Lakshmi Baramma: ಕಾವೇರಿಗೆ ನೆಮ್ಮದಿ ಅನ್ನೋದೆ ಇಲ್ಲ.. ಮನೆಯಲ್ಲಿಯೇ ಸುಪ್ರೀತಾ ಗೇಮ್ ಶುರು
ಮಗ ತನ್ನಿಂದ ದೂರ ಆಗಬಾರದು ಎಂಬ ಕಾರಣಲ್ಕೆ ಹರಸಾಹಸ ಮಾಡಿ, ಲಕ್ಷ್ಮೀಯನ್ನು ಮದುವೆ ಮಾಡಿಕೊಂಡಳು. ಬಿಟ್ಟಿರಲಾರದಷ್ಟು ವೈಷ್ಣವ್ -ಕೀರ್ತಿ ಪ್ರೀತಿಸ್ತಾ ಇದ್ರು. ಆದರೆ, ಬಿಡಿ ಅಂದ್ರೆ ಸುಲಭವಾಗಿ ಬಿಡುವವರಲ್ಲ. ಅದಕ್ಕೆಂದೇ ಕಾವೇರಿ ದೊಡ್ಡ ನಾಟಕ ಆಡಿದ್ಲು. ಆ ನಾಟಕದಲ್ಲಿ ತಾನು ಲಾಕ್ ಆಗ್ತೀನಿ ಅಂತ ಕೂಡ ಯೋಚನೆ ಮಾಡಿರಲಿಲ್ಲ. ಕಡೆಗೂ ಲಾಕ್ ಆದಳು.
ದಿನ ಬೆಳಗ್ಗೆ ಆದ್ರೆ ಕೀರ್ತಿಯಿಂದ ದೊಡ್ಡ ತಲೆ ನೋವು ಎದುರಾಗುತ್ತೆ. ಆದರೂ ಕಾವೇರಿ ಹೇಗೋ ಅವಳನ್ನ ಸಂಭಾಳಿಸಿಕೊಂಡು ಬರುತ್ತಿದ್ದಾಳೆ. ಹೊರಗಡೆಯ ಟೆನ್ಶನ್ ತಡೆದುಕೊಂಡ ಕಾವೇರಿಗೆ ಈಗ ಮನೆಯೊಳಗೂ ಟೆನ್ಶನ್ ಶುರುವಾಗಿದೆ. ಸುಪ್ರೀತಾಳ ಕಾಟ ಹೆಚ್ಚಾಗಿದೆ.

ಕಾವೇರಿಗೂ ಉತ್ತರ ಕೊಟ್ಟ ಸುಪ್ರೀತಾ
ಸುಪ್ರೀತಾಳ ಕೊಂಕು ಮಾತಿನಿಂದ ಇಷ್ಟು ದಿನ ಮನೆಯವರೇ ನೊಂದು ಹೋಗಿದ್ದರು. ಇವಳ ಮಾತು ಅದ್ಯಾವಾಗ ನಿಲ್ಲುತ್ತೋ ಎಂದು ಕಾಯುತ್ತಿದ್ದರು. ಆದರೆ, ಲಕ್ಷ್ಮೀ ಮತ್ತು ವೈಷ್ಣವ್ ವಿಚಾರವಾಗಿ ಈಗ ಬೆಂಬಲಕ್ಕೆ ನಿಂತಿದ್ದಾಳೆ. ಅವರಿಬ್ಬರನ್ನು ಜೊತೆಯಾಗಿ ದೇವಸ್ಥಾನಕ್ಕೆ ಬೇರೆ ಕಳುಹಿಸಿದ್ದಾಳೆ. ಇದೆಲ್ಲವನ್ನು ನೋಡಿದ ಕೃಷ್ಣ ತಂಗಿಯನ್ನು ಹಾಡಿ ಹೊಗಳುತ್ತಿದ್ದ. ಇದನ್ನು ಕೇಳಿದ ಸುಪ್ರೀತಾಗೆ ತನ್ನ ದಾರಿ ಇನ್ನು ಸುಲಭವಾಗಿತ್ತು. ಇನ್ನು ಮುಂದೆ ಜಗಳ ಮಾಡಲ್ಲ, ಇಷ್ಟೇ ನೈಸ್ ಆಗಿದ್ದು, ಕೆಲಸ ಮುಗಿಸಿಕೊಳ್ಳುತ್ತೇನೆ ಎಂದು ಶಪಥ ಮಾಡಿದ್ದಾಳೆ.
ಸತ್ಯ ಹೊರಗೆ ಹಾಕಿಸಲು ಪ್ಲ್ಯಾನ್
ಇತ್ತ ಮೂರು ತಿಂಗಳ ಮದುವೆ ಸಂಭ್ರಮವನ್ನೂ ಆಚರಿಸುವುದಕ್ಕೆ ವೈಷ್ಣವ್ ಮತ್ತು ಲಕ್ಷ್ಮೀ ದೇವಸ್ಥಾನಕ್ಕೆ ಬಂದಿದ್ದರು. ಗಂಡ ಹೆಂಡತಿ ನಡುವೆ ಕೀರ್ತಿ ಕೂಡ ಬಂದಿದ್ದಳು. ಲಕ್ಷ್ಮೀ ಜೊತೆ ವೈಷ್ಣವ್ ಕ್ಲೋಸ್ ಆಗ್ತಾ ಇದ್ರೆ ಕೀರ್ತಿ ಅಸೂಯೆ ಪಡುತ್ತಿದ್ದಳು. ಇದನ್ನು ಕಂಡ ವೈಷ್ಣವ್‌ಗೆ ಅನುಮಾನ ಬಂತು. ಹೀಗೆ ಅಸೂಯೆ ಪಟ್ಟು ಸತ್ಯ ಬಾಯಿ ಬಿಡಲಿ ಎಂದು ಇನ್ನಷ್ಟು ಉರಿಸುವುದಕ್ಕೆ ಸಿದ್ದವಾದ. ಕೈಹಿಡಿದು ನಡೆದ, ಪೂಜೆ ಮಾಡಿದ. ಕೀರ್ತಿ ಅಂತೂ ಎಲ್ಲವನ್ನು ನೋಡಿ ದೇವರ ಬಳಿ ಬೇಗ ಈ ಸಂಬಂಧ ಕಿತ್ತು ಹೋಗಲಿ ಎಂದೇ ಬೇಡಿಕೊಂಡಳು.

