Lakshmi Baramma: ಲಕ್ಷ್ಮೀಯಿಂದ ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ಕೀರ್ತಿ..ಸತ್ಯವೆಲ್ಲಾ ಬಯಲಾಗುತ್ತಾ?
ಕೀರ್ತಿಗೆ ಈಗ ದ್ವೇಷ ಇನ್ನಷ್ಟು ಹೆಚ್ಚಾಗಿದೆ. ಅದರಲ್ಲೂ ಲಕ್ಷ್ಮೀ ತಾಳಿಯನ್ನು ಕಸಿದುಕೊಂಡು ಬಿಟ್ಟಳು ಎಂಬ ಸಿಟ್ಟು. ವೈಷ್ಣವ್‌ನನ್ನು ಮದುವೆಯಾಗಿದ್ದರು ಸಹ ಲಕ್ಷ್ಮೀ ಮತ್ತು ವೈಷ್ಣವ್ ಜೊತೆಯಾಗಬಾರದು ಎಂದೇ ಕಂಡೀಷನ್ ಹಾಕಿದ್ದಾಳೆ. ಅದಕ್ಕೆ ತಕ್ಕ ಹಾಗೇ ಕಾವೇರಿಯನ್ನು ಬಳಸಿಕೊಳ್ಳುತ್ತಾ ಇದ್ದಾಳೆ. ಈಗ ಕಾವೇರಿಯೂ ಸಹಾಯ ಮಾಡದ ಸ್ಥಿತಿಗೆ ತಂದು ನಿಲ್ಲಿಸಿದ್ದಾಳೆ.
ವೈಷ್ಣವ್‌ಗೆ ಕೂಡ ಯಾವುದೇ ಭಾವನೆಯನ್ನು ಮನದಲ್ಲಿಟ್ಟುಕೊಳ್ಳುವ ಆಸೆಯಿಲ್ಲ. ಆ ಸಂಬಂಧವನ್ನು ಮುಂದುವರೆಸುವ ಇರಾದೆಯೂ ಇಲ್ಲ. ಅದನ್ನು ಕೀರ್ತಿ ಅರ್ಥ ಮಾಡಿಕೊಳ್ಳುವ ಗೋಜಿಗೂ ಹೋಗುತ್ತಿಲ್ಲ. ವೈಷ್ಣವ್ ಈಗಲೂ ತನ್ನನ್ನೇ ಪ್ರೀತಿಸುತ್ತಿದ್ದಾನೆ ಎಂದುಕೊಂಡಿದ್ದಾಳೆ. ಆದರೆ, ಈಗ ವೈಷ್ಣವ್‌ನನ್ನು ಪಡೆಯೋದಕ್ಕೆ ಕಾರುಣ್ಯ ಒಳ್ಳೆ ಐಡಿಯಾ ಕೊಟ್ಟಿದ್ದಾಳೆ. ಅದನ್ನು ಕೀರ್ತಿ ಪಾಲಿಸುತ್ತಾಳಾ ನೋಡಬೇಕಿದೆ.

ಸೊಸೆ ವಿರುದ್ಧವೇ ಸ್ಪರ್ಧೆಗೆ ಇಳಿದ ಕಾವೇರಿ
ಮಗನ ವಿಚಾರದಲ್ಲಿ ಕಾವೇರಿ ಯಾವಾಗಲೂ ಸ್ವಾರ್ಥದಿಂದಾನೇ ಯೋಚನೆ ಮಾಡುತ್ತಾಳೆ. ಅವನಿನ್ನು ಚಿಕ್ಕವನು, ತಾನೇ ಎಲ್ಲದನ್ನು ನೋಡಿಕೊಳ್ಳಬೇಕು ಎಂಬ ರೀತಿಯಲ್ಲಿ ಯೋಚಿಸುತ್ತಾಳೆ. ಆದರೆ ವೈಷ್ಣವ್‌ಗೂ ಸ್ವಾತಂತ್ರ್ಯದ ಅವಶ್ಯಕತೆ ಬಹಳಷ್ಟಿದೆ. ಲಕ್ಷ್ಮೀ ಬಂದ ಮೇಲೆ ಅದನ್ನು ಹೇಳುತ್ತಲೇ ಇದ್ದಾನೆ. ಈಗಂತು ಕಾವೇರಿ ಸೊಸೆಯ ವಿರುದ್ಧವೇ ಸ್ಪರ್ಧೆಗೆ ಇಳಿದಿದ್ದಾಳೆ. ವೈಷ್ಣವ್‌ಗೆ ಊಟ ತೆಗೆದುಕೊಂಡು ಹೊರಟ ಲಕ್ಷ್ಮೀಯನ್ನು ತಡೆದಿದ್ದಾಳೆ. ತಾನೇ ತೆಗೆದುಕೊಂಡು ಹೋಗುವುದಾಗಿ ಹೇಳಿದ್ದಾಳೆ.
ಮನೆಯವರೆಲ್ಲ ಲಕ್ಷ್ಮೀಗೆ ಸಪೋರ್ಟ್
ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಗಂಡ ಹೆಂಡತಿ ಸ್ವಲ್ಪ ಹತ್ತಿರವಾಗಲಿ ಎನ್ನುವ ಕಾರಣಕ್ಕೆ ಈ ರೀತಿ ಐಡಿಯಾ ಮಾಡಿದ್ದು, "ನೀನೇನು ಕಾವೇರಿ ಈ ರೀತಿ ಮಾತಾಡ್ತೀಯ ಅಂತ ಜೋರು ಮಾಡಿದಾಗ" ಕಾವೇರಿ ತಣ್ಣಗಾಗಿದ್ದಾಳೆ. ಬಳಿಕ ಮೊದಲು ಏನೆಲ್ಲ ಬಡಿಸಬೇಕು ಅನ್ನೋದನ್ನು ಒತ್ತಿ ಒತ್ತಿ ಹೇಳಿದ್ದಾಳೆ. ಇದು ಮನೆಯವರಿಗೆಲ್ಲಾ ಹಾಸ್ಯಾಸ್ಪದವಾಗಿದೆ. ಎಲ್ಲರೂ ಲಕ್ಷ್ಮೀಯ ಪರವಾಗಿ ಮಾತನಾಡಿ, ಅವಳನ್ನು ಸ್ಟುಡಿಯೋಗೆ ಕಳುಹಿಸಿದ್ದಾರೆ.

