"ತಲೆಗೆ ಹುಳ ಬಿಟ್ಟುಕೊಳ್ಳೋ ತಾಕತ್ ಇರೋರಿಗೆ ಮಾತ್ರ"; ಯಾರಿದು ಮಿಸ್ಟರ್ ರಾಣಿ?

By ಅನಿತಾ ಬನಾರಿ

'Mr. ರಾಣಿ' ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಪೋಸ್ಟರ್ ಇದು. ಹಳದಿ ಕಲರ್ ಬ್ಯಾಕ್ ಗ್ರೌಂಡ್ ಇರುವ ಪೋಸ್ಟರ್‌ನಲ್ಲಿ ಬಿಳಿ ಬಣ್ಣದ ಬ್ಯಾಕ್ ಲೆಸ್ ಗೌನ್ ಧರಿಸಿ, ಬಾಬ್ ಕಟ್ ಮಾಡಿಸಿ, ಸೇಮ್ ಟು ಸೇಮ್ ಮರ್ಲಿನ್ ಮೊನ್ರೊ ಥರಹ ಪೋಸ್ ಕೊಟ್ಟಿರುವ ಈ ಬೆಡಗಿ ಯಾರು ಎಂಬ ಕುತೂಹಲ ನೆಟ್ಟಿಗರಲ್ಲಿ ಮೂಡಿದೆ. ಜೊತೆಗೆ ಈ ಪೋಸ್ಟರ್ ಕೂಡಾ ವಿಚಿತ್ರವಾಗಿದ್ದು, ಸಿನಿಮಾ ಪ್ರಿಯರಲ್ಲಿ ಕುತೂಹಲವನ್ನು ಕೂಡಾ ಮೂಡಿಸಿದೆ.

ಅಂದಹಾಗೆ, ಈ ಪೋಸ್ಟರ್ ಸಿನಿಮಾ ಪ್ರಿಯರಲ್ಲಿ ಕುತೂಹಲ ಮೂಡಿಸಲು ಕಾರಣವೂ ಇದೆ. ಪೋಸ್ಟರ್‌ನಲ್ಲಿರುವ ಹುಡುಗ ಹುಡುಗಿಯು ಸಣ್ಣದಾಗಿರುವ ಬಿಳಿಯ ಗೌನ್ ಧರಿಸಿದ್ದು, ಅದರೊಳಗೆ ಹುಡುಗರು ಧರಿಸುವಂತಹ ಪಟ್ಟೆ ಪಟ್ಟೆ ಚಡ್ಡಿ ಹಾಕಿದ್ದಾಳೆ. ಇನ್ನು ಕಾಲಿಗೆ ಹಿಲ್ಸ್ ತರಿಸಿರುವಾಕೆ ತನ್ನ ಡ್ರೆಸ್ ಹಾರದಂತೆ ಕೈಯನ್ನುಅಡ್ಡ ಹಿಡಿದಿದ್ದಾಳೆ. ಇದು ಯಾರು ಎಂಬ ಕುತೂಹಲ ಈಗಾಗಲೇ ನೆಟ್ಟಿಗರಿಗೆ ಮೂಡಿದ್ದು ಈ ಕುತೂಹಲಕ್ಕೆ ಬ್ರೇಕ್ ಇಟ್ಟಿದ್ದಾರೆ ಕಿರುತೆರೆ ನಟ ದೀಪಕ್ ಸುಬ್ರಹ್ಮಣ್ಯ.

Lakshmi Nivasa actor Deepak Subrahmanya will entertain the audience with the movie Mr Rani

ಹೌದು, ದೀಪಕ್ ಸುಬ್ರಹ್ಮಣ್ಯ ಅವರೇ ಸ್ವತ: ಈ ಪೋಸ್ಟರ್ ಅನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, "ತಲೆಗೆ ಹುಳ ಬಿಟ್ಟುಕೊಳ್ಳೋ ತಾಕತ್ ಇರೋರಿಗೆ ಮಾತ್ರ! ಈ ಪೋಸ್ಟರ್‌ನಲ್ಲಿ ಇರುವ ಖ್ಯಾತ ನಟಿ ಯಾರು ಕಾಮೆಂಟ್ ಮಾಡಿ???" ಎಂದು ಬರೆದುಕೊಂಡಿದ್ದಾರೆ.

ದೀಪಕ್ ಸುಬ್ರಹ್ಮಣ್ಯ ಅಂದ್ರೆ ಯಾರು ಅಂದು ಕೊಂಡಿದ್ದೀರ? ಸೈಕೋ ಜಯಂತ್ ಎಂದೇ ಕಿರುತೆರೆಯಲ್ಲಿ ಫೇಮಸ್ ಆಗಿರುವ ನಟ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಜಯಂತ್ ಪಾತ್ರದಲ್ಲಿ ನಟಿಸುತ್ತಿರುವ ಇವರು ಅದರ ಮೂಲಕವೇ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡವರು.

ಪೌರಾಣಿಕ ಧಾರಾವಾಹಿ 'ದಾಸ ಪುರಂದರ'ದಲ್ಲಿ ನಾಯಕ ಪುರಂದರದಾಸರಾಗಿ ಅಭಿನಯಿಸುವ ಮೂಲಕ ಮೊದಲ ಬಾರಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು ದೀಪಕ್ ಸುಬ್ರಹ್ಮಣ್ಯ. ರಂಗಭೂಮಿಯ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ದೀಪಕ್ ಬರೋಬ್ಬರಿ 50 ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ಒಂದಷ್ಟು ನಾಟಕಗಳ ನಿರ್ದೇಶನ, ನಿರ್ಮಾಣ ಮಾಡಿರುವ ದೀಪಕ್ ಅವರಿಗೆ ಸಿನಿಮಾವೇನು ಹೊಸದೇನಲ್ಲ.

Lakshmi Nivasa actor Deepak Subrahmanya will entertain the audience with the movie Mr Rani

'ಶುದ್ದಿ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರುವ ದೀಪಕ್ ಅವರು 'ಹೊಸ ದಿನಚರಿ', 'ಅಯನ', 'ಅಂಬುಜ', 'ಪಿಂಕಿ ಎಲ್ಲಿ?', 'ಸಾರಾಂಶ' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದೀಗ 'ಮಿಸ್ಟರ್ ರಾಣಿ' ಸಿನಿಮಾದಲ್ಲಿ ಇವರು ನಟಿಸಿದ್ದು, ಸಿನಿಮಾದ ಕತೆ ಯಾವ ರೀತಿ ಇದೆ? ದೀಪಕ್ ಸುಬ್ರಹ್ಮಣ್ಯ ಅವರ ಪಾತ್ರ ಹೇಗಿರುತ್ತದೆ? ಎಂಬ ಕುತೂಹಲ ಸಿನಿಪ್ರಿಯರಿಗಿದೆ. ಒಟ್ಟಿನಲ್ಲಿ ಸೈಕೋ ಜಯಂತ್ ಆಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ದೀಪಕ್ ಅವರ ಮಿಸ್ಟರ್ ರಾಣಿ ಅವತಾರವನ್ನು ನೋಡಿ ಕಣ್ತುಂಬಿಸಿಕೊಳ್ಳಲು ಸಿನಿಪ್ರಿಯರು ಕಾಯುತ್ತಿದ್ದಾರೆ.

More from Filmibeat

English summary
Lakshmi Nivasa actor Deepak Subrahmanya will entertain the audience with the movie Mr. Rani
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X