Lakshmi Baramma: ಕೀರ್ತಿಯಿಂದ ಕಾವೇರಿಕೆ ಕಂಟಕ ತಪ್ಪಿದ್ದಲ್ಲ.. ಬಯಸಿ ನೋವು ತಂದುಕೊಂಡ ವೈಷ್ಣವ್ ಮಾಜಿ ಪ್ರೇಮಿ..!

By ಎಸ್ ಸುಮಂತ್

ಕೀರ್ತಿಯ ನೋವು ಪ್ರೇಕ್ಷಕರಿಗೂ ಅರ್ಥವಾಗುತ್ತೆ. ಆದರೆ ಲಕ್ಷ್ಮೀಗೆ ಅನ್ಯಾಯವಾಗುವುದನ್ನು ಯಾವುದೇ ಕಾರಣಕ್ಕೂ ಪ್ರೇಕ್ಷಕರು ಸಹಿಸುವುದಿಲ್ಲ. ಹೀಗಾಗಿಯೇ ಕೀರ್ತಿ ಪದೇ ಪದೇ ವೈಷ್ಣವ್ ಬಳಿ ಬಂದಾಗಲೂ, ಪ್ರೇಕ್ಷಕರು ಹೇಳೋದು, ಲಕ್ಷ್ಮೀಗೆ ನ್ಯಾಯ ಸಿಗಬೇಕು ಎಂಬುದು.

ಲಕ್ಷ್ಮೀ ಕೂಡ ಈಗ ಬದಲಾಗುತ್ತಿದ್ದಾಳೆ. ಗಂಡನ ವಿಚಾರಕ್ಕೆ ಯಾರು ಬರುವಂತೆ ಇಲ್ಲ. ಫ್ರೆಂಡ್ ಆಗಿ, ಎಷ್ಟು ಕ್ಲೋಸ್ ಆಗಿ ಬೇಕಾದರೂ ಇರ್ಲಿ, ಆದ್ರೆ ಗಂಡನನ್ನು ಮಾತ್ರ ಯಾರು ಟಚ್ ಮಾಡಬಾರದು. ಇವತ್ತು ಕೀರ್ತಿಗೆ ಅದರ ಅನುಭವ ಆಗಿದೆ. ಲಕ್ಷ್ಮೀಯನ್ನು ಗಂಡನ ವಿಚಾರದಲ್ಲಿ ಕೆಣಕಿದರೆ ಏನಾಗುತ್ತೆ ಅನ್ನೋದನ್ನ ತೋರಿಸಿ ಆಗಿದೆ. ಇನ್ನು ಕೀರ್ತಿಯೇ ಬುದ್ದಿ ಕಲಿಯಬೇಕಿದೆ.

Lakshmi Baramma serial Written Update on July 8th episode

3 ತಿಂಗಳ ವಾರ್ಷಿಕೋತ್ಸವದ ಸಂಭ್ರಮ

ಕಶ್ಯಪ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ವೈಷ್ಣವ್ ಮತ್ತು ಲಕ್ಷ್ಮೀ ಮದುವೆಯಾಗಿ ಮೂರು ತಿಂಗಳು ತುಂಬಿದೆ. ಇದೆ ಖುಷಿಯನ್ನು ಸೆಲೆಬ್ರೆಟ್ ಮಾಡುವುದಕ್ಕೆ ಮನೆಯವರೆಲ್ಲಾ ಸಿದ್ಧವಾಗಿದ್ದಾರೆ. ಆದರೆಮ ಇದು ವೈಷ್ಣವ್‌ಗೆ ಗೊತ್ತಿಲ್ಲ. ಎಲ್ಲರೂ ಪ್ಲ್ಯಾನ್ ಮಾಡಿ, ಸೆಲೆಬ್ರೆಟ್ ಮಾಡೋದಕ್ಕೆ ರೆಡಿಯಾಗಿದ್ದಾರೆ. ಗಂಡ ಹೆಂಡತಿಗೋಸ್ಕರ ಇಡೀ ಮನೆ ಮಂದಿ ಕೂತು ಸಿದ್ಧತೆ ಮಾಡಿಕೊಂಡಿದ್ದಾರೆ. ಕಾವೇರಿಗೂ ಈ ಮಧ್ಯೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಲ್ಲಾ ನೆನಪಿರುತ್ತೆ, ಇದು ಮಾತ್ರ ನೆನಪಾಗಲ್ವಾ ಎಂದಿದ್ದಾರೆ.

