Lakshmi Baramma Serial: ವೈಷ್ಣವ್ ಮತ್ತು ಲಕ್ಷ್ಮೀ ನಡುವೆ ಬಿರುಕು.. ಕಾವೇರಿ ಹಚ್ಚಿದ ಬೆಂಕಿಯಲ್ಲಿ ಕೀರ್ತಿ ಬೇಳೆ ಬೇಯ್ತಿದೆ!

By ಎಸ್ ಸುಮಂತ್

ಕಾವೇರಿ ತನ್ನ ಸ್ವಾರ್ಥದಿಂದ ಏನನ್ನೋ ಮಾಡುವುದಕ್ಕೆ ಹೋಗಿ ಇನ್ನೇನೋ ಅವಾಂತರ ಮಾಡಿಟ್ಟಿದ್ದಾಳೆ. ಅದರಲ್ಲೂ ಮಗನ ಸಂಸಾರದಲ್ಲಿಯೇ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾಳೆ. ಮಗ - ಸೊಸೆ ಬಾಂಧವ್ಯ ಚೆನ್ನಾಗಿದ್ದಿದ್ದನ್ನು ಕಂಡು ಸಹಿಸಲಾಗದ ಕಾವೇರಿ, ಸೊಸೆಯಿಂದ ಮಗನ ಎಲ್ಲಾ ಅಧಿಕಾರ ಕಿತ್ತುಕೊಳ್ಳಲು ಹೋಗಿ, ಈಗ ಮಗ-ಸೊಸೆಯ ನಡುವಿನ ಬಾಂಧವ್ಯವೇ ಹಳ್ಳ ಹಿಡಿಯುವಂತೆ ಮಾಡಿದ್ದಾಳೆ.

ಕೀರ್ತಿಯಿಂದ ಅಪಾಯ ತಪ್ಪಿದ್ದಲ್ಲ ಎಂಬುದು ಮನೆಯವರಿಗೆಲ್ಲಾ ಗೊತ್ತಿದ್ದಂತ ವಿಚಾರವೇ. ಅದನ್ನೇ ಕಾವೇರಿಗೂ ಸಾಕಷ್ಟು ಸಲ ಹೇಳಿದ್ದರು. ಆದರೆ ಕಾವೇರಿ ಆಡಿಯೋಗೆ ಹೆದರಿ ಕೀರ್ತಿಯ ಬಾಲಂಗೋಚಿ ಆಗಿದ್ದಾಳೆ. ಹೀಗಾಗಿ ಮನೆಯಲ್ಲಿ ನಡೆತುವ ರಾದ್ಧಾಂತಕ್ಕೆಲ್ಲಾ ಕಾವೇರಿಯೇ ನೇರ ಕಾರಣವಾಗಿದ್ದಾಳೆ.

lakshmi-baramma-kannada-serial

ವೈಷ್ಣವ್ ಮತ್ತು ಲಕ್ಷ್ಮೀ ನಡುವೆ ಬಿರುಕು

ವೈಷ್ಣವ್ ಮತ್ತು ಲಕ್ಷ್ಮೀ ಎಂಥದ್ದೇ ಸಂದರ್ಭಕ್ಕೆ ತಲೆ ಬಾಗಿ ಮದುವೆಯಾಗಿರಬಹುದು. ಆದರೆ, ಇಬ್ಬರ ನಡುವಿನ ಸ್ನೇಹ ಗಟ್ಟಿಯಾಗಿತ್ತು. ವೈಷ್ಣವ್ ಯಾವತ್ತಿಗೂ ಲಕ್ಷ್ಮೀಯನ್ನು ಬರೀ ಲಕ್ಷ್ಮೀ ಎಂದವನೇ ಅಲ್ಲ‌. ಮಹಾಲಕ್ಷ್ಮಿ ಎಂದೇ ಕರೆಯುತ್ತಿದ್ದ. ಲಕ್ಷ್ಮೀ ಕೂಡ ಇದಕ್ಕೆ ವಿರೋಧಿಸಿದ್ದಳು. ಆದರೂ, ಪ್ರೀತಿಯಿಂದ ಮಹಾಲಕ್ಷ್ಮಿ ಎನ್ನುತ್ತಿದ್ದ ವೈಷ್ಣವ್, ಇವತ್ತು ವೇದಿಕೆ ಮೇಲೆ ಲಕ್ಷ್ಮೀ ಎಂದಿದ್ದಾನೆ.

