Lakshmi Baramma: ವೈಷ್ಣವ್ ಹೆಸರೇಳಿ ಲಕ್ಷ್ಮೀಯನ್ನೇ ಲಾಕ್ ಮಾಡಲು ಹೊರಟ ಕೀರ್ತಿ.. ಗೆಲ್ಲುತ್ತಾಳಾ?
ಕಶ್ಯಪ್ ಮನೆಯಲ್ಲಿ ಸದ್ಯ ವೈಷ್ಣವ್ ಹಾಗೂ ಲಕ್ಷ್ಮೀ ಮದುವೆಯಾದ ಮೂರು ತಿಂಗಳ ಸಂಭ್ರಮದಲ್ಲಿದ್ದಾರೆ. ಎಲ್ಲರೂ ಈ ಸಂಭ್ರಮವನ್ನು ಸೆಲೆಬ್ರೇಷನ್ ಮಾಡುವುದಕ್ಕೆ ಮನೆಯಲ್ಲಿಯೇ ಕೇಕ್ ಕೂಡ ತಯಾರಾಗುತ್ತಿದೆ. ಅದು ಅಮ್ಮನ ಕೈಯಿಂದ. ಆದರೆ, ಸುಪ್ರೀತಾ ನೆಮ್ಮದಿಯಿಂದ ಇರುವುದಕ್ಕೆ ಬಿಡುವುದು ಅಷ್ಟು ಸುಲಭವಲ್ಲ. ಕೀರ್ತಿಯ ಸತ್ಯ ಏನು ಎಂಬುದನ್ನು ತಿಳಿದುಕೊಳ್ಳಲೇಬೇಕೆಂದು ಸುಪ್ರೀತಾ ಸಿಕ್ಕಾಪಟ್ಟೆ ಡ್ರಾಮಾ ಮಾಡುವುದಕ್ಕೆ ಶುರು ಮಾಡಿದ್ದಾಳೆ.
ವೈಷ್ಣವ್ ಮತ್ತು ಕೀರ್ತಿ ಜ್ಯುವೆಲ್ಲರಿ ಶಾಪ್ ಉದ್ಘಾಟನೆ ಅಂತ ಹೊರಟಿದ್ದರು. ಆದರೆ, ಅಲ್ಲಿ ಸ್ಪೆಷಲ್ ಗೆಸ್ಟ್ ಆಗಿ ಲಕ್ಷ್ಮೀಯೇ ಬಂದಿದ್ದಾಳೆ. ಇದನ್ನು ಸಹಿಸುವುದಕ್ಕೆ ಕೀರ್ತಿಗೆ ಸಾಧ್ಯವೇ ಆಗಿಲ್ಲ. ಆ ಕಡೆ ಸುಪ್ರೀತಾ ನೋಡಿದ್ರೆ ಕೀರ್ತಿಯನ್ನು ಉರಿಸುವುದರ ಜೊತೆಗೆ ಲಕ್ಷ್ಮೀಗೂ ಅವಮಾನ ಮಾಡುವುದಕ್ಕೆ ಹೊರಟಿದ್ದಾಳೆ.

ಲಕ್ಷ್ಮೀ-ವೈಷ್ಣವ್ ನಡವಳಿಕೆ ಕಂಡು ಕೀರ್ತಿಗೆ ಕೋಪ
ವೈಷ್ಣವ್ ಜ್ಯುವೆಲ್ಲರಿ ಉದ್ಘಾಟನೆಗೆ ಲಕ್ಷ್ಮೀಯೇ ಸ್ಪೆಷಲ್ ಗೆಸ್ಟ್ ಆಗಿ ಬಂದಿದ್ದಾಳೆ. ಜ್ಯುವೆಲ್ಲರಿ ಶಾಪ್‌ನಲ್ಲೆಲ್ಲಾ ಇಬ್ಬರು ಓಡಾಡಿದ್ದಾರೆ. ಇಬ್ಬರೇ ಉದ್ಘಾಟನೆ ಮಾಡಿದ್ದಾರೆ. ಬಳಿಕ ಜ್ಯುವೆಲ್ಲರಿ ಶಾಪ್‌ನಿಂದ ಒಂದು ಸ್ಪೆಷಲ್ ಗಿಫ್ಟ್ ಕೂಡ ಸಿಕ್ಕಿದೆ. ಅದನ್ನು ವೈಷ್ಣವ್, ಲಕ್ಷ್ಮೀಗೆ ತೊಡಿಸಿದ್ದಾನೆ. ಇದನ್ನೆಲ್ಲಾ ನೋಡುತ್ತಿದ್ದ ಕೀರ್ತಿಗೆ ಸಹಿಸುವುದಕ್ಕೆ ಆಗಿಲ್ಲ. ಕಡೆಗೆ ಅಲ್ಲಿಂದ ಹೊರಗೆ ನಡೆದು ಬಿಟ್ಟಿದ್ದಾಳೆ. ಇದನ್ನೆಲ್ಲ ಲಕ್ಷ್ಮೀ ಕುಳಿತಲ್ಲಿಯೇ ನೋಡಿದ್ದಳು. ಕೀರ್ತಿ ಯಾಕೆ ಇಷ್ಟೊಂದು ವಿಚಿತ್ರವಾಗಿ ಆಡ್ತಾಳೆ ಎಂಬ ಅನುಮಾನವೂ ಮೂಡಿ, ಹೊರಗೆ ಬಂದಳು.
ಕೀರ್ತಿಗೆ ಖಡಕ್ ಉತ್ತರ ಕೊಟ್ಟ ಲಕ್ಷ್ಮೀ
ಕೀರ್ತಿ ಮತ್ತೆ ಅದೇ ಕೋಪದಲ್ಲಿ ಇದ್ದಳು. ಯಾರದ್ದೋ ಜೊತೆಗೆ ಫೋನ್‌ನಲ್ಲಿ ಮಾತಾಡ್ತಾ ಇದ್ದಳು. ಲಕ್ಷ್ಮೀ ಬಂದ ಕೂಡಲೇ ಆ ಕರೆ ಕಟ್ ಮಾಡಿ, ಲಕ್ಷ್ಮೀಯನ್ನೇ ತರಾಟೆಗೆ ತೆಗೆದುಕೊಂಡಳು. ಕರೆದರು ಅಂತ ಓಡೋಡಿ ಬರೋದಲ್ಲ. ಇದು ಮಿಡಲ್ ಕ್ಲಾಸ್ ಅಲ್ಲ. ಅವರು ಕರೀತಾರೆ, ಆದ್ರೆ ನೀನು ಸಲೀಸಾಗಿ ಬರೋದು ಅಲ್ಲ. ವೈಷ್ಣವ್ ಹಾಗೂ ಮನೆತನದ ಮರ್ಯಾದೆಯನ್ನು ಕಳೆಯಬೇಡ ಅಂತೆಲ್ಲಾ ಜೋರಾಗಿ ಹೇಳಿದ್ದಾಳೆ. ಆಗ ಲಕ್ಷ್ಮೀ ಕೀರ್ತಿಗೆ ಖಡಕ್ ಆಗಿಯೇ ಕೀರ್ತಿಗೆ ಉತ್ತರ ಕೊಟ್ಟಿದ್ದಾಳೆ. ಆದರೆ, ಕೀರ್ತಿ, ಲಕ್ಷ್ಮೀಯನ್ನ ಬುದ್ದಿವಂತಿಕೆಯಿಂದ ಬಲೆಗೆ ಬೀಳಿಸಿದ್ದಾಳೆ. ವೈಷ್ಣವ್ ಮರ್ಯಾದೆ ಮುಂದಿಟ್ಟುಕೊಂಡು ಲಕ್ಷ್ಮೀಯನ್ನು ಕಳುಹಿಸುವ ಪ್ಲ್ಯಾನ್ ಸಕ್ಸಸ್ ಮಾಡಿಕೊಂಡಿದ್ದಾಳೆ.

