Lakshmi Baramma: ಜ್ಯೋತಿಷಿ ಹೇಳಿದ‌ ಮಾತನ್ನೇ ಅಪಾರ್ಥ ಮಾಡಿಕೊಂಡ‌ ಕಾವೇರಿ.. ಲಕ್ಷ್ಮೀಯನ್ನು ದ್ವೇಷಿಸುತ್ತಾಳಾ..?

By ಎಸ್ ಸುಮಂತ್

ಕರ್ಮ ರಿಟರ್ನ್ ಅನ್ನೋ ಮಾತಿದೆ. ಈ ಮಾತನ್ನು ಸುಪ್ರೀತಾ ಚೆನ್ನಾಗಿಯೇ ನಂಬಿದ್ದಾಳೆ. ನನ್ನ ಅಮ್ಮನಿಂದ ಮಗನನ್ನು ದೂರ ಮಾಡಿದ್ದ ಅತ್ತಿಗೆಗೆ ದೇವರು ಶಿಕ್ಷೆ ನೀಡುತ್ತಿದ್ದಾನೆ ಎಂದೇ ಭಾವಿಸಿದ್ದಾಳೆ. ಸುಪ್ರೀತಾ ಯಾವಾಗಲೂ ಕಾವೇರಿಯನ್ನು ಗೋಳಾಡಿಸುತ್ತಲೇ ಇರುತ್ತಾಳೆ. ಚಾನ್ಸ್ ಸಿಕ್ಕಿದಾಗೆಲ್ಲಾ ಅತ್ತಿಗೆಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾಳೆ. ಅದರಲ್ಲೂ ಈಗ ಬೇರೆ ಕೀರ್ತಿಯಿಂದ ಏನೋ ಮೆಂಟೈನ್ ಮಾಡ್ತಿದ್ದಾಳೆ ಎಂಬ ಸತ್ಯ ಗೊತ್ತಾಗಿದೆ.

ಆದ್ರೆ, ಈಗ ಕಾವೇರಿಗೆ ಆತಂಕ ಶುರುವಾಗಿದೆ. ಮಗ ನನ್ನ ಕೈ ಬಿಟ್ಟು ಹೋಗ್ತಾನೇನೋ ಎಂಬ ಭಯ ಇದೆ ಅವಳಿಗೆ. ಲಕ್ಷ್ಮೀ ಯಿಂದಾಗಿ ವೈಷ್ಣವ್ ತಾಯಿಯ ಜೊತೆ ಈ ಮೊದಲಿನಂತೆ ಇಲ್ಲ. ಇದು ಕಾವೇರಿಯ ಕೋಪಕ್ಕೆ ಕಾರಣವಾಗಿದೆ.

Lakshmi Baramma serial Written Update on May 3rd episode

ಲಕ್ಷ್ಮೀಗೆ ವೈಷ್ಣವ್ ಸಪೋರ್ಟ್

ಲಕ್ಷ್ಮೀಯ ತವರು ಮನೆ ನಡೆಯಬೇಕು ಎಂದರೆ ಈಗ ಲಕ್ಷ್ಮೀಯಿಂದ ಮಾತ್ರ ಸಾಧ್ಯ. ಯಾಕಂದ್ರೆ ಲಕ್ಷ್ಮೀ ಇದ್ದಾಗ ಈ ಅಂಗಡಿಯಿಂದಾನೇ ಸಂಸಾರ ನಡೆಯುತ್ತಾ ಇತ್ತು. ಆದರೆ ಲಕ್ಷ್ಮೀ ಮದುವೆಯಾದ ಮೇಲೆ ಅಂಗಡಿಯನ್ನು ಬಿಟ್ಟುಕೊಡುವಂತೆ ಮಾಲೀಕರು ಒತ್ತಾಯ ಮಾಡಿದಾಗ, ಲಕ್ಷ್ಮೀಯನ್ನೇ ಅಂಗಡಿಯಲ್ಲಿ ಕೂರಿಸಿದ್ದಾನೆ ವೈಷ್ಣವ್. ಅತ್ತೆ ಏನು ಹೇಳುತ್ತಾರೋ ಎಂದು ಭಯ ಒಟ್ಟರು, ಧೈರ್ಯ ಹೇಳಿದ ವೈಷ್ಣವ್, ಲಕ್ಷ್ಮೀ ಗೆ ಧೈರ್ಯ ಹೇಳಿ, ಆಲ್ ದಿ ಬೆಸ್ಟ್ ಹೇಳಿದ್ದಾನೆ.

