Lakshmi Baramma: ಕಾವೇರಿ ಜಸ್ಟ್ ಮಿಸ್.. ವೈಷ್ಣವ್ ಮುಂದೆ ಇದು ಅದಲ್ಲ ಅಂತ ಕೀರ್ತಿ ನಾಟಕ.. ಏನಿದು ಕಥೆ?
ಕೀರ್ತಿಯನ್ನು ಬೇಡ ಅಂತ ಧಿಕ್ಕರಿಸಿ ಕಾವೇರಿ, ತನಗೆ ತಕ್ಕ ಸೊಸೆ ಅಂತ ಲಕ್ಷ್ಮೀಯನ್ನು ಮದುವೆ ಮಾಡಿಕೊಂಡು ಬಂದಳು. ಕೀರ್ತಿಯಿಂದಾನೇ ವೈಷ್ಣವ್‌ನ ದೂರ ಮಾಡಿದ್ದಳು. ಕಾವೇರಿಯ ಮಾತಿಗೆ ಮರುಳಾಗಿದ್ದ ಕೀರ್ತಿ ತಾಳಕ್ಕೆ ತಕ್ಕನಾಗೆ ಕುಣಿದಿದ್ದಳು. ಆಗ ಕುಣಿದಿದ್ದ ಕೀರ್ತಿ, ಈಗ ಕಾವೇರಿಯನ್ನೇ ಕುಣಿಸುತ್ತಿದ್ದಾಳೆ.
ಕಾವೇರಿ ಒಂದು ದಿನವೂ ನೆಮ್ಮದಿಯಾಗಿಲ್ಲ. ಮದುವೆಯಾದಾಗಿನಿಂದ ಏನೋ ಒಂಥರ ಟೆನ್ಶನ್. ಒಂದು ಕಡೆ ಮನೆಯಲ್ಲಿ ಸುಪ್ರೀತಾಳ ಕಾಟ, ಮತ್ತೊಂದು ಕಡೆ ಲಕ್ಷ್ಮೀ ಮಗನನ್ನು ಕಿತ್ತುಕೊಳ್ಳುತ್ತಾಳೆಂಬ ಭಯ. ಇನ್ನೊಂದು ಕಡೆ ಕೀರ್ತಿಯಿಂದ ಕ್ಷಣ ಕ್ಷಣಕ್ಕೂ ಆತಂಕವನ್ನೇ ಅನುಭವಿಸುತ್ತಿದ್ದಾಳೆ.

ಕೀರ್ತಿ ಮನೆಯಲ್ಲಿ ದೊಡ್ಡ ಡ್ರಾಮಾ
ವೈಷ್ಣವ್ ಆದಷ್ಟು ಕೀರ್ತಿಯಿಂದ ದೂರ ಇರುವುದಕ್ಕೆ ಟ್ರೈ ಮಾಡ್ತಾನೆ. ಆದರೆ, ಕೀರ್ತಿ ಬೇಕು ಬೇಕು ಅಂತಾನೆ ಹತ್ತಿರ ಆಗೋಕೆ ಟ್ರೈ ಮಾಡ್ತಾಳೆ. ಯಾಕಂದ್ರೆ, ಸತ್ಯ ವೈಷ್ಣವ್‌ಗೆ ಗೊತ್ತಿಲ್ಲ. ಈಗ ಕೀರ್ತಿ ಮಾಡಿದ ದೊಡ್ಡ ಆಘಾತಕ್ಕೆ ಅಮ್ಮನನ್ನು ಕರೆದುಕೊಂಡು ಬಂದು ಕೀರ್ತಿಯ ಮನೆಯಲ್ಲಿ ನಿಂತಿದ್ದಾನೆ. ಇವತ್ತು ಸತ್ಯ ಗೊತ್ತಾಗಲೇ ಬೇಕು ಎಂದು ಹಠ ಹಿಡಿದಿದ್ದಾನೆ. ಕೀರ್ತಿ ಮದುವೆಯ ಹೆಣ್ಣಿನಂತೆ ಅಲಂಕಾರ ಮಾಡಿಕೊಂಡು ಬಂದು ನಿಂತು ಮತ್ತಷ್ಟು ರೋಧನೆ ಕೊಡುತ್ತಿದ್ದಾಳೆ. ಈ ಎಲ್ಲಾ ವಿಚಾರವಾಗಿ ಇವತ್ತು ಸತ್ಯ ಬಯಲಿಗೆ ಬರುತ್ತೆ ಅಂತ ಕಾರುಣ್ಯ ಖುಷಿಯಲ್ಲಿ ಕಾಯುತ್ತಿದ್ದಾಳೆ.
ವೈಷ್ಣವ್‌ಗೆ ಜಾಸ್ತಿ ಆಗ್ತಿದೆ ಕೋಪ
ವೈಷ್ಣವ್‌ಗೆ ಈ ಡ್ರಾಮಾ ನೋಡಿ ನೋಡಿ ಸಾಕಾಗಿತ್ತು. ಮೊದಲು ಇದನ್ನೆಲ್ಲಾ ನಿಲ್ಲಿಸು ಅಂತ ಕೀರ್ತಿಗೆ ಹೇಳಿದ್ದ. ಅವಳಿಗ್ಯಾಕೆ ನೀವೂ ಹುಡುಗಿ ತೋರಿಸಿ, ಅವನ ಜೀವನ ಹಾಳು ಮಾಡ್ತೀರಾ ಅಂತಾನು ಪ್ರಶ್ನೆ ಮಾಡಿದ್ದ. ಆದರೆ, ಅದಕ್ಕೆಲ್ಲಾ ಕೀರ್ತಿ ನಗುತ್ತಲೇ ಉತ್ತರ ಕೊಟ್ಟಿದ್ದಳು. ಆ ಹುಡುಗ ಬೇರೆ ಯಾರೂ ಅಲ್ಲ ನೀನೆ ಎಂದಾಗ ವೈಷ್ಣವ್ ಶಾಕ್ ಆಗಿದ್ದ. ಮೊದಲು ಹುಚ್ಚಾಟಕ್ಕೆ ಬ್ರೇಕ್ ಹಾಕು ಅಂತಾನೇ ಎಚ್ಚರಿಕೆ ನೀಡಿದ್ದ.

