Lakshmi Baramma: ಸುಳ್ಳಿನ ಸರಮಾಲೆ ಪೋಣಿಸಲು ಹೊರಟ ವೈಷ್ಣವ್.. ಸಿಕ್ಕಿ ಬಿದ್ರೆ ಲಕ್ಷ್ಮೀ ಕಥೆಯೇನು?

By ಎಸ್ ಸುಮಂತ್

ವೈಷ್ಣವ್‌ಗೆ ಈಗ ದೊಡ್ಡ ಚಾಲೆಂಜ್ ಎದುರಾಗಿದೆ. ಒಂದು ಕಡೆ ಅಮ್ಮನನ್ನು ಸಪೋರ್ಟ್ ಮಾಡಬೇಕು. ಮತ್ತೊಂದು ಕಡೆ ಹೆಂಡತಿಯನ್ನು ಬಚಾವ್ ಮಾಡಬೇಕು. ಪ್ರತಿಸಲ ಹೆಂಡತಿ ಪರ ಮಾತನಾಡಿದಾಗೆಲ್ಲಾ ಲಕ್ಷ್ಮೀಗೆ ದುಷ್ಮನ್‌ಗಳು ಜಾಸ್ತಿಯಾಗಿದ್ದಾರೆ. ಈಗ ಪರಿಸ್ಥಿತಿ ಎಷ್ಟರ ಮಟ್ಟಿಗೆ ಬಂದು ನಿಂತಿದೆ ಅಂದ್ರೆ, ವೈಷ್ಣವ್ ಲಕ್ಷ್ಮೀ ಪರ ಅಲ್ಲ ವಿರುದ್ಧವಾಗಿಯೇ ಮಾತನಾಡಿದ್ದಾನೆ.

ಯಾವಾಗಲೂ ತನ್ನ ಪರ ನಿಲ್ಲುವ ಗಂಡನನ್ನು ಕಂಡು ಹೆಮ್ಮೆ ಪಡುತ್ತಿದ್ದ ಲಕ್ಷ್ಮೀಗೆ ಮೊದಲ ಬಾರಿಗೆ ವೈಷ್ಣವ್ ವರ್ತನೆ ಕಂಡು ಲಕ್ಷ್ಮೀ ಕಣ್ಣೀರಾಕುವಂತ ಪರಿಸ್ಥಿತಿ ಎದುರಾಗಿದೆ. ಅಮ್ಮನನ್ನು ಖುಷಿ ಪಡಿಸಿದ ವೈಷ್ಣವ್‌ಗೀಗ ಲಕ್ಷ್ಮೀಯ ಕಣ್ಣೀರು ಅಳಿಸಬೇಕಾದ ಪರಿಸ್ಥಿತಿ ಎದುರಾಗಿದೆ.

Lakshmi Baramma serial Written Update on May 23rd episode

ವೈಷ್ಣವ್ ನಡೆಗೆ ಕಾವೇರಿ ಖುಷಿ

ಲಕ್ಷ್ಮೀಯನ್ನು ಅಮ್ಮ ಮತ್ತು ತಂಗಿ ತರಾಟೆಗೆ ತೆಗೆದುಕೊಂಡಿದ್ದನ್ನು ಕಂಡು ವೈಷ್ಣವ್ ಬುದ್ದಿವಂತನಾಗಿದ್ದ. ಲಕ್ಷ್ಮೀಯ ವಿರುದ್ಧ ಮಾತನಾಡಿ, ಅಲ್ಲಿಂದ ಎಳೆದುಕೊಂಡು ಹೋಗಿಯೇ ಬಿಟ್ಟ. ಇದನ್ನು ಕಂಡ ಕಾವೇರಿಗೆ ಆನಂದ ತಡೆಯಲಾಗಲಿಲ್ಲ. ನನ್ನ ಮಗ ನನ್ನ ಮಾತು ಮೀರಲ್ಲ ಎಂಬ ನಂಬಿಕೆ ಹುಟ್ಟಿತು. ವಿಧಿ ಕೂಡ ಅಮ್ಮನಿಗೆ ಸಲಹೆ ನೀಡಿದಳು. "ನೀನು ಹೀಗೆ ಗಟ್ಟಿಯಾಗಿದ್ದರೆ ಮಾತ್ರ ಎಲ್ಲರೂ, ನಿಮ್ಮ ಮಾತು ಕೇಳುತ್ತಾರೆ" ಎಂದಾಗ ಕಾವೇರಿಗೆ ಮತ್ತಷ್ಟು ಗತ್ತು ಬಂದಿದೆ. ನನ್ನ ಮಗ ಯಾವತ್ತೂ ನನ್ನ ಬಿಟ್ಟು ಹೋಗಲ್ಲ. ಅತ್ತೆಯ ಶಾಪ ಯಾವತ್ತಿಗೂ ನನಗೆ ತಟ್ಟಲ್ಲ ಎಂದು ಮನಸ್ಸಲ್ಲಿಯೇ ಎಂದುಕೊಂಡಿದ್ದಾಳೆ.


