Lakshmi Baramma: ವೈಷ್ಣವ್- ಕೀರ್ತಿಯನ್ನು ಫಾಲೋ ಮಾಡಿದ ಲಕ್ಷ್ಮಿ.!? ಇಬ್ಬರ ಲವ್‌ ಸ್ಟೋರಿ ಗೊತ್ತಾಯ್ತಾ?

By Shruthi Harish Gowda

ಲಕ್ಷ್ಮೀ ಹಾಗೂ ವೈಷ್ಣವ್ ಇಬ್ಬರೂ ಕೂಡ ತಮ್ಮ ಹೊಸ ಆಲ್ಬಮ್ ಸಾಂಗ್ ರಿಲೀಸ್ ಆದ ಸಂತಸದಲ್ಲಿ ಇದ್ದಾರೆ. ಆದರೆ ಕಾವೇರಿ ಹಾಗೂ ಸುಪ್ರಿತಾ ನಡೆಸುತ್ತಿರುವ ಶೀತಲ ಸಮರ ಲಕ್ಷ್ಮಿ ತಲೆಯಲ್ಲಿ ದೊಡ್ಡ ಗೊಂದಲ ಸೃಷ್ಟಿ ಮಾಡಿದೆ. ಕೀರ್ತಿ ಮನೆ ಬಿಟ್ಟು ಹೋಗಿದಕ್ಕೆ ನೀನೇ ಹೊಣೆ ಎಂದು ಕಾವೇರಿಗೆ ಕಾರುಣ್ಯ ಬೈದಿದ್ದಾಳೆ.

ಇನ್ನು ಲಕ್ಷ್ಮಿ ಮನಸ್ಸಿನಲ್ಲಿ ಸಾಕಷ್ಟು ಊಹಾಪೋಹಗಳಿವೆ. ಪ್ರತಿ ಬಾರಿ ಕೂಡ ಕೀರ್ತಿ ಏನಾದರೂ ಮಾಡಿದಾಗ ಅದಕ್ಕೆ ಕಾವೇರಿ ಅತ್ತೆಯೇ ಹೊಣೆ ಎಂದು ಯಾಕೆ ಹೇಳುತ್ತಾಳೆ? ಎಂಬ ಪ್ರಶ್ನೆಯನ್ನು ವೈಷ್ಣವ್ ಮುಂದೆ ಇಟ್ಟಿದ್ದಾಳೆ. ಸದ್ಯಕ್ಕೆ ಕಾವೇರಿ ಆ ಗೊಂದಲವನ್ನು ಪರಿಹಾರ ಮಾಡಬೇಕು ಎನ್ನುವಷ್ಟರಲ್ಲಿ ಮತ್ತೊಂದು ಗೊಂದಲ ಸೃಷ್ಟಿ ಮಾಡಿದ್ದಾಳೆ. ನೀನು ಯಾರದ್ದೋ ಮಾತು ಕೇಳಿಕೊಂಡು ನನ್ನ ಬಳಿ ಬರಬೇಡ ಎಂದು ಹೇಳಿದಾಗ ಸುಪ್ರೀತ ನನಗೆ ಇದನ್ನ ಹೇಳುತ್ತಿರುವುದು ಎಂದುಕೊಂಡು ಲಕ್ಷ್ಮಿ ಮುಂದೆ ಕಿರುಚಾಟ ನಡೆಸಿದ್ದಾಳೆ. ಇದು ಕಾವೇರಿಗೆ ವರದಾನವಾಗಿದೆ.

Lakshmi baramma serial Written Update on January 6th episode

ಇಬ್ಬರ ಜಗಳ ನೋಡಿದ ಲಕ್ಷ್ಮಿ ತಾನೇ ವಾಪಸ್ ಹೋಗಿದ್ದಾಳೆ. ಆದರೂ ಕೂಡ ಲಕ್ಷ್ಮಿ ಮನಸ್ಸಲ್ಲಿ ವೈಷ್ಣವ್ ಹಾಗೂ ಕೀರ್ತಿಗೂ ಏನು ಸಂಬಂಧವಿದೆ ಅವರು ನಿಜವಾಗಿಯೂ ಫ್ರೆಂಡ್ಸ್ ಅಥವಾ ಬೇರೆ ಏನಾದರೂ ಸಂಬಂಧ ಇದೆಯಾ? ಎಂದು ಯೋಚನೆಯನ್ನ ಮಾಡುತ್ತಾ ಇದ್ದಾಳೆ. ಆದರೆ ಲಕ್ಷ್ಮಿ ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿಲ್ಲ.

