ತುಮಕೂರಿನ ನಟಿ ಚಂದನಾ ಈಗ ಚಿಕ್ಕಮಗಳೂರು ಸೊಸೆ; 'ಲಕ್ಷ್ಮೀನಿವಾಸ' ಚಿನ್ನುಮರಿ ಅದ್ಧೂರಿ ವಿವಾಹ
ಚಂದನಾ ಅನಂತಕೃಷ್ಣ ಅವರ ಅಭಿಮಾನಿಗಳಿಗೆ ಎರಡೆರಡು ಖುಷಿ. ಒಂದು ಕಡೆ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಚಂದನಾ ತಾಯಿಯಾಗುತ್ತಿರುವ ವಿಚಾರಕ್ಕೆ ಖುಷಿಯಾದರೆ, ಮತ್ತೊಂದು ಕಡೆ ರಿಯಲ್ ಆಗಿ ಮದುವೆಯಾಗಿದ್ದಾರೆ. ಅದ್ದೂರಿಯಾಗಿ ಚಂದನಾ ಅವರ ಮದುವೆ ನಡೆದಿದೆ. ಹೀಗಾಗಿ ಅವರ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ನೆಚ್ಚಿನ ನಟಿಯ ಮದುವೆ ಕಂಡು ಶುಭ ಹಾರೈಸಿದ್ದಾರೆ.
ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಾಹ್ನವಿಯ ಪಾತ್ರದಲ್ಲಿ ಚಂದನಾ ಅನಂತ ಕೃಷ್ಣ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಮುಗ್ಧತೆಯ ಪ್ರತೀಕದಂತೆ ಇದ್ದಾರೆ. ಸೈಕೋ ಗಂಡನನ್ನು ಕಟ್ಟಿಕೊಂಡು ಅವನನ್ನು ಸರಿ ಮಾಡಬೇಕೆಂದು ಹೊರಟಿದ್ದಾರೆ. ಜಯಂತ್ ಹಾಗೂ ಜಾಹ್ನವಿಯ ಬಗ್ಗೆಯೇ ಸೀರಿಯಲ್ ವೀಕ್ಷಕರಿಗೆ ಆಗಾಗ ಟೆನ್ಶನ್ ಜಾಸ್ತಿ.

ಹೊಸ ಜೀವನಕ್ಕೆ ಚಂದನಾ
ಚಂದನಾ ಅನಂತಕೃಷ್ಣ ಮದುವೆ ಅದ್ದೂರಿಯಾಗಿ, ಶಾಸ್ತ್ರೋಕ್ತವಾಗಿ ನೆರವೇರಿದೆ. ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಕ್ಷ್ಮೀ ನಿವಾಸ ಸೀರಿಯಲ್ ಮೂಲಕ, ಚಿನ್ನುಮರಿ ಅಂತಾನೇ ಖ್ಯಾತಿ ಪಡೆದಿರುವ ಜಾಹ್ನವಿ, ಇಂದು ರಿಯಲ್ ಆಗಿ ಮದುವೆಯಾಗಿದ್ದಾರೆ. ಪ್ರತ್ಯಕ್ಷ್ ಜೊತೆಗೆ ಹೊಸ ಬಾಳಿಗೆ ಹೆಜ್ಜೆ ಇಟ್ಟಿದ್ದಾರೆ. ಬೆಂಗಳೂರಿನಲ್ಲಿಯೇ ಇಬ್ಬರ ಮದುವೆ ನಡೆದಿದೆ. ಮಧು ಮಗಳಾಗಿ ಚಂದನಾ ಕಂಗೊಳಿಸಿದ್ದು, ಸೋಷಿಯಲ್ ಮೀಡಿಯಾದಲ್ಲೆಲ್ಲಾ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿವೆ.
