Lakshmi Baramma Serial: ಬೇರೆ ವಿಲನ್‌ಗಳಷ್ಟು ಸ್ಟ್ರಾಂಗ್ ಅಲ್ಲ ಕಾವೇರಿ.. ಯಾಕಿಷ್ಟು ಹೆದರೋದು..?
ಇಷ್ಟು ದಿನ ಸಾಕಷ್ಟು ವಿಲನ್‌ಗಳನ್ನ ನೋಡಿದ್ದೀವಿ. ವಿಲನ್ ಅಂದರೆ ಖಡಕ್ ಆಕ್ಟಿಂಗ್. ಯಾವುದಕ್ಕೂ ಭಯ ಪಡುವುದಿಲ್ಲ. ತನ್ನ ಸ್ವಾರ್ಥಕ್ಕಾಗಿ ಮಾಡಿದ ಯಾವ ಕೆಲಸವನ್ನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಬದಲಿಗೆ ಮತ್ತೆ ಮತ್ತೆ ಕೆಟ್ಟ ದಾರಿಯನ್ನೇ ಹುಡುಕುತ್ತಿರುತ್ತಾರೆ. ಯಾರ ಅಂದಾಜಿಗೂ ಸುಲಭವಾಗಿ ಸಿಗುವುದಿಲ್ಲ. ಬುದ್ದಿವಂತಿಕೆಯಿಂದಾನೇ ಆಟ ಆಡುತ್ತಾರೆ. ಆದರೆ, ಇಲ್ಲಿ ಕಾವೇರಿಯದ್ದು ಬೇರೆಯ ರೀತಿಯೇ ಆಗಿದೆ.
ಇದು ಬೇರೆ ರೀತಿಯ ವಿಲನ್ ಅಲ್ಲ. ಅಮ್ಮ - ಮಗನ ನಡುವಿನ ಸ್ವಾರ್ಥದ ಬಾಂಧವ್ಯ. ಮಗ ನನ್ನ ಬಳಿಯೇ ಇರಬೇಕು ಎಂಬ ಅಮ್ಮನ ಹಂಬಲ ಕೆಟ್ಟ ದಾರಿಗಳನ್ನೇ ಹುಡುಕುತ್ತಿದೆ. ಇದು ಇಂದು ಕಶ್ಯಪ್ ಮನೆಯ ಸಂಸಾರಕ್ಕೆ ಕೊಳ್ಳಿ ಇಟ್ಟಿದೆ. ವೈಷ್ಣವ್ ಮತ್ತು ಲಕ್ಷ್ಮೀ ನಡುವೆ ಬಾಂಧವ್ಯ ಹಳಸುವಂತೆ ಮಾಡಿದೆ.

ಕಾವೇರಿಗೆ ಪ್ರಶ್ನಿಸಿದ ಲಕ್ಷ್ಮೀ
ಕಾವೇರಿ ಮಾಡಿದ್ದು ತಪ್ಪು ಎಂದು ಗೊತ್ತಾದ ಮೇಲೆ ಲಕ್ಷ್ಮೀ ಪ್ರಶ್ನೆ ಮಾಡಿದ್ದಾಳೆ. ಆದರೆ ಕಾವೇರಿ ಇದೆಲ್ಲ ವೈಷ್ಣವ್ ಖುಷಿಗಾಗಿ ಅಂತ ಸುಳ್ಳು ಹೇಳಿದ್ದಾಳೆ. ಆಗ ಲಕ್ಷ್ಮೀ, "ವೈಷ್ಣವ್ ಮನಸ್ಸು ಈಗ ಏನು ಖುಷಿಯಲ್ಲಿ ತೇಲಾಡುತ್ತಿಲ್ಲ. ಒಡೆದು ಹೋಗಿ ಆಗಿದೆ. ಅವರು ತಪ್ಪು ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಿ ಹೇಳಿದರೆ ಮತ್ತೆ ಮತ್ತೆ ಬರೆಯುತ್ತಿದ್ದರು" ಎಂದು ಅತ್ತೆ ಮಾಡಿದ ತಪ್ಪನ್ನು ತಿಳಿಸಿ ಹೇಳಿದ್ದಾಳೆ.
ಮಗನಿಗೆ ಉತ್ತರಿಸಲು ಹೇಳಿದ ಲಕ್ಷ್ಮೀ
ಎಷ್ಟೇ ಕೇಳಿದರು ಕಾವೇರಿಯದ್ದು ಒಂದೇ ಮಾತಾಗಿತ್ತು. "ಹಾಡನ್ನು ಬದಲಾಯಿಸುವಾಗ ನನಗೂ ಹೇಳದೆ, ಅವರಿಗೂ ಕೇಳದೆ ಹೇಗೆ ನಿರ್ಧಾರ ತೆಗೆದುಕೊಂಡಿರಿ. ಅವರು ನಿಯತ್ತಾಗಿ ಬದುಕುತ್ತಿರುವವರು. ಆ ಹಾಡನ್ನು ನಂದು ಅಂತ ಒಪ್ಪಿಕೊಂಡು, ಸ್ವಾರ್ಥವಾಗಿ ಬದುಕುತ್ತಾರೆ ಎಂದು ಹೇಗೆ ಅಂದುಕೊಂಡಿರಿ. ದೊಡ್ಡವರು ನೀವೂ, ಮಗನನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿರುವವರು ಈ ರೀತಿ ಎಂದುಕೊಂಡಿರಲಿಲ್ಲ. ಕಾಯುತ್ತಿದ್ದಾರೆ. ಸಾವಿರ ಪ್ರಶ್ನೆಗಳು ಅದಕ್ಕೆಲ್ಲ ಏನು ಉತ್ತರ ಕೊಡುತ್ತೀರಾ ಎಂಬುದನ್ನು ಯೋಚಿಸಿ ಎಂದು" ಖಡಕ್ ಆಗಿ ಹೇಳಿದ್ದಾಳೆ.

