Lakshmi Baramma: ಲಕ್ಷ್ಮೀಯ ಪ್ರಾಣ ಅಪಾಯದಲ್ಲಿ.. ಕೀರ್ತಿಯಿಂದ ಹೆಂಡತಿಯನ್ನು ಹೇಗೆ ಕಾಪಾಡ್ತಾನೆ ವೈಷ್ಣವ್?
ಲಕ್ಷ್ಮೀ ಅಮಾಯಕಿ, ಬಡತನದಿಂದ ಬಂದವಳು. ಅವಳಿಗೆ ಹಣದ ಆಸೆ ತೋರಿಸಿ ಬಿಟ್ಟರೆ ವೈಷ್ಣವ್‌ನನ್ನು ಬಿಟ್ಟು ಹೋಗಿ ಬಿಡುತ್ತಾಳೆ. ಸ್ವಲ್ಪ ಹೆಚ್ಚಾಗಿನೇ ಹಣ ಕೊಡೋಣಾ ಅಂತ ಕೀರ್ತಿ ಪ್ಲ್ಯಾನ್ ಮಾಡಿದ್ದಳು. ಆದರೆ, ಇತ್ತೀಚೆಗೆ ತಾಳಿ ವಿಚಾರಕ್ಕೆ ಲಕ್ಷ್ಮೀ ಕೊಟ್ಟ ಕ್ಲಾಸ್ ಕೇಳಿ, ಕೀರ್ತಿ ಶಾಕ್ ಆಗಿದ್ದಾಳೆ. ಕಾರುಣ್ಯ ಕೂಡ ಕೀರ್ತಿಗೆ ಸತ್ಯ ಅರ್ಥ ಮಾಡಿಸುವ ಪ್ರಯತ್ನದಲ್ಲಿದ್ದಾಳೆ. ವೈಷ್ಣವ್ ಇನ್ಮುಂದೆ ಸಿಗಲ್ಲ ಅನ್ನೋದನ್ನು ಮನವರಿಕೆ ಮಾಡಿಕೊಳ್ಳಲು ಹೇಳಿದ್ದಾಳೆ.
ಆ ಕಡೆ ಲಕ್ಷ್ಮೀ ತನ್ನ ಗಂಡನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮುಂದಾಗಿದ್ದಾಳೆ. ವೈಷ್ಣವ್‌ಗಾಗಿ ಊಟ ತೆಗೆದುಕೊಂಡು ಹೊರಟಿದ್ದಾಳೆ. ವೈಷ್ಣವ್ ಮನಸ್ಸು ಮೊದಲೇ ಸರಿ ಇಲ್ಲ. ಆಲ್ಬಂ ಸಾಂಗ್ ಒಂದು ಮೊದಲೇ ರಿಜೆಕ್ಟ್ ಆಗಿದೆ. ಅದರ ಜೊತೆಗೆ ಈಗ ಕೈಯಿಟ್ಟ ಗಿಡಗಳೆಲ್ಲಾ ಟಬುಕ್ ಟಬುಕ್ ಅಂತ ಬೀಳ್ತಿದೆ. ಇದ್ಯಾಕೋ ಅಪಶಕುನ ಎಂದುಕೊಳ್ಳುವಾಗಲೇ ಕೀರ್ತಿಯಿಂದ ಲಕ್ಷ್ಮೀಗೆ ಏನೋ ಅಪಾಯ ಎದುರಾಗುವ ಸೂಚನೆ ಕಾಣ್ತಿದೆ.

