Lakshmi Baramma: ವೈಷ್ಣವ್ ಜೊತೆ ಲಕ್ಷ್ಮೀ ಅಂಗಡಿಗೆ.. ಕಾವೇರಿ ಜೊತೆ ಕೀರ್ತಿ ಶಾಪಿಂಗ್‌ಗೆ.. ಸಿಕ್ಕಿಬೀಳೋರು ಯಾರು?
ಮಗನ ಮದುವೆಯನ್ನು ಮಾಡಬೇಕೆಂಬ ಹಠಕ್ಕೆ ಬಿದ್ದ ಕಾವೇರಿಗೆ ಕೀರ್ತಿ ಬೇಡವಾಗಿದ್ದಳು. ಅದಕ್ಕೆ ಕಾರಣ ಕೀರ್ತಿ ಹೇಳಿದಂತೆ ಕೇಳಲ್ಲ. ನಾನು ಹೇಳಿದ ಮಾತನ್ನು ಸೊಸೆ ಕೇಳಬೇಕು. ಮಗನನ್ನು ದೂರ ಮಾಡಬಾರದು ಎಂಬುದು ಕಾವೇರಿಯ ಉದ್ದೇಶವಾಗಿತ್ತು. ಆದಕ್ಕೆ ಅಂತಾನೆ ಕೀರ್ತಿಯಿಂದಾನೇ ನಾಟಕ ಶುರು ಮಾಡಿ, ಮಗನಿಗೆ ಬೇರೆ ಮದುವೆಯನ್ನು ಮಾಡಿ ಬಿಟ್ಟಳು. ಆದರೆ ಈಗ ಅದೇ ಕೀರ್ತಿಯಿಂದ ನೆಮ್ಮದಿ ಇಲ್ಲದಂತೆ ಆಗಿದೆ.
ವೈಷ್ಣವ್‌ಗೆ ಸತ್ಯವೇ ಗೊತ್ತಿಲ್ಲ. ಕೀರ್ತಿ ಮಾಡುತ್ತಿರುವುದೆಲ್ಲಾ ನಾಟಕ ಎಂದೇ ಭಾವಿಸಿದ್ದಾನೆ. ಈ ಕಡೆ ಕೃಷ್ಣನಿಗೂ ಗೊತ್ತಿಲ್ಲ. ಕಾವೇರಿ ಆಡಿರುವ ಒಂದೇ ಒಂದು ದೊಡ್ಡ ನಾಟಕದಿಂದ ಕೀರ್ತಿ ಸಲೀಸಾಗಿ ಬಕ್ರ ಮಾಡುತ್ತಿದ್ದಾಳೆ.

ವೈಷ್ಣವ್ ಮಾಡಿದ ಪ್ಲ್ಯಾನ್ ಸಕ್ಸಸ್
ಲಕ್ಷ್ಮೀಯನ್ನು ಹೇಗಾದರೂ ಮಾಡಿ ಅಂಗಡಿಯಲ್ಲಿ ಕೂರಿಸಬೇಕು ಎಂಬುದು ವೈಷ್ಣವ್ ಗ್ಯಾಂಗ್‌ನ ಮಾಸ್ಟರ್ ಪ್ಲ್ಯಾನ್. ಅಮ್ಮ ನೋಡಿದ್ರೆ ಸ್ಟುಡಿಯೋದವರನ್ನೆಲ್ಲಾ ಇಲ್ಲಿಯೇ ಕರೆಸು. ಮನೆಯಲ್ಲಿಯೇ ಪಾರ್ಟಿ ಇಟ್ಟುಕೊಳ್ಳೋಣಾ ಎಂದಿದ್ದಾರೆ. ಅದಕ್ಕೆ ವೈಷ್ಣವ್ ಅಂಡ್ ಗ್ಯಾಂಗ್ ಮಾಡಿದ ಪ್ಲ್ಯಾನ್ ವರ್ಕೌಟ್ ಆಯ್ತು. ಅವರು ಬರಲ್ಲ ಅಂದ್ರು ನಾನು ಕರೆದುಕೊಂಡು ಹೋಗ್ತೀನಿ ಎಂದಿದ್ದಕ್ಕೆ ಕಾವೇರಿಗೆ ಕೋಪ ಬಂತು. ಆದರೆ, ಕೃಷ್ಣನಿಗೆ ಬೇರೆಯದ್ದೇ ಅರ್ಥವಾಗಿತ್ತು. ಹೆಂಡತಿ ಜೊತೆ ಸಮಯ ಕಳೆಯಬೇಕು ಅಂತಿದ್ದಾನೆ ಬಿಡು ಅಂತ ಪರ್ಮಿಷನ್ ಕೊಟ್ಟೆ ಬಿಟ್ಟ.
ಕೀರ್ತಿಯಿಂದ ವೈಷ್ಣವ್‌ಗೆ ಕೋಪ
ಲಕ್ಷ್ಮೀ ಮತ್ತು ವೈಷ್ಣವ್ ರೆಡಿಯಾಗಿ ಹೊರಗೆ ಬಂದರು. ಸೊಸೆಯನ್ನು ನೋಡಿದ ಕಾವೇರಿ ಸ್ಟುಡಿಯೋಗೆ ಹೋಗ್ತಿದ್ದಾರೆ ಎಂದುಕೊಂಡು, ಉಟ್ಟಿದ್ದ ಸೀರೆಯನ್ನು ಸರಿ ಮಾಡಲು ನೋಡಿದಳು. ಅದನ್ನು ಕಂಡು ಲಕ್ಷ್ಮೀ ಮರುಗಿ ಸತ್ಯ ಹೇಳಲು ಹೊರಟಾಗ, ವೈಷ್ಣವ್ ಅದನ್ನು ತಪ್ಪಿಸಿ ಕರೆದುಕೊಂಡು ಹೋಗಲು ಹೊರಟ. ಎದುರುಗಡೆ ಕೀರ್ತಿಯ ದರ್ಶನವಾಗಿತ್ತು. ಏನೇನೋ ಮಾತನಾಡಿ ಮನೆಯವರ ಮೂಡನ್ನು ಹಾಳು ಮಾಡಿದಳು. ಲಕ್ಷ್ಮೀಯನ್ನು ನನ್ನ ಜೊತೆಗೆ ಕಳುಹಿಸು ಎಂದಾಗ ನನ್ನ ಹೆಂಡತಿಯನ್ನು ಎಲ್ಲೂ ಕಳುಹಿಸಲ್ಲ ಎಂದ.