ನಿತಿನ್ ಬಗ್ಗೆಯೂ ಪ್ರಶ್ನೆ
ಕೀರ್ತಿಯ ಮಾತಿಗೆ ಲಕ್ಷ್ಮೀ ಕೂಡ ಒಪ್ಪಿದ್ದಾಳೆ. ಹೌದು ಎಲ್ಲಾ ಕಡೆಯೂ ಅವರು ನನ್ನೆ ಕರೆದುಕೊಂಡು ಓಡಾಡುತ್ತಾರೆ. ಅವರಿಗೆ ಕೆಲಸದ ಕಡೆ ಗಮನ ಕೊಡುವುದಕ್ಕೆ ಆಗಲ್ಲ ಎಂದು ನಿಜ ಎಂದು ಒಪ್ಪಿಕೊಂಡು ಅಲ್ಲಿಂದ ಹೊರಟಿದ್ದಾಳೆ. ಅಷ್ಟರಲ್ಲಿ ಮೀಡಿಯಾದವರ ಎದುರು ಸಿಕ್ಕಿಬಿದ್ದಿದ್ದಾಳೆ. ಲಕ್ಷ್ಮೀಗೆ ಉತ್ತರ ಕೊಡುವುದಕ್ಕೆ ತೀರಾ ಕಷ್ಟ ಎಂಬ ಪ್ರಶ್ನೆಗಳನ್ನೇ ಕೇಳಿದ್ದಾರೆ. ವೈಷ್ಣವ್‌ನ ಬೀಳಿಸಿಕೊಂಡಿದ್ದ, ನಿತೀನ್ ಕೂಡ ನಿಮ್ಮ ಹಿಂದೆ ಇದ್ದರು. ಹೀಗೆ ಏನೇನೋ ಕೇಳಿ ಮುಜುಗರ ಉಂಟು ಮಾಡಿದ್ದಾರೆ.
ಸುಪ್ರೀತಾಳ ಪ್ಲ್ಯಾನ್ ಸಕ್ಸಸ್ ಆಗುತ್ತಾ?
ಸುಪ್ರೀತಾಗೆ ಲಕ್ಷ್ಮೀಗೆ ಅವಮಾನ ಆಗಿ, ಅದಕ್ಕೆ ವೈಷ್ಣವ್ ಡಿಸ್ಟರ್ಬ್ ಆಗಬೇಕು ಎಂಬ ಆಸೆ. ಹೀಗಾಗಿ ಲಕ್ಷ್ಮೀಯನ್ನು ಪ್ರಶ್ನೆ ಮಾಡಲು ಬೇರೆಯದ್ದೇ ಪ್ಲ್ಯಾನ್ ಮಾಡಿದ್ದಳು. ಈಗ ಆ ಪ್ಲ್ಯಾನ್ ಸಕ್ಸಸ್ ಕೂಡ ಆಗಿದೆ. ಲಕ್ಷ್ಮೀ ಉತ್ತರ ಕೊಡಲು ಕಷ್ಟವಾದ ಪ್ರಶ್ನೆಗೆ ವೈಷ್ಣವ್ ಉತ್ತರ ನೀಡಿ, ಸುಪ್ರೀತಾಳ ಪ್ಲ್ಯಾನ್ ಉಲ್ಟಾ ಮಾಡುವ ಸಾಧ್ಯತೆಯೂ ಇದೆ.


Click it and Unblock the Notifications











