Lakshmi Baramma: ಸೊಸೆಗಾಗಿ ಪ್ರೀತಿಯಿಂದ ಮಾಂಗಲ್ಯ ತೆಗೆದುಕೊಂಡ ಕಾವೇರಿಗೆ ಮಗನಿಂದ ಆಘಾತ..!

By ಎಸ್ ಸುಮಂತ್

ಕೀರ್ತಿಯಿಂದ ತಪ್ಪಿಸಿಕೊಂಡರೆ ಸಾಕು ಎನ್ನುವ ಹಂತಕ್ಕೆ ತಲುಪಿದ್ದಾಳೆ ಕಾವೇರಿ. ಕಾವೇರಿಯನ್ನು ಬೆಂಬಿಡದೆ ಕಾಡುತ್ತಿದ್ದಾಳೆ. ಕಾವೇರಿಯ ವೀಕ್ನೆಸ್ ಪಾಯಿಂಟ್ ಹಿಡಿದುಕೊಂಡು ತರಹೇವಾರಿ ಆಟ ಆಡಿಸುತ್ತಿದ್ದಾಳೆ. ಆಲ್ಬಂ ಸಾಂಗಿಗೆ ಬೇಡ ಅಂತ ವೈಷ್ಣವ್ ನಿರ್ಧಾರ ಮಾಡಿ ಆಗಿತ್ತು. ಆದರೆ, ಕಾವೇರಿ ಮನಸ್ಸು ಮಾಡಿದರೆ ಆಗುತ್ತೆ ಎಂದು ತಿಳಿದಿದ್ದ ಕೀರ್ತಿ ಎಲ್ಲಿಂದ ಕೆಲಸ ಮಾಡಿಸಿಕೊಳ್ಳಬೇಕೋ ಅಲ್ಲಿಂದ ಮಾಡಿಸಿಕೊಂಡಿದ್ದಾಳೆ.

ಈಗ ವೈಷ್ಣವ್ ಜೊತೆಗಿನ ಆಲ್ಬಂ ಹಾಡಿನ ನೆಪ ಇಟ್ಟುಕೊಂಡು, ಮದುವೆಯ ತಯಾರಿ ಮಾಡಿಕೊಳ್ಳುತ್ತಿದ್ದಾಳೆ. ಕಾವೇರಿಯನ್ನೇ ಶಾಪಿಂಗ್ ಮಾಡುವುದಕ್ಕೆ ಕರೆದುಕೊಂಡು ಹೋಗಿದ್ದಾಳೆ. ಕೀರ್ತಿಯ ರಂಪಾಟಕ್ಕೆ ಕಾವೇರಿ ಸೋತು ಸುಣ್ಣವಾಗಿದ್ದಾಳೆ. ಏನು ಮಾಡಬೇಕು ಎಂದು ತಿಳಿಯದೆ ಮನಸ್ಸಲ್ಲಿ ಕೋಪ ಬಂದರೂ ಅದನ್ನು ತಡೆಯುತ್ತಿದ್ದಾಳೆ.

Lakshmi Baramma serial Written Update on May 26th episode

ಸೊಸೆಗಾಗಿ ಮಾಂಗಲ್ಯ ತೆಗೆದುಕೊಂಡ ಕಾವೇರಿ

ಕೀರ್ತಿ ಅದೆಷ್ಟು ಮೊಂಡಿ ಆಗಿದ್ದಾಳೆ ಅಂದ್ರೆ, ಕಾವೇರಿಗೆ ಹಿಂಸೆಯಾಗ್ತಿದೆ ಅಂದ್ರು ಬಿಡದೆ ಅದು ಚೆನ್ನಾಗಿದ್ಯಾ, ಇದು ಚೆನ್ನಾಗಿದ್ಯಾ ಅಂತ ಕೇಳಿ ಕೇಳಿ ಚುಚ್ಚುತ್ತಿದ್ದಾಳೆ. ಕಾವೇರಿ ಕೋಪಗೊಳ್ಳುವಂತೆಯೂ ಇಲ್ಲ. ಈ ಕಡೆ ಆ ಸೀರೆ ಚೆನ್ನಾಗಿದ್ಯಾ, ಎಂಗೇಜ್‌ಮೆಂಟ್‌ಗೆ ಈ ಉಂಗುರ ಚೆನ್ನಾಗಿದ್ಯಾ ಅಂತ ಬೇರೆ ಹಿಂಸೆ ಕೊಡುತ್ತಿದ್ದಾಳೆ. ಇದರ ನಡುವೆ ಕಾವೇರಿಗೆ ತಕ್ಷಣಕ್ಕೆ ತನ್ನ ಸೊಸೆಯ ನೆನೆಪಾಗಿದೆ. ಇನ್ನು ಅರಿಶಿನದ ದಾರದಲ್ಲಿಯೇ ಇದ್ದಾಳೆ ಎಂದು ನೆನಪಾಗಿ ಸೊಸೆಗೋಸ್ಕರ ಮಾಂಗಲ್ಯ ತೆಗೆದುಕೊಂಡಿದ್ದಾಳೆ.

