Lakshmi Baramma: ನೀರಿಗೆ ಇಳಿದು ಅವಾಂತರ ಸೃಷ್ಟಿಸಿದ ಕೀರ್ತಿ.. ಮುಂದೇನಾಯ್ತು?
ಕೀರ್ತಿಗೆ ಈಗ ಬೆಂಬಿಡದೆ ಕಾಡುತ್ತಿರುವುದು ಲಕ್ಷ್ಮೀ. ಜಾತಕ ಅದು ಇದು ಅಂತ ಕಾವೇರಿಯ ಮಾತನ್ನು ನಂಬಿರುವ ಕೀರ್ತಿ, ಈಗ ವೈಷ್ಣವ್‌ಗೆ ಆದಷ್ಟು ಹತ್ತಿರವಾಗಲೂ ನೋಡುತ್ತಿದ್ದಾಳೆ. ಆದರೆ, ವೈಷ್ಣವ್ ಎಲ್ಲವೂ ಮುಗಿದು ಹೋದ ಅಧ್ಯಾಯ ಎಂದೇ ಭಾವಿಸಿದ್ದಾನೆ. ಹೀಗಾಗಿ ಕೀರ್ತಿ ಆಡುವ ಕುಚೇಷ್ಠೆಗಳಿಗೆ ಬ್ರೇಕ್ ಹಾಕುವುದಕ್ಕೆ ವೈಷ್ಣವ್ ನೋಡುತ್ತಿದ್ದಾನೆ.
ವೈಷ್ಣವ್ ಜೊತೆಗೆ ಜ್ಯುವೆಲ್ಲರಿ ಉದ್ಘಾಟನೆಗೆ ಒಬ್ಬಳೇ ಹೋಗಬೇಕು ಎಂಬುದು ಕೀರ್ತಿ ಆಸೆ. ಅದಕ್ಕಾಗಿಯೇ ಕಾವೇರಿಯ ತಲೆ ತಿಂದಿದ್ದಳು. ಮನೆಯವರ ಕಣ್ಣೆದುರು ಕಾವೇರಿ ಕೆಟ್ಟವಳಾಗುವಂತೆ ಮಾಡಿದ್ದಳು. ದೇವಸ್ಥಾನದಲ್ಲೂ ರಾದ್ಧಾಂತ ಸೃಷ್ಟಿ ಮಾಡಿದ್ದಳು. ಇದೀಗ ಕೀರ್ತಿಗೆ ಶಾಕ್ ಎನಿಸುವಂತಹ ಹೊಸ ಗೆಸ್ಟ್ ಅನ್ನು ಜ್ಯುವೆಲ್ಲರಿ ಶಾಪ್‌ನವರೇ ಕರೆಸಿದ್ದಾರೆ. ಇದು ವೈಷ್ಣವ್‌ಗೆ ಖುಷಿ ಕೊಡೊ ವಿಚಾರ ಆದ್ರೆ, ಕೀರ್ತಿಗೆ ಉರಿಯೋ ವಿಚಾರ.

ಕೀರ್ತಿಯ ಆಟಕ್ಕೆ ಲಕ್ಷ್ಮೀ ಶಾಕ್
ಕೀರ್ತಿ ದೇವಸ್ಥಾನದಲ್ಲಿ ಸಿಕ್ಕಾಪಟ್ಟೆ ಡಿಸ್ಟರ್ಬ್ ಆಗಿದ್ದಾಳೆ. ವೈಷ್ಣವ್, ಲಕ್ಷ್ಮೀಗೆ ಪ್ರಾಶಸ್ತ್ಯ ಕೊಡುತ್ತಿದ್ದನ್ನು ಕಂಡು ಕೀರ್ತಿಗೆ ತಡೆದುಕೊಳ್ಳುವುದಕ್ಕೆ ಆಗಿಲ್ಲ. ಅದೇ ಯೋಚನೆಯಲ್ಲಿ ಕಲ್ಯಾಣಿಯಲ್ಲಿ ಇಳಿದು ಬಿಟ್ಟಿದ್ದಾಳೆ. ಅದನ್ನು ಕಂಡು ಲಕ್ಷ್ಮೀ ಗಾಬರಿಯಿಂದ ಕಿರುಚಿದ್ದಾಳೆ. ತಕ್ಷಣ ಎಚ್ಚೆತ್ತ ಕೀರ್ತಿ, ಗಾಬರಿಯಾಗಿದ್ದಾಳೆ. ಮೇಲೆ ಬಂದಾಗ ಓಡಿ ಬಂದು ವೈಷ್ಣವ್‌ನನ್ನು ತಬ್ಬಿಕೊಂಡಿದ್ದಾಳೆ.
ಲಕ್ಷ್ಮೀಯಿಂದ ಸಮಾಧಾನಗೊಂಡ ವೈಷ್ಣವ್
ಕೀರ್ತಿಯ ವರ್ತನೆ ಲಕ್ಷ್ಮೀಗೆ ಕೊಂಚ ಕಸಿವಿಸಿ ಎನಿಸಿದೆ. ಜೊತೆಗೆ ನೀವಿಬ್ಬರೂ ಮಾತಾಡಿಕೊಂಡು ಬನ್ನಿ ಎಂದೇ ಫ್ರೀಡಂ ಕೊಟ್ಟಿದ್ದಳು. ಆದರೆ, ವೈಷ್ಣವ್, ಲಕ್ಷ್ಮೀಯ ಕೈಹಿಡಿದು ನಿಲ್ಲಿಸಿದ್ದಾನೆ. ನಿಮ್ಮಿಂದ ಸಪರೇಟ್ ಆಗಿ ಮಾತಾಡುವಂತದ್ದು ಏನಿಲ್ಲ ಅಂತ ಹೇಳಿ, ಕೀರ್ತಿಗೆ ಬೈಯ್ಯುವುದಕ್ಕೆ ಶುರು ಮಾಡಿದ್ದಾನೆ. ಕೀರ್ತಿಯ ಆತಂಕ ಕಂಡು ಲಕ್ಷ್ಮೀಯ ಮನಸ್ಸು ಕರಗಿದೆ. ಹೀಗಾಗಿ ವೈಷ್ಣವ್‌ಗೆ ಕಣ್ಸನ್ನೆಯಲ್ಲಿಯೇ ಸುಮ್ಮನೆ ಮಾಡಿದ್ದಾಳೆ. ಏನು ಮಾತಾಡಬೇಡು ಎಂದಿದ್ದಾಳೆ. ಹೆಂಡತಿ ಮಾತಿಗೆ ಗೌರವ ಕೊಡುವ ವೈಷ್ಣವ್ ಅಷ್ಟಕ್ಕೆ ಸುಮ್ಮನೆ ಆಗಿದ್ದಾನೆ.

