Lakshmi Baramma: ಕಾವೇರಿ ಬದಲಾಗಲ್ಲ.. ವೈಷ್ಣವ್ ಕಾಯಲ್ಲ.. ಲಕ್ಷ್ಮೀ ಬದುಕು ಬದಲಾಗುತ್ತಾ?

By ಎಸ್ ಸುಮಂತ್

ಕೀರ್ತಿಯಿಂದ ಕಾಟ ತಪ್ಪಿತು ಅನ್ನುವಂಗೆ ಇಲ್ಲ. ಯಾವುದಾದರೊಂದು ರೂಪದಲ್ಲಿ ಮತ್ತೆ ಮತ್ತೆ ಕಶ್ಯಪ್ ಮನೆ ಮಂದಿಯನ್ನು ಕಾಡುವುದಕ್ಕೆ ಶುರು ಮಾಡುತ್ತಾಳೆ. ಜ್ಯೋತಿಷಿಗಳಿಂದ ಅದಾಗಲೇ ಪುಟ್ಟನಿಗೆ ದೋಷ ಇದೆ ಅಂತ ಕಾವೇರಿ ಹೇಳಿಸಿ ಆಯ್ತು. ಆದರೆ ಕೀರ್ತಿ ಆರು ತಿಂಗಳು ದೂರ ಇರುವುದಕ್ಕೆ ನಿರ್ಧರಿಸಿದಳೇ ವಿನಃ, ಆರು ತಿಂಗಳು ವೈಷ್ಣವ್‌ನ ಬಿಡ್ತೀನಿ ಅಂತಲ್ಲ.

ಕಾವೇರಿಯನ್ನ ಬ್ಲಾಕ್ ಮೇಲ್ ಮಾಡಿಕೊಂಡೆ ವೈಷ್ಣವ್ ಜೊತೆ ಸಮಯ ಕಳೆಯುವುದಕ್ಕೆ ಹೊರಟಿದ್ದಾಳೆ. ಅದೇನೆ ಬ್ಲಾಕ್ ಮೇಲ್ ಮಾಡಿದ್ರು, ವೈಷ್ಣವ್ ಮನಸ್ಸು ಬದಲಾಗಿ ಆಗಿದೆ. ಮಾವನಿಗೆ ಮಾತು ಕೊಟ್ಟಿದ್ದಾನೆ. ಹಳೆಯ ಪ್ರೀತಿ ಬರಲ್ಲ, ಲಕ್ಷ್ಮೀಗೆ ಅನ್ಯಾಯವಾಗಲ್ಲ ಅಂದಿದ್ದಾನೆ. ಹೀಗಾಗಿ ಕಾವೇರಿ - ಕೀರ್ತಿ ಆ ಕಡೆ ಪ್ಲ್ಯಾನ್ ಮಾಡ್ತಾ ಇದ್ರೆ, ಈ ಕಡೆ ಹೊಸ ದಂಪತಿ ನಡುವೆ ಪ್ರೀತಿ ಚಿಗುರುವ ಸಮಯ ಬಂದಿದೆ.

 Lakshmi Baramma serial Written Update on July 7th episode

ಕಾವೇರಿ ಬಳಿ ಮತ್ತೆ ಡಿಮ್ಯಾಂಡ್

ವೈಷ್ಣವ್ ಹಿಂದೆ ಮುಂದೆ ಸುತ್ತುವುದೇ ಕೀರ್ತಿಯ ಕೆಲಸ. ಅದಕ್ಕೆ ಸಹಾಯ ಬೇಕೆಂದರೆ ಕಾವೇರಿಯಿಂದ ಸುಲಭ. ಹೀಗಾಗಿಯೇ ವೈಷ್ಣವ್ ಇವತ್ತಿನ ಪ್ಲ್ಯಾನ್ ತಿಳಿದುಕೊಂಡು ಕೀರ್ತಿ ನೇರವಾಗಿ ಕಾವೇರಿಗೆ ಕಾಲ್ ಮಾಡಿದ್ದಾಳೆ. ಜ್ಯುವೆಲ್ಲರಿ ಶಾಪ್ ಉದ್ಘಾಟನೆಗೆ ನಿಮ್ಮ ಮಗ ಹೋಗ್ತಿದ್ದಾನೆ. ಸೋ, ನಾನು ಅಲ್ಲಿಗೆ ಹೋಗಲೇಬೇಕೆಂಬ ಡಿಮ್ಯಾಂಡ್ ಇಟ್ಟಿದ್ದಾಳೆ. ಕಾವೇರಿಗೆ ಬೇರೆ ದಾರಿ ಇಲ್ಲದೆ ಒಪ್ಪಿಕೊಂಡಿದ್ದಾಳೆ.

