Lakshmi Baramma: ಈ ಕಡೆ ಲಕ್ಷ್ಮೀ ಲಾಕ್.. ಆ ಕಡೆ ವೈಷ್ಣವ್ ಹೆಸರೇ ವ್ಯಾಪಾರಕ್ಕೆ ದಾರಿ..!
ಲಕ್ಷ್ಮೀಯನ್ನು ಸಪೋರ್ಟ್ ಮಾಡುವಷ್ಟು ಮಾಡಿದ್ದಾನೆ ವೈಷ್ಣವ್. ಲಕ್ಷ್ಮೀಗೆ ಗೌರವ ಕೊಟ್ಟಿದ್ದಾನೆ. ಅವಳದ್ದೇ ಆದ ಬದುಕನ್ನು ಬದುಕುವುದಕ್ಕೂ ಬಿಟ್ಟಿದ್ದಾನೆ. ಎಲ್ಲಾ ಫ್ರೀಡಂನೂ ಕೊಟ್ಟಿದ್ದಾನೆ.. ಆದ್ರೆ, ಈಗ ಆ ಬೆಂಬಲವೇ ಮುಳುವಾಗುತ್ತಿದೆ. ತಾಯಿಯ ಮುಂದೆ ಈಗ ಲಕ್ಷ್ಮೀಯನ್ನು ಸಪೋರ್ಟ್ ಮಾಡಿಕೊಳ್ಳಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾನೆ ವೈಷ್ಣವ್.
ಆ ಕಡೆ ಅಮ್ಮನಿಗೂ ನೋವಾಗುವುದು ಬೇಡ. ಈ ಕಡೆ ಲಕ್ಷ್ಮೀಗೂ ಬೇಸರ ಆಗುವುದು ಬೇಡ. ಈಗ ಬುದ್ದಿವಂತನಾಗಿರುವ ವೈಷ್ಣವ್ ಮನೆಯಲ್ಲಿ ನೆಮ್ಮದಿ ಕಾಣಲು ಪ್ಲ್ಯಾನ್ ಮಾಡಿದ್ದಾನೆ. ಅದಕ್ಕೆ ಗಂಗಾ ಮತ್ತು ಅತ್ತೆಯ ಮಗನು ಬೆಂಬಲವಾಗಿ ನಿಂತಿದ್ದಾರೆ. ಈಗ ಲಕ್ಷ್ಮೀಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗುವುದೇ ದೊಡ್ಡ ಸಾಹಸ.

ಲಕ್ಷ್ಮೀಯನ್ನು ಹೊರಗೆ ಕರೆದುಕೊಂಡು ಹೋಗೋದು ಹೇಗೆ ?
ಲಕ್ಷ್ಮೀಗೆ ಅಂಗಡಿಗೆ ಹೋಗುವುದು ಎಷ್ಟು ಅನಿವಾರ್ಯತೆ ಎಂಬುದು ವೈಷ್ಣವ್‌ಗೆ ಗೊತ್ತಿದೆ. ಈಗ ಹೊಸ ಕಮಿಟ್ಮೆಂಟ್ ಬೇರೆ ಒಪ್ಪಿಕೊಂಡು ಬಂದಿದ್ದಾಳೆ. ಹಣವನ್ನೇನೋ ಕೊಡಬಹುದು. ಆದರೆ, ವೈಷ್ಣವ್ ನೀಡುವ ಹಣವನ್ನು ಲಕ್ಷ್ಮೀ ತೆಗೆದುಕೊಳ್ಳಲ್ಲ. ಸ್ವಾಭಿಮಾನ ಅಡ್ಡ ಬರುತ್ತದೆ. ಹೀಗಾಗಿ ಲಕ್ಷ್ಮೀ ಅಂಗಡಿಗೆ ಹೋಗಲು, ಕಾವೇರಿಯ ಕಣ್ಣು ತಪ್ಪಿಸಲು ಹೊರಟಿದ್ದಾನೆ. ಈಗ ಲಕ್ಷ್ಮೀಯನ್ನು ಹೊರಗೆ ಕರೆದುಕೊಂಡು ಸ್ಟುಡಿಯೋ ನೆಪ ಮಾಡಿಕೊಂಡಿದ್ದಾನೆ.
