'ಲಕ್ಷಿ ನಿವಾಸ'ದ ಅಜಯ್ ರಾಜ್ 'ಹಳ್ಳಿಮೇಷ್ಟ್ರು' ಸಿನಿಮಾದಲ್ಲಿ ಬಾಲನಟ: ಈ ಮೂವರಲ್ಲಿ ಯಾರು?
ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ನಿವಾಸ'ವೂ ಒಂದು. ಬಹುದೊಡ್ಡ ತಾರಾಗಣವನ್ನು ಹೊಂದಿರುವ ಈ ಧಾರಾವಾಹಿ ಟಿ ಆರ್ ಪಿ ಯಲ್ಲೂ ಮುಂದಿದೆ. ಪ್ರೇಕ್ಷಕರ ಮನಗೆದ್ದಿರುವ ಈ ಸೀರಿಯಲ್ ನಲ್ಲಿ ಹರೀಶ್ ಎಂಬ ಪಾತ್ರವನ್ನು ನೀವು ನೋಡಿಯೇ ಇರುತ್ತೀರಿ. ಅಂದ ಹಾಗೇ 'ಲಕ್ಷ್ಮಿನಿವಾಸ'ದಲ್ಲಿ ಹರೀಶ್ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟನ ನಿಜವಾದ ಹೆಸರೇನು? ಅವರು ಯಾರು? ತಿಳಿಯೋಣ ಬನ್ನಿ.
'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಹರೀಶ್ ಪಾತ್ರಧಾರಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ಹ್ಯಾಂಡ್‌ಸಮ್ ಹುಡುಗನ ಹೆಸರು ಅಜಯ್ ರಾಜ್. ಇವರು ಕನ್ನಡದ ಹ್ಯಾಂಡ್‌ಸಮ್ ನಟರಲ್ಲಿ ಒಬ್ಬರು. ಸಿನಿ ಪ್ರೇಕ್ಷಕರಿಗಂತೂ ಇವರ ಪರಿಚಯ ಇದ್ದೇ ಇರುತ್ತದೆ. ಯಾಕೆಂದರೆ ಇವರು ಸಿನಿಮಾ ಹಾಗೂ ಸೀರಿಯಲ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ದಶಕಗಳ ಹಿಂದೆ ಟಿ.ಎನ್.ಸೀತಾರಾಮ್ ನಿರ್ದೇಶನದಲ್ಲಿ ಈ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮುಕ್ತ' ಸೀರಿಯಲ್‌ನಲ್ಲಿ ನಂಜುಂಡಿ ಪಾತ್ರದಲ್ಲಿ ಅಜಯ್ ರಾಜ್ ನಟಿಸಿದ್ದರು. ಇನ್ನು ಸಿನಿಮಾ ವಿಷಯಕ್ಕೆ ಬಂದರೆ ಕನ್ನಡದ ಸೂಪರ್ ಹಿಟ್ ಸಿನಿಮಾ 'ಮುಂದಿನ ನಿಲ್ದಾಣ'ದಲ್ಲಿ ಅಜಯ್ ಅಭಿನಯಿಸಿದ್ದರು. ಹಾಗೆಯೇ 'ಮುಂದುವರೆದ ಅಧ್ಯಾಯ', 'ಅಬ್ಬಬ್ಬಾ' ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ಹಿಂದಿ ಸಿನಿಮಾರಂಗದಲ್ಲಿಯೂ ಅಜಯ್ ಗುರುತಿಸಿಕೊಂಡಿದ್ದಾರೆ.
ಲಕ್ಷ್ಮೀ ನಿವಾಸ ಸೀರಿಯಲ್ ಒಂದು ಸುಂದರವಾದ ಕುಟುಂಬದ ಕಥಾ ಹೊಂದಿರವನ್ನು ಹೊಂದಿರುವ ಕಾರಣ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರಾವಾಹಿಯೂ ಆಗಿದೆ. ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ವೇತಾ ಈ ಧಾರವಾಹಿಯಲ್ಲಿ ಬಣ್ಣ ಹಚ್ಚಿದ್ದು ಇನ್ನಷ್ಟು ಜನಪ್ರಿಯತೆಗೆ ಕಾರಣವಾಯಿತು. ಅಲ್ಲದೆ ಇವರೊಂದಿಗೆ ಖ್ಯಾತ ಕಿರುತೆರೆ ನಟಿ ದಿಶಾ ಮದನ್ ಕೂಡ ನಟಿಸಿದ್ದಾರೆ. ಇನ್ನು ನಾಯಕ ನಾಯಕಿಯಂತೆಯೇ ಪ್ರಾಮುಖ್ಯತೆ ಹೊಂದಿದ ಮತ್ತೊಂದು ಪಾತ್ರವೆಂದರೆ ಅದು ಹರೀಶ್ ಪಾತ್ರ.