ಗಂಡನ ಕೆಲಸಕ್ಕೆ ಕಾವೇರಿ ಆತಂಕ

ಈ ಕಡೆ ಕಾವೇರಿ ಎಷ್ಟೇ ಪ್ರಯತ್ನ ಪಟ್ಟರು ಮಗ ಮತ್ತು ಸೊಸೆಯನ್ನು ಬಹಳ ಬೇಗ ಮನೆಗೆ ಕರೆಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಆದ್ರೆ, ಈ ಕಡೆ ಗಂಡ ಮಾಡಿದ ಕೆಲಸಕ್ಕೆ ಕೋಪಗೊಂಡಿದ್ದಾಳೆ. ಸೊಸೆ ಮತ್ತು ಮಗನ ಫೋಟೋ ಫ್ರೇಮ್ ಮಾಡಿ ದೊಡ್ಡದಾಗಿ ರೂಮಿನಲ್ಲಿ ಹಾಕಿಸಿದ್ದಾನೆ. ಇದನ್ನು ಕಂಡ ಸುಪ್ರೀತಾ ಅತ್ತಿಗೆಗೆ ಇನ್ನಷ್ಟು ಕೋಪ ಬರುವಂತೆ ಮಾತನಾಡಿದ್ದಾಳೆ. ನಾದಿನಿ ಮಾತು ಕೇಳಿ ಆತಂಕಗೊಂಡ ಕಾವೇರಿ, ಸೀದಾ ಜ್ಯೋತಿಷಿ ಹತ್ತಿರ ಹೋಗಿದ್ದಾಳೆ.

Lakshmi Baramma serial Written Update on May 3rd episode

ಕಾವೇರಿಗೆ ಆದ ಟೆನ್ಶನ್ ಏನು..?

ಕೀರ್ತಿ ಸೊಸೆ ಬರುವುದು ಕಾವೇರಿಗೆ ಇಷ್ಟವಿರಲಿಲ್ಲ. ಆ ಕಾರಣಕ್ಕಾಗಿಯೇ ಕೀರ್ತಿಯನ್ನು ಬಿಟ್ಟು ಲಕ್ಷ್ಮೀಯನ್ನು ಮದುವೆಯಾಗುವಂತೆ ಮಾಡಿದಳು. ಮೊದಲಿಗೆ ಲಕ್ಷ್ಮೀ ಮತ್ತು ತನ್ನ ಜಾತಕವನ್ನು ತೋರಿಸಿದ್ದಳು. ಈಗ ಮಗ ಮತ್ತು ಸೊಸೆ ಜಾತಕ ತೆಗೆದುಕೊಂಡು ಹೊರಟಿದ್ದಾಳೆ. ಅದೇ ಜ್ಯೋತಿಷ್ಯರ ಬಳಿ ತೋರಿಸಿದ್ದಾಳೆ. ಅವರು ಹೇಳಿದ ಮಾತಿಗೆ ಕಾವೇರಿ ದಂಗಾಗಿ ಹೋಗಿದ್ದಾಳೆ. ಏನೇ ಆದರೂ ವೈಷ್ಣವ್ ಮೊದಲು ಪ್ರಾಶಸ್ತ್ಯ ನೀಡುವುದು ಹೆಂಡತಿಗೆ. ಯಾಕಂದ್ರೆ, ಅವರಿಬ್ಬರದ್ದು ವಿಷ್ಣು - ಲಕ್ಷ್ಮೀ ಜಾತಕ ಎಂದಿದ್ದಾರೆ. ಆದರೆ ಹೆಂಡತಿಗೋಸ್ಕರ ತಾಯಿಯನ್ನು ಬಿಡಲ್ಲ ಎಂದು ಹೇಳುವುದಕ್ಕೂ ಮುನ್ನವೇ ಅಲ್ಲಿಂದ ಕಾವೇರಿ ಕಾಲು ಕೀಳುತ್ತಿದ್ದಾಳೆ.

ಕೀರ್ತಿಯಿಂದ ಮತ್ತೆ ಶುರು ಕಾಟ

ಮೊದಲೇ ಕಾವೇರಿ ಮಗನ ವಿಚಾರದಲ್ಲಿ ತಲೆ ಕೆಡಿಸಿಕೊಂಡವಳೆ. ಅದರಲ್ಲಿ ಈ ಕೀರ್ತಿ ಬೇರೆ ಇನ್ನಷ್ಟು ಟೆನ್ಶನ್ ಕೊಡುತ್ತಿದ್ದಾಳೆ. ಕಾವೇರಿಯನ್ನು ಹಿಂಬಾಲಿಸಿಕೊಂಡು‌ ಬಂದಿದ್ದು, ಮತ್ತಷ್ಟು ಕೋಪ ತರಿಸಿದೆ. ಅದರಲ್ಲೂ ಕಾವೇರಿ, ಜ್ಯೋತಿಷಿ ಬಳಿ ಮಾತನಾಡಿದ್ದೆಲ್ಲವನ್ನು ಕೇಳಿಸಿಕೊಂಡಿದ್ದಾಳೆ. ಮೊದಲೇ ಟೆನ್ಶನ್ ನಲ್ಲಿರುವ ಕಾವೇರಿ ಈಗ ಕೀರ್ತಿಗೆ ಬೇರೆ ಉತ್ತರಿಸಬೇಕಾಗಿದೆ.

More from Filmibeat

English summary
Colors Kannada Lakshmi Baramma serial Written Update on May 3rd episode. Here is the details Kaveri tension.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X