Lakshmi Baramma: ಗಂಡನ ವಿಚಾರಕ್ಕೆ ಬಂದ ಕೀರ್ತಿಗೆ ಕ್ಲಾಸ್.. ಲಕ್ಷ್ಮೀ ಮಾತಿಗೆ ಸೈಲೆಂಟ್!

By ಎಸ್ ಸುಮಂತ್

ಲಕ್ಷ್ಮೀ ಎಷ್ಟು ದೊಡ್ಡಮಟ್ಟಕ್ಕಾದರೂ ನಂಬಿಕೆ ಇಡುತ್ತಾಳೆ. ಎಷ್ಟು ಫ್ರೀಯಾಗಿ ಬೇಕಾದರೂ ಬಿಡುತ್ತಾಳೆ. ಆದರೆ, ಅದು ಫ್ರೆಂಡ್‌ಶಿಪ್ ಆಗಿದ್ದರೆ ಮಾತ್ರ. ಅದನ್ನು ಮೀರಿದ ನಡತೆ ತನ್ನ ಗಂಡನ ಕಡೆಗೆ ವಾಲಿದರೆ, ಸಹಿಸುವುದಿರಲಿ ಸುಮ್ಮನೆ ಅಂತು ಬಿಡುವುದಿಲ್ಲ. ಸ್ವಾಭಿಮಾನಿಯಾದ ಲಕ್ಷ್ಮೀ ಗಂಡನ ವಿಚಾರದಲ್ಲಿ ಸ್ವಾರ್ಥಿಯೂ ಹೌದು. ಅದು ಈಗ ಕೀರ್ತಿಯ ಅನುಭವಕ್ಜೆ ಬಂದಿದೆ.

ಊರೆಲ್ಲಾ ಗುಲ್ಲೆದ್ದಿದ್ದ ಕೀರ್ತಿ ಅಂಡ್ ವೈಷ್ಣವ್ ಸುದ್ದಿ ಲಕ್ಷ್ಮೀ ಕಿವಿಗೂ ಬಿದ್ದಿದೆ. ಊರವರು ಹೇಳುವ ಸುದ್ದಿಗೆ ಲಕ್ಷ್ಮೀ ಅಷ್ಟಾಗಿ ತಲೆ ಕೆಡಿಸಿಕೊಳ್ಳಲ್ಲ. ಆದರೆ, ಗಂಡ ಹೇಳುವ ಮಾತನ್ನು ಚೆನ್ನಾಗಿಯೇ ನಂಬುತ್ತಾಳೆ. ಹೀಗಾಗಿ ಕೀರ್ತಿಯ ಮೇಲೆ ಲಕ್ಷ್ಮೀಗೆ ಯಾವುದೇ ತರದ ಅನುಮಾನವಿಲ್ಲ. ಕೀರ್ತಿ ಅತಿಯಾಗಿ ಆಡಿದರೆ ಬಿಡುವ ಮಗಳೇ ಅಲ್ಲ ನಮ್ಮ ಲಕ್ಷ್ಮೀ.

Lakshmi Baramma-Colors Kannada

ಲಕ್ಷ್ಮೀ ಕೈಹಿಡಿದು ಪ್ರದಕ್ಷಿಣೆ ಹಾಕಿದ ವೈಷ್ಣವ್

ವೈಷ್ಣವ್‌ಗೂ ಲಕ್ಷ್ಮೀ ಮೇಲೆ ಕಾಳಜಿ ಜಾಸ್ತಿಯಿದೆ. ಪ್ರೀತಿ ಹುಟ್ಟದೆ ಇದ್ದರೂ ತನ್ನ ಹೆಂಡತಿ ಎಂಬ ಕಾಳಜಿ ಇದೆ. ತನ್ನ ಮೇಲೆ ನಂಬಿಕೆ ಇಟ್ಟು ಬಂದಿದ್ದಾಳೆ. ಅವಳು ನನ್ನ ಜವಾಬ್ದಾರಿ, ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದು ವೈಷ್ಣವ್ ಭಾವನೆ. ಅದಕ್ಕಾಗಿಯೇ ಮನೆಯಲ್ಲಿಯೂ ಯಾರೇ ಲಕ್ಷ್ಮೀಯ ವಿರುದ್ಧವಾಗಿ ಮಾತ‌ನಾಡಿದರು, ಅಲ್ಲಿ ಲಕ್ಷ್ಮೀ ಪರವಾಗಿಯೇ ನಿಲ್ಲುತ್ತಾನೆ. ಈಗ ಮದುವೆಯಾಗಿ ಮೂರು ತಿಂಗಳ ಸಂಭ್ರಮ. ಈ ಖುಷಿಗೆ ದೇವಸ್ಥಾನಕ್ಕೆ ಬಂದಿದ್ದಾರೆ. ಹೆಂಡತಿಯ ಕೈ ಹಿಡಿದು ಪ್ರದಕ್ಷಿಣೆ ಹಾಕಿದ್ದಾನೆ ವೈಷ್ಣವ್.

