Lakshmi Baramma: ಕೀರ್ತಿಯ ಉರಿವ ಹೊಟ್ಟೆಗೆ ಬಿತ್ತು ತುಪ್ಪ.. ಬೇಳೆ ಬೇಯಿಸಿಕೊಳ್ತಾಳಾ ಸುಪ್ರೀತಾ?
ಕೀರ್ತಿಯ ಕಾಟಕ್ಕೆ ವೈಷ್ಣವ್ ಡೋಂಟ್ ಕೇರ್ ಎಂಬ ಮನಸ್ಥಿತಿಗೆ ಬಂದಾಗಿದೆ. ಹೀಗಾಗಿಯೇ ಮನೆಗೆ ಬಂದು ಅವತಾರಗಳನ್ನು ತಲೆಗೆ ಹಾಕಿಕೊಳ್ಳದೆ ಲಕ್ಷ್ಮೀಗೆ ಪ್ರಾಮುಖ್ಯತೆ ಕೊಡುತ್ತಿದ್ದಾನೆ. ಅ ಕಡೆ ಲಕ್ಷ್ಮೀಯ ದೊಡ್ಡಪ್ಪನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು, ಲಕ್ಷ್ಮೀ ಹೇಳಿರುವ ಸುಳ್ಳನ್ನು ನಿಭಾಯಿಸಬೇಕು.
ಈ ಕಡೆ ಸುಪ್ರೀತಾಗೆ ಹೇಗಾದರೂ ಮಾಡಿ ಅಡಗಿರುವ ಸತ್ಯವನ್ನು ತಿಳಿಯಲೇಬೇಕೆಂಬ ಹಠ. ಹೀಗಾಗಿಯೇ ಈಗ ಕೀರ್ತಿಗೆ ಉರಿಸುವುದಕ್ಕೆ ಹೊರಟಿದ್ದಾಳೆ. ಅದಕ್ಕೆ ವೈಷ್ಣವ್ ಮತ್ತು ಲಕ್ಷ್ಮೀಯನ್ನು ಇನ್ನಷ್ಟು ಹತ್ತಿರ ಮಾಡುವುದಕ್ಕೆ ಹೊರಟಿದ್ದಾಳೆ. ಈಗ ಕೀರ್ತಿ ಬೆಂಕಿಯಲ್ಲಿ ಬೆಂದು, ಸುಪ್ರೀತಾಳ ಸಹಾಯಕ್ಕೆ ಬರಬೇಕಿದೆ.

