Lakshmi Baramma: ಅತ್ತೆ-ಸೊಸೆ ಜಗಳ ಅರಿತ ವೈಷ್ಣವ್ ಅಮ್ಮನ ಕಣ್ಣಲ್ಲಿ ಹೀರೊ.. ಆದರೆ, ಲಕ್ಷ್ಮೀ ಮನಸ್ಸಲ್ಲಿ?

By ಎಸ್ ಸುಮಂತ್

ಟಿಪಿಕಲ್ ಅತ್ತೆ ಸಿಕ್ಕರೆ ಸೊಸೆ ಬದುಕು ಕುಂತ್ರು ನಿಂತ್ರು ಸಂಕಷ್ಟವೇ ಸರಿ. ಕಾವೇರಿ ಆಗಾಗ ಟಿಪಿಕಲ್ ಅತ್ತೆಯ ಅವತಾರವೆತ್ತುತ್ತಾ ಇರುತ್ತಾಳೆ. ಲಕ್ಷ್ಮೀ ವಿಚಾರದಲ್ಲಿ ವೈಷ್ಟವ್ ಬೆಂಬಲವಾಗಿ ನಿಂತಿರುವ ಕಾರಣಕ್ಕೆ ಆ ಒಂದು ರೂಢಿ ವರ್ಕ್ ಆಗ್ತಾ ಇಲ್ಲ. ಈಗ ವಿಧಿ ಬೇರೆ ಅಮ್ಮನ ಸಹಾಯಕ್ಕೆ, ಲಕ್ಷ್ಮೀಗೆ ವಿರುದ್ಧವಾಗಿ ನಿಂತಿದ್ದಾಳೆ. ಇದು ವೈಷ್ಣವ್ ಪಾಲಿಗೂ ಸಂಕಷ್ಟದ ಗಳಿಗೆಯೇ ಸರಿ.

ವೈಷ್ಣವ್ ಇಷ್ಟು ದಿನ ಅಮ್ಮ ಎಲ್ಲರಂತಲ್ಲ ಎಂದುಕೊಂಡಿದ್ದ. ಅದಕ್ಕಾಗಿಯೇ ಲಕ್ಷ್ಮೀಯ ಪರವಾಗಿಯೇ ಮಾತನಾಡುತ್ತಿದ್ದ. ಅಮ್ಮ ಅರ್ಥ ಮಾಡಿಕೊಳ್ಳುತ್ತಾರೆ ಎಂದುಕೊಂಡಿದ್ದ. ಕಾವೇರಿ ಕೂಡ ವೈಷ್ಣವ್ ಮುಂದೆ ಅಂತದ್ದೆಲ್ಲವನ್ನು ಬಿಟ್ಟುಕೊಡುವುದಕ್ಕೆ ಸಿದ್ಧವಿರಲಿಲ್ಲ. ಹೀಗಾಗಿಯೇ ವೈಷ್ಣವ್ ಸಲೀಸಾಗಿ ಹೆಂಡತಿಯ ಪರ ಮಾತನಾಡುತ್ತಿದ್ದ. ಆದರೆ, ಈಗ ವೈಷ್ಣವ್‌ಗೆ ಸತ್ಯದ ದಿವ್ಯ ದರ್ಶನವಾಗಿದೆ .

Lakshmi Baramma serial Written Update on May 22nd episode

ಕಾವೇರಿಗೆ ಕಿವಿ ಊದಿದ ವಿಧಿ

ಕಾವೇರಿ ಕನ್ನಡಿಯ ಮುಂದೆ ನಿಂತು ತನ್ನ ಬಿಂಬದೊಂದಿಗೇನೆ ಮಾತನಾಡುತ್ತಿದ್ದಳು. ನನ್ನದೇನು ತಪ್ಪಿಲ್ಲ. ಕೀರ್ತಿಯನ್ನು ದೂರ ಮಾಡಿದ್ದು ಮಗನ ಒಳಿತಿಗಾಗಿಯೇ ಎಂದು ಹೇಳುತ್ತಿದ್ದಳು. ಅಷ್ಟರಲ್ಲಿ ವಿಧಿ ಅಲ್ಲಿಗೆ ಬಂದು ಜೋರು ಜೋರಾಗಿ ಮಾತನಾಡಲು ಶುರು ಮಾಡಿದಳು. ಲಕ್ಷ್ಮೀಯ ಮೇಲೆ ಸಾಕಷ್ಟು ದೂರು ಹೇಳಿದಳು, ಟಿಪಿಕಲ್ ಅತ್ತೆಯಂತೆ ಇರಿ ಅಂತ ಹೇಳಿ, ಕಾವೇರಿಯ ಮನಸ್ಸನ್ನು ಹಾಳು ಮಾಡುವುದಕ್ಕೆ ಪ್ರಯತ್ನ ಪಟ್ಟಳು.

ಕಾವೇರಿ ಮಾತಿಗೆ ಗಪ್ ಚುಪ್ ಆಗ್ತಾಳಾ ಲಕ್ಷ್ಮೀ?