ಸುಪ್ರೀತಾಗೆ ಸಂತಸದ ಸಮಯ
ಲಕ್ಷ್ಮೀ ಮಾಡಿದ್ದು ಒಂದೆರಡಲ್ಲ. ಕೀರ್ತಿಗೂ ಕ್ಲಾಸ್ ತೆಗೆದು ಕಳುಹಿಸಿದ್ದಾಳೆ. ಈಗ ವೈಷ್ಣವ್ ಸ್ಟುಡಿಯೋಗೆ ಊಟವನ್ನು ತಾನೇ ತೆಗೆದುಕೊಂಡು ಹೊರಟಿದ್ದಾಳೆ. ಇದೆಲ್ಲ ನೋಡಿ ಕಾವೇರಿಯ ತಲೆ ಕೆಟ್ಟಿದೆ. ಹೀಗೆ ಬಿಟ್ಟರೆ ಅತ್ತೆ ಎಂಬ ಸ್ಥಾನಕ್ಕೆ ಕುತ್ತು ಬರುತ್ತೆ. ಆಮೇಲೆ ಅವಳು ಹೇಳಿದ್ದೆಲ್ಲವು ನಡೆಯುವುದಕ್ಕೆ ಶುರುವಾಗುತ್ತೆ ಎಂದು ಕಾವೇರಿ ಟೆನ್ಶನ್ ಆಗಿದ್ರೆ, ಇದನ್ನು ನೋಡಿ ಸುಪ್ರೀತಾ ನಗೆಗಡಲಲ್ಲಿ ತೇಲುತ್ತಿದ್ದಾಳೆ. ಆದಷ್ಟು ಬೇಗ ಇನ್ನಷ್ಟು ಕುಸಿಯುವ ದಿನ ಬರಲಿ ಎಂದೇ ಹಾರೈಸುತ್ತಿದ್ದಾಳೆ.
ಕೀರ್ತಿಗೆ ಎಚ್ಚರಿಕೆ ಕೊಟ್ಟ ಕಾರುಣ್ಯ
ಕೀರ್ತಿಯ ಹುಚ್ಚಾಟ ನೋಡಿ ನೋಡಿ ಕಾರುಣ್ಯಗೆ ಸಾಕಾಗಿದೆ. ಇದಕ್ಕೆಲ್ಲಾ ಕಾವೇರಿಯೇ ಕಾರಣ ಅನ್ನೋದು ಗೊತ್ತಾಗಿದೆ. ಆದಷ್ಟು ಮಗಳನ್ನು ಸರಿ ಮಾಡುವುದಕ್ಕೆ ಪ್ರಯತ್ನ ಪಟ್ಟರು ಅದು ಸರಿಯಾಗಿಲ್ಲ. ಈಗ ಕಾರುಣ್ಯ ಹೊಸ ಪ್ಲ್ಯಾನ್ ಮಾಡಿದ್ದಾಳೆ. ಕಾವೇರಿ ಮತ್ತು ನಿನ್ನ ನಡುವೆ ನಡೆದಿರುವುದೆಲ್ಲವನ್ನು ನೀನು ವೈಷ್ಣವ್ ಬಳಿ ಹೇಳಿ ಬಿಡು ಎಂದಿದ್ದಾಳೆ. ಆ ದಿನಕ್ಕೋಸ್ಕರನೇ ಕೀರ್ತಿ ಕೂಡ ಕಾಯುತ್ತಿದ್ದಾಳೆ. ಆದರೆ ಆ ಕಡೆ ಶಾಸ್ತ್ರ, ಅದು ಇದು ಅಂತ ಮತ್ತೆ ಜಾವೇರಿ ಕೀರ್ತಿಯ ತಲೆ ಕೆಡಿಸಿದ್ದಾಳೆ. ಅಮ್ಮನ ಮಾತು ಕೇಳಿ ವೈಷ್ಣವ್ ಬಳಿ ಹೇಳುವ ಧೈರ್ಯವನ್ನು ಕೀರ್ತಿಯಂತು ಸದ್ಯಕ್ಕೆ ಮಾಡೋದಿಲ್ಲ. ಅದರ ಜೊತೆಗೆ ಲಕ್ಷ್ಮೀ ಇನ್ಮುಂದೆ ಕೀರ್ತಿಯನ್ನು ಮನೆಯ ಒಳಗೆ, ಗಂಡನ ಸಲಿಗೆಗೆ ಬಿಟ್ಟುಕೊಳ್ಳುವ ಉಸಾಬರಿಗೆ ಹೋಗಲ್ಲ.


Click it and Unblock the Notifications











