Lakshmi Baramma:ದೊಡ್ಡಪ್ಪನ ಆಣೆ ಪ್ರಮಾಣಕ್ಕೆ ಬಗ್ಗುತ್ತಾನಾ ವೈಷ್ಣವ್? ಲಕ್ಷ್ಮಿಗೆ ಸತ್ಯ ತಿಳಿಯುತ್ತಾ?

By ಎಸ್ ಸುಮಂತ್

ಕೀರ್ತಿಯನ್ನು ದೂರ ಮಾಡಿ, ಲಕ್ಷ್ಮೀಯನ್ನು ಮದುವೆ ಮಾಡಿಕೊಂಡು ಬಂದಿದ್ದಾಗಿದೆ. ಆದರೆ, ಈಗ ಕೀರ್ತಿಯ ಕಾಟ ತಡೆದುಕೊಳ್ಳಿವುದಕ್ಕೆ ಆಗ್ತಿಲ್ಲ. ಇಷ್ಟು ದಿನ ಕಾವೇರಿಗೆ ಟಾರ್ಚರ್ ಕೊಡ್ತಿದ್ದ ಕೀರ್ತಿ, ಈಗ ವೈಷ್ಣವ್‌ಗೆ ಶುರುವಾಗಿದೆ. ಲಕ್ಷ್ಮೀ ದೊಡ್ಡಪ್ಪ ಎಲ್ಲವನ್ನು ನೋಡಿ ನೇರ ಮನೆಗೆ ಬಂದು ಪ್ರಶ್ನೆ ಮಾಡಿದ್ದಾರೆ‌. ಆದರೆ, ಅಲ್ಲಿ ಕಾವೇರಿಯಿಂದ ಅವಮಾನವಾಗಿದೆ.

ಈ ಕಡೆ ಯಾವತ್ತೂ ಇಲ್ಲದೆ ಇರುವ ಅಕ್ಕರೆಯನ್ನು ಸುಪ್ರೀತಾ, ಲಕ್ಷ್ಮೀ ಮೇಲೆ ತೋರಿಸುತ್ತಿದ್ದಾಳೆ. ದೊಡ್ಡಪ್ಪನಿಗೆ ಆದ ಅವಮಾನ ಸರಿಯಲ್ಲ ಎಂದು ಮತ್ತಷ್ಟು ನೋವು ನೀಡುತ್ತಿದ್ದಾಳೆ. ವೈಷ್ಣವ್ -ಕೀರ್ತಿ ಬಗ್ಗೆ ಅನುಮಾನ ಹುಟ್ಟು ಹಾಕುತ್ತಿದ್ದಾಳೆ.

Lakshmi Baramma-Colors Kannada-

ಕಾವೇರಿಯನ್ನು ಪ್ರಶ್ನಿಸಿದ ಲಕ್ಷ್ಮೀ

ಲಕ್ಷ್ಮೀಯ ದೊಡ್ಡಪ್ಪ ಮನೆಗೆ ಬಂದು ಪ್ರಶ್ನಿಸಿದ್ದಕ್ಕೆ ಕಾವೇರಿ ಬಾಯಿಗೆ ಬಂದ ಹಾಗೇ ಮಾತನಾಡಿದ್ದಾಳೆ. ಇದರಿಂದ ನೊಂದು ದೊಡ್ಡಪ್ಪ ಮನೆಯಿಂದ ಹೊರ ನಡೆದಿದ್ದಾರೆ. ಲಕ್ಷ್ಮೀ ಬಡತನದಲ್ಲಿಯೇ ಬೆಳೆದಿದ್ದರು, ಸ್ವಾಭಿಮಾನದ ಹಂಗು ತೊರೆದು ಬದುಕುವವಳಲ್ಲ. ಅದಕ್ಕೆ ಕಾವೇರಿಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. "ನಿಮ್ಮ ಮನೆಯ ಹೆಣ್ಣು ಮಗಳನ್ನು ಮದುವೆ ಮಾಡಿಕೊಟ್ಟು ಸುಮ್ಮನೆ ಇರುತ್ತೀರಾ. ವಿಧಿ ಮದುವೆಯಾದ ಮೇಲೆ ಅವಳ ಗಂಡನನ್ನ ಬೇರೆ ಹುಡುಗಿ ಜೊತೆ ನೋಡಿದರೆ ನೀವೂ ಪ್ರಶ್ನೆ ಮಾಡಲ್ವಾ" ಎಂದು ಕೇಳಿದಾಗ, ವೈಷ್ಣವ್ ಅಪ್ಪ ಲಕ್ಷ್ಮೀಯ ಪರವಾಗಿಯೇ ನಿಂತಿದ್ದಾರೆ. ಆಗ ಕಾವೇರಿ ಬಾಯಿ ಮುಚ್ಚಿದೆ.

