ಎಂದ ಲಕ್ಷ್ಮೀ

ಕಡೆಗೆ ಲಕ್ಷ್ಮೀಯ ಆಟಕ್ಕೆ ಕೀರ್ತಿಯೇ ಬ್ರೇಕ್ ಹಾಕುವುದಕ್ಕೆ ಹೊರಟಿದ್ದಾಳೆ. ತಕ್ಷಣ ಆ ಚೆಕ್ ಕಿತ್ತುಕೊಂಡು, ಹರಿದು ಹಾಕಿದ ಲಕ್ಷ್ಮೀ ತಾಳಿಯ ಮಹತ್ವ ಹೇಳಿದ್ದಾಳೆ. ಈ ತಾಳಿಗೆ ಬೆಲೆ ಕಟ್ಟುವುದಕ್ಕೆ ನೀನು ಅಷ್ಟು ಶ್ರೀಮಂತಳಲ್ಲ ಎಂಬುದನ್ನು ತಿಳಿಸಿದ್ದಾಳೆ‌. ಅಷ್ಟೇ ಅಲ್ಲ ಲಕ್ಷ್ಮೀ ಒಂದೊಂದು ಮಾತಿನಲ್ಲೂ ತಾಳಿಯೂ ನನ್ನದೇ, ವೈಷ್ಣವ್ ಕೂಡ ನನ್ನವನೇ. ಇಬ್ಬರನ್ನು ಮುಟ್ಟುವುದಕ್ಕೆ ಸಾಧ್ಯವಿಲ್ಲ ಅನ್ನುವುದನ್ನು ಸ್ಪಷ್ಟ ಪಡಿಸಿದ್ದಾಳೆ. ಟಚ್ ಮಾಡುವುದಕ್ಕೆ ಬಂದರೂ ಸಾಧ್ಯವಿಲ್ಲ ಅನ್ನೋದನ್ನು ತಿಳಿಸಿದ್ದಾಳೆ.

Lakshmi Baramma serial Written Update on August 7th episode

ಧರಧರನೇ ಎಳೆದೊಯ್ದ ಕಾರುಣ್ಯ

ಲಕ್ಷ್ಮೀ ಒಂದೊಂದು ಮಾತಿನಲ್ಲೂ ಅರ್ಥವಿದ್ದಿದ್ದನ್ನು ಗಮನಿಸಿದ ಕಾರುಣ್ಯಗೆ ತುಂಬಾ ಖುಷಿಯಾಗಿದೆ. ತನ್ನ ಮಗಳ ಮುಂದೆಯೇ ಲಕ್ಷ್ಮೀಯನ್ನು ಹೊಗಳಿದ್ದಾಳೆ. ದೊಡ್ಡವರ ಮುಂದೆ ಕೆಲವೊಮ್ಮೆ ಚಿಕ್ಕವರೆ ಬುದ್ದಿವಂತರಾಗಿ ಬಿಡುತ್ತಾರೆ. ಇನ್ಮೇಲಾದ್ರೂ ಅರ್ಥ ಮಾಡಿಕೊ ಕಾವೇರಿ. ನಿನ್ನ ಮಗನಿಗೆ ಲಕ್ಷ್ಮೀಯೇ ಸೊಸೆ. ಅದನ್ನ ಜೋಪಾನ ಮಾಡಿಕೋ. ನನ್ನ ಮಗಳಿಗೆ ಏನು ಬೇಕು ಅನ್ನೋದನ್ನ ನಾನೇ ಹುಡುಕಿ ತರ್ತೀನಿ ಅಂತ ಹೇಳಿ, ಇತ್ತ ಮಗಳಿಗೆ ಪರೋಕ್ಷವಾಗಿ ಅರ್ಥ ಮಾಡಿಸಲು ಪ್ರಯತ್ನ ಪಟ್ಟಿದ್ದಾಳೆ. ಆದರೆ ಅವಳ ಹಠ ಬಿಡದೆ ಹೋದಾಗ, ಧರಧರನೇ ಎಳೆದುಕೊಂಡು ಹೋಗಿದ್ದಾಳೆ.

ಹಾಡಿನ ವಿಚಾರಕ್ಕೆ ವೈಷ್ಣವ್‌ಗೆ ಅವಮಾನ

ವೈಷ್ಣವ್ ಲೈಫ್ ನಲ್ಲಿ ಹಾಡಿನ ವಿಚಾರದಲ್ಲಿ ಅವಮಾನಗಳು ಆಗಿದ್ದೇ ಇಲ್ಲ. ಈಗ ಕೀರ್ತಿಯ ರಂಪಾಟದಿಂದ ನೂರೆಂಟು ಸಮಸ್ಯೆಗಳು ಕಾಡುವುದಕ್ಕೆ ಶುರು ಮಾಡಿದೆ. ಹೀಗಾಗಿ ಬರೆದ ಹಾಡೊಂದು ಕೇಳುಗರ ಮನಸ್ಸಿಗೆ ಇಷ್ಟವಾಗಿಲ್ಲ. ಹೀಗಾಗಿ ಮ್ಯೂಸಿಕ್ ಕಂಪನಿ ಆ ಹಾಡನ್ನು ರಿಜೆಕ್ಟ್ ಮಾಡಿದೆ. ವೈಷ್ಣವ್‌ಗೆ ಮುಖಕ್ಕೆ ಹೊಡೆದಂತೆಯೇ ತಿಳಿಸಿದ್ದಾಳೆ. ಮೊದಲಿಗೆ ವೈಷ್ಣವ್ ಕೂಡ ಆ ಮಾತನ್ನು ಆಲಿಸಿದ್ದ. ಬೇರೆ ಹಾಡು ಬರೆಯುವುದಕ್ಕೆ ಸಮಯ ಬೇಕು ಎಂದು ಕೇಳಿದ. ಮ್ಯೂಸಿಕ್ ಕಂಪನಿಯವರು ಅಲ್ಲಿಂದ ಹೋದ ಮೇಲೆ ಕೋಪ‌ ಮಾಡಿಕೊಂಡ. ಇದಕ್ಕೆಲ್ಲ ನೇರ ಕಾರಣ ಕೀರ್ತಿ. ವೈಷ್ಣವ್ ಮುಂದಿನ ನಿರ್ಧಾರ ಏನಾಗಿರಲಿದೆಯೋ.?

More from Filmibeat

English summary
Lakshmi Baramma serial Written Update on August 7th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X