Lakshmi Baramma: ಕೀರ್ತಿ ಬಾಂಬ್ ಇಟ್ಟಿದ್ದು ಕಾವೇರಿಗಲ್ಲ ಸುಪ್ರೀತಾಗೆ.. ಮುಂದೇನು?
ಕಾವೇರಿಗೆ ದಿನವಿಡಿ ತಲೆ ನೋವಾಗಿರುವುದು ಕೀರ್ತಿಯದ್ದೇ. ಯಾವಾಗ ಎಲ್ಲಿ ಬಾಂಬ್ ಬ್ಲಾಸ್ಟ್ ಮಾಡುತ್ತಾಳೆ ಎಂಬ ಆತಂಕ. ಕೀರ್ತಿಯೂ ಪದೇ ಪದೇ ಭಯವನ್ನೇ ಹುಟ್ಟು ಹಾಕುತ್ತಿದ್ದಾಳೆ. ಈಗ ಸತ್ಯ ಹೇಳಿ ಬಿಡ್ತೀನಿ, ಆಗ ಸತ್ಯ ಹೇಳಿ ಬಿಡ್ತೀನಿ ಅಂತ ತಲೆ ಮೇಲೆಯೇ ಕತ್ತಿ ಇಟ್ಟು ಓಡಾಡುತ್ತಿದ್ದಾಳೆ. ಕಾವೇರಿಗೂ ಇದು ದೊಡ್ಡ ಚಿಂತೆಯಾಗಿ ಕಾಡುತ್ತಿದೆ. ಆದರೆ ಈ ಬಾರಿ ಕೀರ್ತಿ ಹೊಡೆದಿದ್ದು ನೇರವಾಗಿ ಸುಪ್ರೀತಾಗೆ.
ಕಾವೇರಿಯ ಎಲ್ಲಾ ವೀಕ್ನೇಸ್‌ಗಳು ಕೀರ್ತಿಯ ಮೊಬೈಲ್‌ನಲ್ಲಿ ಲಾಕ್ ಆಗಿದೆ. ಸಾಕ್ಷಿಯಾಗಿ ಬೇಕಾಗುವ ಎಲ್ಲಾ ವಾಯ್ಸ್ ಅನ್ನು ರೆಕಾರ್ಡ್ ಮಾಡಿ ಇಟ್ಟುಕೊಂಡಿದ್ದಾಳೆ. ಮೊದಲಿಗೆ ಕೀರ್ತಿಯ ಮೊಬೈಲ್ ಕಸಿದುಕೊಂಡು, ಅವಳಿಂದ ದೂರ ಆಗಬೇಕು ಎಂಬ ಸ್ಕೆಚ್ ಹಾಕುತ್ತಿದ್ದಾಳೆ. ಇದರ ನಡುವೆ ಕಾವೇರಿಗೆ ಕೀರ್ತಿಯೇ ದೊಡ್ಡ ಅಸ್ತ್ರವೊಂದನ್ನು ನೀಡಿದ್ದಾಳೆ.

ಕಾವೇರಿಗೆ ಸುಪ್ರೀತಾಳೇ ತಲೆ ನೋವು
ಸುಪ್ರೀತಾಗೆ ಕೀರ್ತಿ ಹಾಗೂ ಕಾವೇರಿಯ ನಡುವೆ ಏನೋ ನಡೆಯುತ್ತಿದೆ ಅನ್ನೋದಂತು ಗೊತ್ತಾಗಿತ್ತು. ಆದರೆ, ಆ ಸತ್ಯ ಏನು ಅನ್ನೋದು ಮಾತ್ರ ಗೊತ್ತಾಗುತ್ತಿಲ್ಲ. ಆ ಸತ್ಯ ಗೊತ್ತು ಮಾಡಿಕೊಳ್ಳುವುದಕ್ಕೆ ಬೇರೆ ಬೇರೆ ಮಾರ್ಗಗಳನ್ನು ಹಿಡಿದುಕೊಳ್ಳುತ್ತಿದ್ದಾಳೆ. ಅದರಲ್ಲೂ ಕೀರ್ತಿಗೆ ಬೆಂಕಿ ಹೊತ್ತಿಸಿ, ಟ್ರಿಗರ್ ಮಾಡುತ್ತಿದ್ದಾಳೆ. ಈ ಮೂಲಕ ಕಾವೇರಿಗೆ ದೊಡ್ಡ ತಲೆ ನೋವಾಗಿದೆ.
ಕೀರ್ತಿಯ ಮಾತು ಕೇಳಿ ಕಾವೇರಿ ಶಾಕ್
ಈ ಕಡೆ ಲಕ್ಷ್ಮೀ ಮತ್ತು ವೈಷ್ಣವ್ ಮದುವೆಯ ದಿನಾಚರಣೆ ನಡೆಯುತ್ತಿದೆ. ಇದನ್ನು ಕಂಡು ಕೀರ್ತಿಗೆ ಕೋಪ ಹೆಚ್ಚಾಗಿದೆ. ಅದರಲ್ಲೂ ಮನೆಗೆ ಬಂದ ಕೀರ್ತಿಯನ್ನು ಮತ್ತಷ್ಟು ಉರಿಸಿದ್ದಾಳೆ. ಇದನ್ನೆಲ್ಲಾ ನೋಡಿದ ಕೀರ್ತಿ, ಸತ್ಯ ಹೇಳಿಯೇ ಬಿಡ್ತೀನಿ ಅಂತ ಜೋರು ಮಾಡಿದ್ದಾಳೆ. ಕಾವೇರಿಯನ್ನು ಹೊರಗೆ ಕರೆದುಕೊಂಡು ಹೋದ ಕೀರ್ತಿ, ನಾನು ಇನ್ನು ಮುಂದೆ ಸಹಿಸುವುದಿಲ್ಲ. ಎಲ್ಲದನ್ನು ಹೇಳಿ ಬಿಡ್ತೀನಿ ಎಂದಿದ್ದಾಳೆ. ಇದಕ್ಕೆ ಕಾವೇರಿಗೆ ಭಯ ಹೆಚ್ಚಾಗಿತ್ತು.

