Lakshmi Baramma: ಕೀರ್ತಿಯಿಂದ ಕಾವೇರಿ ತಪ್ಪಿಸಿಕೊಳ್ಳೋದು ಸುಲಭ ಅಲ್ಲ.. ಆದ್ರೆ ವೈಷ್ಣವ್..?

By ಎಸ್ ಸುಮಂತ್

ಕೀರ್ತಿ, ವೈಷ್ಣವ್‌ನ ಬಿಡುವ ಮಾತೇ ಇಲ್ಲ. ಪ್ರೀತಿಯನ್ನು ಮುರಿದವಳು ಕಾವೇರಿ, ಹಾಗಾಗಿ ಕಾವೇರಿಯ ಹಿಂದೆಯೇ ಬಿದ್ದಿದ್ದಾಳೆ. ಮತ್ತೆ ವೈಷ್ಣವ್ ಪ್ರೀತಿ ಬೇಕು ಅಂತ ಬಯಸುತ್ತಿರೋ ಕೀರ್ತಿಗೆ ಎಲ್ಲವೂ ಉಲ್ಟಾ ಆಗ್ತಾ ಇದೆ. ಕಾವೇರಿ ಕೂಡ ಈಗ ಕೀರ್ತಿಗೆ ವಿರುದ್ಧವಾಗಿಯೇ ನಿಂತಿದ್ದಾಳೆ. ಏನಾದರೂ ಆಗಲಿ ನನ್ನ ಮಗ ನಿನಗೆ ಸಿಗುವುದಕ್ಕೆ ಬಿಡಲ್ಲ ಎಂಬ ಹಠ ಮಾಡಿದ್ದಾಳೆ.

ಈ ಕಡೆ ಲಕ್ಷ್ಮೀಯ ದೊಡ್ಡಪ್ಪನಿಗೆ ಅನುಮಾನ ಬಂದಿರುವುದನ್ನು ಸರಿ ಮಾಡುವುದಕ್ಕೆ ವೈಷ್ಣವ್ ಪ್ರಯತ್ನ ಮಾಡಿದ್ದಾನೆ. ದೊಡ್ಡಪ್ಪನಿಗೆ ಎಲ್ಲಾ ಸತ್ಯಾಂಶ ಹೇಳಿ, ತಪ್ಪೊಪ್ಪಿಗೆಯನ್ನು ಮಾಡಿಕೊಂಡಿದ್ದಾನೆ. ಮಹಾಲಕ್ಷ್ಮಿಯನ್ನು ಚೆನ್ನಾಗಿಯೇ ನೋಡಿಕೊಳ್ತೀನಿ ಅಂತ ಭರವಸೆ ಕೊಟ್ಟು ಕಳುಹಿಸಿದ್ದಾನೆ.

Lakshmi Baramma serial Written Update on July 4th episode

ದೊಡ್ಡಪ್ಪನಿಗೆ ಭರವಸೆ ಕೊಟ್ಟ ವೈಷ್ಣವ್

ದೊಡ್ಡಪ್ಪನಿಗೆ ಎಲ್ಲಾ ಸತ್ಯ ಗೊತ್ತಾಗಿದೆ. ವೈಷ್ಣವ್ ಬಾಯಿಯಿಂದಾನೇ ಸತ್ಯ ಹೊರ ಬಿದ್ದಿದೆ. ಎಲ್ಲಾ ಮುಚ್ಚಿಟ್ಟು ಮದುವೆ ಮಾಡಿಕೊಂಡಿದ್ದು ಅನ್ಯಾಯ ಅಲ್ವಾ ಎಂದು ಕೇಳಿದಾಗ, ವೈಷ್ಣವ್ ಮನಸಾರೆ ಕ್ಷಮೆ ಕೇಳಿದ್ದಾನೆ. ಲಕ್ಷ್ಮೀಗೆ ಎಲ್ಲಾ ಸತ್ಯವನ್ನು ಹೇಳಿಯೇ ಮದುವೆಯಾಗಿದ್ದೀನಿ. ಮಹಾಲಕ್ಷ್ಮಿಗೆ ಯಾವತ್ತೂ ಮೋಸ ಮಾಡಲ್ಲ ಅಂತ ಪ್ರಾಮಿಸ್ ಮಾಡಿದ್ದಾನೆ. ಅದರ ಭರವಸೆಯನ್ನೇ ನಂಬಿ ದೊಡ್ಡಪ್ಪ ಮನೆಗೆ ಹೊರಟಿದ್ದಾರೆ.

