Lakshmi Baramma Serial: ಕೀರ್ತಿಯ ಮುಷ್ಠಿಯಲ್ಲಿ ಸಿಕ್ಕಿಕೊಂಡ ಕಾವೇರಿ.. ಮಗನ ಸಂಸಾರವನ್ನು ತೆಗೆಯುತ್ತಾಳಾ..?
ಕಾವೇರಿ ಪ್ರತಿದಿನ ಶಪಿಸುತ್ತಿರುವುದು ನಮ್ಮ ಪುಟ್ಟ ಇಂಥವಳನ್ನು ಅದ್ಯಾಕಾದ್ರು ಲವ್ ಮಾಡಿದ್ನೋ, ಅದ್ಯಾಕಾದ್ರೂ ಮದುವೆ ಆಗ್ತೀನಿ ಅಂತ ಹೇಳಿದ್ನೋ. ಈಗ ನನ್ನ ಪ್ರಾಣ ತಿಂತಾ ಇದ್ದಾಳೆ. ಇವಳಿಂದ ಹೇಗಪ್ಪ ಮುಕ್ತಿ ಪಡೆಯೋದು ಎಂದೇ ಶಪಿಸುತ್ತಾಳೆ. ಆದರೆ, ಕಾವೇರಿಯಿಂದ ಬೇರೆ ಏನನ್ನು ಮಾಡುವುದಕ್ಕೆ ಆಗುತ್ತಿಲ್ಲ. ಕಾರಣ ಕಾವೇರಿ ಮಾಡಿದ ಪ್ಲ್ಯಾನ್‌ನಲ್ಲಿ ಕಾವೇರಿಯೇ ಸಿಕ್ಕಿ ಬಿದ್ದಿದ್ದಾಳೆ.
ಕಾವೇರಿಗೆ ಮಗನ ಮೇಲಿನ ಪೊಸೆಸಿವ್‌ನಿಂದಾಗಿಯೇ ಇಷ್ಟೆಲ್ಲಾ ಆಗಿದೆ. ಮಗನನ್ನು ಮನೆಯಿಂದ ಹೊರಗೆ ಆಗಲಿ ಅಥವಾ ತನ್ನಿಂದ ದೂರವಾಗಲಿ ಮಾಡಬಾರದು. ಕೀರ್ತಿಗೆ ವೈಷ್ಣವ್ ಬದುಕಾಗಿದ್ದ. ಹೀಗಾಗಿ ನಮ್ಮನ್ನೆಲ್ಲ ಬಿಟ್ಟು, ಕೀರ್ತಿ ಜೊತೆಗೆ ಹೋಗುತ್ತಾನೆಂಬ ಭಯಕ್ಕೆ ಲಕ್ಷ್ಮೀ ಜೊತೆಗೆ ಮದುವೆ ಮಾಡಿದಳು. ಆದರೆ, ಈಗ ಪಿಕ್ಚರ್ ಬೇರೆಯದ್ದೇ ಆಗುತ್ತಿದೆ.

ವೈಷ್ಣವ್ ಬದಲಾವಣೆಗೆ ಕೆಂಡಕಾರಿದ ಕೀರ್ತಿ
ವೈಷ್ಣವ್ ಈಗ ಸಂಪೂರ್ಣವಾಗಿ ಬದಲಾಗಿದ್ದಾನೆ. ಅದು ಮಹಾಲಕ್ಷ್ಮಿಗೆ ಹೆಚ್ಚು ಹತ್ತಿರವಾಗುತ್ತಿದ್ದಾನೆ. ಅದರಲ್ಲೂ ಕೀರ್ತಿ ವಿಚಾರದಲ್ಲಿ ಮನೆಯವರೆಲ್ಲ ಡಿಸ್ಟರ್ಬ್ ಆಗಿದ್ದರು. ಆದರೆ, ಲಕ್ಷ್ಮೀಯ ಬುದ್ದಿವಂತಿಕೆ ಎಲ್ಲರ ಮನಸ್ಸನ್ನು ಹಗುರಗೊಳಿಸಿತ್ತು. ನೋವಿನಲ್ಲಿದ್ದವರಿಗೆ, ಕೋಪದಲ್ಲಿದ್ದವರಿಗೆ ಕೈತುತ್ತು ಕೊಟ್ಟು ಸಮಾಧಾನ ಮಾಡಿದ್ದಳು. ಈ ಗುಣ ವೈಷ್ಣವ್‌ಗೆ ಇನ್ನಿಲ್ಲದ ಪ್ರೀತಿಯನ್ನು, ಅಭಿಮಾನವನ್ನು ಹೆಚ್ಚಿಸಿತ್ತು. ಕೈಹಿಡಿದು, ಕೆನ್ನೆ ಸವರಿ ಹೊಗಳುತ್ತಿದ್ದಾಗಲೇ ಕೀರ್ತಿ ಅದನ್ನು ನೋಡಿದ್ದಳು.
ಕಾವೇರಿ ಬಳಿ ಬಂದ ಕೀರ್ತಿ
ಕೀರ್ತಿಗೆ ಈಗಾಗಲೇ ಕೋಪ ಹೆಚ್ಚಾಗಿದೆ. ಯಾಕಂದ್ರೆ ಇನ್ಯಾವತ್ತೂ ನಮ್ಮ ಮನೆಯ ಬಳಿ ಬರುವುದು ಬೇಡ ಎಂಬುದನ್ನು ವೈಷ್ಣವ್ ಒತ್ತಿ ಒತ್ತಿ ಹೇಳಿದ್ದಾನೆ. ಇದನ್ನು ಕೇಳಿದ ಕೀರ್ತಿಗೆ ಇನ್ನು ಮುಂದೆ ದ್ವೇಷ ತೀರಿಸಿಕೊಳ್ಳುವ ಹಠ ಜಾಸ್ತಿಯಾಗಿದೆ. ಅದಕ್ಕೆ ಮೊದಲು ಕಾವೇರಿಯನ್ನು ಹುಡುಕಿಕೊಂಡು ಬಂದಿದ್ದಾಳೆ. ಕಾವೇರಿ ಮೊದಲು ಹೇಳಿದಂತೆ ಅದು ಹಾಗೇ ಇದು ಹೀಗಮ್ಮ ಅಂತ ಪಾಠ ಶುರು ಮಾಡಿದ್ದಳು. ಆದರೆ, ಆ ಪಾಠವನ್ನು ಮೊದಲು ನಿಲ್ಲಿಸಿ ಎಂದೇ ತಾಕೀತು ಮಾಡಿದ್ದಾಳೆ.