ಹಳೆಯದ್ದನ್ನು ಮರೆಯಲು ಹೇಳಿದ ವೈಷ್ಣವ್
ದೇವಸ್ಥಾನದಿಂದ ವೈಷ್ಣವ್ ಮತ್ತು ಕೀರ್ತಿ ಹೊರಟಿದ್ದಾರೆ. ರಸ್ತೆ ಮಧ್ಯೆ ಕೀರ್ತಿ ಶಾಪ್ ಒಂದರಲ್ಲಿ ಡ್ರೆಸ್ ಬದಲಾಯಿಸಿಕೊಂಡಿದ್ದಾಳೆ. ದಾರಿಯುದ್ಧಕ್ಕೂ ಸಖಿಯೇ ಸಖಿಯೇ ಹಾಡನ್ನು ಪ್ಲೇ ಮಾಡಿದ್ದಾಳೆ. ಆದ್ರೆ, ಈ ಹಾಡು ವೈಷ್ಣವ್‌ಗೆ ಕಿರಿಕಿರಿ ಮಾಡ್ತಾ ಇತ್ತು. ಹಳೆಯ ನೆನಪುಗಳನ್ನು ನೆನಪಿಸಿದೆ. ಹೀಗಾಗಿ ಕೀರ್ತಿಗೆ ಬುದ್ದಿ ಹೇಳಿದ್ದಾನೆ. ಹಳೆಯ ಹಾಡನ್ನೇ ಎಷ್ಟು ಅಂತ ಕೇಳ್ತೀಯಾ. ಹೊಸದಾಗಿ ಹಾಡುಗಳು ಬಂದಿವೆ. ಅದನ್ನ ಕೇಳು. ಹಳೆಯದ್ದನ್ನು ಹೆಚ್ಚು ನೆನಪಿಸಿಕೊಳ್ಳಬಾರದು ಅಂತ ಹೇಳಿದ್ದಾನೆ. ಇದಕ್ಕೆ ಕೀರ್ತಿ ನಂಗೆ ಹಳೆಯದ್ದೇ ಬೇಕು. ಪಡೆದೇ ಪಡೀತೀನಿ ಅಂತ ಹಠ ಮಾಡಿದ್ದಾಳೆ.
ಲಕ್ಷ್ಮೀಯೇ ಆ ಸ್ಪೆಷಲ್ ಗೆಸ್ಟ್
ಈ ಎಲ್ಲಾ ಮಾತುಕತೆಯ ನಡುವೆ ಜ್ಯುವೆಲ್ಲರಿ ಶಾಪ್ ಬಂದೇ ಬಿಟ್ಟಿದೆ. ಆದ್ರೆ ವೈಷ್ಣವ್ ಕೀರ್ತಿಯನ್ನು ಬಿಟ್ಟು ಸುಮ್ಮನೆ ನಡೆದಿದ್ದಾನೆ. ಕೀರ್ತಿ ಕಿರುಚಿಕೊಂಡರು ತಿರುಗಿ ನೋಡಲಿಲ್ಲ. ಬಳಿಕ ಕೀರ್ತಿಯೇ ವೈಷ್ಣವ್‌ನನ್ನು ಜಾಯಿನ್ ಆಗಿದ್ದಾಳೆ. ಬಳಿಕ ಜ್ಯುವೆಲ್ಲರಿ ಶಾಪ್ ಉದ್ಘಾಟನೆಗೆ ಹೋಗೋಣಾ ಅಂದ್ರೆ, ಸ್ಪೆಷಲ್ ಗೆಸ್ಟ್ ಬರ್ತಾರೆ ಅಂತ ಕಾಯಿಸಿದ್ದಾರೆ. ನಾವಿದ್ದಂಗೆ ಇನ್ಯಾವ ಗೆಸ್ಟ್ ಅಂತ ಕೀರ್ತಿ ಗೊಣಗಾಡುತ್ತಿದ್ದರೆ, ವೈಷ್ಣವ್ ಕುತೂಹಲದಿಂದ ನೋಡುತ್ತಿದ್ದಾನೆ. ಆ ಕಡೆ ಕಾರಲ್ಲಿ ಸ್ಪೆಷಲ್ ಗೆಸ್ಟ್ ಇಳಿದಾಗಿದೆ. ಕೀರ್ತಿಯ ಶಾಕಿಂಗ್ ಮುಖ ನೋಡಿದ್ರೆ ಅದು ಲಕ್ಷ್ಮೀಯೇ ಆಗಿರ್ತಾಳೆ.


Click it and Unblock the Notifications