ವಿಧಿ ಮತ್ತೆ ಅತ್ತೆ ಮಾತನಾಡುವಾಗಲೇ ಲಕ್ಷ್ಮೀಯ ಎಂಟ್ರಿಯೂ ಆಯ್ತು. ಹೇಗಾದರೂ ಮಾಡಿ ಅತ್ತೆಯನ್ನು ಒಪ್ಪಿಸಬೇಕೆಂದು ಲಕ್ಷ್ಮಿ ಬಂದಿದ್ದಳು. ಆದರೆ, ವಿಧಿಯ ಕೊಂಕು ಮಾತು ಕಾವೇರಿಯನ್ನು ಮತ್ತಷ್ಟು ಕೆರಳಿಸಿತ್ತು. ಲಕ್ಷ್ಮೀಯ ಯಾವ ಮಾತಿಗೆ ಒಪ್ಪಿಗೆ ಸೂಚಿಸುವ ಸ್ಥಿತಿಯಲ್ಲಿ ಕಾವೇರಿ ಇರಲಿಲ್ಲ. ಲಕ್ಷ್ಮೀ ವಿನಯತೆಯಿಂದಾನೇ ತವರು ಮನೆಯ ಸ್ಥಿತಿಯನ್ನು ವಿವರಿಸಲು ಯತ್ನಿಸಿದಳು. ವಿಧಿಯ ಕಿತಾಪತಿಯಿಂದ ಲಕ್ಷ್ಮೀಯ ಮನಸ್ಸಿಗೆ ನೋವಾಗುವಂತೆಯೇ ಆಯಿತು.

Lakshmi Baramma serial Written Update on May 22nd episode

ವೈಷ್ಣವ್‌ಗೆ ಸೂಕ್ಷ್ಮತೆ ತಿಳಿಸಿದ ಗಂಗಾ

ಗಂಗಾ ಅಡುಗೆ ಮನೆಯಲ್ಲಿ ಏನು ಕೆಲಸ ಇಲ್ಲ ಅಂತ ಕೊರಗಿಕೊಂಡು ನಿಂತಿದ್ದಳು. ಅಲ್ಲಿಗೆ ಬಂದ ವೈಷ್ಣವ್‌ಗೆ ಅಮ್ಮನ ನಿರ್ಧಾರ ಸುಪ್ರೀತಾಳಿಂದ ತಿಳಿಯಿತು. ಅಮ್ಮನಿಗೆ ಕ್ಲಾಸ್ ತೆಗೆದುಕೊಳ್ಳುತ್ತೀನಿ ಎಂದು ಹೊರಟ ವೈಷ್ಣವ್‌ಗೆ ಗಂಗಾ ನಿಲ್ಲಿಸಿಕೊಂಡು ಬುದ್ದಿ ಹೇಳಿದಳು. ಅತ್ತೆ-ಸೊಸೆಯ ಜಗಳ ಹೇಗಿರುತ್ತೆ..? ಯಾರ ಪರ ನಿಂತ್ರೆ ಏನಾಗುತ್ತೆ? ಎಂಬುದೆಲ್ಲವನ್ನು ವಿವರಿಸಿದಳು. ಆದರೆ ವೈಷ್ಣವ್‌ಗೆ ಗಂಗಾ ಹೇಳಿದಂತೆ ಅಮ್ಮ ಟಿಪಿಕಲ್ ಆಗಿ ಕಾಣಿಸಲಿಲ್ಲ. ವಾದ ಮಾಡಿ ಮುನ್ನಡೆದ.

ಅಮ್ಮನ ಪರ ನಿಂತ ವೈಷ್ಣವ್

ಅಮ್ಮನ ಬಳಿ ಮಾತು ಆಡಿಯೇ ಬಿಡೋಣಾ ಎಂದು ಬಂದ ವೈಷ್ಣವ್‌ಗೆ ಗಂಗಾ ಹೇಳಿದ ಸತ್ಯ ಅರಿವಾಗಿತ್ತು. ವಿಧಿ ಮತ್ತೆ ಕಾವೇರಿ ಬಾರಪ್ಪ ಬಾ ಹೆಂಡತಿ ಪರ ವಕಾಲತ್ತು ವಹಿಸಿಕೊಂಡು ಬಾ ಅಂತ ಕರೆದಾಗ, ವೈಷ್ಣವ್ ಬುದ್ದಿವಂತನಾಗಲು ಯತ್ನಿಸಿದ. "ಇನ್ನು ಮುಂದೆ ಲಕ್ಷ್ಮೀ ಅವರು ಅಂಗಡಿಗೆ ಹೋಗಲ್ಲ" ಎಂದು ಬಿಟ್ಟ. ಈ ಮಾತು ಕಾವೇರಿಗೆ, ವಿಧಿಗೆ ಖುಷಿ ನೀಡಿದರೆ, ಲಕ್ಷ್ಮೀಗೆ ನಂಬುವುದಕ್ಕೆ ಆಗದಂತ ಶಾಕ್ ನೀಡಿದೆ. ಹಾಗಲ್ಲ ರೀ ಎಂದು ಹೇಳುವುದಕ್ಕೂ ವೈಷ್ಣವ್ ಅವಕಾಶ ಮಾಡಿಕೊಡಲಿಲ್ಲ. ಅಮ್ಮ ಹೇಳಿದ್ದಾರೆ. ಅಂದ್ರೆ, ಅದಕ್ಕೊಂದು ಅರ್ಥ ಇರುತ್ತೆ ಎಂದುಬಿಟ್ಟ. ಈಗ ಅಮ್ಮನನ್ನು ಮೆಚ್ಚಿಸಿದ ವೈಷ್ಣವ್, ಹೆಂಡತಿಯನ್ನು ಅದೇಗೆ ಸಮಾಧಾನ ಮಾಡುತ್ತಾನೋ ಗೊತ್ತಿಲ್ಲ.

More from Filmibeat

English summary
Colors Kannada Lakshmi Baramma serial Written Update on May 22nd episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X