ವೈಷ್ಣವ್ ಹೊಡೆದದ್ದನ್ನು ನೆನೆದ ಕೀರ್ತಿ
ಕೀರ್ತಿಗೆ ಹೆಚ್ಚು ಕೋಪ ಬಂದಿರೋದು ಒಂದು ವೈಷ್ಣವ್ ಹೊಡೆದದ್ದು, ಮತ್ತೊಂದು ಲಕ್ಷ್ಮೀಯನ್ನು ಮನಸಾರೆ ಹೊಗಳುತ್ತಿರುವುದು. ಈ ಎರಡನ್ನು ಕಂಡರೆ ಕೀರ್ತಿಗೆ ಸಹಿಸುವುದಕ್ಕೆ ಆಗುತ್ತಿಲ್ಲ. ಹೀಗಾಗಿಯೇ ಕಾವೇರಿ ಬಳಿ, ಡಿಮ್ಯಾಂಡ್ ಇಡುತ್ತಿದ್ದಾಳೆ. "ಈ ಮೊದಲೆಲ್ಲಾ ವೈಷ್ಣವ್ ನನ್ನ ಕೆನ್ನೆ ಚಿವುಟುವುದಕ್ಕೂ ಹಿಂದೆ ಮುಂದೆ ನೋಡ್ತಾ ಇದ್ದ. ಆದರೆ, ಈಗ ಕೆನ್ನೆಗೆ ಹೊಡಿತಾನೆ ಅಂದ್ರೆ ಏನು ಅರ್ಥ? ಇನ್ಮೇಲೆ ನೀವೂ ಹೇಳೋದೆಲ್ಲಾ ಮುಗಿದು ಹೋಯ್ತು. ಈಗ ಏನಿದ್ರು ನಾನು ಹೇಳ್ತೀನಿ ನೀವೂ ಮಾಡಬೇಕು ಅಷ್ಟೇ" ಎಂದು ಆರ್ಡರ್ ಮಾಡಿದ್ದಾಳೆ.
ಮೆಚ್ಚಿದ ಮಗ ಸೊಸೆಯನ್ನೇ ದೂರ ಮಾಡ್ತಾಳಾ..?
ಕೀರ್ತಿಯ ನಡವಳಿಕೆಗೆ ಕಾವೇರಿಗೂ ಪಿತ್ತ ನೆತ್ತಿಗೇರಿಸಿದೆ. ಆದರೆ ಬೇರೆ ವಿಧಿಯಿಲ್ಲ. ಆಡಿಯೋದಿಂದ ಲಾಕ್ ಆಗಿದ್ದಾಳೆ. ಏನು ಮಾಡದ ಸ್ಥಿತಿಗೆ ಬಂದು ತಲುಪಿದ್ದಾಳೆ. ಅದಕ್ಕೆ ಕೀರ್ತಿ ಎಷ್ಟೇ ಅವತಾರಗಳನ್ನು ಆಡಿದರು ಸುಮ್ಮನೆ ನಿಂತಿದ್ದಾಳೆ. ಆದರೆ, ಕೀರ್ತಿಯದ್ದು ಸಂಸಾರವನ್ನೇ ಹಾಳು ಮಾಡುವ ಡಿಮ್ಯಾಂಡ್ ಆಗಿದೆ. "ಲಕ್ಷ್ಮೀಯನ್ನು ದೇವತೆ ಎಂದು ಹೇಳುವ ವೈಷ್ಣವ್ ಅವಳನ್ನು ಹೀಯಾಳಿಸಬೇಕು. ಲಕ್ಷ್ಮೀಗೆ ವಾಪಾಸ್ ಬೈಯ್ಯಬೇಕು. ನನಗೆ ಏನೆಲ್ಲಾ ಹೇಳಿದ್ದಾನೋ ಅದನ್ನೆಲ್ಲ ಅವಳಿಗೂ ಹೇಳಬೇಕು" ಎಂದಿದ್ದಾಳೆ. ಅದೆಲ್ಲ ಮಾಡುವುದಕ್ಕೆ ಒಂದೇ ದಿನ ಸಮಯಾವಕಾಶ ನೀಡಿರುವುದು. ಒಂದು ವೇಳೆ ಕೀರ್ತಿ ಹೇಳಿದಂತೆ ಮಾಡಿದರೆ, ಕಾವೇರಿ ತನ್ನ ಮಗ ಸೊಸೆಯ ಸಂಸಾರವನ್ನೇ ಕಿತ್ತು ಬಿಸಾಡಬೇಕಾಗುತ್ತದೆ.


Click it and Unblock the Notifications











