Lakshmi Baramma: ಕೀರ್ತಿ ಹೊಸ ವರಸೆ.. ಸತ್ಯ ಗೊತ್ತಾದರೆ ಏನಾಗಬಹುದು ಮನೆ ಸ್ಥಿತಿ?
ಕೀರ್ತಿಗೆ ವೈಷ್ಣವ್ ಕಂಡರೆ ಅದೆಷ್ಟು ಪ್ರೀತಿ ಅನ್ನೋದನ್ನ ಬಿಡಿಸಿ ಹೇಳುವ ಹಾಗಿಲ್ಲ. ಆದರೆ ಮದುವೆಯಾಗು ಎಂದ ಮೇಲೆ ಬೇರೆ ರೀತಿಯಾಗಿಯೇ ನಾಟಕ ಶುರು ಮಾಡಿದ್ದಳು ಕೀರ್ತಿ. ನೋಡಿದವರಿಗೂ ಇದು ಶಾಕಿಂಗ್ ಅಂತಾನೆ ಅನ್ನಿಸಿತ್ತು. ಕೀರ್ತಿಯ ತಾಯಿಗೂ ಇದು ಅಚ್ಚರಿ ಹುಟ್ಟಿಸಿತ್ತು. ಆದರೆ, ಏನು ಮಾಡುವಂತೆ ಇರಲಿಲ್ಲ. ಕಡೆಗೆ ವೈಷ್ಣವ್ ಲಕ್ಷ್ಮೀಯನ್ನು ಮದುವೆಯಾಗುವ ಸ್ಥಿತಿ ಬಂದಿತ್ತು.
ಆ ಸಮಯದಲ್ಲಿ ವೈಷ್ಣವ್, ಕೀರ್ತಿಯ ಕಾಲಿಗೆ ಬೀಳುವುದೊಂದು ಬಾಕಿ ಇತ್ತು. ಬಿದ್ದೂ ಬಿಟ್ಟಿದ್ದ. ಮನೆಯವರಿಗೆಲ್ಲಾ ಈ ವಿಚಾರದಲ್ಲಿ ಗೊಂದಲವಿದ್ದರು ಕಾವೇರಿಗೆ ಮಾತ್ರ ಕ್ಲಾರಿಟಿ ಇತ್ತು. ಎಲ್ಲಾ ಅಂದುಕೊಂಡಂತೆ ನಡೆದಿದೆ. ಲಕ್ಷ್ಮೀಯನ್ನು ವೈಷ್ಣವ್ ಮದುವೆಯಾಗಿದ್ದಾನೆ. ಕೀರ್ತಿ ಕಾಯುತ್ತಿದ್ದ ಸಮಯವೂ ಬಂದಿದೆ. ಆದರೆ ವೈಷ್ಣವ್ ಒಪ್ಪಿಗೆ ಸಿಗುವುದು ಅಷ್ಟು ಸುಲಭವಾ..?