ತಪ್ಪನ್ನು ತನ್ನ ಮೇಲೆ ಹಾಕಿಕೊಂಡ ಲಕ್ಷ್ಮೀ
ಮನೆಗೆ ಬಂದ ಮೇಲೆ ವೈಷ್ಣವ್ ತುಂಬಾ ಕೋಪಗೊಂಡಿದ್ದ. ಬಳಿಕ ಅಮ್ಮನನ್ನು ಆ ಹಾಡು ಹೇಗೆ ಬದಲಾಯಿತು ಎಂದು ಕೇಳಿದ. ಆದರೆ ಅದನ್ನು ಹೇಳುವುದಕ್ಕೆ ಕಾವೇರಿ ಬಳಿ ಉತ್ತರವಿರಲಿಲ್ಲ. ಹಾಗೇ ಲಕ್ಷ್ಮೀ ಕೂಡ ಅಲ್ಲಿಯೇ ಇದ್ದಿದ್ದರಿಂದ ಅವಳಿಗೂ ಉತ್ತರವಿರಲಿಲ್ಲ. ಆದರೆ, ಅಮ್ಮಮಗನ ಸಂಬಂಧ ಉಳಿಸಲು ಲಕ್ಷ್ಮೀ ತಾನೇ ತಪ್ಪು ಮಾಡಿದ್ದು ಎಂಬುದಾಗಿ ಹೇಳಿದ್ದಾಳೆ. ಹಾಡನ್ನು ಬದಲಾಯಿಸಿದ್ದು ನಾನೇ ಎಂಬುದನ್ನು ಹೇಳಿದ್ದಾಳೆ.
ವೈಷ್ಣವ್ ನಂಬಿಯೇ ಬಿಟ್ಟನಾ..?
ವೈಷ್ಣವ್‌ಗೆ ಲಕ್ಷ್ಮೀ ಏನು ಎಂಬುದು ಚೆನ್ನಾಗಿ ಗೊತ್ತು. ಹೀಗಾಗಿಯೇ ಲಕ್ಷ್ಮೀ ಹೇಳುವುದನ್ನು ನಂಬಿಲ್ಲ. ಅಮ್ಮನನ್ನು ಮತ್ತೆ ಕೇಳಿದ್ದಾನೆ. ಆದರೆ ಕಾವೇರಿ ಕೂಡ ಸಮಯ ಸಾಧಕಿಯಂತೆ ಯೋಚಿಸಿ, ಹೌದು ಲಕ್ಷ್ಮೀ ಕೂಡ ಹಾಡು ಚೆನ್ನಾಗಿಲ್ಲ ಅಂತ ಹೇಳಿದಳು. ಅದಕ್ಕೆ ಬದಲಾಯಿಸಿದೆ ಎಂದಿದ್ದಾಳೆ. ಎಷ್ಟೇ ಹೇಳಿದರು ವೈಷ್ಣವ್ ಮಾತ್ರ ಅದನ್ನು ನಂಬುತ್ತಿಲ್ಲ. ಮನೆಯವರು ಕೂಡ ಲಕ್ಷ್ಮೀಯ ಮಾತನ್ನು ನಂಬುತ್ತಿಲ್ಲ. ಆದರೆ ಕಡೆಯದಾಗಿ ಲಕ್ಷ್ಮೀ ಖಡಕ್ ಆಗಿನೆ ನಾನೇ ಬದಲಾಯಿಸಿದ್ದು ಎಂದಿದ್ದಾಳೆ. ಇದು ವೈಷ್ಣವ್ ಗೆ ಕೊಂಚ ಬೇಸರ, ಕೋಪ ಎರಡನ್ನು ತರಿಸಿದೆ. ತಕ್ಷಣಕ್ಕೆ ನಂಬುವುದಕ್ಕೆ ಆಗದೆ ಇದ್ದರು ಕೈಮುಗಿದು ಧನ್ಯವಾದ ಹೇಳಿದ್ದಾಳೆ.


Click it and Unblock the Notifications