ಲಕ್ಷ್ಮೀ ಮೇಲೆ ಕೀರ್ತಿಗೆ ಕೋಪ

ಕೀರ್ತಿಗೆ ಮೊದಲೇ ಕೋಪ ಜಾಸ್ತಿಯಾಗಿದೆ. ಲಕ್ಷ್ಮೀಯನ್ನು ವೈಷ್ಣವ್ ಕಾಳಜಿ ಮಾಡುತ್ತಿದ್ದರೆ ಅದನ್ನು ಸಹಿಸುವುದಕ್ಕೆ ಆಗುತ್ತಿಲ್ಲ. ಇಬ್ಬರು ಕ್ಲೋಸ್ ಆಗದಂತೆ ನೋಡಿಕೊಳ್ಳಿ ಅಂತ ಕಾವೇರಿಗೆ ಎಚ್ಚರಿಕೆ ನೀಡಿದ್ದಾಳೆ. ಆದರೆ, ಇಲ್ಲಿ ಕೀರ್ತಿಗೆ ಅದನ್ನು ನೋಡುವ ಭಾಗ್ಯ ಸಿಕ್ಕಿದೆ. ಎಷ್ಟು ಬೇಗ ಇಲ್ಲಿಂದ ಹೋಗುವುದಕ್ಕೆ ಆಗುತ್ತೋ, ಅಷ್ಟು ಬೇಗ ಹೋಗಬೇಕು ಅನ್ನೋದು ಕೀರ್ತಿಯ ಆಸೆ. ಹೀಗಾಗಿ ದೇವಸ್ಥಾನದಲ್ಲಿ ಎಲ್ಲದಕ್ಕೂ ಅವಸರ ಮಾಡುತ್ತಿದ್ದಾಳೆ.

Lakshmi Baramma-Colors Kannada

ವೈಷ್ಣವ್-ಕೀರ್ತಿ ಹೆಸರಲ್ಲಿ ಪೂಜೆ

ಲಕ್ಷ್ಮೀ ಮತ್ತು ವೈಷ್ಣವ್ ಪೂಜೆ ಮಾಡಿ, ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿಕೊಂಡು ಬರುವುದಕ್ಕೆ ಹೋಗಿದ್ದರು. ಇಬ್ಬರ ಜೊತೆ ಕೀರ್ತಿ ಹೋಗದೆ ದೇವಸ್ಥಾನದ ಒಳಗಡೆಯೇ ಉಳಿದಿದ್ದಳು. ಅದೇ ಸಮಯದಲ್ಲಿ ವೈಷ್ಣವ್ ಹಾಗೂ ಕೀರ್ತಿ ಗಂಡ ಹೆಂಡತಿ, ಆ ಹೆಸರಲ್ಲಿ ಅರ್ಚನೆ ಮಾಡಿ ಎಂದು ಅರ್ಚಕರಿಗೆ ಹೇಳಿದ್ದಾಳೆ. ಇನ್ನೇನು ಅರ್ಚಕರು ಪೂಜೆ ಮಾಡಬೇಕು ಎನ್ನುವಷ್ಟರಲ್ಲಿ ಲಕ್ಷ್ಮೀ ಅಲ್ಲಿಗೆ ಎಂಟ್ರಿಯಾಗಿದ್ದಾಳೆ.

ಲಕ್ಷ್ಮೀಗೆ ಬೆಂಬಲವಾಗಿ ನಿಂತ ವೈಷ್ಣವ್

ಊರವರೆಲ್ಲಾ ಇವರು ಪ್ರೇಮಿಗಳು ಅಂತ ಹೇಳಿದ್ದರು ಲಕ್ಷ್ಮೀ ನಂಬಿಲ್ಲ. ಈಗ ಗಂಡ -ಹೆಂಡತಿ ಅಂತ ಹೇಳಿ ಪೂಜೆ ಮಾಡಿಸುತ್ತಿದ್ದ ಕೀರ್ತಿ ಕಂಡು ಶಾಕ್ ಆಗಿದ್ದಾಳೆ. ಹಾಗೇ ನೇರವಾಗಿಯೇ ವಿರೋಧಿಸಿದ್ದಾಳೆ. ಈ ರೀತಿಯೆಲ್ಲಾ ಅದೇಗೆ ಪೂಜೆ ಮಾಡಿಸ್ತೀರಾ ಕೀರ್ತಿ. ಗಂಡ ಹೆಂಡತಿ ರೀತಿ ಎಂದರೆ ಏನು ಅರ್ಥ. ನೀವಿಬ್ಬರು ಆಲ್ಬಂ ಸಾಂಗ್‌ನಲ್ಲಿ ಮಾತ್ರ ಗಂಡ ಹೆಂಡತಿ ಎಂದಿದ್ದಾಳೆ. ಆಗ ಕೀರ್ತಿ ಕೂಡ ಏನೋ ಒಂದು ನೆಪ ಹೇಳಿದ್ದಾಳೆ‌. ಲಕ್ಷ್ಮೀಯ ಮಾತಿಗೆ ಉತ್ತರ ಕೊಡಲಾಗದೆ ಸುಮ್ಮನೆ ಆಗಿದ್ದಾಳೆ. ವೈಷ್ಣವ್‌ಗೆ ಮಾವನ ಮಾತು ನೆನಪಾಗಿದೆ. ಯಾವುದೇ ಕಾರಣಕ್ಕೂ ಕೀರ್ತಿಯ ವಿಚಾರ ಲಕ್ಷ್ಮೀಗೆ ತಿಳಿಯಬಾರದು ಎಂದು ಸೂಚನೆ ನೀಡಿದ್ದಾರೆ. ಅದಕ್ಕೆ ವೈಷ್ಣವ್ ಆ ಸತ್ಯ ಮುಚ್ಚಿಡುವುದಕ್ಕೆ ಲಕ್ಷ್ಮೀಗೆ ಸಪೋರ್ಟ್ ಮಾಡಿದ್ದಾನೆ, ಕೀರ್ತಿಗೆ ಸುಮ್ಮನೆ ಇರುವಂತೆ ಹೇಳಿದ್ದಾನೆ.

More from Filmibeat

English summary
Colors kannada Lakshmi Baramma serial Written Update on July 12th episode. Here is the details Keerthi Lock
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X