ಲಕ್ಷ್ಮೀ ಶ್ರೀನಿವಾಸರ ಕಿರಿಯ ಪುತ್ರ ಹರೀಶ್. ಅವರ ಪಾತ್ರದ ಬಗ್ಗೆ ಮಾತನಾಡುವುದಾದರೆ ನಾಯಕಿ ಭಾವನಾಳ ಸಹೋದರನಾಗಿ ಇವರು ನಟಿಸುತ್ತಿದ್ದಾರೆ. ಕೆಲಸ ಮಾಡದೇ ಮನೆಯಲ್ಲೇ ಕುಳಿತುಕೊಂಡಿರುವ ಹರೀಶ ಪ್ರೀತಿಸಿ ಮದುವೆಯಾಗುತ್ತಾನೆ. ತನ್ನ ಹೆಂಡತಿ ಹೆಂಡತಿ ಸಿಂಚನಾ ಹೇಳಿದ್ದನ್ನೆಲ್ಲಾ ಕೇಳಿಕೊಂಡಿರುವ ಸೋಮಾರಿ ಹರೀಶನ ಪಾತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಬಾಲ್ಯದಿಂದಲೇ ನಟನೆಯಲ್ಲಿ ಗುರುತಿಸಿಕೊಂಡಿರುವ ಅಜಯ್ ರಾಜ್ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಅಭಿನಯಿಸಿದ್ದಾರೆ ಎಂದರೆ ನೀವು ನಂಬಲೇಬೇಕು. ಹೌದು, 'ಹಳ್ಳಿಮೇಷ್ಟ್ರು' ಸಿನಿಮಾದಲ್ಲಿ ಇವರು ಕ್ರೇಜಿಸ್ಟಾರ್ ಜೊತೆ ನಟಿಸಿದ್ದರು. ಅಷ್ಟೇ ಅಲ್ಲ ಸಿಲ್ಕ್ ಸ್ಮಿತಾ ಜೊತೆಯೂ ತೆರೆ ಹಂಚಿಕೊಂಡಿದ್ದರು.
'ಹಳ್ಳಿಮೇಷ್ಟ್ರು' ಸಿನಿಮಾದಲ್ಲಿ ನಾಯಕಿ ಪರಿಮಳಾ ಜೊತೆ ಸದಾ ಸುತ್ತುತ್ತಿದ್ದ ಮೂವರು ಹುಡುಗರಲ್ಲಿ ಅಜಯ್ ರಾಜ್ ಕೂಡ ಒಬ್ಬರು. ಈ ಸಿನಿಮಾದಲ್ಲಿ ಅಂದಿನ ಕಾಲದ ಮಾದಕ ನಟಿ ಸಿಲ್ಕ್ ಸ್ಮಿತಾ ಟೀಚರ್ ಆಗಿ ನಟಿಸಿದ್ದರು. 'ಹಳ್ಳಿಮೇಷ್ಟ್ರು' ಸಿನಿಮಾದಲ್ಲಿ ಅಜಯ್ ಹೇಳಿದ್ದ "ಹೋಗಿ ಹೋಗಿ ಸೆಕೆಂಡ್ ಹ್ಯಾಂಡ್ ಗಂಡಾನೆ ಸಿಕ್ಕಿರೋದ'' ಅನ್ನೋ ಡೈಲಾಗ್ ಇವತ್ತಿಗೂ ಫೇಮಸ್. ಆ ಸಿನಿಮಾ ಶೂಟಿಂಗ್ ಟೈಮಲ್ಲಿ ಕಬ್ಬಿನ ಗದ್ದೆಗೆ ಕಬ್ಬು ತಿನ್ನಲು ಹೋಗಿ ಹಲ್ಲು ಕೂಡ ಮುರಿದುಕೊಂಡಿದ್ದರಂತೆ.
ಅಷ್ಟೇ ಅಲ್ಲದೆ ಅಜಯ್ ನೆನಪಿರಲಿ ಪ್ರೇಮ್ ಮತ್ತು ಸುನೀಲ್ ರಾವ್ ಜೊತೆ ಜೊತೆಯಾಗಿಯೇ ಸೀರಿಯಲ್‌ಗೆ ಎಂಟ್ರಿ ಕೊಟ್ಟವರು. ಇವರು ನಟ ಯಶ್ ಅವರಿಗೆ ಉತ್ತಮ ಸ್ನೇಹಿತರೂ ಹೌದು. ಇನ್ನು 2020ರಲ್ಲಿ ನಟ ಅಜಯ್ ಹಾಗೂ ಕನ್ನಡ ಕಿರುತೆರೆ ನಟಿ ಪದ್ಮಿನಿ ದೇವನಹಳ್ಳಿ ಅವರ ವಿವಾಹ ಸರಳವಾದ ರೀತಿಯಲ್ಲಿ ನಡೆಯಿತು. ಹೌದು, ಅಜಯ್ ಪತ್ನಿ ಪದ್ಮಿನಿ ಕೂಡ ಕಿರುತೆರೆ ನಟಿಯಾಗಿದ್ದು, ಈ ಹಿಂದೆ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಸರಸ್ವತಿ ಪಾತ್ರದಲ್ಲಿ ನಟಿಸಿದ್ದರು.
ಅಲ್ಲದೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾದೇವಿ' ಧಾರಾವಾಹಿಯ ಜಾಜಿ ಪಾತ್ರದಲ್ಲಿ ಪದ್ಮನಿ ನಟಿಸಿದ್ದರು. ಇನ್ನು ಹರೀಶ್ ಮತ್ತು ಪದ್ಮಿನಿ ಮೂಲತಃ ರಂಗಭೂಮಿ ಕಲಾವಿದರು. ಅವರ ರಂಗಭೂಮಿಯ ನಂಟು ಕಿರುತೆರೆವರೆಗೂ ಕರೆತಂದಿದೆ.


Click it and Unblock the Notifications