ಪ್ಲ್ಯಾನ್ ನಡುವೆ ಮನೆಗೆ ಬಂದಳು ಕೀರ್ತಿ

ವೈಷ್ಣವ್‌ಗೆ ಇವತ್ತು ಜ್ಯುವೆಲ್ಲರಿ ಶಾಪ್ ಉದ್ಘಾಟನೆ ಕಾರ್ಯಕ್ರಮದ ಗೆಸ್ಟ್ ಆಗಿ ಕರೆದಿದ್ದರು. ಹೋಗುವ ಕಾರ್ಯಕ್ರಮ ರದ್ದು ಮಾಡಿ, ಮದುವೆ ವಾರ್ಷಿಕೋತ್ಸವ ಆಚರಿಸಬೇಕು ಎಂಬುದು ಮನೆಯವರ ಒತ್ತಾಯವಾಗಿತ್ತು. ಅದರ ಚರ್ಚೆ ನಡೆಯುವಾಗಲೇ ಎಂಟ್ರಿಯಾಗಿದ್ದು ಕೀರ್ತಿ. ಪ್ರೋಗ್ರಾಂಗೆ ಹೋಗಬೇಡ ಅಂತ ಹೇಗೆ ಹೇಳ್ತೀರ. ಇಬ್ಬರು ಕಾರ್ಯಕ್ರಮಕ್ಕೆ ಹೋಗಲೇಬೇಕೆಂದು ಒತ್ತಡ ಏರಿದಳು. ಇದನ್ನು ಕಂಡು ಮನೆಯವರಿಗೆಲ್ಲಾ ಕೋಪ ಬಂದಿದೆ. ಸುಪ್ರೀತಾ, ಮನೆಯವರ ಪರ ನಿಂತಳು. ಅಲ್ಲಿಯೇ ಯುದ್ಧದ ವಾತಾವರಣವೇ ಶುರುವಾಗಿತ್ತು.

ಕೀರ್ತಿ ಪರ ನಿಂತ ಕಾವೇರಿ

ಈ ಕಡೆ ಕೀರ್ತಿ ಪದೇ ಪದೇ ಕಾವೇರಿ ಆಂಟಿ ಕಾವೇರಿ ಆಂಟಿ ಅಂತಿದ್ಲು. ಕಾವೇರಿ ಕೂಡ ಕೀರ್ತಿಯ ಪರವಾಗಿ ನಿಂತಿದ್ದಾಳೆ. ಪುಟ್ಟ ಕಾರ್ಯಕ್ರಮಕ್ಕೆ ಹೋಗಿ ಬರಲಿ. ಮೊದಲೇ ಬುಕ್ ಆಗಿದೆ. ಈಗ ಆಗಲ್ಲ ಅಂದ್ರೆ ಹೇಗೆ. ಅವನು ಹೋಗಿ ಬರಲಿ ಅಂತ ವಾದ ಮಾಡಿದ್ದಾಳೆ. ಇದರ‌ ಮಧ್ಯೆ ಸುಪ್ರೀತಾ ಮನೆಯವರ ಪರ ವಾದ ಮಾಡಿದಳು. ಆಗ ಕಾವೇರಿಯ ಪಿತ್ತ ನೆತ್ತಿಗೇರಿದೆ. ಸುಪ್ರೀತಾಳನ್ನ ತರಾಟೆಗೆ ತೆಗೆದುಕೊಂಡಿದ್ದಾಳೆ. ಇದು ಮನೆಯವರಿಗೆ ಇಷ್ಟವಾಗಲಿಲ್ಲ. ಕಾವೇರಿಗೆ ಮನೆಯವರೆಲ್ಲಾ ಬುದ್ದಿ ಹೇಳಿದ್ದಾರೆ.

Lakshmi Baramma serial Written Update on July 8th episode

ಹೆಂಡತಿಯ ಅನುಮತಿ ಕೇಳಿದ ವೈಷ್ಣವ್

ಇಷ್ಟೆಲ್ಲ ಆದ ಮೇಲೆ ಕಾವೇರಿ ಸಾಫ್ಟ್ ಆಗಿದ್ದಾಳೆ. ಎಲ್ಲರೂ ನನ್ನ ಮೇಲೆ ಮುಗಿಬೀಳೋದು ಯಾಕೆ. ನಾನು ಹೇಳಿದ್ದರಲ್ಲಿ ತಪ್ಪೇನಿದೆ. ಮೊದಲೇ ಕಾರ್ಯಕ್ರಮ ಫಿಕ್ಸ್ ಆಗಿದೆ. ಹೀಗಾಗಿ ನಾನು ಹೇಳಿದೆ. ಆಯ್ತು ಪುಟ್ಟ ನಿನ್ನ ನಿರ್ಧಾರ ಏನು. ನೀನೇ ಹೇಳು ಏನು ಮಾಡಬೇಕು ಅಂತ ಅಂದಾಗ, ಅದಕ್ಕೂ ಕೀರ್ತಿ ಕೋಪ ಮಾಡಿಕೊಂಡಿದ್ದಾಳೆ. ಆಗ ವೈಷ್ಣವ್ ನೇರವಾಗಿ ಲಕ್ಷ್ಮೀ ಬಳಿ ಸಲಹೆ ಕೇಳಿದ್ದಾನೆ. ಹೆಂಡತಿ ಹೇಗೆ ಹೇಳುತ್ತಾಳೋ ಹಾಗೇ ಎಂದಿದ್ದಾನೆ. ಇದು ಮನೆಯವರಿಗೆಲ್ಲಾ ಖುಷಿ ಕೊಟ್ಟಿದೆ. ಲಕ್ಷ್ಮೀ ಆಯ್ಕೆ ಮಾಡಿದ್ದು ಮೊದಲು ದೇವಸ್ಥಾನ, ಆಮೇಲೆ ಕಾರ್ಯಕ್ರಮ ಅಂತ. ಅದೇ ಪ್ಲ್ಯಾನ್ ನಲ್ಲಿ ಕೀರ್ತಿಯನ್ನು ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ವೈಷ್ಣವ್ ಮತ್ತು ಕೀರ್ತಿಯ ರೋಮ್ಯಾಂಟಿಕ್ ಸೀನ್ ನೋಡುವ ಕೆಲಸ ಕೀರ್ತಿಯದ್ದಾಗಿದೆ.

More from Filmibeat

English summary
colors kannada lakshmibaramma serial Written Update on July 8th episode. Here is the details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X