ಎಲ್ಲವೂ ಒಂದು ಕ್ಷಣ ಉಲ್ಟಾ ಮಾಡಿದ ಕೀರ್ತಿ
ಕೀರ್ತಿಯ ಹುಚ್ಚಾಟ ಕಂಡು ಕಾವೇರಿಗೆ ಜೀವ ಕೈಗೆ ಬಂದಿತ್ತು. ನಿಂತಿದ್ದರಿಂದ ಹಿಂದೆ ಹೋಗಿ ಕುಸಿದು ಬಿದ್ದ ಕಾವೇರಿಯನ್ನು ಕಂಡು ಕೀರ್ತಿ ಉಲ್ಟಾ ಹೊಡೆದಿದಳು. ನನ್ನ ನಿನ್ನ ಮದುವೆ ಆಗಬೇಕಿರುವುದು ಆಲ್ಬಮ್ ಸಾಂಗ್‌ನಲ್ಲಿ. ಆಲ್ಬಮ್ ಸಾಂಗ್‌ನಲ್ಲಿ ನೀನೆ ನಟಿಸ್ತೀಯ ಅಂತ ಆಂಟಿ ಪ್ರಾಮೀಸ್ ಮಾಡಿದ್ದಾರೆ. ಅದಕ್ಕೆ ಇದು ಒಂದು ಝಲಕ್ ಅಂದ್ಲು. ವೈಷ್ಣವ್ ಕೋಪ ಇನ್ನಷ್ಟು ನೆತ್ತಿಗೇರಿ, ಬೈದು ಅಲ್ಲಿಂದ ಹೊರಟೇ ಹೋದ.
ಕಾವೇರಿಗೆ ಮತ್ತೆ ಆತಂಕ ಕೊಟ್ಟ ಕೀರ್ತಿ
ವೈಷ್ಣವ್ ಹೋದ ಕೂಡಲೇ ಕಾವೇರಿ ಕೂಡ ಹೋಗುವುದಕ್ಕೆ ಟ್ರೈ ಮಾಡಿದಳು. ಆದರೆ ಕೀರ್ತಿ ಕೈಹಿಡಿದು ನಿಲ್ಲಿಸಿದಳು. ಕಾರುಣ್ಯಾಗೆ ಅದಾಗಲೇ ಬೇಸರವಾಗಿತ್ತು. ಮಗಳು ಸತ್ಯ ಹೇಳಿ, ಹುಚ್ಚಾಟ ನಿಲ್ಲಿಸುತ್ತಾಳೆ ಎಂದುಕೊಂಡಿದ್ದಳು. ಆದರೆ ಅದು ಉಲ್ಟಾ ಆಗಿತ್ತು. ಕಾವೇರಿಗೆ ಕೀರ್ತಿ ಎಲ್ಲದನ್ನು ಸರಿ ಮಾಡುವುದಕ್ಕೆ ಹೇಳಿದಳು. ಈ ಬಾರಿ ಅದು ಕಷ್ಟ ಇದೆ ಎಂದು ಕಾವೇರಿ ಹೇಳಿದಾಗ ಅದನ್ನು ಕೇಳುವುದಕ್ಕೆ ಕೀರ್ತಿ ರೆಡಿ ಇರಲಿಲ್ಲ. ಮಗ ತಾಯಿ ಮಾತು ಮೀರಲ್ಲ ಎಂದಿದ್ರಿ ಅದನ್ನ ಈಗ ಪ್ರೂವ್ ಮಾಡಿ ಎಂದಿದ್ದಾಳೆ.


Click it and Unblock the Notifications











