Lakshmi Baramma: ಕಾವೇರಿಯನ್ನು ಲಕ್ಷ್ಮೀ ವಿರುದ್ಧ ಎತ್ತಿ ಕಟ್ಟುತ್ತಿರೋ ಕೀರ್ತಿ.. ಕಾವಲಿಗಿರೋದು ಸುಪ್ರೀತಾ

By ಎಸ್ ಸುಮಂತ್

ಕೀರ್ತಿ ಹೇಗಾದರೂ ಮಾಡಿ ಲಕ್ಷ್ಮೀ ಮತ್ತು ವೈಷ್ಣವ್‌ನನ್ನು ದೂರ ಮಾಡುವುದಕ್ಕೆ ನೋಡಿದಳು‌. ಆದರೆ, ಕಾವೇರಿ ತೀರಾ ಬುದ್ದಿವಂತೆ ಮತ್ತೆ ಜ್ಯೋತಿಷ್ಯದ ಆಟವನ್ನೇ ಆಡಿ, ಕೀರ್ತಿಯ ಬಾಯಿ ಲಾಕ್ ಮಾಡಿಸಿದಳು. ಎಲ್ಲದಕ್ಕೂ ಓಕೆ ಎಂದ ಕೀರ್ತಿ, ವೈಷ್ಣವ್ ಜೊತೆಗೆ ಡೇಟ್ ಮಾಡುವುದಕ್ಕೆ ಕಾವೇರಿಯ ಸಹಾಯವನ್ನೇ ಕೇಳಿದಳು.

ಕೀರ್ತಿಯ ಆಸೆಗಳನ್ನು ಕಾವೇರಿ ಈಡೇರಿಸುವ ದಾರಿಯನ್ನು ಸುಗಮ ಮಾಡಿಕೊಂಡಿದ್ದಳು. ಆ ಕಡೆ ಕಾವೇರಿ, ಕೀರ್ತಿಗೆ ಸಮಾಧಾನ ಮಾಡುವ ದಾರಿ ಹುಡುಕಿದರೆ, ಅದೇ ದಾರಿಯಲ್ಲಿ ಸುಪ್ರೀತಾ ಲಕ್ಷ್ಮೀಯ ಜರ್ನಿ ಶುರು ಮಾಡಿಸಿದ್ದಳು. ಇದು ಕೀರ್ತಿಗೆ ಗೊತ್ತಾಗಿದ್ದೇ ತಡ. ರಂಪ -ರಾದ್ಧಾಂತ ಮಾಡಿಟ್ಟಿದ್ದಳು. ಈಗ ಸುಪ್ರೀತಾ ಮತ್ತಷ್ಟು ಕೋಪಗೊಂಡಿದ್ದು, ಉಗ್ರಾವತಾರ ತಾಳಿದ್ದಾರೆ. ಕಾವೇರಿ ಜೊತೆಗೆ ಕೀರ್ತಿಗೂ ಪಾಠ ಕಲಿಸುವುದಕ್ಕೆ ರೆಡಿಯಾಗಿದ್ದಾಳೆ.

Lakshmi Baramma-ColorsKannada

ಕಾವೇರಿಗೆ ಮತ್ತಷ್ಟು ಕೋಪ ತರಿಸಿದ ಕೀರ್ತಿ

ಸುಪ್ರೀತಾಳನ್ನು ಹೇಗಾದರೂ ಮಾಡಿ ಮನೆಯಿಂದ ಹೊರಗೆ ಹಾಕಲೇಬೇಕೆಂದುಕೊಂಡಿದ್ದರು ಕಾವೇರಿ ಮತ್ತು ಕೀರ್ತಿ. ಸುಪ್ರೀತಾ ಮನೆಯಲ್ಲಿ ಇಲ್ಲ ಎಂದಾದರೇ ಒಂದಷ್ಟು ತಲೆ ನೋವು ಕಳೆಯುತ್ತೆ ಎಂದೇ ಭಾವಿಸಿದ್ದರು. ಆದರೆ, ವೈಷ್ಣವ್ ತಲೆಯಲ್ಲಿ‌ ತುಂಬಿಸಿದ ಸತ್ಯ ಎಂಬ ವಿಚಾರ ಸುಪ್ರೀತಾಳನ್ನು ಮತ್ತೆ ಮನೆಯಲ್ಲಿ ಉಳಿಯುವಂತೆ ಮಾಡಿತ್ತು. ಈ ವಿಚಾರಕ್ಕೆ ಕಾವೇರಿ ಹಾಗೂ ಕೀರ್ತಿ ಕಿತ್ತಾಡುತ್ತಿದ್ದರು. ನೀ ಮಾಡಿದ ಡ್ರಾಮಾಗೆ ಈ ರೀತಿ ಆಯ್ತು. ನೀವಾಡಿದ ವಿಚಾರಕ್ಕೆ ಈ ರೀತಿ ಆಯ್ತು ಅಂತ. ಆದ್ರೆ ಕಡೆಯಲ್ಲಿ ಕೀರ್ತಿ, ಲಕ್ಷ್ಮೀಯಿಂದಾನೇ ಇದು ಆಗಿದ್ದು ಅಂತ ಅತ್ತೆ ಸೊಸೆ ನಡುವೆ ಜಗಳ ತರುತ್ತಿದ್ದಾಳೆ.