ಕಣ್ಣೀರಲ್ಲಿ ಲಕ್ಷ್ಮೀ

ವೈಷ್ಣವ್ ಪರಿಸ್ಥಿತಿಯೂ ಲಕ್ಷ್ಮೀಗೆ ಅರ್ಥವಾಗುತ್ತದೆ. ಆದರೆ ತವರು ಮನೆಯ ಪರಿಸ್ಥಿತಿಯೂ ಸರಿಯಿಲ್ಲ. ದೊಡ್ಡಪ್ಪನನ್ನು ಹಣಕಾಸಿನ ವಿಚಾರದಿಂದ ಕಾಪಾಡಲೇಬೇಕಾಗಿದೆ. ಆ ಕಡೆ ಅತ್ತೆಯನ್ನು ಸಮಾಧಾನ ಮಾಡಲು ಆಗುತ್ತಿಲ್ಲ. ಈ ಕಡೆ ವೈಷ್ಣವ್ ಕೂಡ ಕೈಕೊಟ್ರು. ಮನೆಯನ್ನ ಅಡವಿಟ್ಟು ಬಡ್ಡಿ ಬೇರೆ ತಂದು ಆಗಿದೆ. ದಾರಿ ಕಾಣದೆ ಬಾತ್ ರೂಮಿನಲ್ಲಿ ಕೂತು ಲಕ್ಷ್ಮೀ ಕಣ್ಣೀರು ಹಾಕುತ್ತಿದ್ದಾಳೆ.

Lakshmi Baramma serial Written Update on May 23rd episode


ಗಂಗಾಳಿಗೂ ತಿಳಿಯಿತು ವೈಷ್ಣವ್ ಪ್ಲ್ಯಾನ್

ವೈಷ್ಣವ್‌ಗೆ ಲಕ್ಷ್ಮೀ ಸಂಕಷ್ಟದಲ್ಲಿರುವುದು ಗೊತ್ತಾಯ್ತು. ಹೇಗಾದರೂ ಮಾಡಿ ಸಮಾಧಾನ ಮಾಡೋಣಾ, ನನ್ನ ಪ್ಲ್ಯಾನ್ ಇದ್ದದ್ದು ಅದಲ್ಲ ಅಂತ ಹೇಳಲು ಹೋದಾಗ, ಗಂಗಾ ಮತ್ತೆ ಅತ್ತೆ ಮಗ ಇಬ್ಬರೂ ಎಳೆದುಕೊಂಡು ಹೋದರು. ಆಗ ವೈಷ್ಣವ್‌ಗೆ ಬುದ್ದಿ ಹೇಳಿದರು. ಮೊದಲು ಬುದ್ದಿ ಹೇಳುವುದನ್ನು ನಿಲ್ಲಿಸಿ ಪ್ಲ್ಯಾನ್ ಏನು ಅಂತ ಹೇಳಿ ಅಂದ್ರು. ಆಗ ಅತ್ತೆ ಮಗ ಒಂದು ಪ್ಲ್ಯಾನ್ ಕೊಟ್ಟ. ಔಟಿಂಗ್ ಅಂತ ಕರೆದುಕೊಂಡು ಹೋಗಿ ಅಂಗಡಿ ನಡೆಸಬಹುದು ಎಂದ.

ವೈಷ್ಣವ್ ಹೇಳಿದ್ದಕ್ಕೆ ಒಪ್ಪುತ್ತಾಳಾ ಲಕ್ಷ್ಮೀ?

ವೈಷ್ಣವ್ ಧೈರ್ಯವಾಗಿ ರೂಮಿಗೆ ಹೋದಾಗಲೂ ಲಕ್ಷ್ಮೀ ಇನ್ನು ಅಳುತ್ತಲೇ ಕೂತಿದ್ದಳು. ಹೊರಗೆ ಕರೆದು ಕ್ಷಮೆ ಕೇಳಿದ. ಲಕ್ಷ್ಮೀ ಪರವಾಗಿಲ್ಲ ಬಿಡಿ ಎಂದಾಗ ಸಮಸ್ಯೆ ಕೇಳಿದ. ವೈಷ್ಣವ್ ಮುಂದೆ ಗಳಗಳನೆ ಅತ್ತೆ ಬಿಟ್ಟಳು. ಈಗ ವೈಷ್ಣವ್ ಹೊಸ ದಾರಿಯೊಂದನ್ನು ತಿಳಿಸಿದ. ಮನೆಯಲ್ಲಿ ಸುಳ್ಳು ಹೇಳಿ ಅಂಗಡಿಗೆ ಹೋಗುವುದು. ಅದಕ್ಕೆ ಲಕ್ಷ್ಮೀ ಸುತರಾಂ ಒಪ್ಪಿಗೆ ನೀಡಿಲ್ಲ. ಬದಲಿಗೆ ಸತ್ಯ ಹೇಳೋಣಾ ಅಂತ. ಹೇಳಿದರೆ ಒಪ್ಪಲ್ಲ, ಮನೆ ಸಮಸ್ಯೆ ತೀರಲ್ಲ ಎಂಬುದು ಗೊತ್ತು. ಮನೆಯಲ್ಲಿ ಎಲ್ಲರೂ ನೆಮ್ಮದಿಯಾಗಿರಬೇಕು ಅಂದ್ರೆ, ಸುಳ್ಳು ಹೇಳಿಯೇ ಹೋಗಬೇಕು ಎಂದಾಯಿತು. ಈಗ ಸುಳ್ಳಿನ ಚೆಂಡು ಲಕ್ಷ್ಮೀ ಅಂಗಳದಲ್ಲಿದೆ.

More from Filmibeat

English summary
Colors Kannada Lakshmi Baramma serial Written Update on May 23rd episode. Here is the details Vaishnav new plan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X