ಲಕ್ಷ್ಮೀ ಗೆ ಸತ್ಯ ತಿಳಿಯುತ್ತಾ?

ಲಕ್ಷ್ಮೀ ನಡೆದಿದ್ದೆಲ್ಲವನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಅದಕ್ಕೆ ಯೋಚನೆಯಲ್ಲಿ ಬಿದ್ದಿದ್ದಾಳೆ. ಅತ್ತೆಗೂ ಹೇಳಿಬಿಟ್ಟೆ, ಸುಪ್ರೀತಾಗೂ ಕೇಳಿಬಿಟ್ಟೆ. ಆದರೆ ವೈಷ್ಣವ್ ಬಳಿ‌ ಕೇಳೋದು ಹೇಗೆ ಅಂತ ಯೋಚನೆಯಲ್ಲಿ ಮುಳುಗಿದ್ದಾಳೆ. ನಡೆದ ಹಿಂದಿನ ಘಟನೆಯೆನ್ನೆಲ್ಲಾ ನೆನೆಸಿಕೊಂಡು ಕೊರಗುತ್ತಿದ್ದಾಳೆ. ಒಂದು ಕಡೆ ಕೀರ್ತಿಯೇ, ವೈಷ್ಣವ್ ಗರ್ಲ್ ಫ್ರೆಂಡ್ ಇರಬಹುದು ಎಂಬ ಅನುಮಾನ ಕಾಡುತ್ತಾ ಇದೆ. ಅದನ್ನು ತಿಳಿದುಕೊಳ್ಳುವುದು ಹೇಗೆ ಎಂಬ ಯೋಚನೆಯಲ್ಲಿ ಮುಳುಗಿದ್ದಾಳೆ. ಧೈರ್ಯ ಮಾಡಿ ವೈಷ್ಣವ್‌ನನ್ನೇನೋ ಕೇಳುತ್ತಾಳೆ. ಆದರೆ ವೈಷ್ಣವ್ ಸತ್ಯ ಹೇಳುವ ಧೈರ್ಯ ಮಾಡುತ್ತಾನಾ?

ಕೀರ್ತಿಗೆ ಕಾವೇರಿ ಅವಾಜ್

ಕೀರ್ತಿ ಮಾಡುತ್ತಿರುವ ಅವಾಂತರಕ್ಕೆ ಕಾವೇರಿ ರೋಸಿ ಹೋಗಿದ್ದಾಳೆ. ಇದನ್ನೆಲ್ಲ ತಡೆಯಲೇಬೇಕು ಎಂದು ನೇರವಾಗಿ ಕೀರ್ತಿಯನ್ನು ಹುಡುಕಿಕೊಂಡು ಮನೆಗೆ ಬಂದಿದ್ದಾಳೆ. ಕೀರ್ತಿ ಬಳಿ ಜೋರು ಜೋರಾಗಿ ಕಿರುಚಾಡಿದ್ದಾಳೆ‌. ನೀನಿ ಏನೇ ಮಾಡಿದರೂ ವೈಷ್ಣವ್ ನಿಂಗೆ ಸಿಗಲ್ಲ ಅಂತ ಅವಾಜ್ ಹಾಕಿದ್ದಾಳೆ. ಬಾಯಿಗೆ ಬಂದಂಗೆ ಹೆಗರಾಡಿದ ಕಾವೇರಿ, ಕೀರ್ತಿ ಮಾತನ್ನು ಕೇಳಿಸಿಕೊಳ್ಳುವ ತಾಳ್ಮೆ ತೋರದೆ ಮುಂದೆ ಸಾಗಿದ್ದಾಳೆ. ಇಷ್ಟು ದಿನ ಕೀರ್ತಿಗೆ ಹೆದರುತ್ತಿದ್ದ ಕಾವೇರಿ, ಇವತ್ತು ಯಾವುದಕ್ಕೂ ಹೆದರಲಿಲ್ಲ.