ಹಾಡಿನ ಸತ್ಯ ಹೇಳಿದ ವೈಷ್ಣವ್

ವೈಷ್ಣವ್ ಸೋತಾಗ ಧೈರ್ಯ ತುಂಬಿದ್ದು ಇದೇ ಲಕ್ಷ್ಮೀ. ಮತ್ತೆ ಬರೆಯುತ್ತೀರಾ ಎಂದು ಬರೆಸಿದ್ದು ಇದೇ ಲಕ್ಷ್ಮೀ. ಆದರೆ, ಲಕ್ಷ್ಮೀಗೂ ಗೊತ್ತಿರಲಿಲ್ಲ. ಕಾವೇರಿಯ ಕಿತಾಪತಿಯಿಂದ ವೈಷ್ಣವ್ ಬರೆದ ಹಾಡಿಗಿಂತ ತಾನೂ ಬರೆದ ಹಾಡು ಸುಕನ್ಯಾ ಕೈ ಸೇರುತ್ತೆ ಅಂತ. ಸೇರಿಯೂ ಆಯ್ತು, ಆಯ್ಕೆಯೂ ಆಯ್ತು. ಇನ್ನೇನು ಲಾಂಚ್ ಮಾಡುವ ವೇಳೆ ಎಲ್ಲಾ ಸತ್ಯ ವೈಷ್ಣವ್‌ಗೆ ಗೊತ್ತಾಗಿದೆ. ಹೀಗಾಗಿಯೇ ವೇದಿಕೆ ಮೇಲೆ ಹಾಡಿನ ಸತ್ಯ ಹೇಳಿದ್ದಾನೆ. ಎಲ್ಲರ ಬಳಿ ಮೊದಲಿಗೆ ಕ್ಷಮೆ ಕೇಳಿದ್ದು, ಈ ಹಾಡು ನಾನು ಬರೆದಿರುವುದಲ್ಲ ಎಂದಿದ್ದಾನೆ. ಇದನ್ನು ಕೇಳಿದ ಎಲ್ಲರಿಗೂ ಬಿಗ್ ಶಾಕ್ ಆಗಿದೆ.

lakshmi-baramma-kannada-serial

ಲಕ್ಷ್ಮೀ ಮೇಲೆ ಗೂಬೆ ಕೂರಿಸಿದ ಕೀರ್ತಿ

ವೇದಿಕೆ ಮೇಲೆ ಇನ್ನೇನು ಕಾರ್ಯಕ್ರಮ ಶುರುವಾಗಬೇಕು ಎನ್ನುವಾಗಲೇ ಕೀರ್ತಿ ಅಲ್ಲಿಗೆ ಬಂದಿದ್ದಾಳೆ‌. ವೈಷ್ಣವ್‌ನನ್ನು ಎಳೆದುಕೊಂಡು ಹೋಗಿದ್ದಾಳೆ. ಕೀರ್ತಿಯ ವರ್ತನೆಗೆ ಅಲ್ಲಿದ್ದವರೆಲ್ಲಾ ಕೋಪ ಮಾಡಿಕೊಂಡಿದ್ದಾರೆ. ಆದರೆ, ಇಲ್ಲಿ ಹಾಡು ಬರೆದ ಸತ್ಯ ಹೇಳುವಾಗ, ಇದೆಲ್ಲಾ ಲಕ್ಷ್ಮೀಯದ್ದೇ ತಪ್ಪು ಎಂಬ ರೀತಿಯಾಗಿ ಮಾತನಾಡಿದ್ದಾರೆ. ಲಕ್ಷ್ಮೀಗೆ ಈಗ ಹೆಸರು ಬಂದರೆ ನಿನ್ನನ್ನು ಕೀಳಾಗಿ ಕಾಣುತ್ತಾಳೆ ಎಂಬೆಲ್ಲಾ ರೀತಿಯಲ್ಲಿ ತಲೆಗೆ ತುಂಬಿದ್ದಾಳೆ.

ಇಬ್ಬರನ್ನು ದೂರ ಮಾಡಲು ಕೀರ್ತಿ ಪ್ಲ್ಯಾನ್

ಕೀರ್ತಿಗೆ ಈಗ ಲಕ್ಷ್ಮೀ ಮತ್ತು ವೈಷ್ಣವ್ ದೂರವಾಗುವುದು ಬಹಳ ಮುಖ್ಯ. ಕಾವೇರಿ ಎಲ್ಲವನ್ನು ಸರಿ ಮಾಡುತ್ತಾಳೆ ಎಂದೇ ಕಾದಿದ್ದಳು. ಆದರೆ ಕಾವೇರಿಯಿಂದ ಏನು ಆಗುತ್ತಿಲ್ಲ ಎಂದು ತಿಳಿದ ಮೇಲೆ ಸಂಸಾರ ಹಾಳು ಮಾಡುವುದಕ್ಕೆ ಕೀರ್ತಿಯೇ ಅಖಾಡಕ್ಕೆ ಇಳಿದಿದ್ದಾಳೆ. ಈಗ ಅದಕ್ಕೊಂದು ಒಳ್ಳೆಯ ವೇದಿಕೆ ಸಿಕ್ಕಿದೆ. ಅದನ್ನು ಲಕ್ಷ್ಮೀ ಮತ್ತು ವೈಷ್ಣವ್ ನಡುವೆ ಮನಸ್ತಾಪ ತಂದಿಡುವುದಕ್ಕೆ ಬಳಕೆ ಮಾಡಿಕೊಂಡಿದ್ದಾಳೆ. ಅದು ಸಕ್ಸಸ್ ಕೂಡ ಆಗಿದೆ. ವೈಷ್ಣವ್‌ಗೆ ಸತ್ಯಾಂಶ ತಿಳಿಯುವ ತನಕ ಲಕ್ಷ್ಮೀಯ ಮೇಲೆ ಮುನಿಸು ಕಡಿಮೆಯಾಗುವುದಿಲ್ಲ.

More from Filmibeat

English summary
Lakshmi Baramma serial Written Update on September 13th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X