Lakshmi Baramma: ಬೊಂಬೆ ಆಡಿಸೋನು ಎಚ್ಚರಿಸ್ತಾ ಇದ್ರು.. ವೈಷ್ಣವ್ ತಪ್ಪು ಮಾಡ್ತಾನೇ ಇದ್ದಾನೆ.. ಲಕ್ಷ್ಮೀನಾ ಕಳೆದುಕೊಳ್ತಾನಾ?
ಕೀರ್ತಿಯಿಂದ ಕಾವೇರಿಗೆ, ವೈಷ್ಣವ್‌ಗೆ ನೆಮ್ಮದಿಯೇ ಇಲ್ಲದಂತೆ ಆಗಿದೆ. ಸತ್ಯ ಹೇಳ್ತೀನಿ ಅಂದ್ರೆ ಕಾವೇರಿಯನ್ನು ಹೆದರಿಸಿದ್ರೆ ನಾನಿನ್ನು ನಿನ್ನ ಪ್ರೀತಿ ಮಾಡ್ತೀನಿ ಅಂತ ಹೇಳಿ ವೈಷ್ಣವ್‌ಗೆ ಗೊಂದಲವಾಗಿ ಕಾಡ್ತಿದ್ದಾಳೆ. ಸತ್ಯ ಅಡಗಿರುವುದನ್ನು ಹುಡುಕುತ್ತಾ ಹೊರಟ ವೈಷ್ಣವ್ ಸಂಸಾರ ಈಗ ರಂಪಾಟಕ್ಕೆ ಸಿಲುಕಿದೆ.
ಕೀರ್ತಿ ಹುಚ್ಚಾಟದಿಂದ ವೈಷ್ಣವ್‌ಗೆ ತಲೆ ಬಿಸಿಯಾಗಿದೆ. ವೈಷ್ಣವ್ ಇನ್ನು ಪ್ರೀತಿ ಮಾಡ್ತಾನಾ, ಇಲ್ವಾ ಅನ್ನೋದನ್ನ ಪರೀಕ್ಷೆ ಮಾಡಿಕೊಂಡು ಬರುತ್ತಿದ್ದ ಕೀರ್ತಿ ಕೈಗೆ ವೈಷ್ಣವ್ ತಗಲಾಕಿಕೊಂಡಿದ್ದಾನೆ. ನಡು ರಸ್ತೆ ಅನ್ನೋದನ್ನು ನೋಡದೆ ಕೀರ್ತಿ ತಬ್ಬಿಕೊಂಡಿದ್ದಾಳೆ. ಇದನ್ನು ನೋಡಿದ ಲಕ್ಷ್ಮೀ ದೊಡ್ಡಪ್ಪ ನೇರ ಮನೆಗೆ ಬಂದು ನ್ಯಾಯ ಕೇಳುತ್ತಿದ್ದಾರೆ.