ಕಾವೇರಿಗೂ ಈ ಐಡಿಯಾ ಇಷ್ಟವಿಲ್ಲ
ಎಲ್ಲರೂ ಊಟಕ್ಕೆ ಕುಳಿತಿದ್ದಾಗ ವೈಷ್ಣವ್, ಲಕ್ಷ್ಮೀಯನ್ನು ಬೇಗ ರೆಡಿಯಾಗುವುದಕ್ಕೆ ಹೇಳಿದ್ದಾನೆ. ಯಾಕೆ ಎಂದು ಕೇಳಿದರೆ, "ಸ್ಟುಡಿಯೋಗೆ ಕರೆದುಕೊಂಡು ಹೋಗುತ್ತೀನಿ. ಅಲ್ಲಿ ಎಲ್ಲರಿಗೂ ಪರಿಚಯ ಮಾಡಿಕೊಡುತ್ತೀನಿ. ಮಹಾಲಕ್ಷ್ಮಿಗೂ ಎಲ್ಲರ ಪರಿಚಯವಾಗಲಿ" ಎಂದಿದ್ದಾನೆ. ಅದಕ್ಕೆ ವಿಧಿ, "ನಿನ್ನ ಮರ್ಯಾದೆಯನ್ನು ನೀನೆ ತೆಗೆದುಕೊಳ್ಳುವುದಕ್ಕೆ ಇಷ್ಟೊಂದು ಆಸೆಯಾ" ಎಂದು ಕೇಳಿದ್ದಾಳೆ. ಆಗ ವಿಧಿಗೆ ಅಪ್ಪ- ಅಜ್ಜಿ ಬೈದಿದ್ದಾರೆ. ಆದರೆ, ಕಾವೇರಿಯದ್ದು ಅದೇ ವಾದ. "ವಿಧಿ ವಿಚಾರ ಅಲ್ಲಿರಲಿ. ನನಗೂ ಅದು ಸರಿ ಎನಿಸುತ್ತಿಲ್ಲ. ಈಗ ಲಕ್ಷ್ಮೀಯನ್ನು ಯಾಕೆ ಕರೆದುಕೊಂಡು ಹೋಗಬೇಕು. ಪರಿಚಯ ಮಾಡಿಕೊಡಬೇಕು ಅಂದ್ರೆ, ಮನೆಯಲ್ಲಿಯೇ ಸಣ್ಣದೊಂದು ಪಾರ್ಟಿ ಇಟ್ಟುಕೊ" ಎಂದಿದ್ದಾಳೆ.
ಪೂಜಾಳಿಂದ ಹೊಸ ಪ್ಲ್ಯಾನ್
ಪೂಜಾ ಯಾವತ್ತು ತಾನಾಗಿಯೇ ತಾನೂ ಕೆಲಸ ಮಾಡಿದ್ದೇ ಇಲ್ಲ. ಲಕ್ಷ್ಮೀಯನ್ನೇ ಕಣ್ಣೀರು ಹಾಕಿಸಿದ್ದಾರೆ. ಆದರೆ, ಈಗ ಅಂಗಡಿಗೋಸ್ಕರ ಅಮ್ಮ ಮಗಳು ಸೇರಿ ಹೊಸದೊಂದು ಪ್ಲ್ಯಾನ್ ಮಾಡುತ್ತಾ ಕೂತಿದ್ದಾರೆ. ವೈಷ್ಣವ್ ಹೆಸರಲ್ಲಿ ಸಂಜೆಗೆ ಪೂಜೆ ಬೇರೆ ಇಟ್ಟುಕೊಂಡಿದ್ದಾರೆ. ಆ ಕಡೆ ಲಕ್ಷ್ಮೀಯ ಪರಿಸ್ಥಿತಿಯನ್ನೇ ಅರ್ಥ ಮಾಡಿಕೊಳ್ಳದೆ ಸಂಜೆ ಪೂಜೆಗೆ ಬಂದು ಬಿಡಿ ಅಂತ ಹೇಳಿದ್ದಾಳೆ. ಲಕ್ಷ್ಮೀಗೆ ಇವರ ಸ್ವಾರ್ಥ ಗೊತ್ತಿದ್ದರೂ, ಮೊದಲು ತವರು ಮನೆ ಅಂತ ಕನಿಕರ ತೋರಿಸುತ್ತಿದ್ದಾಳೆ.
ಪೂಜಾ ಹೊಸ ಐಡಿಯಾ ವರ್ಕೌಟ್ ಆಗುತ್ತಾ?
ಪೂಜಾಗೆ ವೈಷ್ಣವ್ ಖ್ಯಾತಿ ಗೊತ್ತು. ಒಂದೇ ಒಂದು ದಿನ ವೈಷ್ಣವ್ ಅಂಗಡಿಗೆ ಬಂದಾಗಲೇ ಅಷ್ಟೊಂದು ವ್ಯಾಪಾರ ಆಗಿತ್ತು. ಈಗ ಅದನ್ನೇ ಬಂಡವಾಳ ಮಾಡಿಕೊಂಡಿದ್ದಾಳೆ ಪೂಜಾ. ಅಂಗಡಿ ಮುಂದೆ ಪೋಸ್ಟರ್ ಅಂಟಿಸಿದ್ದಾಳೆ. ಇಷ್ಟು ಹಣಕ್ಕೆ ವ್ಯಾಪಾರ ಮಾಡಿದರೆ ಒಂದು ಸೆಲ್ಫಿ, ಅಷ್ಟು ವ್ಯಾಪಾರ ಮಾಡಿದರೆ ಸಾಂಗ್ ಹಾಡಿಸುವುದು. ಹೀಗೆ ಅನೇಕ ರೀತಿಯ ಆಫರ್ ಗಳನ್ನು ವೈಷ್ಣವ್ ಹೆಸರಲ್ಲಿ ದೊಡ್ಡ ದೊಡ್ಡ ಪೋಸ್ಟರ್ ಮಾಡಿ ಅಂಟಿಸಿದ್ದಾಳೆ ಪೂಜಾ. ಇದು ಕಾವೇರಿಗೆ ತಿಳಿದರೆ ಮುಗೀತು ಕಥೆ.


Click it and Unblock the Notifications