ಕೀರ್ತಿ ನಡೆಗೆ ಕೋಪಗೊಂಡ ವೈಷ್ಣವ್
ಕೀರ್ತಿ ಇತ್ತೀಚೆಗೆ ಅದೆಷ್ಟು ಪ್ರಯತ್ನಗಳನ್ನು ಮಾಡ್ತಿದ್ದಾಳೆ ಅಂದ್ರೆ, ಯಾವಾಗಲೂ ವೈಷ್ಣವ್ ಹಿಂದೆ ಮುಂದೆಯೇ ತಿರುಗುತ್ತಿದ್ದಾಳೆ. ವೈಷ್ಣವ್‌ನನ್ನು ಇಂಪ್ರೆಸ್ ಮಾಡಲು ಯತ್ನಿಸುತ್ತಿದ್ದಾಳೆ. ಹಳೆಯ ನೆನಪುಗಳನ್ನೆಲ್ಲಾ ಮರುಕಳಿಸುತ್ತಿದ್ದಾಳೆ. ಆದರೆ, ಇದ್ಯಾವುದು ವೈಷ್ಣವ್‌ಗೆ ಬೇಕಾಗಿಲ್ಲ. ಹೀಗಾಗಿಯೇ ಇಬ್ಬರ ನಡುವೆ ಗಲಾಟೆಗಳು ನಡೆಯುತ್ತಿವೆ. ಆಲ್ಬಂ ಹಾಡಿನಿಂದ ಕೀರ್ತಿಯನ್ನು ವೈಷ್ಣವ್ ತೆಗೆದು ಹಾಕಿದ್ದ. ಹೇಗೋ ಮತ್ತೆ ಹಾಡಿಗೆ ಜೊತೆಯಾದಳು. ಈಗ ವೈಷ್ಣವ್ ಮನಸ್ಸು ಗೆಲ್ಲುವುದಕ್ಕೆ ಸ್ಟುಡಿಯೋವನ್ನು ಹಳೆ ನೆನಪುಗಳಿಂದ ಅರೆಂಜ್ ಮಾಡಿದ್ದಳು.
ವೈಷ್ಣವ್ ಬಳಿ ಮತ್ತೆ ಮನವಿ
ಆದರೆ ವೈಷ್ಣವ್ ಮನಸ್ಸನ್ನು ಸರಿ ಮಾಡುವುದು ಅಷ್ಟು ಸುಲಭವಲ್ಲ. ಕೀರ್ತಿ ಅದರ ಪ್ರಯತ್ನದ ಹಾದಿಯಲ್ಲಿಯೇ ದ್ವೇಷ ಕಟ್ಟಿಕೊಳ್ಳುತ್ತಿದ್ದಾಳೆ. ಸ್ಟುಡಿಯೋಗೆ ಅಷ್ಟೆಲ್ಲಾ ಅಲಂಕಾರ ಮಾಡಿದ ರೀತಿಗೆ ವೈಷ್ಣವ್ ಕೋಪಕ್ಕೆ ಗುರಿಯಾಗಿದ್ದಾಳೆ. ವೈಷ್ಣವ್ ಹುಡುಕಿ ಬಂದು, ಮತ್ತೆ ರೇಗಿದ್ದಾನೆ. ಆದ್ರೆ, ಕೀರ್ತಿಯ ಮಾತುಗಳೇ ವೈಷ್ಣವ್‌ಗೆ ವಿಚಿತ್ರ ಎನಿಸುತ್ತಿದೆ. ಬೇಡ ಎಂದು ಬಿಟ್ಟು ಹೋದವಳು ನೀನೆ ಅಲ್ವಾ ಅಂತ ಕ್ಲಾಸ್ ತೆಗೆದುಕೊಂಡಿದ್ದಾನೆ.
ಸತ್ಯ ಹೇಳಲು ಮುಂದಾದ ಕೀರ್ತಿ
ಕೀರ್ತಿಗೆ ಇನ್ನಷ್ಟು ದಿನ ಕಾಯಲು ಸಾಧ್ಯವಿಲ್ಲ. ಲಕ್ಷ್ಮೀಯ ಜೊತೆಗೆ ವೈಷ್ಣವ್ ಕಂಡರೆ ಸಹಿಸುತ್ತಿಲ್ಲ. ಕಾವೇರಿ ನಿಜ ಹೇಳುತ್ತಿಲ್ಲ. ಅದಕ್ಕೆ ಈಗ ಕೀರ್ತಿಯೇ ಸತ್ಯ ಹೇಳಲು ಸಿದ್ಧವಾಗಿ ಬಂದಿದ್ದಾಳೆ. ವೈಷ್ಣವ್ ಕೂಡ ಅದಕ್ಕೆ ಕುತೂಹಲದಿಂದ ಕಾಯುತ್ತಿದ್ದಾನೆ. ಮದುವೆಗೂ ಮುನ್ನ ಆದ ಎಲ್ಲಾ ಅವಾಂತರಗಳನ್ನು ವೈಷ್ಣವ್ ಸ್ಪಷ್ಟಪಡಿಸಿದ್ದಾನೆ. ಆಗಲೇ ಕೀರ್ತಿಯ ಮನಸ್ಸಿಗೆ ಬೇಸರ ಆಗಿದೆ. ಎಲ್ಲಾ ಸತ್ಯವನ್ನು ಇಂದು ಹೇಳಿಯೇ ಬಿಡುತ್ತೇನೆ ಎಂದು ತೀರ್ಮಾನ ಮಾಡಿ ನಿಂತಿದ್ದಾಳೆ. ಸತ್ಯ ಗೊತ್ತಾದ ಕ್ಷಣ ಮನಸ್ಸುಗಳು ಒಡೆಯುವ ಸಾಧ್ಯತೆಯೇ ಹೆಚ್ಚು.

ಕಾವೇರಿ ಬಗ್ಗೆ ತಪ್ಪು ತಿಳಿಯುತ್ತಾಳಾ ಲಕ್ಷ್ಮೀ?
ಈ ಕಡೆ ಲಕ್ಷ್ಮೀ ಅಂಗಡಿಗೆ ಹೋಗುವುದನ್ನು ಮೊದಲು ವಿರೋಧಿಸಿದ್ದೆ ಕಾವೇರಿ. ಈಗ ಅನಾರೋಗ್ಯದಲ್ಲಿದ್ದಾಳೆ. ಇದನ್ನು ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡ್ತಾ ಇದ್ದಾರೆ. ಶಾಂತನೋ ಲಕ್ಷ್ಮೀಯ ಮನಸ್ಸನ್ನು ಕೆದಕುತ್ತಿದ್ದಾಳೆ. "ನೀನು ಅಂಗಡಿಗೆ ಹೋಗಬಾರದು ಎಂದೇ ನಿಮ್ಮ ಅತ್ತೆ ಈ ರೀತಿಯ ನಾಟವಾಡುತ್ತಿರಬೇಕು. ಇಲ್ಲಂದ್ರೆ, ಎಲ್ಲರಿಗೂ ಇಷ್ಟೊಂದು ಕ್ಲಾಸ್ ತೆಗೆದುಕೊಂಡು ಈಗ ಬಿಟ್ಟು ಹೋದರು ಅಂದ್ರೆ ಹೇಗೆ" ಅಂತ ಪ್ರಶ್ನಿಸಿದ್ದಾಳೆ. ಶಾಂತ ಹೇಳುವ ಮಾತು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿದೆ. ಆದರೆ ಕಾವೇರಿಯ ಸ್ಥಿತಿಯೇ ಬೇರೆಯಾಗಿದೆ. ಯಾಕಂದ್ರೆ, ಅತ್ತೆಯ ಭಯವೇ ಕಾವೇರಿಯನ್ನು ಸುಸ್ತು ಮಾಡುತ್ತಿದೆ. ಯಾರಿಗೂ ಹೇಳುವಂಗೂ ಇಲ್ಲ ಬಿಡುವಂಗೂ ಇಲ್ಲ.


Click it and Unblock the Notifications











