Lakshmi Baramma: ನಡು ರೋಡ್‌ನಲ್ಲಿ ಅಪ್ಪುಗೆ.. ಲಕ್ಷ್ಮೀ ದೊಡ್ಡಪ್ಪನನ್ನು ಸಮಾಧಾನ ಮಾಡೋದೇಗೆ ವೈಷ್ಣವ್..?

By ಎಸ್ ಸುಮಂತ್

ವೈಷ್ಣವ್‌ಗೆ ಕೀರ್ತಿ ಅದೆಷ್ಟು ಕಾಟ ಕೊಡ್ತಾ ಇದ್ದಾಳೆ ಅಂದ್ರೆ, ನೆಮ್ಮದಿಯ ಜೊತೆಗೆ ನಿದ್ದೆಯೂ ಕಡಿಮೆಯಾಗಿದೆ. ಕೀರ್ತಿ ತಾನು ಹುಚ್ಚಿ ಆಗುವುದಲ್ಲದೆ ತನ್ನ ನಡೆಯಿಂದ ವೈಷ್ಣವ್‌ನನ್ನೂ ಹುಚ್ಚ ಮಾಡಿಟ್ಟಿದ್ದಾಳೆ. ಕುಂತ್ರೂ ನಿಂತ್ರೂ ವೈಷ್ಣವ್‌ನನ್ನು ಕಾಡುತ್ತಿದ್ದಾಳೆ. ಇದರಿಂದ ವೈಷ್ಣವ್ ತನ್ನ ಸಂಸಾರದಲ್ಲೂ ಅನುಮಾನ ಮೂಡಿಸುವಂತೆ ಆಗುತ್ತಿದೆ.

ಈಗಾಗಲೇ ಕೀರ್ತಿ ಮತ್ತು ವೈಷ್ಣವ್ ಬಗ್ಗೆ ಒಂದಷ್ಟು ಅನುಮಾನಗಳು ಲಕ್ಷ್ಮೀ ತವರು ಮನೆಯಲ್ಲಿ ಮೂಡಿದೆ. ಯಾಕಂದ್ರೆ, ಪೂಜಾ ಮಾಡಿದ್ದ ವಿಡಿಯೋದಿಂದಾಗಿ ಮನೆಯವರಿಗೆ ಅನುಮಾನ ಮೂಡಿದೆ. ಕಾವೇರಿ ಅದನ್ನೆಲ್ಲಾ ಹೇಗೋ ನಿಭಾಯಿಸಿ ಆಗಿದೆ. ಈಗ ಲಕ್ಷ್ಮೀ ದೊಡ್ಡಪ್ಪನ ಎದುರು ನೇರವಾಗಿಯೇ ತಗಲಾಕಿಕೊಂಡಿದ್ದಾನೆ.

Lakshmi Baramma serial Written Update on June 29th episode

ಕೀರ್ತಿಗೆ ಸಿಕ್ತಾನಾ ವೈಷ್ಣವ್?

ಕೀರ್ತಿ ಇತ್ತೀಚೆಗೆ ಇನ್ನು ಅತಿಯಾಗಿ ಆಡುವುದಕ್ಕೆ ಶುರು ಮಾಡಿದ್ದಾಳೆ. ವೈಷ್ಣವ್‌ನನ್ನು ಪಡೆಯಬೇಕು ಎಂದು ಹೊರಟಿದ್ದಾಳೆ. ಈಗಾಗಲೇ ಕಾವೇರಿ ಮೋಸ ಮಾಡಿದ್ದಾಳೆ ಎಂದು ಗೊತ್ತಿದ್ದರು ವೈಷ್ಣವ್ ಮೇಲಿನ ಪ್ರೀತಿ ಮಾತ್ರ ಎಳ್ಳಷ್ಟು ಕಡಿಮೆಯಾಗಿಲ್ಲ. ಈಗ ಹೂವಿನ ದಳದಿಂದ ತನ್ನ ಪ್ರೀತಿಯನ್ನು ಅಳೆಯುವುದಕ್ಕೆ ಶುರು ಮಾಡಿದ್ದಾಳೆ. ಇದು ಈಗಿನ ಅಭ್ಯಾಸವೇನು ಅಲ್ಲ. ಮೊದಲಿಂದಾನೂ ಹೀಗೆ ಮಾಡುತ್ತಿದ್ದಳು.