ಲಕ್ಷ್ಮೀಯನ್ನು ತನ್ನ ಕಾರಲ್ಲೇ ಕರೆದೊಯ್ದ ಕೀರ್ತಿ
ಕಾವೇರಿ ಮತ್ತು ಕೀರ್ತಿಯ ನಡುವೆ ಯಾವುದೋ ಸತ್ಯ ಅವಿತಿದೆ ಅನ್ನೋದಂತು ಕಾರುಣ್ಯಗೆ ಗೊತ್ತಾಗಿದೆ. ಹೀಗಾಗಿ ಎಲ್ಲಾ ಸತ್ಯವನ್ನು ವೈಷ್ಣವ್ ಬಳಿ ಹೇಳಿ ಬಿಡು ಎಂಬ ಸಲಹೆ ನೀಡಿದ್ದಾಳೆ. ಆದರೆ ಕೀರ್ತಿ, ವೈಷ್ಣವ್ ಬಿಟ್ಟು ಲಕ್ಷ್ಮೀ ಬಳಿ ಮಾತನಾಡುವುದಕ್ಕೆ ಹೊರಟಿದ್ದಾಳೆ. ಅದಕ್ಕೆ ಸ್ಟುಡಿಯೋಗೆ ಹೊರಟ ಲಕ್ಷ್ಮೀಯನ್ನು ತನ್ನ ಕಾರಲ್ಲಿ ಕೂರಿಸಿಕೊಂಡು ಹೊರಟಿದ್ದಾಳೆ. ಸ್ಟುಡಿಯೋಗೆ ಹೋಗಬೇಕು ಎಂದರೂ ಬಿಡದೆ, ಲಕ್ಷ್ಮೀಯ ಮೊಬೈಲ್ ಅನ್ನು ಕಿತ್ತು ಬಿಸಾಕಿ ಗಾಬರಿ ಹುಟ್ಟಿಸಿದ್ದಾಳೆ.
ಸುಪ್ರೀತಾ ಮೇಲೆ ಅನುಮಾನಗೊಂಡ ಕಾವೇರಿ
ಸುಪ್ರೀತಾ ಈಗ ಲಕ್ಷ್ಮೀಯನ್ನು ಮಗಳಂತೆ ನೋಡುತ್ತಿದ್ದಾಳೆ. ಮನೆಯಲ್ಲಿ ಯಾರೂ ಬೆಂಬಲಕ್ಕೆ ನಿಲ್ಲದೆ ಇದ್ದಾಗ ಲಕ್ಷ್ಮೀ ಬೆಂಬಲಕ್ಕೆ ನಿಂತಿದ್ದಾಳೆ. ಕಾವೇರಿಯ ಬಳಿಯೂ ಸುಪ್ರೀತಾ ಅದನ್ನೇ ಹೇಳಿದ್ದಾಳೆ. ಅಮ್ಮನಂತೆ ಇರುವ ಸೊಸೆಯನ್ನು ತಂದಿದ್ದೀಯಾ. ಅವಳು ಈ ಮನೆಯ ಯಜಮಾನಿ ಆಗೋದ್ರಲ್ಲಿ ಡೌಟೇ ಇಲ್ಲ ಅನ್ನೋ ತರ. ಇದು ಕಾವೇರಿಯ ಆತಂಕಕ್ಕೆ ಕಾರಣವಾಗಿದೆ. ಅದೇ ಸಮಯದಲ್ಲಿ ಅಡ್ರೆಸ್ ಏನು ಇಲ್ಲದ ಲೆಟರ್ ಬಂದಿದೆ. ಆ ಪತ್ರದಲ್ಲಿ ಮಗನ ಮದುವೆ ರಹಸ್ಯ ಮಾತಾಡಬೇಕು ಪಕ್ಕದಲ್ಲಿಯೇ ಇರುವ ಮಾಲ್‌ಗೆ ಬಾ ಅಂತ ಕರೆದಿದ್ದಾರೆ. ಇದನ್ನ ಕಾವೇರಿ ತಪ್ಪಾಗಿ ತಿಳಿದಿದ್ದಾಳೆ.

ಮಗನ ಮುಂದೆ ಸಿಕ್ಕಿ ಬಿದ್ದ ಕಾವೇರಿ
ಕಾವೇರಿಗೆ ಇದು ಸುಪ್ರೀತಾಳದ್ದೇ ಹುಚ್ಚಾಟ ಎನಿಸಿದೆ. ಅದೇ ಕಾರಣಕ್ಕೆ ಸುಪ್ರೀತಾಳ ಬಳಿ ಹೋಗಿ ಕೂಗಾಡಿದ್ದಾಳೆ, ಕ್ಲಾಸ್ ತೆಗೆದುಕೊಂಡಿದ್ದಾಳೆ. ನಾನಲ್ಲ ಎಂದು ಹೇಳುವಷ್ಟರಲ್ಲಿ ವೈಷ್ಣವ್ ಕೂಡ ಅಲ್ಲಿಗೆ ಬಂದಿದ್ದಾನೆ. ಸುಪ್ರೀತಾ ಸುಮ್ಮನೆ ಇರೋಕೆ ಸಾಧ್ಯವಾ..? ಪತ್ರದಲ್ಲಿರುವ ವಿಚಾರವನ್ನು ಹೇಳಿಯೇ ಬಿಟ್ಟಿದ್ದಾಳೆ.
ಅಪಾಯದಲ್ಲಿದೆ ಲಕ್ಷ್ಮೀ ಪ್ರಾಣ
ವೈಷ್ಣವ್ ಬಳಿ ಹೇಳೋದಕ್ಕಿಂತ ಲಕ್ಷ್ಮೀ ಬಳಿಯೇ ಎಲ್ಲಾ ಸತ್ಯ ಹೇಳಬೇಕೆಂದುಕೊಂಡ ಕೀರ್ತಿ, ಅವಳನ್ನು ಜಾಸ್ತಿ ನೀರು ಇರುವ ಕಡೆಗೆ ಕರೆದುಕೊಂಡು ಬಂದಿದ್ದಾಳೆ. ನಾನು ಹೆಚ್ಚು ಪ್ರಾಬ್ಲಮ್ಸ್ ನಲ್ಲಿ ಸಿಕ್ಕಿಬಿದ್ದಾಗ ಈ ಜಾಗಕ್ಕೆ ಬರ್ತೀನಿ. ಈಗ ನನ್ನ ಪ್ರಾಬ್ಲಮ್ಸ್ ಅನ್ನೇ ಕರೆದುಕೊಂಡು ಬಂದಿದ್ದೀನಿ ಅಂತ ಹೇಳಿ ಲಕ್ಷ್ಮೀಗೆ ಗೊಂದಲ ಮಾಡಿದ್ದಾಳೆ. ಸರಿಯಾಗಿ ಹೇಳಿ ಎಂದಾಗ ನನ್ನ ಸ್ಥಾನವನ್ನು ನೀನು ಕಿತ್ತುಕೊಳ್ಳುತ್ತಿದ್ದೀಯಾ ಎಂದು ಜೋರು ಮಾಡಿದ್ದಾಳೆ. ಮೊದಲೇ ಸೈಕೋ ಆಗಿ ಕಾಡುವ ಕೀರ್ತಿಯಿಂದ ಈಗ ಲಕ್ಷ್ಮೀಯ ಪ್ರಾಣ ಉಳಿಯಬೇಕಿದೆ.


Click it and Unblock the Notifications











