Lakshmi Baramma: ಲಕ್ಷ್ಮೀಗೆ ಅನ್ಯಾಯವಾಗಬಾರದು ಅಂದುಕೊಳ್ಳುವ ವೈಷ್ಣವ್‌ಗೆ ನೆಮ್ಮದಿಯೇ ಇಲ್ಲದಂತಾಗಿದೆ!
ವೈಷ್ಣವ್ ಎಲ್ಲಾ ಮರೆತು ಮತ್ತೆ ಹೊಸ ಜೀವನವನ್ನು ಶುರು ಮಾಡುವುದಕ್ಕೆ ಹೊರಟಿದ್ದಾನೆ. ಪ್ರೀತಿ ಕಡಿದುಕೊಳ್ಳುವುದಕ್ಕೆ ಅಮ್ಮನ ಸ್ವಾರ್ಥ ಕಾರಣವಾಯ್ತು. ಈಗ ಮತ್ತೆ ಅದೇ ಪ್ರೀತಿ ಹಿಂದೆ ಬಿದ್ದಿದೆ. ಒಂದು ಕಡೆ ಲಕ್ಷ್ಮೀಯ ಜವಾಬ್ದಾರಿ, ಹಳೇ ಪ್ರೀತಿ ವಕ್ಕರಿಸಿ ಬರುತ್ತಿರುವಾಗ ವೈಷ್ಣವ್ ತಲೆ ಕೆಟ್ಟಿ ಹೋಗಿದೆ.
ಅಮ್ಮನ ಮೇಲೆ ಅನುಮಾನ ಬಂದಿದೆ. ಕೇಳಿದರೂ ಉತ್ತರ ಸಿಗುತ್ತಿಲ್ಲ. ಹೀಗಾಗಿಯೇ ತಲೆಕೆಡಿಸಿಕೊಂಡು ಕೂತಿದ್ದಾನೆ. ಕಾವೇರಿ ಅಂತು ಮಗನ ಭವಿಷ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಮಗ-ಸೊಸೆ ಏನೇ ಆದರೂ ಸರಿ, ಜೊತೆಗೆ ಇಲ್ಲದೆ ಇದ್ದರು ಸರಿ, ನನ್ನ ಬಿಟ್ಟು ಹೋಗಬಾರದು, ನನ್ನ ಮಾತು ಮಾತ್ರ ನಡೆಯಬೇಕು ಎಂಬ ಆಸೆ ಅವಳದ್ದು.

ಅತ್ತೆಯ ನಡೆಗೆ ಲಕ್ಷ್ಮೀ ನಿರಾಳ
ಲಕ್ಷ್ಮೀಗೆ ತವರಿನ ಮನೆಯ ದೊಡ್ಡ ಚಿಂತೆಯಾಗಿತ್ತು. ಗಂಡನ ಮನೆಯನ್ನು ಸಂಭಾಳಿಸಿ, ತವರು ಮನೆಗೆ ಹೋಗಬೇಕಿತ್ತು. ಆದರೆ ಈಗ ಕಾವೇರಿಯೇ ತನ್ನ ಸೊಸೆ ಪರ ನಿಂತಿದ್ದಾಳೆ. ತವರಿನ ಚಿಂತೆಯನ್ನೆಲ್ಲ ದೂರ ಮಾಡಿದ್ದಾಳೆ. ಪೂಜಾಳ ಬಂಡವಾಳ ಬಯಲು ಮಾಡಿದ ಕಾವೇರಿ, ಪೂಜಾನೇ ಅಂಗಡಿಯಲ್ಲಿ ಕೂರುವಂತೆ ಮಾಡಿದ್ದಾಳೆ. ಹೀಗಾಗಿ ಕಾವೇರಿಯಿಂದ ಲಕ್ಷ್ಮಿಗೆ ನಿರಾಳ ಆಗಿದ್ದು ಅತ್ತೆಯನ್ನು ಹಾಡಿ ಹೊಗಳಿದ್ದಾಳೆ. ಅತ್ತೆಯಿಂದ ತವರು ಮನೆ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಅಂತಾನೇ ಲಕ್ಷ್ಮಿ ನಂಬಿದ್ದಾಳೆ.