ಕೀರ್ತಿಗೆ ಕೋಪ ತರಿಸಿದ ಸುಪ್ರೀತಾ
ಕೀರ್ತಿ ಕಾರ್ಯಕ್ರಮಕ್ಕೆ ಹೋಗೋಣಾ ಬಾ ಅಂತ ಕರೆಯುತ್ತಿದ್ದಳು. ಆದರೆ, ಮನೆಯವರೆಲ್ಲ ಬೇಡ ಅಂದ್ರು. ಕಡೆಗೆ ಲಕ್ಷ್ಮೀ ಹೇಳಿದಂತೆ ಮೊದಲು ದೇವಸ್ಥಾನಕ್ಕೆ ಆಮೇಲೆ ಪ್ರೋಗ್ರಾಂ ಅಂತ ಹೇಳಿದ ಮೇಲೆ ವೈಷ್ಣವ್ ಓಕೆ ಮಾಡಿದ. ಬಳಿಕ ಕೀರ್ತಿ, ಲಕ್ಷ್ಮೀ, ವೈಷ್ಣವ್ ಜೊತೆಯಲ್ಲಿಯೇ ಹೋಗುವಂತೆ ಆಯ್ತು. ಇದು ಕೀರ್ತಿಗೆ ಮೊದಲೇ ಕೋಪ ತರಿಸಿತ್ತು. ವೈಷ್ಣವ್ ಬಂದ ಬಳಿಕ ಕಾರು ಹತ್ತೋದಕ್ಕೆ ಹೋದ್ಲು. ಆದರೆ, ಸುಪ್ರೀತಾ ಅಲ್ಲಿಯೂ ಮತ್ತಷ್ಟು ಕೋಪ ತರಿಸಿದ್ದಳು. ಏನು ಕೀರ್ತಿ ಅಷ್ಟು ಮ್ಯಾನರ್ಸ್ ಇಲ್ವಾ. ಹೆಂಡತಿ ಸೀಟಲ್ಲಿ ನೀನು ಕೂರೋದಾ..? ಬೆಸ್ಟ್ ಫ್ರೆಂಡ್ ಯಾವತ್ತಿದ್ರು ಹಿಂದೇನೆ ಕೂರಬೇಕು ಅಂದ್ಲು.
ಒಲ್ಲದ ಮನಸ್ಸಿನಲ್ಲಿಯೇ ಕಾರು ಹತ್ತಿದ ಕೀರ್ತಿ
ಸುಪ್ರೀತಾ ಈ ರೀತಿಯೆಲ್ಲಾ ಮಾತನಾಡುತ್ತಿದ್ದರೆ, ಆ ಕಡೆ ಕೀರ್ತಿಗೆ ಕೋಪ ನೆತ್ತಿಗೇರಿತ್ತು. ವೈಷ್ಣವ್ ಅತ್ತೆ ಮಾತಿಗೆ ಸಫೊರ್ಟ್ ಮಾಡಿದ. ಇದು ನನ್ನ ಹೆಂಡತಿಯ ಜಾಗ. ಅಲ್ಲಿ ಅವಳೇ ಕೂರಬೇಕು ಎಂದು ಹೇಳಿ ಇನ್ನಷ್ಟು ಬೇಸರ ಮಾಡಿದ. ಇನ್ನೊಂದು ಗಂಟೆ ಅಷ್ಟೆ ಅಲ್ವಾ. ಹೇಗಾದರೂ ಸಮಾಧಾನ ಮಾಡಿಕೊಳ್ಳಬೇಕು ಎಂದು ಹಿಂದೆ ಕೂರುವ ಮನಸ್ಸು ಮಾಡಿದಳು. ಆಗಲೂ ಸುಪ್ರೀತಾ ಟಾಂಗ್ ಕೊಟ್ಟಳು. ನಮ್ಮ ಹುಡುಗನ್ನು ಬೇಗ ಬಿಟ್ಟು ಕಳಿಸು ಮನೆಯಲ್ಲಿ ಸೆಲೆಬ್ರೇಷನ್ ಇದೆ ಅಂತ ಹೇಳಿದ್ದಳು.
ಬೆಂಕಿಯಂತಾದಳು ಕೀರ್ತಿ
ಮೊದಲೇ ಬೆಂಕಿಯಂತೆ ಬೇಯಿತ್ತಿದ್ದ ಕೀರ್ತಿಯ ಕಣ್ಣ ಮುಂದೆ ಒಂದೊಂದೆ ಬೆಂಕಿ ಹೊತ್ತುಕೊಳ್ಳುವ ಘಟನೆಗಳು ನಡೆಯುತ್ತಿದ್ದವು. ಅದರಲ್ಲಿ ಕಾರು ಹತ್ತಿದ ಕೂಡಲೇ, ವೈಷ್ಣವ್ ಕಾಳಜಿ ಮಾಡಿ ಲಕ್ಷ್ಮೀಗೆ ಸೀಟ್ ಬೆಲ್ಟ್ ಹಾಕಿದ್ದ. ಅಲ್ಲಿಂದ ದೇವಸ್ಥಾನಕ್ಕೆ ಹೋದಾಗ ವೈಷ್ಣವ್ ಸಮಾಧಾನ ಮಾಡುತ್ತಾನೆ ಎಂದು ಕೀರ್ತಿ ಬಯಸಿದ್ದಳು. ಆದರೆ, ದೇವಸ್ಥಾನಕ್ಕೆ ಬರಲ್ಲ ಅಂದ್ರು ಅವಳಿಗೆ ಏನು ಬೇಕೋ ಅದನ್ನೇ ಮಾಡಿಕೊಳ್ಳಲಿ ಬನ್ನಿ ಲಕ್ಷ್ಮೀ ಎಂದು ಮುಂದೆ ಹೋದ. ಕಾಯಿ ತೆಗೆದುಕೊಳ್ಳುವಾಗ ಲಕ್ಷ್ಮೀ ಕಾಲು ಜಾರಿ ಬಿದ್ದಳು. ವೈಷ್ಣವ್ ಕಾಪಾಡಿದ. ಇಬ್ಬರ ಕಣ್ಣು ಕಣ್ಣು ಸ್ವಲ್ಪ ಸಮಯ ಹಾಗೇ ಇರುವಂತೆ ಮಾಡಿತ್ತು. ಇದನ್ನು ನೋಡಿದ ಕೀರ್ತಿ ಇನ್ನಷ್ಟು ಹಿಂಸೆ ಮಾಡಿಕೊಂಡಳು.

ಕೀರ್ತಿ ವಿರುದ್ಧ ಕಾವೇರಿ ಪ್ಲ್ಯಾನ್
ಕಾವೇರಿಗೆ ದೊಡ್ಡ ಟೆನ್ಶನ್ ಅಂದ್ರೆ ಕೀರ್ತಿಯದ್ದೇ. ಆಡಿಯೋ ಇಟ್ಟುಕೊಂಡು ನನ್ನೇ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ. ಹೇಗಾದರೂ ಮಾಡಿ ಆ ಆಡಿಯೋ ನನ್ನ ಕೈಗೆ ಸಿಕ್ಕರೆ, ನನ್ನ ಪುಟ್ಟನನ್ನು ಅವಳೆದುರು ಹೇಗೆ ಕಟ್ಟುತ್ತೀನಿ ಅನ್ನೋದನ್ನ ನೋಡಲಿ ಅಂತ ಪ್ಲ್ಯಾನ್ ಮಾಡ್ತಾ ಇದ್ರೆ, ಸುಪ್ರೀತಾ ನಗು ನಗುತ್ತಲೇ ಕೀರ್ತಿಯನ್ನ ಎತ್ತಿಕಟ್ಟುತ್ತಿದ್ದಾಳೆ.


Click it and Unblock the Notifications