ದೊಡ್ಡಪ್ಪನ ಪ್ರಶ್ನೆಗೆ ತಬ್ಬಿಬ್ಬಾದ ಮನೆಯವರು
ದೊಡ್ಡಪ್ಪ ಮನೆಗೆ ಬಂದ ಖುಷಿಯಲ್ಲಿ ಮಾತನಾಡಿಸುವುದಕ್ಕೆ ಹೋದ ಲಕ್ಷ್ಮೀಗೆ ದೊಡ್ಡಪ್ಪನ ಕೋಪದ ಮುಖ ಕಂಡಿತ್ತು. ಮನೆಯವರೆಲ್ಲರ ಮೇಲೆ ಕೂಗಾಡಿದರು. ದೊಡ್ಡವರು ಅಂತ ನಂಬಿ ತಪ್ಪು ಮಾಡಿದ್ವಿ, ಮಗನ ಪ್ರೀತಿಯನ್ನು ಮುಚ್ಚಿಟ್ಟು ಮದುವೆ ಮಾಡಿಕೊಂಡು ಬಂದ್ರು. ಇವತ್ತು ಎಲ್ಲವನ್ನು ನೋಡಿದೆ. ನಾವೂ ಮೋಸ ಹೋಗಿ ಬಿಟ್ವಿ. ಬಾ ಲಕ್ಷ್ಮೀ ಈ ಮನೆಯಿಂದ ಹೋಗೋಣಾ. ನಿಂಗೂ ಮೋಸ ಮಾಡ್ತಾ ಇದ್ದಾರೆ ಅಂತ ದೊಡ್ಡಪ್ಪ ಒಂದೇ ಸಮ ಬೇಸರದ ಧ್ವನಿಯಲ್ಲಿಯೇ ಹೇಳಿದರು.
ಸಮಜಾಯಿಸಿ ಕೊಟ್ಟ ಲಕ್ಷ್ಮೀ
ದೊಡ್ಡಪ್ಪನ ಕೋಪ ಕಂಡು ಒಂದು ಕ್ಷಣ ಲಕ್ಷ್ಮೀ ಕೂಡ ಶಾಕ್ ಆಗಿದ್ದಾಳೆ. ವೈಷ್ಣವ್ ಪ್ರೀತಿ ಬಗ್ಗೆ ಹೇಳಿನೇ ಮದುವೆಯಾಗಿದ್ದಾರೆ. ಯಾವುದನ್ನೂ ಮುಚ್ಚಿಟ್ಟಿಲ್ಲ. ಅವರು ಎಲ್ಲಾ ಸತ್ಯ ಹೇಳಿನೇ ಮದುವೆಯಾಗಿದ್ದಾರೆ. ಅವರ ಮನಸ್ಸಲ್ಲಿ ಹಳೇ ಹುಡುಗಿ ಇಲ್ಲ. ಹಳೆ ಪ್ರೀತಿ ಮರೆಯೋದಕ್ಕೆ ಟ್ರೈ ಮಾಡ್ತಾ ಇದ್ದಾರೆ ಎಂದ ಲಕ್ಷ್ಮೀ. ಕೀರ್ತಿ-ವೈಷ್ಣವ್ ಹೆಸರು ಬಂದಾಗ ಮತ್ತೆ ಅತ್ತೆ ಹೇಳಿದ ಹಳೆ ರಾಗವನ್ನೇ ಹಾಡುವುದಕ್ಕೆ ಶುರು ಮಾಡಿದ್ದಾಳೆ. ಅವರಿಬ್ಬರು ಫ್ರೆಂಡ್ಸ್ ಎಂದು ರಾಗ ಎಳೆಯುತ್ತಿದ್ದಂತೆ ದೊಡ್ಡಪ್ಪ ನಿಲ್ಲಿಸಿದ್ದಾರೆ.
ದೊಡ್ಡಪ್ಪನ ಮಾತಿಗೆ ಲಕ್ಷ್ಮೀ ಶಾಕ್
ಕೀರ್ತಿ ಮತ್ತು ವೈಷ್ಣವ್‌ನನ್ನು ಲಕ್ಷ್ಮೀ ಅದ್ಯಾವಾಗ ಸಪೋರ್ಟ್ ಮಾಡಿಕೊಂಡು ಬಂದಳೋ, ಆಗ ದೊಡ್ಡಪ್ಪ ಮತ್ತೆ ಹೇಳಿದ್ದಾರೆ. ಚೈಲ್ಡ್ ವುಡ್ ಫ್ರೆಂಡ್ಸ್ ಅಂತಾನೆ ಹೇಳಿಕೊಂಡು ಬಂದ್ರು. ನಮ್ಮನ್ನು ಅದೇ ಥರ ನಂಬಿಸಿದ್ರು. ಆದರೆ ಸ್ನೇಹಾ ಯಾವ್ದು, ಪ್ರೀತಿ ಯಾವ್ದು ಅಂತ ನಿಮ್ಮ ದೊಡ್ಡಪ್ಪನಿಗೆ ಗೊತ್ತಿದೆ. ನಡುರೋಡಲ್ಲಿ ಕೀರ್ತಿ ನಡೆದುಕೊಂಡ ರೀತಿಗೆ ಸ್ನೇಹ ಅನ್ನಲ್ಲ ಅದಕ್ಕೆ ಪ್ರೀತಿ ಅಂತಾನೇ ಅಂತಾರೆ ಅಂತ ಅಲ್ಲಿ ಕಂಡದ್ದೆಲ್ಲವನ್ನು ಹೇಳಿದ್ದಾರೆ.

ವೈಷ್ಣವ್ ತಪ್ಪು ಮಾಡ್ತಿದ್ದಾನಾ..?
ಮಾವ ನೋಡಿ ಬಿಟ್ಟರಲ್ಲ ಅನ್ನೋ ಗಾಬರಿಯಲ್ಲಿ ವೈಷ್ಣವ್ ಮನೆಗೆ ಓಡಿ ಬಂದಿದ್ದಾನೆ. ಬರುವಾಗ ಮತ್ತೆ ಗೊಂಬೆ ಆಡಿಸೋನು ಸಿಕ್ಕಿದ್ದಾನೆ. ಮತ್ತೆ ಎಚ್ಚರಿಕೆ ನೀಡಿದ್ದಾನೆ. ಸುತ್ತ ಮುತ್ತ ದೂರ ಮಾಡುವವರೇ ಇದ್ದಾರೆ. ಮಹಾಲಕ್ಷ್ಮಿಯನ್ನು ದೂರ ಮಾಡಿಕೊಳ್ಳಬೇಡ ಎಂದಿದ್ದಾನೆ. ಆ ಥರ ಎಲ್ಲಾ ಏನು ಆಗಲ್ಲ ಎಂದು ಮನೆಗೆ ಓಡಿದವ ಮತ್ತೆ ಕೀರ್ತಿ ಬಗ್ಗೆ ಸುಳ್ಳು ಹೇಳುವುದಕ್ಕೆ ನೋಡಿದ್ದಾನೆ. ಮಾವನನ್ನು ಸಮಾಧಾನ ಮಾಡುವುದಕ್ಕೆ ಟ್ರೈ ಮಾಡಿದ್ದಾನೆ. ಕೀರ್ತಿ ಸಿಕ್ಕಿದ್ದು, ಆ ಘಟನೆ ನಡೆದಿದ್ದು ನಿಜ. ಆದರೆ, ಅದು ಸತ್ಯ ಅಲ್ಲ ಎಂಬಂತೆ ಬಿಂಬಿಸುತ್ತಿದ್ದಾನೆ. ಕೀರ್ತಿಯೇ ತನ್ನ ಮಾಜಿ ಪ್ರೇಮಿ ಎಂಬುದನ್ನು ಹೇಳುವುದನ್ನು ಮುಂದೆ ಮುಂದೆ ಹಾಕುತ್ತಲೇ ಇದ್ದಾನೆ.


Click it and Unblock the Notifications











