Lakshmi Baramma: ಜ್ಯೋತಿಷಿ ಮಾತು ಕೇಳಿ ವೈಷ್ಣವ್ ಚಿಂತೆನೇ ಬಿಡ್ತಾಳಾ ಕೀರ್ತಿ..? ಕಾವೇರಿ ಪ್ಲ್ಯಾನ್ ಸಕ್ಸಸ್ ಆಯ್ತಾ?
ಕೀರ್ತಿಗೆ ಹೇಗಾದರೂ ಮಾಡಿ ವೈಷ್ಣವ್‌ನ ಪಡೆಯಲೇಬೇಕೆಂಬ ಹಂಬಲ. ಕಾವೇರಿ ನಾಟಕವಾಡಿದ್ದಾಳೆ ಎಂದು ಕಾರುಣ್ಯ ಹೇಳಿದ ಕೂಡಲೇ ಕೀರ್ತಿ ಸಿಕ್ಕಾಪಟ್ಟೆ ರೊಚ್ಚಿಗೆದ್ದಿದ್ದಾಳೆ. ಕಾವೇರಿಗೆ ಬುದ್ಧಿ ಕಲಿಸಬೇಕು ಅಂತ ಹೋಗಿ, ಕಾವೇರಿಗೆ ತಲೆ ನೋವು ತಂದಿದ್ದಳು. ಆದರೆ, ಈಗ ಕಾವೇರಿ ಬಲೆಗೆ ಬಿದ್ದಿದ್ದಾಳೆ.
ಕೀರ್ತಿಯಿಂದ ದೂರವಾಗಿ, ಲಕ್ಷ್ಮೀಯ ಜೊತೆಗೆ ಜೀವನ ಕಳೆಯುವುದಕ್ಕೆ ವೈಷ್ಣವ್ ಪ್ರಯತ್ನ ಪಡ್ತಾ ಇದ್ದಾನೆ. ಕೀರ್ತಿಯ ನಡವಳಿಕೆ ವೈಷ್ಣವ್‌ಗೆ ಇನ್ನಷ್ಟು ಅಸಹ್ಯ ಉಂಟು ಮಾಡಿದೆ. ಕೀರ್ತಿಯ ಮೇಲೆ ಪ್ರೀತಿ ಮುಂದುವರೆಯೋದಿರಲಿ, ಅವಳು ಹತ್ತಿರ ಬಂದರೂ ಸಹಿಸಿಕೊಳ್ಳುತ್ತಿಲ್ಲ. ಕೀರ್ತಿಯ ಪ್ರಯತ್ನ ಕೂಡ ಫಲ ಕೊಡಲ್ಲ.

ಲಕ್ಷ್ಮೀಯಿಂದ ಸತ್ಯ ಮುಚ್ಚಿಟ್ಟ ವೈಷ್ಣವ್
ಲಕ್ಷ್ಮೀಯ ಪ್ರಶ್ನೆಗೆ ವೈಷ್ಣವ್ ಸೈಲೆಂಟ್ ಆಗಿ ನಿಂತು ಬಿಟ್ಟಿದ್ದಾನೆ. ಸತ್ಯ ಹೇಳಬೇಕು ಅಂತ ವೈಷ್ಣವ್ ಅಂದುಕೊಂಡರೂ, ಏನಾದರೂ ಸಮಸ್ಯೆ ಆಗಬಹುದು ಎಂಬ ಊಹೆ ದೊಡ್ಡಪ್ಪನದ್ದು. ಹೀಗಾಗಿ ದೊಡ್ಡಪ್ಪ ಅದು ಕೀರ್ತಿ ಅಂತ ಹೇಳಲೇಬೇಡ ಎಂದು ಮಾತು ತೆಗೆದುಕೊಂಡಿದ್ದರು. ಹೀಗಾಗಿ ವೈಷ್ಣವ್, ಕೀರ್ತಿ ಅಲ್ಲ ಅಂತ ಸುಳ್ಳು ಹೇಳಿಬಿಟ್ಟ. ಆ ಸುಳ್ಳಿನಿಂದ ಲಕ್ಷ್ಮೀ ತುಂಬಾ ಖುಷಿಯಾದಳು. ಆದರೆ, ವೈಷ್ಣವ್‌ಗೆ ಇನ್ನು ಗೊಂದಲದ ವಾತಾವರಣವೇ ಇತ್ತು.
ವೈಷ್ಣವ್ ಜಾತಕ ಕೇಳಿ ಕೀರ್ತಿ ಶಾಕ್
ಕೀರ್ತಿ ಹೇಗಾದರೂ ಮಾಡಿ ವೈಷ್ಣವ್ ಜೊತೆಗೆ ಮದುವೆಯಾಗಬೇಕು. ಅದಕ್ಕೆಂದೇ ತನ್ನ ಕಡೆಯ ಜ್ಯೋತಿಷಿಯನ್ನು ಕರೆಸಿದ್ದಳು. ಕಾವೇರಿಯಿಂದ ಜಾತಕವನ್ನು ತರಿಸಿ ಕೇಳಿದಳು. ಆ ಜಾತಕದಲ್ಲಿ ವೈಷ್ಣವ್ ಆಯಸ್ಸು ಕಡಿಮೆ ಇದೆ. ಹೆಂಡತಿಯಾದವಳು ಹೆಚ್ಚು ವ್ರತ ಮಾಡಬೇಕು ಎಂದು ಹೇಳಿದರು. ಅದನ್ನು ಕೇಳಿದ ಕೀರ್ತಿ ಶಾಕ್ ಆಗಿದ್ದಾಳೆ. ಬೇರೆ ಏನಾದ್ರು ಪ್ರಶ್ನೆಗಳು ಇದೆಯಾ ಅಂತ ಕೇಳಿದರು ಕೀರ್ತಿಯ ಬಳಿ ಯಾವ ಪ್ರಶ್ನೆಗಳು ಇರಲಿಲ್ಲ. ಮೌನ ಮಾತ್ರ ಇತ್ತು. ಕಾವೇರಿಗೆ ಎಲ್ಲವೂ ಅರ್ಥವಾಗಿತ್ತು.
ಕಾವೇರಿಯಿಂದ ನಕಲಿ ಪ್ಲ್ಯಾನ್
ಕಾವೇರಿಗೆ ಗೊತ್ತಿತ್ತು ಮುಂದೆ ಏನೆಲ್ಲಾ ಸಮಸ್ಯೆ ಬರುತ್ತೆ ಅಂತ. ಅದಕ್ಕೆ ನಕಲಿ ಜಾತಕ ಮಾಡಿಸಿದ್ದಳು. ಜ್ಯೋತಿಷಿಗಳು ಅಲ್ಲಿಂದ ಹೋದ ಮೇಲೆ ಮನಸ್ಸಿನಲ್ಲಿಯೇ, ಆ ಜಾತಕದ ಬಗ್ಗೆ ನೆನೆಸಿಕೊಂಡು ನಕ್ಕಳು. ಕೀರ್ತಿಯನ್ನು ಯಾವುದೇ ಕಾರಣಕ್ಕೂ ನನ್ನ ಮನೆ ಸೊಸೆಯಾಗೋದಕ್ಕೆ ಬಿಡಲ್ಲ ಅಂತ ಹೊಸ ಪ್ಲ್ಯಾನ್ ಮಾಡಿದ್ದಳು.

