Lakshmi Baramma: ಕೀರ್ತಿಯ ಕಾಟಕ್ಕೆ ಕಾವೇರಿಗೆ ಕೋಪ.. ವೈಷ್ಣವ್ ಬೈಗುಳಕ್ಕೆ ಶಾಕ್
ಕಶ್ಯಪ್ ಫ್ಯಾಮಿಲಿಯಲ್ಲಿ ಗಟ್ಟಿಗಿತ್ತಿ ಅಂದ್ರೆ ಕಾವೇರಿ. ಇಡೀ ಮನೆಯಲ್ಲಿ ಕಾವೇರಿ ಹೇಳಿದ ಮಾತು ನಡೆಯುತ್ತೆ. ಕಾವೇರಿಯೇ ಯಜಮಾನಿ. ಕೃಷ್ಣ ಮತ್ತು ಕಾವೇರಿಯದ್ದು ಲವ್ ಮ್ಯಾರೇಜ್. ಮೊದಲಿನಿಂದಾನೂ ಕಾವೇರಿಯೇ ಮನೆಯನ್ನು ನಿಭಾಯಿಸುತ್ತಾಳೆ. ಹೀಗಾಗಿ ಎಲ್ಲರೂ ಕಾವೇರಿಗೆ ಗೌರವ ಕೊಡುತ್ತಾರೆ.
ಅದರಲ್ಲೂ ಕೃಷ್ಣ ಯಾವಾಗಲೂ ಕಾವೇರಿಯ ಜೊತೆಗೆ ನಿಂತಿದ್ದಾನೆ. ತಂಗಿ ಏನಾದರೂ ಎದುರು ವಾದಿಸಿದರೂ ಕೃಷ್ಣ ತಂಗಿಯ ವಿರುದ್ಧವಾಗಿ ನಿಲ್ಲುತ್ತಾನೆ ವಿನಃ ಹೆಂಡತಿಯ ವಿರುದ್ಧವಾಗಿ ಅಲ್ಲ. ಆದ್ರೆ ಕಾವೇರಿ ಇದ್ದಕ್ಕಿದ್ದ ಹಾಗೇ ಕೃಷ್ಣನ ಹಳೆಯ ದಿನಗಳನ್ನು ಹೇಳಿ ನೋವು ನೀಡಿದ್ದಾಳೆ.

ಕಾವೇರಿಗೆ ಟಾರ್ಚರ್ ಕೊಟ್ಟ ಕೀರ್ತಿ
ಕೀರ್ತಿಗೆ ಯಾವಾಗಲೂ ವೈಷ್ಣವ್ ತನ್ನ ಜೊತೆಗೆ ಇರಬೇಕು ಎಂಬ ಆಸೆ. ಹೀಗಾಗಿ ಅವನ ಹಿಂದೆ ಮುಂದೆ ತಿರುಗುತ್ತಿದ್ದಾಳೆ. ಈಗ ಲಕ್ಷ್ಮೀ ಹಾಗೂ ವೈಷ್ಣವ್ ದೇವಸ್ಥಾನಕ್ಕೆ ಹೋದಾಗಲೂ ಕೀರ್ತಿ ಜೊತೆಗೆ ಹೋಗಿದ್ದಾಳೆ. ಗಂಡ ಹೆಂಡತಿ ಆತ್ಮೀಯವಾಗಿ ಇರುವುದನ್ನು ನೋಡಿ ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಮನೆಯಲ್ಲಿರುವ ಕಾವೇರಿಗೆ ಮಾತಿಗೆ ಮುಂಚೆ ತಲೆ ತಿನ್ನುತ್ತಿದ್ದಾಳೆ. ಆದಷ್ಟು ಬೇಗ ಲಕ್ಷ್ಮೀಯನ್ನು ಮನೆಗೆ ಕರೆಸಿಕೊಳ್ಳಿ, ಇವರಿಬ್ಬರ ಆಟ ನೋಡುವುದಕ್ಕೆ ಆಗುತ್ತಿಲ್ಲ. ನಾನು ಇಲ್ಲಿ ಲೆಕ್ಕಕ್ಕೆ ಇಲ್ಲ ಎಂದು ಕೋಪದಲ್ಲಿ ಹೇಳಿದ್ದಾಳೆ. ಹೇಗಾದರೂ ಮಾಡಿ ಲಕ್ಷ್ಮೀಯನ್ನು ದೂರ ಮಾಡಬೇಕು ಎಂದೇ ಕಾಯುತ್ತಿದ್ದಾಳೆ.
ವೈಷ್ಣವ್ ನಡವಳಿಕೆ ಕಂಡು ಕೀರ್ತಿ ಶಾಕ್
ದೇವಸ್ಥಾನಕ್ಕೆ ಬಂದಾಗಿನಿಂದ ಕೀರ್ತಿಯ ನಡವಳಿಕೆಗೆ ಅದಾಗಲೇ ವೈಷ್ಣವ್‌ಗೆ ಕೋಪ ಬಂದಿತ್ತು. ಯಾಕಂದ್ರೆ, ವೈಷ್ಣವ್ ಸಿಕ್ಕಿಬೀಳುವಂತ ಪರಿಸ್ಥಿಯನ್ನೇ ನಿರ್ಮಾಣ ಮಾಡಿದ್ದಳು. ಹೀಗಾಗಿ ವೈಷ್ಣವ್ ಅವಳನ್ನು ಕಂಟ್ರೋಲ್ ಮಾಡುವುದಕ್ಕೆ ನೋಡಿದ್ದ. ಈಗ ಕೀರ್ತಿಯ ನಡವಳಿಕೆ ಮಿತಿ ಮೀರಿದೆ. ಲಕ್ಷ್ಮೀಯ ಕಣ್ಣಲ್ಲಿ ನೀರು ಹಾಕಿಸುವ ಲೆವೆಲ್‌ಗೆ ರೂಡ್ ಆಗಿ ನಡೆದುಕೊಂಡಿದ್ದಾಳೆ. ನಾವೂ ಹೋಗೋಣಾ ಬಾ ಅಂತ ಕೈಹಿಡಿದು ಎಳೆದುಕೊಂಡು ಹೊರಟಿದ್ದಾಳೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ವೈಷ್ಣವ್, ನೀನ್ಯಾರು ನಂಗೆ ಆರ್ಡರ್ ಮಾಡುವುದಕ್ಕೆ ಎಂದೇ ಪ್ರಶ್ನೆ ಹಾಕಿದ್ದಾನೆ.