ಸತ್ಯ ತೋರಿಸಲು ರೆಡಿಯಾದ ಕೀರ್ತಿ
ಕಾವೇರಿ ಜೊತೆಗೆ ಕೀರ್ತಿ ಮಾತನಾಡುವಾಗ ಅಲ್ಲಿಗೆ ವೈಷ್ಣವ್ ಬಂದ. ವೈಷ್ಣವ್‌ಗೆ ಮೊದಲೇ ಏನೋ ಸತ್ಯ ಅಡಗಿದೆ. ಅದನ್ನು ತಿಳಿದುಕೊಳ್ಳಲೇಬೇಕು ಎಂದುಕೊಂಡು ಹೊರಟಿದ್ದನು. ಆದ್ರೆ ಆ ಸತ್ಯ ಕಡೆಗೂ ಗೊತ್ತಾಗಲೇ ಇಲ್ಲ. ಈಗ ಮತ್ತೆ ಅದಕ್ಕೆ ಕಾಲ ಕೂಡಿ ಬಂದಿದೆ. ಅದಕ್ಕೆ ಕೀರ್ತಿಯನ್ನು ಅದೇನು ಸತ್ಯ ಅಂತ ಹೇಳು ಎಂದಾಗ, ಮನೆಯಲ್ಲಿರುವ ಹೋಂ ಥಿಯೇಟರ್ ಕಡೆಗೆ ಕರೆದುಕೊಂಡು ಹೋಗಿದ್ದಾಳೆ. ಕೈಯಲ್ಲಿ ರಿಮೋಟ್ ಹಿಡಿದು, ಪ್ಲೇ ಮಾಡುವುದಕ್ಕೆ ಹೊರಟಿದ್ದಾಳೆ. ಆ ರಿಮೋಟ್ ನೋಡಿದಾಗೆಲ್ಲಾ ಕಾವೇರಿಗೆ ಶಾಕ್ ಆಗಿದೆ.
ಸುಪ್ರೀತಾಗೆ ಬಾಂಬ್ ಇಟ್ಟ ಕೀರ್ತಿ
ಕಾವೇರಿ ತನ್ನ ಆಡಿಯೋಗಳು ಎಲ್ಲಿ ಪ್ಲೇ ಆಗುತ್ತೋ ಎಂದು ನೋಡುತ್ತಿರುವಾಗಲೇ ಸುಪ್ರೀತಾಳ ವಿಡಿಯೋ ಪ್ಲೇ ಆಗಿದೆ. ಇದನ್ನು ನೋಡಿ ವೈಷ್ಣವ್ ಶಾಕ್ ಆಗಿದ್ದಾನೆ. ಲಕ್ಷ್ಮೀಯನ್ನು ಮೀಡಿಯಾದವರ ಮುಂದೆ ಸಿಕ್ಕಿ ಹಾಕಿಸಿದ್ದೇ ಸುಪ್ರೀತಾ. ಮಾಧ್ಯಮದವರಿಗೆ ಹಣ ಕೊಟ್ಟು, ಅಲ್ಲಿ ಮರ್ಯಾದೆ ಕಳೆಯುವುದಕ್ಕೆ ಹೊರಟಿದ್ದು, ವಿಡಿಯೋದಲ್ಲಿ ಗೊತ್ತಾಗಿದೆ. ಅಕೌಂಟ್ ಮೂಲಕ ಹಣ ಕೊಡದೆ, ಕ್ಯಾಶ್‌ನಲ್ಲಿ ನೀಡುವುದಕ್ಕೆ ಹೋಗಿ ಸರಿಯಾಗಿ ಲಾಕ್ ಆಗಿದ್ದಾಳೆ. ಅದನ್ನೆಲ್ಲಾ ವಿಡಿಯೋ ಮಾಡಿಕೊಂಡು ಕೀರ್ತಿ, ವೈಷ್ಣವ್ ಮುಂದೆ ಕಾವೇರಿಗೆ ತೋರಿಸಿದ್ದಾಳೆ. ಕಾವೇರಿಗೆ ತಾನು ಬಚಾವ್ ಆದೆ ಎನ್ನುವ ನೆಮ್ಮದಿ ಜೊತೆಗೆ ಸುಪ್ರೀತಾಳ ಮೇಲೆ ಕೋಪ ಹೆಚ್ಚಾಗಿದೆ.


Click it and Unblock the Notifications