ಕಾವೇರಿಯಷ್ಟೇ ಬುದ್ಧಿವಂತೆ ಕೀರ್ತಿ
ಈ ಕಡೆ ಕಾವೇರಿ ಮಗನನ್ನು ಉಳಿಸಿಕೊಳ್ಳುವುದಕ್ಕೆ ಮಾಸ್ಟರ್ ಪ್ಲ್ಯಾನ್ ಅನ್ನೇ ಮಾಡಿದ್ದಳು ಸತ್ಯ. ಆದರೆ, ಕೀರ್ತಿ ಇನ್ನು ಬುದ್ದಿವಂತೆ ಕಾವೇರಿ ಮಾತನಾಡುವ ಪ್ರತಿಯೊಂದು ಮಾತನ್ನು ರೆಕಾರ್ಡ್ ಮಾಡಿಟ್ಟುಕೊಂಡು, ಬ್ಲಾಕ್ ಮೇಲ್ ಮಾಡಲು ಶುರು ಮಾಡಿದಳು. ಇನ್ನು ಆರು ತಿಂಗಳು ಕಾಯ್ತೀನಿ. ಆದರೆ, ಒಂದು ಕಂಡೀಷನ್ ಇದೆ. ಯಾವುದೇ ಕಾರಣಕ್ಕೂ ವೈಷ್ಣವ್ ಮತ್ತು ಲಕ್ಷ್ಮೀ ಗಂಡ ಹೆಂಡತಿಯ ರೀತಿ ಇರಬಾರದು. ದೂರ ಇರುವಂತೆ ನೀವೇ ನೋಡಿಕೊಳ್ಳಬೇಕು. ಹನಿಮೂನ್ ಅಂತೆಲ್ಲಾ ಕಳುಹಿಸಬಾರದು ಅಂತ ಕೀರ್ತಿ ಕಂಡೀಷನ್ ಹಾಕಿದ್ದಾಳೆ. ಈಗ ವೈಷ್ಣವ್ ಹಾಗೂ ಲಕ್ಷ್ಮೀಯ ಮನಸ್ಥಿತಿ ಸರಿ ಇಲ್ಲ. ಹೀಗಾಗಿ ಸರಿ ಹೋಗಲಿ ಅಂತ ಮನೆಯವರೇ ಹನಿಮೂನ್ ಪ್ಲ್ಯಾನ್ ಮಾಡಿ ಕಳುಹಿಸಬಹುದು. ಇತ್ತ ಕೀರ್ತಿಯನ್ನು ಸಂಭಾಳಿಸುವುದು ಕಾವೇರಿಗೆ ಕಷ್ಟವೇನು ಅಲ್ಲ.


Click it and Unblock the Notifications