ಲಕ್ಷ್ಮಿಗೆ ಜ್ವರ ಬಂದಿದೆ ಇದರಿಂದಾಗಿ ವೈಷ್ಣವಿಗೆ ಸ್ವಲ್ಪ ಟೆನ್ಶನ್ ಆಗಿದ್ದು ಆರೈಕೆಯಲ್ಲಿ ತೊಡಗಿಕೊಂಡಿದ್ದಾನೆ. ಇದೆಲ್ಲದರ ನಡುವೆ ಕಾವೇರಿ ಮಾಸ್ಟರ್ ಪ್ಲಾನ್ ಮಾಡಿದ್ದಾಳೆ. ತನ್ನ ಅಮ್ಮನಿಗೆ ಸುಪ್ರೀತಾ, ಲಕ್ಷ್ಮಿಯ ಮುಂದೆ ಆಡಿದ ಮಾತನ್ನ ಹೇಳಿ ಬಿಟ್ಟಿದ್ದಾಳೆ. ಅಮ್ಮನ ಮೂಲಕ ಸುಪ್ರಿತಾಳನ್ನು ಕಟ್ಟಿ ಹಾಕಬೇಕು ಎಂಬ ಯೋಚನೆ ಅವಳದ್ದು. ಸದ್ಯಕ್ಕೆ ಕಾವೇರಿ ಲಕ್ಷ್ಮಿಯನ್ನು ಮನೆಯಿಂದ ಹೊರಗಡೆ ಕಳಿಸಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದಾಳೆ. ಇನ್ನು ಕೀರ್ತಿ ಪದೇ ಪದೇ ಆ ರೀತಿ ಅವಮಾನಕ್ಕೆ ಒಳಗಾದರೆ ನನಗೆ ಹೆಚ್ಚು ಲಾಭ ಎಂಬುದು ಕಾವೇರಿ ಲೆಕ್ಕಾಚಾರ.

ಅನುಮಾನ ಪಡೋದಿಲ್ಲ ಎಂದ ಲಡ್ಡು

ಗಂಡ ತನ್ನ ಬಗ್ಗೆ ಕಾಳಜಿ ವಹಿಸುತ್ತಿರುವುದು ಲಕ್ಷ್ಮಿಗಂತು ಎಲ್ಲಿಲ್ಲದ ಖುಷಿ ತಂದಿದೆ. ಇದಕ್ಕಾಗಿ ನಾನು ನಿಮ್ಮ ಬಗ್ಗೆ ತಪ್ಪು ತಿಳಿದುಕೊಂಡು ಬಿಟ್ಟಿದ್ದೆ. ಕೀರ್ತಿ ಹಾಗೂ ನಿಮ್ಮ ನಡುವೆ ಇರುವ ಸಂಬಂಧದ ಬಗ್ಗೆ ನನಗೆ ಗೊಂದಲವಿತ್ತು. ಇನ್ಮುಂದೆ ಆ ರೀತಿ ಆಗೋದಿಲ್ಲ ಯಾವುದೇ ಕಾರಣಕ್ಕೂ ನಾನು ನಿಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳಲ್ಲ ಎಂದು ಹೇಳಿದ್ದಾಳೆ. ಇನ್ನೂ ಅದರ ಬಗ್ಗೆ ಕೂಡ ಯೋಚನೆ ಮಾಡಬಾರದು ಎಂದು ಲಕ್ಷ್ಮಿ ಅಂದುಕೊಂಡಿದ್ದಾಳೆ. ಹೀಗೆ ಅಂದುಕೊಳ್ಳುತ್ತಾ ಇರುವಾಗಲೇ ಕೀರ್ತಿ ಮನೆಗೆ ಬಂದಿದ್ದಾಳೆ.

