Lakshmi Baramma: ಕಾವೇರಿನ ಕೀರ್ತಿಯಿಂದಾನೇ ಸೋಲಿಸೋದಕ್ಕೆ ಆಗ್ಲಿಲ್ಲ.. ಇನ್ನು ಪೂಜಾಳಿಂದ ಸಾಧ್ಯವಾಗುತ್ತಾ ?
ಕಾವೇರಿ ತನ್ನ ಹಠ ಸಾಧಿಸೋದಕ್ಕೋಸ್ಕರ ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತಾಳೆ. ಅದು ಈಗಾಗಲೇ ಗೊತ್ತಾಗಿದೆ. ಮಗ ಪ್ರೀತಿ ಮಾಡುತ್ತಿದ್ದ ಕೀರ್ತಿಯನ್ನೇ ಸಲೀಸಾಗಿ ದೂರ ಮಾಡಿದ ಕಾವೇರಿ, ಇನ್ನು ಬೇರೆಯವರಿಂದ ಸಿಕ್ಕಿ ಬೀಳುವುದಕ್ಕೆ ಸಾಧ್ಯನಾ. ಎಲ್ಲೂ ತಾನೂ ಸಿಕ್ಕಿ ಬೀಳಬಾರದು ಅಂತ ಕಾವೇರಿ ತುಂಬಾ ಚೆನ್ನಾಗಿ ಪ್ಲ್ಯಾನ್ ಹೆಣೆದಿದ್ದಾಳೆ.
ಕೀರ್ತಿ ಮತ್ತೆ ಕಾರುಣ್ಯ ಅದಾಗಲೇ ಕಾವೇರಿಯನ್ನು ಸಿಕ್ಕಿ ಹಾಕಿಸುವ ಪ್ಲ್ಯಾನ್ ಮಾಡಿ ಫೇಲ್ಯೂರ್ ಆಗಿದ್ದಾರೆ. ಗೊತ್ತಿರುವ ಸತ್ಯಾಂಶವನ್ನು ಹೇಳುವುದಕ್ಕೆ ಆಗದೆ ಕೀರ್ತಿ ಲಾಕ್ ಆಗಿದ್ದಾಳೆ. ಹೀಗಿರುವಾಗ, ಕಾವೇರಿಯನ್ನು ಪೂಜಾ ಅಲ್ಲಾಡಿಸುವುದಕ್ಕೆ ಅದೇಗೆ ಸಾಧ್ಯ. ಉತ್ಸಾಹದಿಂದ ಬಂದ ಪೂಜಾ, ಕಾವೇರಿ ಮುಂದೆ ಠುಸ್ ಪಟಾಕಿಯಾಗಿದ್ದಾಳೆ.