ಗುಲಾಬಿ ದಳದಿಂದ ಪ್ರೀತಿ ತಿಳಿಯಲು ಯತ್ನ

ಗುಲಾಬಿಯ ದಳವನ್ನು ಬಿಡಿಸಿ, ಬಿಡಿಸಿ ಪ್ರೀತಿ ಮಾಡ್ತಾನಾ, ಇಲ್ವಾ ಅನ್ನೋ ಪ್ರಶ್ನೆ ಎದುರಾಗ್ತಾ ಇತ್ತು. ಪ್ರೀತಿ ಮಾಡಲ್ಲ ಎಂಬುದಾಗಿ ಕೊನೆಯಾದಾಗ ಕೀರ್ತಿಗೆ ಕೋಪ ಬಂದಿದೆ. ಈ ಗುಲಾಬಿಯೇ ಸರಿ ಇಲ್ಲ ಎಂದುಕೊಂಡು ಮತ್ತೆ ಗುಲಾಬಿ ತರಲು ಹೋಗಿದ್ದಾಳೆ. ವಾಹನಗಳು ಓಡಾಡುತ್ತಿವೆ ಎಂಬುದನ್ನು ನೋಡದೆ, ಗುಲಾಬಿಯನ್ನಷ್ಟೇ ಗಮನದಲ್ಲಿಟ್ಟುಕೊಂಡು ನುಗ್ಗಿದ್ದಾಳೆ. ಮತ್ತೊಂದು ಗುಲಾಬಿಯನ್ನು ತೆಗೆದುಕೊಂಡು, ಕೊಟ್ಟವಳಿಗೂ ಒಂದು ಅವಾಜ್ ಬಿಟ್ಟು ಬಂದಿದ್ದಾಳೆ. ಪಾಪ ಗುಲಾಬಿ ಕೊಟ್ಟ ಹುಡುಗಿ ಕೀರ್ತಿಯ ಅವಸ್ಥೆ ನೋಡಿ ಸುಮ್ಮನಾಗಿದ್ದಾಳೆ.

ವೈಷ್ಣವ್‌ನಿಂದ ಉಳಿಯಿತು ಪ್ರಾಣ

ಗುಲಾಬಿ ತೆಗೆದುಕೊಂಡು ಮತ್ತೆ ಅದೇ ಟ್ರಾಫಿಕ್‌ನಲ್ಲಿ ಹಿಂದೆ ಮುಂದೆ ನೋಡದೆ ಬಂದಿದ್ದಾಳೆ. ಗುಲಾಬಿ ದಳಗಳನ್ನು ಬಿಡಿಸುತ್ತಾ ಪ್ರೀತಿ ಮಾಡುತ್ತಾನೋ ಇಲ್ಲವೋ ಅಂತ ಎಣಿಸಿಕೊಂಡು ಬರುತ್ತಾ ಇದ್ದಳು. ದಳಗಳು ಖಾಲಿಯಾಗುತ್ತಾ ಬಂದಿದೆ. ಆಗ ಆತಂಕಗೊಂಡ ಕೀರ್ತಿ ರಸ್ತೆ ಮಧ್ಯೆಯೇ ನಿಂತು ಬಿಟ್ಟಿದ್ದಳು. ಇದನ್ನು ಕಂಡ ವೈಷ್ಣವ್, ತಕ್ಷಣ ಅವಳನ್ನು ರಕ್ಷಿಸಿದ್ದಾನೆ. ಇಲ್ಲ ಅಂದಿದ್ರೆ ದೊಡ್ಡ ಅನಾಹುತವೇ ಆಗಿ ಬಿಡಿತ್ತಾ ಇತ್ತು.

Lakshmi Baramma serial Written Update on June 29th episode

ದೊಡ್ಡಪ್ಪನ ಮುಂದೆ ಸಿಕ್ಕಿಬಿದ್ದ ವೈಷ್ಣವ್

ವೈಷ್ಣವ್ ರಕ್ಷಿಸಿದ್ದನ್ನು ಕಂಡ ಕೀರ್ತಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾಳೆ. ನಂಗೆ ಗೊತ್ತಿತ್ತು ನಿಂಗೆ ನನ್ನ ಮೇಲೆ ಪ್ರೀತಿ ಇದೆ ಅಂತ. ಅದಕ್ಕೆ ನೀನು ಬಂದಿದ್ದು ಅಂತ ಹೇಳಿ ಮತ್ತೆ ಉಳಿದ ದಳಗಳನ್ನು ಕಿತ್ತಿದ್ದಾಳೆ. ಪ್ರೀತಿ ಮಾಡ್ತಾನೆ ಎಂದು ದಳಗಳು ಎಂಡ್ ಆಗುತ್ತಿದ್ದಂತೆ ಕೀರ್ತಿ ಫುಲ್ ಖುಷಿಯಾಗಿದ್ದಾಳೆ. ತಕ್ಷಣ ವೈಷ್ಣವ್‌ನನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾಳೆ. ಅದು ನಡು ರಸ್ತೆ ಅನ್ನೋದನ್ನು ನೋಡದೆ. ವೈಷ್ಣವ್ ಸಾಕಷ್ಟು ಕಷ್ಟಪಟ್ಟು ಬಿಡಿಸಿಕೊಳ್ಳಲು ನೋಡಿದ್ದಾನೆ. ಆದರೆ, ಸಾಧ್ಯವಾಗಲೇ ಇಲ್ಲ. ಆ ಕಡೆ ಲಕ್ಷ್ಮೀಯ ದೊಡ್ಡಪ್ಪ ಈ ದೃಶ್ಯವನ್ನು ನೋಡಿ, ಶಾಕ್ ಆಗಿ ನಿಂತಿದ್ದಾರೆ. ಯಾಕಂದ್ರೆ, ಮನೆಯಲ್ಲಿ ಅದಾಗಲೇ ಪೂಜಾ, ಈ ಇಬ್ಬರ ಬಗ್ಗೆ ಹೇಳಿ ತಲೆ ಕೆಡಿಸಿದ್ದಳು. ಈಗ ಕಣ್ಣಾರೆ ಕಂಡ ದೃಶ್ಯ ಕಸಿವಿಸಿ ಮಾಡಿದೆ.

More from Filmibeat

English summary
Colors Kannada Lakshmi Baramma serial Written Update on June 29th episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X