Lakshmi baramma serial Written Update on January 6th episode

ಲಕ್ಷ್ಮೀಯನ್ನು ಮನೆಯಿಂದ ಓಡಿಸಲು ಪ್ಲ್ಯಾನ್

ಈ ಕಡೆ ಕಾವೇರಿ, ಸುಪ್ರೀತಾ ಮೂಲಕವೇ ಲಕ್ಷ್ಮಿಯನ್ನು ಮನೆಯಿಂದ ಓಡಿಸುವ ಪ್ಲಾನ್ ಮಾಡುತ್ತಿರುವಂತೆ ಕಾಣುತ್ತಿದೆ. ಇದಕ್ಕಾಗಿ ತನ್ನ ಅಮ್ಮನ ಮೂಲಕ ಸುಪ್ರಿಯಾಗೆ ಬುದ್ಧಿ ಹೇಳಿಸಿದ್ದಾಳೆ. ನೀನು ಏನಾದರೂ ಕೀರ್ತಿ ಹಾಗೂ ವೈಷ್ಣವ್ ನಡುವಿನ ಸಂಬಂಧವನ್ನು ಲಕ್ಷ್ಮಿಗೆ ತಿಳಿಸಿದರೆ ಅವಳು ಈ ಮನೆಯಲ್ಲಿ ಒಂದು ಕ್ಷಣ ಕೂಡ ಇರೋದಿಲ್ಲ, ವೈಷ್ಣವನ್ನು ಬಿಟ್ಟು ದೂರ ಹೋಗುತ್ತಾಳೆ ಎಂದಿದ್ದಾಳೆ. ಸುಪ್ರಿಯಾ ಅಮ್ಮನ ಬಳಿ ಇದನ್ನೆಲ್ಲ ಹೇಳಿದ್ದು ಯಾರು ಕಾವೇರಿ ಅತ್ತಿಗೆನಾ? ಎಂದು ಕೇಳಿದ್ದಕ್ಕೆ ಹೌದು ಎಂದು ತಲೆ ಆಡಿಸಿದ್ದಾರೆ. ಈಗ ಸುಪ್ರೀತಾ ಬೇರೆಯದ್ದೇ ಪ್ಲ್ಯಾನ್ ಮಾಡಿತ್ತಿದ್ದಾಳೆ.

ಕೀರ್ತಿ-ವೈಷ್ಣವ್ ಫಾಲೋ ಮಾಡಿದ ಲಕ್ಷ್ಮೀ

ಸದ್ಯ ಕೀರ್ತಿ ಮನೆಗೆ ಬಂದವಳೇ ವೈಷ್ಣವ್ ಕೈ ಹಿಡಿದುಕೊಂಡು ಕಾರಿನಲ್ಲಿ ಕೂರಿಸಿಕೊಂಡು ತಾವು ಪ್ರತಿ ದಿನ ಬರುತ್ತಿದ್ದ ಜಾಗಕ್ಕೆ ಬಂದಿದ್ದಾಳೆ. ಈ ವೇಳೆ ನನ್ನ ಜಾಗವನ್ನು ನೀನು ಲಕ್ಷ್ಮಿಗೆ ಹೇಗೆ ಕೊಟ್ಟೆ ಎಂದಿದ್ದಾಳೆ. ಕೀರ್ತಿ ಹಾಗೂ ವೈಷ್ಣವ್ ಇಬ್ಬರನ್ನು ಕೂಡ ಲಕ್ಷ್ಮಿ ಫಾಲೋ ಮಾಡಿಕೊಂಡು ಬಂದಿದ್ದು ಇಬ್ಬರ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾಳೆ. ಕೀರ್ತಿ ಮಾತನಾಡುತ್ತಿರುವ ಪ್ರತಿ ಮಾತಿಗೂ ಕೂಡ ತನ್ನನ್ನ ಕಲ್ಪಿಸಿ ಕೊಂಡು ಲಕ್ಷ್ಮಿ ಬೇಸರಗೊಂಡಿದ್ದಾಳೆ. ನನ್ನ ಜಾಗ ಯಾವುದು ಕೀರ್ತಿ ಜಾಗದಲ್ಲಿ ನಾನಿದ್ದೀನಿ ಈ ಮಾತಿನ ಅರ್ಥವೇನು ಎಂಬುದು ಲಕ್ಷ್ಮಿಗೆ ಈಗ ಗೊಂದಲದ ಗೂಡಾಗಿದೆ. ಕೀರ್ತಿಯೇ ವೈಷ್ಣವ್ ಹಳೆಯ ಪ್ರೇಯಸಿ ಎಂಬುದು ಲಕ್ಷ್ಮಿಗೆ ಗೊತ್ತಾಗುವ ಕಾಲ ಹತ್ತಿರವಾಗಿದೆ.

More from Filmibeat

English summary
Lakshmi baramma serial serial today episode. Here is the details Lakshmi doubt come true now, Lakshmi following kirthi and vaishnav;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X