ಕೀರ್ತಿಯಿಂದ ಸಂಕಷ್ಟ
ಆಲ್ಬಂ ಸಾಂಗಿಗೆ ಇಂತದ್ದೆ ಡ್ರೆಸ್ ಬೇಕು. ಅದು ನಂಗೆ ಗೊತ್ತಾಗಲ್ಲ. ಅದಕ್ಕೆ ಲಕ್ಷ್ಮೀ ಅಲ್ಲದೇ ಇದ್ರೆ ಅತ್ತೆಯನ್ನಾದರೂ ಕಳುಹಿಸು ಅಂದೇ ಬಿಟ್ಲು ಕೀರ್ತಿ. ಎಲ್ಲರೂ ಒಂದು ಕ್ಷಣ ಶಾಕ್ ಆದರು. ಸುಪ್ರಿತಾ ಮೊದಲೇ ಕೆಡುಕಿ, ಅತ್ತೆನಾ ನಿಂಗೆ, ಯಾವ ಅತ್ತೆ ಇದ್ದಾರೆ ಕೀರ್ತಿ ಎನ್ನುತ್ತಿದ್ದಂತೆ ಕಾವೇರಿ ಅತ್ತೆ ಎಂದಿದ್ದಾಳೆ. ಕಾವೇರಿ ಹೂ ಎಸೆದು ವಾರ್ನಿಂಗ್ ಕೊಟ್ರು ಬಗ್ಗಲಿಲ್ಲ. ಕಡೆಗೆ ಕಾವೇರಿಯೇ ಅದಕ್ಕೊಂದು ಸಮರ್ಥನೆ ಕೊಟ್ಟಳು. ಅದು ಲಕ್ಷ್ಮೀಯ ಅತ್ತೆ ಅಂತ.
ಮಾತು ತಿರುಗಿಸಿ ಬಚಾವ್ ಆದ ವೈಷ್ಣವ್
ಇತ್ತ ಮನೆಯಿಂದ ಹೊರಗೆ ಹೇಗೋ ತಪ್ಪಿಸಿಕೊಂಡು ಗಂಡ ಹೆಂಡತಿ ಬಂದ್ರು. ಮಾತನಾಡುತ್ತಾ, ಸರಿ ನೀವೂ ಗಾಡಿ ತಗೊಂಡು ಹೊರಡಿ. ಅಲ್ಲಿಂದ ಹೊರಟ ಕೂಡಲೇ ಹೇಳಿ ಅಂತ ವೈಷ್ಣವ್ ಹೇಳಿದ. ಹಿಂದೆ ವಿಧಿ ಬಂದಿದ್ದು ಗಮನಿಸಲೇ ಇಲ್ಲ. ವಿಧಿಗೆ ಅನುಮಾನ ಬಂದೇ ಬಿಡ್ತು ಅಂದ್ರೆ, ನೀವಿಬ್ಬರು ಬೇರೆ ಬೇರೆ ಹೋಗ್ತಾ ಇರೋದಾ ಅಂತ ಕೇಳಿದಾಗ ವೈಷ್ಣವ್ ಶಾಕ್. ಹಾಗೇನು ಇಲ್ಲ ಆ ಗಾಡಿ ನೋಡಿ ಒಂದು ರೌಂಡ್ ಓಡಿಸ್ತೀನಿ ಅಂದ್ರು ಅಂತ ಬ್ಯಾಲೆನ್ಸ್ ಮಾಡಿದ. ಒಂದೇ ಕಾರಲ್ಲಿ ಒಟ್ಟಿಗೆ ಹೊರಟ ಜೋಡಿ ಅಂಗಡಿಯಿಂದ ಸ್ಟುಡಿಯೋಗೆ ದಾರಿ ಬೆಳೆಸುತ್ತಾರೆ. ಆ ಕಡೆ ಒಂದು ಆಟ, ಈ ಕಡೆ ಒಂದು ಆಟ.. ಇಬ್ಬರಲ್ಲಿ ಸಿಕ್ಕಿ ಬೀಳುವವರು ಯಾರೋ..?


Click it and Unblock the Notifications