Lakshmi Baramma serial Written Update on July 4th episode

ಕೀರ್ತಿ ಕೊಟ್ಟ ಶಾಕ್‌ಗೆ ಕಾವೇರಿ ಗಾಬರಿ

ಆದ್ರೆ ಕಾವೇರಿಗೆ ತಾನೂ ಮಾಡಿದ ಮೋಸದ ವಿಚಾರದಲ್ಲಿ ಸಾಕ್ಷಿಗಳನ್ನು ಬಿಟ್ಟಿದ್ದೀನಿ ಎಂಬುದನ್ನು ಮರೆತಿದ್ದಾಳೆ. ಕೀರ್ತಿಗೆ ಮಾತನಾಡುವುದಕ್ಕೂ ಅವಕಾಶ ಕೊಡದೆ ಹೊರಟಾಗ, ಕೀರ್ತಿ ಒಂದೇ ಒಂದು ಆಡಿಯೋವನ್ನು ಪ್ಲೇ ಮಾಡಿದ್ದಾಳೆ. ಅದನ್ನು ಕೇಳಿದ ಕಾವೇರಿಯ ಎದೆ ಬಡಿತ ಜೋರಾಗಿದೆ. ಲಕ್ಷ್ಮೀಯನ್ನು ಮದುವೆ ಮಾಡಿಸಿದ ಬಳಿಕ ಡಿವೋರ್ಸ್ ಕೊಡಿಸಿ ನನ್ನ ವೈಷ್ಣವ್ ಮದುವೆ ಮಾಡಿಸಿಬಿಡಬೇಕು ಎಂಬ ಮಾತಿಗೆ ಕಾವೇರಿ ಓಕೆ ಅಂತ ಒಪ್ಪಿಕೊಂಡ ಆಡಿಯೋ ಅದಾಗಿತ್ತು. ಇದು ಮನೆಯವರಿಗೆ ತಲುಪಿದರೆ ಕಾವೇರಿ ಮಾಡಿದ್ದೆಲ್ಲವೂ ವ್ಯರ್ಥವಾಗುತ್ತದೆ. ಹೀಗಾಗಿಯೇ ಕೀರ್ತಿಯ ಬಲೆಗೆ ಆಗಾಗ ಬೀಳುತ್ತಲೇ ಇದ್ದಾಳೆ. ಈ ಕಡೆ ಮಗನೇ ಕೀರ್ತಿಯನ್ನು ದೂರ ತಳ್ಳಿದ್ದರು, ಹತ್ತಿರವಾಗುವುದಕ್ಕೆ ಕಾವೇರಿ ಅನುಮತಿ ನೀಡಿ ಕೆಟ್ಟವಳಾಗುತ್ತಿದ್ದಾಳೆ. ಈಗ ಕೀರ್ತಿ, ಕಾವೇರಿ ಬಳಿಯಿಂದ ಇನ್ಯಾವ ಡ್ರಾಮಾ ಆಡಿಸುತ್ತಾಳೋ ನೋಡಬೇಕಿದೆ.

More from Filmibeat

English summary
Colors Kannada Lakshmi Baramma serial Written Update on July 4th episode. Here is the details about Vaishnav blackmailing Keerthi episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X