ದೊಡ್ಡಪ್ಪನ ಬಳಿ ಸತ್ಯ ಹೇಳಿದ ಕೀರ್ತಿ

ದೊಡ್ಡಪ್ಪ ಅದೇ ನೋವಿನಿಂದ ಹೊರಗೆ ಬರುತ್ತಿದ್ದಾಗ, ಎದುರಿಗೆ ಕೀರ್ತಿ ಸಿಕ್ಕಿದ್ದಾಳೆ. ಕೀರ್ತಿಯನ್ನು ಸತ್ಯ ಹೇಳ್ತೀಯ ಅಮ್ಮ ಎಂದು ಕೇಳಿದ್ದಾರೆ. ಅದಕ್ಕೆ ಕೀರ್ತಿ, ನೀವೂ ನೋಡಿದ್ದೆಲ್ಲವು ಸತ್ಯ. ನಾನು ವೈಷ್ಣವ್ ಮೂರು ವರ್ಷದಿಂದ ಪ್ರೀತಿ ಮಾಡ್ತಾ ಇದ್ದೀವಿ ಅಂತ ಹೇಳಿದ್ದಾಳೆ. ಈ ಮಾತನ್ನು ಕೇಳಿದ ದೊಡ್ಡಪ್ಪನಿಗೆ ಮನಸ್ಸು ಮತ್ತಷ್ಟು ಕುಸಿದಿದೆ. ತಲೆ ಸುತ್ತಿ ಬೀಳಬೇಕು ಎನ್ನುವಷ್ಟರಲ್ಲಿ ವೈಷ್ಣವ್ ಕಾಪಾಡಿದ್ದಾನೆ.

Lakshmi Baramma-Colors Kannada-

ದೊಡ್ಡಪ್ಪನ ಆಣೆ ಪ್ರಮಾಣಕ್ಕೆ ಬಗ್ಗುತ್ತಾನಾ ವೈಷ್ಣವ್?

ಕೀರ್ತಿಯನ್ನು ಗದರಿ ವೈಷ್ಣವ್ ವಾಪಸ್ ಕಳುಹಿಸಿದ್ದಾ‌ನೆ. ಕೀರ್ತಿ ಮತ್ತೆ ದೊಡ್ಡಪ್ಪನ ತಲೆ ಕೆಡಿಸಿ ಹೋಗಿದ್ದಾಳೆ. ಇದೆಲ್ಲವನ್ನು ನೋಡಿ, ದೊಡ್ಡಪ್ಪನಿಗೆ ನೋವಾಗಿದೆ. ವೈಷ್ಣವ್ ಬಳಿಯೇ ಸತ್ಯ ಕೇಳಿದ್ದಾನೆ. ತಲೆ ಮೇಲೆ ಆಣೆ ಮಾಡಿಸಿಕೊಂಡು ಸತ್ಯ ಹೇಳಲು ಕೇಳಿದಾಗ, ವೈಷ್ಣವ್‌ಗೆ ಬೇರೆ ದಾರಿ ಕಾಣದೆ ಎಲ್ಲಾ ಸತ್ಯವನ್ನು ಹೇಳಿದ್ದಾನೆ. ಆದರೆ, ಈಗ ಪ್ರೀತಿ ಮಾಡ್ತಿಲ್ಲ. ಈ ಹಿಂದೆ ಪ್ರೀತಿ ಮಾಡ್ತಾ ಇದ್ವಿ ಅನ್ನೋದು, ಎಂಗೇಜ್ಮೆಂಟ್ ಮುರಿದು ಬಿದ್ದದ್ದು, ಲಕ್ಷ್ಮೀಗೆ ಸತ್ಯ ಗೊತ್ತಾಗಿದ್ದು ಎಲ್ಲವನ್ನು ಹೇಳಿ ದೊಡ್ಡಪ್ಪನನ್ನು ಸಮಾಧಾನ ಮಾಡಿದ್ದಾನೆ.

ಲಕ್ಷ್ಮೀಗೂ ತಿಳಿಯುತ್ತಾ ಸತ್ಯ

ವೈಷ್ಣವ್ ಧೈರ್ಯವಾಗಿ ಎದುರಿಸಬೇಕಾಗಿರುವುದು ಲಕ್ಷ್ಮೀಯನ್ನು. ದೊಡ್ಡಪ್ಪ ಹೇಳಿದ ಮಾತು, ಸುಪ್ರೀತಾ ಹೇಳಿದ ಮಾತು, ಕೀರ್ತಿ‌ ನಡೆದುಕೊಂಡ ರೀತಿ ಎಲ್ಲವೂ ಲಕ್ಷ್ಮೀಯ ತಲೆಯಲ್ಲಿ ಪ್ರಶ್ನೆಗಳಾಗಿ ಕಾಡುತ್ತಿದೆ. ಹೀಗಾಗಿ ಅದಕ್ಕೆಲ್ಲಾ ಉತ್ತರವನ್ನು ವೈಷ್ಣವ್ ಬಳಿಯೇ ಪಡೆಯುವುದಕ್ಕೆ ಹೊರಟಿದ್ದಾಳೆ. ಮನೆಗೆ ಬಂದ ವೈಷ್ಣವ್ ಬಳಿ, ನಾನು ನಿಮ್ಮ ಫ್ರೆಂಡ್ ಎಂದುಕೊಂಡಿದ್ದ ಕೀರ್ತಿಯೇ ನಿಮ್ಮ ಹಳೆ ಪ್ರೀತಿನಾ ಎಂಬ ಪ್ರಶ್ನೆ ಇಟ್ಟಿದ್ದಾಳೆ. ಈಗ ವೈಷ್ಣವ್‌ಗೆ ಸತ್ಯ ಹೇಳಬೇಕಾ, ಸಮಾಧಾನ ಮಾಡಬೇಕಾ ಎಂಬುದು ತಿಳಿಯುತ್ತಿಲ್ಲ. ಸತ್ಯವನ್ನು ಇನ್ನಷ್ಟು ದಿನ ಮುಚ್ಚಿಡುವುದಕ್ಕೂ ಆಗುವುದಿಲ್ಲ. ಹೀಗಾಗಿ ಸತ್ಯ ಹೇಳಲೇಬೇಕಾಗಿದೆ.

More from Filmibeat

English summary
Colors Kannada serial Lakshmi Baramma written update on July 3rd episode. Here is the details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X