ವೈಷ್ಣವ್ ಹಳೇ ಪ್ರೀತಿ ಹೇಳಲು ಹೊರಟ ಪೂಜಾ
ಪೂಜಾ ಕಾಲೇಜಿಗೆ ಹೋಗುತ್ತಿಲ್ಲ ಎಂದು ಗೊತ್ತಾದ ಬಳಿಕ ಲಕ್ಷ್ಮೀ ಮನೆಗೆ ಬಂದು ಕ್ಲಾಸ್ ತೆಗೆದುಕೊಂಡಿದ್ದಾಳೆ. ಅಂಗಡಿಯನ್ನು ಅವಳ ಹೆಸರಿಗೆ ಮಾಡಿಕೊಟ್ಟು, ಇನ್ಮುಂದೆ ಅಂಗಡಿಯಲ್ಲಿ ಕೂರಬೇಕು ಎಂದಿದ್ದೇ ತಡ, ರಾದ್ಧಾಂತ ಮಾಡಿದ್ದಾಳೆ. ವೈಷ್ಣವ್ ಮತ್ತು ಪೂಜಾ ನಡುವಿನ ಹಳೇ ಲವ್ ಸ್ಟೋರಿ ಹೇಳಿದ್ದಾಳೆ. ಎಲ್ಲರೂ ಮತ್ತೆ ಕ್ಲಾಸ್ ತೆಗೆದುಕೊಂಡ ಮೇಲೆ, ಪೂಜಾ ಸಾಕ್ಷಿ ಸಮೇತ ವಿಡಿಯೋ ತೋರಿಸಿದ್ದಾಳೆ. ಪೂಜಾ ಕೊಟ್ಟ ಸಾಕ್ಷಿಗೆ ಒಂದು ಕ್ಷಣ ಲಕ್ಷ್ಮೀ ಮತ್ತೆ ದೊಡ್ಡಪ್ಪ ಶಾಕ್ ಆಗಿದ್ದಾರೆ.
ಮೊದಲೇ ಫಿಕ್ಸ್ ಮಾಡಿದ್ದ ಕಾವೇರಿ
ಆದ್ರೆ, ಪೂಜಾಳಿಗೆ ಕಾವೇರಿಯ ಮುಂದಾಲೋಚನೆ ಗೊತ್ತಿರಲಿಲ್ಲ. ಮನೆಯವರೆಲ್ಲರಿಗೂ ಇದು ಸುಳ್ಳು ಎಂದು ಪ್ರೂವ್ ಮಾಡುವುದಕ್ಕೆ ಈ ಮೊದಲೇ ಸ್ಟುಡಿಯೋದಲ್ಲಿ ಎಲ್ಲಾ ಸೆಟಪ್ ಮಾಡಿಟ್ಟು ಬಂದಿದ್ದಳು. ಯಾವಾಗಲೇ ಕಾಲ್ ಮಾಡಿದರೂ ಅದು ಆಲ್ಬಂ ಸಾಂಗ್‌ಗೋಸ್ಕರ ಮಾಡಿರುವುದು ಅಂತ ಹೇಳಬೇಕು ಎಂದು ಹೇಳಿ ಬಂದಿದ್ದಳು. ಅದರಂತೆ ಕಾಲ್ ಮಾಡಿದಾಗ, ಅಲ್ಲಿನ ಸಿಬ್ಬಂದಿ ಅದೇ ಮಾತನ್ನು ಹೇಳಿದ್ದಾಳೆ. ಇದನ್ನು ಕೇಳಿಸಿಕೊಂಡ ಮನೆಯವರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಪೂಜಾಳದ್ದು ಮತ್ತದೇ ಹಠ. ನಾನು ಇದನ್ನೆಲ್ಲಾ ನಂಬಲ್ಲ ಅಂತ.
ಲಕ್ಷ್ಮೀಗೆ ಉತ್ತರ ಕೊಡಲಾಗದ ಸ್ಥಿತಿ
ಪೂಜಾ ಹಠ ಮಾಡುವಾಗ, ಕಾವೇರಿಯಿಂದ ಸ್ಟ್ರಾಂಗ್ ಆದ ಎಚ್ಚರಿಕೆ ಬಂದಿದೆ. ನೀನು ನಂಬದೆ ಇದ್ದರೆ ಅಲ್ಲೆ ಇರಲಿ. ನಾವೂ ಬಂದಿದ್ದು ನಿನ್ನ ಕಾಲೇಜು ವಿಚಾರ ಮಾತನಾಡುವುದಕ್ಕೋಸ್ಕರ. ನೀನು ಸ್ಟುಡಿಯೋಗೆ ಹೋಗಿದ್ದು ಗೊತ್ತಿಲ್ಲ. ನಿನ್ ಹತ್ರ ವಿಡಿಯೋ ಇರೋದು ಗೊತ್ತಿಲ್ಲ. ನೀನ್ಯಾಕೆ ಸ್ಟುಡಿಯೋಗೆ ಹೋಗಿದ್ದೆ ಎಂಬ ಪ್ರಶ್ನೆಗೆ ಪೂಜಾಳ ಬಳಿ ಉತ್ತರವಿಲ್ಲ. ಮತ್ತದೇ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದಾಗ ಲಕ್ಷ್ಮೀ, ಮಧ್ಯೇ ಪ್ರವೇಶಿಸಿದ್ದಾಳೆ. ಅತ್ತೆ, ಕೇಳೋದು ಅಲ್ಲ. ಈಗ ನಾನು ಕೇಳ್ತೇನೆ ಉತ್ತರ ಹೇಳು. ನೀನ್ಯಾಕೆ ಸ್ಟುಡಿಯೋಗೆ ಹೋಗಿದ್ದೆ ಎಂದಾಗ ಪೂಜಾ ಸೈಲೆಂಟ್ ಆಗಿದ್ದಾಳೆ.

ಅಪ್ಪನಿಂದ ತಿಳೀತು ಸತ್ಯ
ಪೂಜಾಳ ಮೌನಕ್ಕೆ ದೊಡ್ಡಪ್ಪ ಉತ್ತರ ನೀಡಿದ್ದಾರೆ. ಹೇಳಮ್ಮ ಪೂಜಾ, ವೈಷ್ಣವ್ ಹತ್ರ ಒಂದು ಲಕ್ಷ ತೆಗೆದುಕೊಳ್ಳುವುದಕ್ಕೆ ಹೋಗಿದ್ದೆ ಅಂತ. ನೀನು ಮೊಬೈಲ್ ಅಷ್ಟು ದುಬಾರಿ ತೆಗೆದುಕೊಂಡಾಗಲೇ ಗೊತ್ತಾಯ್ತು. ಆಮೇಲೆ ಬ್ಯಾಂಕ್ ಅಕೌಂಟ್ ಚೆಕ್ ಮಾಡಿದಾಗ ಗೊತ್ತಾಯ್ತು ಎಂದಾಗ ಲಕ್ಷ್ಮೀ ಮತ್ತು ಕಾವೇರಿ ಫುಲ್ ಶಾಕ್ ಆಗಿದ್ದಾರೆ. ಪೂಜಾಳ ಎಡವಟ್ಟಿನಿಂದಾಗಿ ಬರ್ತಿದ್ದಂತ ಹಣ ಮಿಸ್ಸಾಯ್ತಲ್ಲ ಅಂತ ನೊಂದುಕೊಂಡಿದ್ದಾಳೆ.


Click it and Unblock the Notifications