ಲಕ್ಷ್ಮೀ-ವೈಷ್ಣವ್ ಬಗ್ಗೆ ಒಳ್ಳೆ ಮಾತಾಡಿದ ಸುಪ್ರೀತಾ
ಇತ್ತ ಮನೆಯಲ್ಲಿ ಮತ್ತೆ ಸುಪ್ರೀತಾಳಿಂದ ಮಾತು ಮುಂದುವರೆದಿತ್ತು. ಲಕ್ಷ್ಮೀ ಮತ್ತು ವೈಷ್ಣವ್ ಸಂಬಂಧವನ್ನು ಸರಿ ಮಾಡಬೇಕು. ಯಾಕಂದ್ರೆ ಇಬ್ಬರು ಇನ್ನೂ ಫ್ರೆಂಡ್ಸ್ ಅಂತಾನೇ ಇದ್ದಾರೆ. ಆದರೆ ಅವರಿಬ್ಬರಲ್ಲಿ ಗಂಡ ಹೆಂಡತಿ ಸಂಬಂಧ ಮೂಡುವಂತೆ ಮಾಡಬೇಕು. ಕೀರ್ತಿಯನ್ನು ಮೊದಲು ದೂರ ಇಡಬೇಕು ಎಂದಿದ್ದಾಳೆ. ಸುಪ್ರೀತಾಳ ಈ ಮಾತು ಕೇಳಿ ಅಜ್ಜಿ ಫುಲ್ ಖುಷಿಯಾಗಿದ್ದಾರೆ. ಕೃಷ್ಣ ಕೂಡ ತಂಗಿಯ ಬದಲಾವಣೆಗೆ ಮೆಚ್ಚುಗೆ ಪಡೆದಿದ್ದಾರೆ.
ಕಾವೇರಿಗೆ ಕಂಟಕ ತರುತ್ತಾಳಾ ಸುಪ್ರೀತಾ..?
ಸುಪ್ರೀತಾ ಬೇಕು ಅಂತಾನೇ ಇಷ್ಟೆಲ್ಲಾ ಮಾತಾಡುತ್ತಿದ್ದಾಳೆ. ಕಾವೇರಿಯನ್ನು ನೋಡಿಯೇ ಇನ್ನಷ್ಟು ಉರಿಸುವ ಮಾತನಾಡುತ್ತಿದ್ದಾಳೆ. ಕೀರ್ತಿಯನ್ನು ದೂರ ಇಡುವಂತೆ ನಿನ್ನ ಹೆಂಡತಿಗೆ ಹೇಳು ಅಂತ ಅಣ್ಣ ಅತ್ತಿಗೆಗೇನೆ ತಂದಿಡುವ ಕೆಲಸ ಮಾಡುತ್ತಿದ್ದಾಳೆ. ಆ ಕಡೆ ಕೀರ್ತಿ ನೋಡಿದ್ರೆ ಇಬ್ಬರ ನಡುವೆ ಯಾವಾಗಲೂ ಗ್ಯಾಪ್ ಇರುವಂತೆ ನೀವೆ ನೋಡಿಕೊಳ್ಳಬೇಕು ಎಂಬ ಆರ್ಡರ್ ಕೂಡ ಮಾಡಿದ್ದಾಳೆ. ಹೀಗಾಗಿ ಸುಪ್ರೀತಾಳಿಂದ ತಲೆ ನೋವು ಜಾಸ್ತಿಯಾಗುವ ಸಾಧ್ಯತೆ ಇದೆ. ಸುಪ್ರೀತಾ ಸತ್ಯ ತಿಳಿದುಕೊಳ್ಳುವುದಕ್ಕಾಗಿ ಈ ರೀತಿಯ ನಾಟಕಗಳನ್ನು ಶುರು ಮಾಡಿಕೊಂಡಿದ್ದಾಳೆ.


Click it and Unblock the Notifications