ಲಕ್ಷ್ಮೀಯ ಸಹಾಯಕ್ಕೆ ನಿಂತ ಸುಪ್ರೀತಾ

ಸುಪ್ರೀತಾಗೆ, ಲಕ್ಷ್ಮೀಯ ಎಲ್ಲಾ ಮಾತುಗಳು ತನ್ನ ತಾಯಿ ಆಡಿದ ಮಾತುಗಳಂತೆಯೇ ಕಂಡಿದೆ. ಹೀಗಾಗಿಯೇ ಲಕ್ಷ್ಮೀ ವಿಚಾರದಲ್ಲಿ ಬದಲಾಗುವುದಕ್ಕೆ ಹೊರಟಿದ್ದಾಳೆ. ಅದನ್ನು ಲಕ್ಷ್ಮೀಗೆ ಹೇಳಲು ಹೋದರೆ, ಲಕ್ಷ್ಮೀ ಆ ಬದಲಾವಣೆಯನ್ನು ನಂಬುವುದಕ್ಕೆ ಸಿದ್ಧವಿಲ್ಲ‌. ಹಳೆಯದ್ದನ್ನೆಲ್ಲಾ ನೆನಪಿಸಿದ್ದಾಳೆ. ಅಂಕಿತ್‌ಗೋಸ್ಕರ ಎಂದು ಹೇಳಿದ್ದಾಳೆ. ಮೊದಲು ಬದಲಾಗಿ ಎಂದು ಹೇಳಿ‌ ಮುಂದೆ ಸಾಗಿದ್ದಾಳೆ.

Lakshmi Baramma-ColorsKannada

ಯಾವುದನ್ನು ಬಾಯಿ ಬಿಡ್ತಿಲ್ಲ ವೈಷ್ಣವ್

ಅಮ್ಮನನ್ನು ಉಳಿಸಿಕೊಂಡಿದ್ದಕ್ಕೆ ಅಂಕಿತ್, ವೈಷ್ಣವ್‌ನ ತಬ್ಬಿಕೊಂಡು ಥ್ಯಾಂಕ್ಸ್ ಹೇಳಿದ್ದಾನೆ. ಸಮಾಧಾನ ಮುನ್ನಡೆವಾಗ ಸುಪ್ರೀತಾ ಮತ್ತೆ ಸಮರ್ಥನೆ ಮಾಡಲು ಹೋಗಿದ್ದಾಳೆ. ಇದಕ್ಕೆ ತಲೆ ಕೆಡಿಸಿಕೊಳ್ಳದ ವೈಷ್ಣವ್, ಮೊದಲು ಆ ಸತ್ಯ ಏನು ಅಂತ ಪ್ರೂವ್ ಮಾಡಿ. ಸತ್ಯ ನಿರೂಪಿಸದೇ ಹೋದಲ್ಲಿ ನೀವೂ ಮತ್ತೆ ಅದೇ ಸ್ಥಿತಿಯಲ್ಲಿ ನಿಲ್ಲುತ್ತೀರಿ ಎಂದೇ ಹೇಳಿದ್ದಾನೆ.

ಕೀರ್ತಿಗೆ ಟಕ್ಕರ್ ಕೊಟ್ಟ ಸುಪ್ರೀತಾ

ಇದೆಲ್ಲ ಕೀರ್ತಿನೆ ಮಾಡಿದ್ದು, ಕೀರ್ತಿಯಿಂದಾನೇ ಆಗಿದ್ದು ಅನ್ನೋದು ಸುಪ್ರೀತಾಗೇನು ಗೊತ್ತಾಗದೆ‌ ಇರುವಂತ ಪರಿಸ್ಥಿತಿ ಅಲ್ಲ. ಎಲ್ಲ ತಿಳಿದ ಸುಪ್ರೀತಾ, ಈಗ ಕೀರ್ತಿಯನ್ನು ಮಟ್ಟ ಹಾಕಲು ಹೊರಟಿದ್ದಾಳೆ. ಬಿಟ್ಟಿ ಊಟ ಅಂತ ರೇಗಿಸಿದ್ದ ಕೀರ್ತಿಗೆ, ಮನೆಯಲ್ಲಿ ಉಳಿದ ಆಹಾರವನ್ನೆಲ್ಲ ಪ್ಯಾಕ್ ಮಾಡಿ, ಕೊಡಲು ಹೋಗಿದ್ದಾಳೆ. ನಿನ್ನಿಂದಾಗಿ ಎಲ್ಲಾ ಸಂತೋಷ ಹಾಳಾಯ್ತು. ಈಗ ಉಳಿದಿರುವ ಅಡುಗೆಯನ್ನು ನೀವೇ ತಿನ್ನಿ ಅಂತ ಹೇಳಿ ಕೀರ್ತಿಯ ಕೋಪ ಜಾಸ್ತಿಯಾಗುವಂತೆ ಮಾಡಿದ್ದಾಳೆ. ಕೀರ್ತಿ ಮತ್ತು ಕಾವೇರಿ ಇಬ್ಬರು ಸುಪ್ರೀತಾಳ ಟಾರ್ಗೆಟ್ ಆಗಿದ್ದಾರೆ. ಇನ್ಮುಂದೆ ಲಕ್ಷ್ಮೀಗೆ ಸುಪ್ರೀತಾಳ ಕಾಟ ತಪ್ಪುತ್ತದೆ.

More from Filmibeat

English summary
Colors Kannada serial Lakshmi Baramma July 28th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X