ಸುಪ್ರೀತಾಗೂ ಟಾಂಗ್ ಕೊಟ್ಟ ಕಾವೇರಿ
ಕಾವೇರಿ ಎಲ್ಲಿ ತನ್ನ ಆಟವನ್ನು ಆಡಬೇಕು, ತನಗೆ ಎಲ್ಲಿ ಲಾಭ ಮಾಡಿಕೊಳ್ಳಬೇಕು ಅಲ್ಲಿ ಮಾಡಿಕೊಂಡಿದ್ದಾಳೆ. ಆದರೆ ಇದು ಲಕ್ಷ್ಮಿಗೆ ಗೊತ್ತಾಗಿಲ್ಲ. ಮನೆಗೆ ಅತ್ತೆ ಜೊತೆ ನಗುನಗುತ್ತಾ ಬಂದ ಸೊಸೆಯನ್ನ ಕಂಡು ಸುಪ್ರೀತಾಗೆ ಅನುಮಾನ ಬಂದಿದೆ. ಊಟ ಕೂಡ ಜೊತೆಯಲ್ಲಿ ಕೂತು ಒಟ್ಟಿಗೆ ಮಾಡಿದ್ದಾರೆ. ಇದನ್ನೆಲ್ಲಾ ಕಂಡು ಸುಪ್ರೀತಾಗೆ ಅನುಮಾನ ಬಂದು, ಕಾವೇರಿಯನ್ನು ಪ್ರಶ್ನೆ ಮಾಡಿದ್ದಾಳೆ. ಅತ್ತಿಗೆ ಏನಿದು ನಾಟಕ ಅಂತ ಕೇಳಿದ್ದಾಳೆ. ಅದಕ್ಕೆ ಕಾವೇರಿ, ನನ್ನ ಹೆಜ್ಜೆ ಗುರುತನ್ನು ಯಾರು ಕೂಡ ಕಂಡುಹಿಡಿಯುವುದಕ್ಕೆ ಆಗಲ್ಲ. ನನಗೆ ಲಾಭ ಬೇಕು ಅಂದ್ರೆ ಯಾರನ್ನ ಹೇಗೆ ಬೇಕಾದರೂ ಬಳಸಿಕೊಳ್ತೀನಿ ಅಂತ ಟಾಂಗ್ ಕೊಟ್ಟಿದ್ದಾಳೆ.
ವೈಷ್ಣವ್ ಪ್ರಶ್ನೆಗೆ ಉತ್ತರವಿಲ್ಲ
ಕೀರ್ತಿಯ ವಿಚಿತ್ರ ವರ್ತನೆ ಕಂಡು ವೈಷ್ಣವ್‌ಗೆ ಕೋಪ ಬಂದಿದೆ. ಅದರಲ್ಲೂ ಹೋಟೆಲ್‌ನಲ್ಲಿ ಸಿಕ್ಕ ವ್ಯಕ್ತಿ ಜರ್ನಲಿಸ್ಟ್ ಅಲ್ಲ ಅನ್ನೋದು ವೈಷ್ಣವ್‌ಗೆ ಗೊತ್ತಾದ ಮೇಲೆ, ಅಮ್ಮನನ್ನು ಪ್ರಶ್ನೆ ಮಾಡಬೇಕು ಅಂತ ಮನೆಗೆ ಬಂದಿದ್ದಾನೆ. ಕಾರುಣ್ಯ ಹೇಳಿದ ಮಾತು ಕೀರ್ತಿ ಹೇಳಿದ ಮಾತು ಈ ಎಲ್ಲಾ ಕೂಡ ಅಮ್ಮನ ಬಗ್ಗೆ ಅನುಮಾನ ಹುಟ್ಟಿಸಿತು. ಅಮ್ಮನಿಗಾಗಿ ಕಾಯ್ತಾ ಇದ್ದ ವೈಷ್ಣವ್ ಅಮ್ಮ ಬಂದ ಕೂಡಲೇ ಪ್ರಶ್ನೆ ಮಾಡಿದ್ದಾನೆ. ಆಗಿದ್ದೆಲ್ಲ ಏನು? ಆತ ಜರ್ನಲಿಸ್ಟ್ ಅಲ್ಲ ಅಂತ ಪ್ರಶ್ನೆ ಮಾಡಿದ್ದಾನೆ. ಆದರೆ, ಇದ್ಯಾವುದಕ್ಕೂ ಕಾವೇರಿ ಉತ್ತರ ಕೊಡದೆ ಸುಮ್ಮನಾಗಿದ್ದಾಳೆ.