ಸತ್ಯದ ಹಿಂದೆ ಬಿದ್ದ ಸುಪ್ರೀತಾ

ಕೀರ್ತಿ ಎರಡು ಸಲ ಕಾಲ್ ಮಾಡಿದರೂ ಮೂರನೇ ಬಾರಿ ರಿಸೀವ್ ಮಾಡಿದ್ದಾಳೆ ಕಾವೇರಿ. ಅದರಲ್ಲೂ ಮನೆಯಲ್ಲಿ ಯಾರು ಇಲ್ಲದ ಜಾಗಕ್ಕೆ ಬಂದು ನಿಂತು. ಇದನ್ನೆಲ್ಲಾ ನೋಡಿದ ಸುಪ್ರೀತಾಗೆ ಅನುಮಾನ ಬಂದು ಫಾಲೋ ಮಾಡಿದ್ದಾಳೆ. ಏನೋ ಸತ್ಯ ಅಡಗಿದೆ ಅನ್ನೋದಂತು ಗೊತ್ತಾಗಿದೆ. ಕೀರ್ತಿ ತಾನೂ ಹೋಗಬೇಕು ಎಂಬ ಜಾಗಕ್ಕೆ ಲಕ್ಷ್ಮೀಯನ್ಮು ಕಳುಹಿಸಿದರೆ ಅಲ್ಲಿ ಬೆಂಕಿ ಹೊತ್ತಿಕೊಂಡು, ಆ ಬೆಂಕಿಯ ಘಾಟಿನಿಂದ ಸತ್ಯ ಹೊರ ಬರುತ್ತೆ ಅಂತ ಸುಪ್ರೀತಾ ಹೊಸ ಪ್ಲ್ಯಾನ್ ಮಾಡಿದ್ದಾಳೆ.

ಅಮ್ಮ ಅಲ್ಲ ಈಗ ಹೆಂಡತಿ

ಈ ಕಡೆ ವೈಷ್ಣವ್ ರೆಡಿಯಾಗಿ ಹೊರಡಬೇಕು ಎನ್ನುವಷ್ಟರಲ್ಲಿ ಕಾವೇರಿ ಎಂಟ್ರಿಯಾಗಿದೆ. ಫಾರ್ಮಲ್ ಶರ್ಟ್ ನೋಡಿ ಚೆನ್ನಾಗಿಲ್ಲ ಅಂದಿದ್ದಾಳೆ. ಆದರೆ, ವೈಷ್ಣವ್ ಮಾತ್ರ ಆ ಶರ್ಟ್ ಅನ್ನು ಬದಲಾಯಿಸುವುದಕ್ಕೆ ರೆಡಿ ಇಲ್ಲ. ಅಮ್ಮನಿಗೂ ತಿಳಿ ಹೇಳಿದ್ದಾನೆ. ಇದು ಮಹಾಲಕ್ಷ್ಮಿ ಆಯ್ಕೆ ಮಾಡಿದ ಶರ್ಟ್. ನಂಗು ಜಾಕೆಟ್ ಹಾಕಿ ಹಾಕಿ ಬೇಜಾರಾಗಿದೆ. ಇದೆ ಇರಲಿ ಅಮ್ಮ ಎಂದಿದ್ದಾನೆ. ಸೊಸೆ ಮುಂದೆ ನಗುತ್ತಾ ಮಾತನಾಡುವ ಕಾವೇರಿ, ಮಗನ ಮಾತು ಕೇಳಿ ಮತ್ತೆ ಉರಿದುಕೊಂಡಿದ್ದಾಳೆ.

 Lakshmi Baramma serial Written Update on July 7th episode

ಗಂಡನ ಮಾತು ಕೇಳಿ ಖುಷಿಯಾದ ಲಕ್ಷ್ಮೀ

ವೈಷ್ಣವ್ ತಾನು ಕೊಟ್ಟ ಶರ್ಟ್ ಹಾಕಿಕೊಂಡಿದ್ದನ್ನು ನೋಡಿ ಲಕ್ಷ್ಮೀ ಖುಷಿಯಾಗಿದ್ದಾಳೆ. ಅಷ್ಟೇ ಅಲ್ಲ, ಅವ್ರು ಹಳೇ ಪ್ರೀತಿ ಮರೆಯುತ್ತಿದ್ದಾರೆ. ನಾನು ಬದಲಾಗಬೇಕು. ಇನ್ಮುಂದೆ ಫ್ರೆಂಡ್ ಅಲ್ಲ ಹೆಂಡತಿಯಂತೆ ನಡೆದುಕೊಳ್ಳಬೇಕು ಎಂದು ಹೊರಟಿದ್ದಾಳೆ. ಆದ್ರೆ ಮಧ್ಯ ಕಾವೇರಿ ಎಂಟ್ರಿಯಾಗಿದೆ. ನೀರನ್ನ ಕಾವೇರಿಯೇ ಕೊಟ್ಟರು, ವೈಷ್ಣವ್ ಮಾತು ಲಕ್ಷ್ಮೀಯ ಖುಷಿಯನ್ನು ಇನ್ನಷ್ಟು ಜಾಸ್ತಿ ಮಾಡಿದೆ. ಹಾಗೇ ಖುಷಿಯಲ್ಲಿ ತೇಲುತ್ತಾ ಹೋಗಿ ವಿಧಿಗೆ ಡಿಕ್ಕಿ ಹೊಡೆದಿದ್ದಾಳೆ.

More from Filmibeat

English summary
colors kannada lakshmibaramma serial Written Update on July 7th episode. Here is the details Lakshmi fall in love with Vaishnav.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X