ವೈಷ್ಣವ್‌ಗಾಗಿ ಧ್ವನಿ ಎತ್ತಿದ ಲಕ್ಷ್ಮೀ

ಪೂಜಾ ಅಂಗಡಿಯಲ್ಲಿ ವ್ಯಾಪಾರಕ್ಕಾಗಿ ದೊಡ್ಡ ಪ್ಲ್ಯಾನ್ ಅನ್ನೇ ಮಾಡಿದ್ದಳು. ವೈಷ್ಣವ್ ಜೊತೆಗೆ ಫೋಟೋ ಬೇಕು ಅಂದ್ರೆ ವ್ಯಾಪಾರ ಮಾಡಿ ಎಂದು ದೊಡ್ಡ ದೊಡ್ಡ ಪೋಸ್ಟರ್ ಅಂಟಿಸಿದ್ದಳು. ಮನೆಯಲ್ಲಿ ಸುಳ್ಳು ಹೇಳಿ ಬಂದ ಲಕ್ಷ್ಮೀ ಕಣ್ಣಿಗೆ ಅದು ಕೆಟ್ಟದಾಗಿ ಕಾಣಿಸಿದೆ. ಆ ಪೋಸ್ಟರ್ ಗಳನ್ನೆಲ್ಲಾ ಹರಿದು ಹಾಕಿ, ಪೂಜಾ ಹಾಗೂ ದೊಡ್ಡಮ್ಮನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ನನ್ನ ಗಂಡನ ಹೆಸರನ್ನು ಯಾವುದೇ ಕಾರಣಕ್ಕೂ ಬಳಸಿಕೊಳ್ಳುವಂತಿಲ್ಲ. ಅವರು ನನ್ನ ಗಂಡ ಈ ಮನೆಯ ಅಳಿಯ. ಗೌರವ ಕೊಡುವುದನ್ನು ಕಲಿ ಎಂದಿದ್ದಾರೆ. ಲಕ್ಷ್ಮೀಯ ಕೋಪ ಕಂಡು ವೈಷ್ಣವ್ ಶಾಕ್ ಆಗಿದ್ದಾರೆ. ದೊಡ್ಡಮ್ಮನಿಗೆ ಮಾತೇ ಬರುತ್ತಿಲ್ಲ. ದೊಡ್ಡಪ್ಪ ಹೊಗಳುತ್ತಿದ್ದಾರೆ.

Lakshmi Baramma serial Written Update on May 26th episode

ಮಾಂಗಲ್ಯ ಕೊಟ್ಟು ಹರಸಲು ಹೊರಟ ಕಾವೇರಿ

ಮೊದಲು ಮಗ ಮತ್ತು ಸೊಸೆಯನ್ನು ಈ ಮಾಂಗಲ್ಯ ಹಾಕಿಸಿ, ದೇವಸ್ಥಾನಕ್ಕೆ ಕಳುಹಿಸಬೇಕು ಎಂದುಕೊಂಡಿದ್ದಾಳೆ. ಮನಸ್ಸಲ್ಲಿ ನೆನೆದು ಇನ್ನೇನು ಈ ಕಡೆ ತಿರುಗುವಷ್ಟರಲ್ಲಿ ಕೀರ್ತಿ ಕೈನಲ್ಲಿ ಮಾಂಗಲ್ಯದ ಸರಗಳಿದ್ದವು. ಈಗಲೇ ತೆಗೆದುಕೊಂಡರೆ ಅಪಶಕುನ ಅಂತ ನೆಪ ಹೇಳಿ ಹೇಗೋ ಮಾಂಗಲ್ಯ ತೆಗೆದುಕೊಳ್ಳುವುದನ್ನು ತಪ್ಪಿಸಿದ್ದಾಳೆ.

ಕಾವೇರಿಗೆ ಸತ್ಯ ಗೊತ್ತಾಗಿ ಹೋಯ್ತು

ಕಾವೇರಿ ಶಾಪಿಂಗ್ ನಿಂದ ಕೀರ್ತಿಯನ್ನು ಮನೆಗೆ ಕಳುಹಿಸಿ ಸೀದಾ ವೈಷ್ಣವ್ ಸ್ಟುಡಿಯೋಗೆ ಹೋಗಿದ್ದಾಳೆ. ಲಕ್ಷ್ಮೀಗೆ ಮಾಂಗಲ್ಯ ಕೊಡಬೇಕು ಎಂಬ ದೃಷ್ಟಿಯಿಂದ. ಅಲ್ಲಿ ನೋಡಿದರೆ ಇಬ್ಬರು ಇಲ್ಲ. ಸ್ಟುಡಿಯೋದವರೆ ಸುಳ್ಳು ಹೇಳುತ್ತಿದ್ದಾರೆ ಎಂದು ಕಾವೇರಿ ಭಾವಿಸಿದ್ದಾಳೆ. ಆದರೆ ಒಳಗೆ ಹೋಗಿ ನೋಡಿದಾಗ ಸತ್ಯದ ಅರಿವಾಗಿದೆ. ವೈಷ್ಣವ್ ಮತ್ತು ಲಕ್ಷ್ಮೀ ಇಬ್ಬರು ಇಲ್ಲ. ಬಂದಿಲ್ಲ ಎಂಬ ಸತ್ಯವೂ ಗೊತ್ತಾಗಿದೆ. ಅಮ್ಮನ ಬಳಿಯೇ ಸುಳ್ಳು ಹೇಳಿ ಬಿಟ್ಟರಲ್ಲ ಎಂಬ ಬೇಸರವೂ ಅವಳನ್ನು ಕಾಡುತ್ತಿದೆ. ಜೊತೆಗೆ ಅತ್ತೆಯ ಶಾಪವೂ ನೆನಪಾಗುತ್ತಿದೆ. ಕಾವೇರಿಗೆ ಅದೇ ದೊಡ್ಡ ಚಿಂತೆಯಾಗಿ ಬಿಟ್ಟಿದೆ.

More from Filmibeat

English summary
Colors Kannada Lakshmi Baramma serial Written Update on May 26th episode. Here is the details Kaveri visit Vaishnav studio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X