ವೈಷ್ಣವ್ ಮೇಲೆ ಲಕ್ಷ್ಮೀಗೆ ಭರವಸೆ
ತವರು ಮನೆಗೆ ಅತ್ತೆಯಿಂದ ಒಳ್ಳೆಯದೇ ಆಯ್ತು ಅಂತ ಲಕ್ಷ್ಮಿ ನಂಬಿದ್ದಾಳೆ. ಇದೇ ಖುಷಿಯಲ್ಲಿ ಅಡುಗೆ ಮನೆಗೆ ಬಂದು ಏನಾದರು ಅಡುಗೆ ಮಾಡೋಣ ಅಂತ ನೋಡ್ತಾ ಇದ್ಲು. ಆಗ ಗಂಗಾ ಲಕ್ಷ್ಮಿಯನ್ನು ಪ್ರಶ್ನೆ ಮಾಡಿದ್ದಾಳೆ. ಅತ್ತೆಯನ್ನು ಬುಟ್ಟಿಗೆ ಹಾಕೊಂಡಿದ್ದಾಯ್ತು, ಇನ್ನು ಗಂಡನ ಪ್ರೀತಿಯನ್ನು ಹಾಗೆ ಸಂಪಾದಿಸುವುದಲ್ವಾ? ಗಂಡನು ಇಂಪಾರ್ಟೆಂಟ್ ಅಲ್ವಾ? ಅತ್ತೆ ಆಮೇಲೆ ಗಂಡ ಫಸ್ಟ್. ಯಾಕಂದರೆ, ನಿಮ್ಮ ಮದುವೆಯಾಗಿದ್ದು ಹೇಗೆ ಅನ್ನೋದು ನಿಮಗೂ ಗೊತ್ತಿದೆ. ಈಗ ಹೇಗಿದೆ ಅದೇ ಸ್ನೇಹ ಅಂತ ಏನಾದ್ರು ಇದ್ಯಾ ಅಥವಾ ಪ್ರೀತಿ ಮೂಡಿದ್ಯ? ಅಂತ ಪ್ರಶ್ನೆ ಮಾಡಿದ್ದಾಳೆ. ಗಂಗಾ ಮಾಡಿದ ಪ್ರಶ್ನೆಗೆ ಲಕ್ಷ್ಮಿ ಒಂದು ಕ್ಷಣ ಹಳೆಯದ್ದನ್ನೆಲ್ಲ ನೆನೆಸಿಕೊಂಡು ಬೇಜಾರು ಮಾಡಿಕೊಂಡಿದ್ದಾಳೆ. ಸದ್ಯ ವೈಷ್ಣವ್ ತಲೆಯಲ್ಲಿ ಕೀರ್ತಿಯದ್ದು ಒಂದು ಕಡೆ, ಅಮ್ಮನದು ಒಂದು ಕಡೆ ಜೊತೆಗೆ ಲಕ್ಷ್ಮೀಗೂ ನ್ಯಾಯ ಕೊಡುವ ಯೋಜನೆ ಇದೆ.


Click it and Unblock the Notifications