ಕಶ್ಯಪ್ ಮನೆಯಲ್ಲಿ ರಾದ್ಧಾಂತ
ಸುಪ್ರೀತಾಗೆ ಸತ್ಯ ತಿಳಿದುಕೊಳ್ಳಲೇಬೇಕು ಎಂಬ ಹಠ ಬಂದಿದೆ. ಹೀಗಾಗಿ ಲಕ್ಷ್ಮೀ ಮತ್ತು ವೈಷ್ಣವ್‌ನ ಹೆಚ್ಚು ಸಮಯ ಜೊತೆಗೆ ಇರುವಂತೆ ಮಾಡಿದ್ದಾಳೆ. ಕೀರ್ತಿಗೆ ಸಮಯ ಸಿಗದಂತೆ ಮಾಡಿದ್ದಕ್ಕೆ ಮನೆಗೆ ದೂರು ಬಂದಿದೆ. ಕಾವೇರಿ ಹಿಗ್ಗಾ ಮುಗ್ಗಾ ಜಾಡಿಸಿದ್ದಾಳೆ. ಸುಪ್ರೀತಾಗೆ ಅಧಿಕ ಪ್ರಸಂಗ ಮಾಡ್ತಾ ಇದ್ದೀಯ ಅಂತ ಜೋರು ಮಾಡಿದ್ದಾಳೆ. ಕೀರ್ತಿ ಇನ್ನೆಲ್ಲಿ ಸತ್ಯ ಹೇಳಿ ಬಿಡುತ್ತಾಳೋ ಎಂಬ ಭಯಕ್ಕೆ ಸುಪ್ರೀತಾಳನ್ನು ಕಂಟ್ರೋಲ್ ಮಾಡುವುದಕ್ಕೆ ಹೊರಟಿದ್ದಾಳೆ.
ಕೃಷ್ಣನಿಗೆ ನೋವು ಕೊಟ್ಟ ಕಾವೇರಿ
ಎಲ್ಲವನ್ನು ನೋಡುತ್ತಿದ್ದ ಕೃಷ್ಣ, ಕಾವೇರಿಗೆ ಬುದ್ದಿ ಹೇಳಲು ಹೊರಟಿದ್ದಾನೆ. ಅರ್ಧ ಗಂಟೆ ಆಗಿಬಿಟ್ಟರೆ ಯಾವ ಸಮಸ್ಯೆಯೂ ಆಗಲ್ಲ ಎಂದೇ ವಾದ ಮಾಡಿದ್ದಾನೆ. ಆಗ ಜೋರಾದ ಕಾವೇರಿ, ಮಗನ ಬಗ್ಗೆ, ಅಷ್ಟು ಹೆಸರು ಮಾಡೋದಕ್ಕೆ ನಾನು ಸವೆಸಿದ ಚಪ್ಪಲಿ ಬಗ್ಗೆ ನಿಂಗೆ ಏನು ಗೊತ್ತು. ಸೀರೆ ಮಾರಿಕೊಂಡು ಮನೆಯನ್ನ ಕಾವೇರಿ ನಡೆಸುತ್ತಾಳೆ ಅಂತ ಕೂತ್ಕೊಳ್ತಿದ್ದಿಯಲ್ಲ. ನಿಂಗೆ ಅದೆಲ್ಲ ಹೇಗೆ ಗೊತ್ತಾಗಬೇಕು ಅಂತ ತನ್ನ ಹಳೆಯ ದಿನಗಳ ಬಗ್ಗೆ ನೆನಪಿಸಿದ್ದಾಳೆ. ಇದು ಕೃಷ್ಣನಿಗೆ ಸಾಕಷ್ಟು ನೋವು ಕೊಟ್ಟಿದೆ. ಅಷ್ಟೇ ಅಲ್ಲ ಕೃಷ್ಣನ ಬಗ್ಗೆ ಕಾವೇರಿ ಹೇಳಿದ ಮಾತು ಆಶ್ಚರ್ಯ ಆಗಿದೆ.


Click it and Unblock the Notifications