ಚಿಕ್ಕಮಗಳೂರಿನ ಸೊಸೆಯಾದ ನಟಿ
ಚಂದನಾ ಅನಂತಕೃಷ್ಣ ಹಾಗೂ ಪ್ರತ್ಯಕ್ಷ್ ಅವರದ್ದು ಕಂಪ್ಲೀಟ್ ಅರೇಂಜ್ ಮ್ಯಾರೇಜ್ ಆಗಿದೆ. ಎರಡು ಕುಟುಂಬದವರು ಸೇರಿ ಮಾತುಕತೆ ನಡೆಸಿ, ಇಂದು ಮದುವೆ ಮಾಡಿದ್ದಾರೆ. ಚಂದನಾ ಅನಂತಕೃಷ್ಣ ಮೂಲತಃ ತುಮಕೂರಿನವರು. ಆಳ್ವಾಸ್‌ನಲ್ಲಿ ಪದವಿ ಮುಗಿಸಿದ ಚಂದನಾ ಕಲಾ ಜೀವನದತ್ತ ಬಂದರು. ಈಗ ಇರೋದು ಬೆಂಗಳೂರಿನಲ್ಲಿ. ಸೊಸೆಯಾಗಿರುವುದು ಚಿಕ್ಕಮಗಳೂರಿಗೆ. ಹೌದು ಚಂದನಾ ಅವರ ಅತ್ತೆ-ಮಾವ ಚಿಕ್ಕಮಗಳೂರಿನವರು. ಆದರೆ ಅವರು ಕೂಡ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಪ್ರತ್ಯಕ್ಷ್ ಎಂಟೆಕ್ ಪದವಿ ಮುಗಿಸಿದ್ದು, ಬೆಂಗಳೂರಿನಲ್ಲಿ ಸ್ವಂತ ಬಿಸಿನೆಸ್ ಮಾಡುತ್ತಿದ್ದಾರೆ.
ಸ್ನೇಹಿತೆಯರಿಂದ ಚಂದನಾಗೆ ವಿಶ್
ಚಂದನಾ ಹಾಗೂ ಪ್ರತ್ಯಕ್ಷ್ ಮದುವೆ ಗುರು ಹಿರಿಯರ ಆಶೀರ್ವಾದದೊಂದಿಗೆ ಆಗಿದೆ. ಕುಟುಂಬಸ್ಥರು, ನೆಂಟರಿಷ್ಟರು, ಆತ್ಮೀಯರ ಸಮ್ಮುಖದಲ್ಲಿ ಮದುವೆ ನಡೆದಿದೆ. ಚಂದನಾ ಅವರ ಮದುವೆಗೆ ಕಿರುತೆರೆ ನಟ-ನಟಿಯರು, ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಸೇರಿದಂತೆ ಆಪ್ತರೆಲ್ಲರು ಹಾಜರಿದ್ದು ಆಶೀರ್ವದಿಸಿದ್ದಾರೆ. ಇನ್ನು ಚಂದನಾಗೆ ಅತ್ಯಾಪ್ತರಾಗಿರುವ ಗೆಳತಿಯರು ಮೆಹಂದಿ, ಸಂಗೀತ್ ಶಾಸ್ತ್ರಗಳಲ್ಲೂ ಭಾಗಿಯಾಗಿದ್ದಾರೆ. ಆ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲೆಲ್ಲಾ ವೈರಲ್ ಆಗಿವೆ.
ಸೀರಿಯಲ್ ಜೊತೆಗೆ ಸಿನಿಮಾ
ಇನ್ನು ಚಂದನಾ 'ರಾಜಾ-ರಾಣಿ', 'ಹೂಮಳೆ' ಸೀರಿಯಲ್‌ನಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಸದ್ಯ 'ಲಕ್ಷ್ಮೀ ನಿವಾಸ'ಧಾರಾವಾಹಿಯಲ್ಲಿ ಎಲ್ಲರ ಫೇವರಿಟ್ ಆಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್- 7 ಸ್ಪರ್ಧಿಯು ಆಗಿದ್ದರು. 'ಭರ್ಜರಿ ಬ್ಯಾಚುಲರ್' ಶೋನಲ್ಲೂ ಕಾಣಿಸಿಕೊಂಡಿದ್ದರು. ಈಗ ಕಲೆಯನ್ನೇ ಹೊತ್ತಿರುವ ಕುಟುಂಬಕ್ಕೆ ಮದುವೆಯಾಗಿ ಹೋಗಿದ್ದಾರೆ. 'ಭಾವ ತೀರಯಾನ' ಸಿನಿಮಾ ಕೂಡ ಅನೌನ್ಸ್ ಮಾಡಿದ್ದು, ಮುಂದೆಯೂ ನಟನೆಯಲ್ಲಿ ಮುಂದುವರೆಯುತ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಇನ್ನು ಮದುವೆಗೂ ಮುನ್ನ ವೆಡ್ಡಿಂಗ್ ಶೂಟ್ ಮಾಡಿಸಿದ್ದ ವಿಭಿನ್ನತೆ ಎಲ್ಲರಿಗೂ ಮೆಚ್ಚುಗೆಯಾಗಿತ್ತು.


Click it and Unblock the Notifications











