'ಲಕ್ಷ್ಮಿ ನಿವಾಸ'ದ ಚೆಲ್ವಿಯ ಫೋಟೊಶೂಟ್‌ಗೆ ಬೆರಗು; ನಿಜವಾಗಿಯೂ ಚೆಲುವೆಯೇ ಎಂದ ನೆಟ್ಟಿಗರು
ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿ ಬಹಳಷ್ಟು ಖ್ಯಾತಿಗಳಿಸುತ್ತಿದೆ. ಟಿಆರ್‌ಪಿಯಲ್ಲಿಯೂ ಸದಾ ಮುಂದಿರುವ ಈ ಧಾರಾವಾಹಿ ವಿಭಿನ್ನ ಪಾತ್ರಗಳನ್ನು ಒಳಗೊಂಡ ಸುಂದರ ಕಥೆಯಾಗಿ ಪ್ರೇಕ್ಷಕರ ಮುಂದೆ ಪ್ರಸಾರವಾಗುತ್ತಿದೆ. ಇದರಲ್ಲಿ ಚೆಲ್ವಿ ಪಾತ್ರವೂ ಜನಮನ ಗೆದ್ದಿರುವುದು ಸುಳ್ಳಲ್ಲ.
ಹೌದು, ವೆಂಕಿಯ ಪತ್ನಿ ಚೆಲುವಿ ಪಾತ್ರದಲ್ಲಿ ನಟಿ ಅಶ್ವಿನಿ ಮೂರ್ತಿಯವರು ಈಗಾಗಲೇ ನಟಿಸುತ್ತಿದ್ದಾರೆ. ಬಾಯಿ ಬಾರದ ವೆಂಕಿ ಮನೆಯಲ್ಲಿ ಎಲ್ಲರ ಅಕ್ಕರೆಯ ಮಗನಾಗಿ ಅಣ್ಣನಾಗಿ ತನ್ನದೇ ವೃತ್ತಿ ಆರಂಭಿಸಿ ಸ್ವಾವಲಂಬಿಯಾಗಿ ಕಾಣಿಸಿಕೊಂಡ ಪಾತ್ರ. ವೆಂಕಿಗೆ ಪತ್ನಿಯಾಗಿ ಬಂದಿದ್ದಾಳೆ ಚೆಲುವಿ. ಗಂಡನ ಪ್ರೀತಿಯ ಹೆಂಡತಿಯಾಗಿ ಅವನ ಆಡದ ಮಾತುಗಳನ್ನು ಅಚ್ಚುಕಟ್ಟಾಗಿ ಅರ್ಥ ಮಾಡಿಕೊಂಡು ಅವನ ಎಲ್ಲ ಕಷ್ಟ ಸುಖಗಳಲ್ಲೂ ಒಟ್ಟಿಗೆ ಇರುವ ಈ ಹೆಂಡತಿ ಚೆಲುವೆ, ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದಾಳೆ.

ಧಾರಾವಾಹಿಯಲ್ಲಿ ಬಹಳ ಭಾವನಾತ್ಮಕವಾದ ಸೀನ್‌ಗಳು ನಡೆಯುತ್ತಿದ್ದು ವೆಂಕಿ ಹಾಗೂ ಚೆಲ್ವಿ, ಲಕ್ಷ್ಮಿ ನಿವಾಸ ಮನೆಯನ್ನು ಬಿಟ್ಟು ಹೊರ ನಡೆದಿದ್ದಾರೆ. ಅಂದ ಹಾಗೆ ಈ ಚೆಲುವಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಅಶ್ವಿನಿ ಮೂರ್ತಿ. ಇವರ ಬಗ್ಗೆ ಮಾತನಾಡುವುದಾದರೆ ಈ ನಟಿ ಸೋಶಿಯಲ್ ಮೀಡಿಯಾದಲ್ಲಿ ಅಂತೂ ಬಹಳಷ್ಟು ಆ್ಯಕ್ಟೀವ್ ಇದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುವ ಈ ನಟಿಗೆ 91.2 ಸಾವಿರ ಫಾಲೋವರ್ಸ್ ಇದ್ದಾರೆ. ಇತ್ತೀಚೆಗೆ ಗೋಲ್ಡನ್ ಬಣ್ಣದ ಗೌನ್‌ನಲ್ಲಿ ಕಾಣಿಸಿಕೊಂಡ ನಟಿ ಅಶ್ವಿನಿ ಮೂರ್ತಿ ಅವರೇ ಬಗ್ಗೆ ನೆಟ್ಟಿಗರಂತೂ ಬಹಳ ಖುಷಿಪಟ್ಟಿದ್ದಾರೆ. ಚೆಲುವಿ ನಿಜವಾಗಲೂ ಚೆಲುವೆಯೇ ಎಂದು ಒಂದಷ್ಟು ಜನ ಕಮೆಂಟ್ಸ್ ಮಾಡಿದ್ದರೆ, ನೀವು ಸೂಪರ್, ಯು ಆರ್ ಸೊ ಬ್ಯೂಟಿಫುಲ್, ಜಸ್ಟ್ ಲುಕಿಂಗ್ ಲೈಕ್ ಎ ವಾವ್! ಸೌಂದರ್ಯ ಲೋಕದಿಂದ ಜಾರಿದೆ ನಿನ್ನ ನೋಡೋಕೆ ನನ್ನ ಎರಡು ಕಣ್ಣು ಸಾಲದೇ ಎಂಬಿತ್ಯಾದಿ ಕಾಮೆಂಟ್‌ಗಳ ಸುರಿಮಳೆಗೆ ಸುರಿದಿದೆ.

ಈಕೆಯ ನಟನೆ ಹಾಗೂ ಸೋಶಿಯಲ್ ಮೀಡಿಯಾದ ಬಗ್ಗೆ ಬಹಳಷ್ಟು ಅಭಿಮಾನ ಇರುವ ನೆಟ್ಟಿಗರು ಇವರನ್ನು ಫಾಲೋ ಮಾಡುವುದಲ್ಲದೆ ಪ್ರತಿ ಪೋಸ್ಟ್‌ಗಳಿಗೂ ಒಳ್ಳೊಳ್ಳೆಯ ಕಾಮೆಂಟ್‌ಗಳ ಮೂಲಕ ನಟಿಯನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.
ಅಂದಹಾಗೆ ನಟಿ ಅಶ್ವಿನಿ ಮೂರ್ತಿ ಅವರಿಗೆ ನಟನೆ ಹೊಸದೇನಲ್ಲ. 'ಲಕ್ಷ್ಮಿ ನಿವಾಸ' ಧಾರಾವಾಹಿ ಮೊದಲು 'ಲಕ್ಷಣ' ಧಾರಾವಾಹಿಯಲ್ಲಿ ನಾಯಕ ನಟಿ ನಕ್ಷತ್ರ ಅವರ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ 'ಮರಳಿ ಮನಸಾಗಿದೆ', 'ಬಯಸದೆ ಬಳಿ ಬಂದೆ' ಮುಂತಾದ ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ನಟಿ ಅಶ್ವಿನಿ ಮೂರ್ತಿ ಅವರು ನಟಿಯಾಗುವ ಮುನ್ನವೇ ಬಿಸಿನೆಸ್ ವುಮನ್ ಆಗಿ ಗುರುತಿಸಿಕೊಂಡವರು. ಹೌದು ಈಕೆ ಕಾಸ್ಮೆಟಾಲಜಿಸ್ಟ್ ಆಗಿದ್ದು, ತನ್ನದೇ ಆದ ಬ್ಯೂಟಿ ಸಲೂನ್ ಅನ್ನು ಹೊಂದಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿ ಇವರದೇ ಸ್ವಂತ ಗ್ಲಾಮ್ ಹೌಸ್ ಯುನಿಸೆಕ್ಸ್ ಸಲೂನ್ ಹೊಂದಿದ್ದು ನೈಲ್ ಆರ್ಟ್‌ನಿಂದ ಹಿಡಿದು ಮೇಕಪ್ ಹೀಗೆ ನಾನಾ ರೀತಿಯ ಸೌಂದರ್ಯಕ್ಕೆ ಸಂಬಂಧಪಟ್ಟ ಸರ್ವಿಸ್ ಅನ್ನು ಬಹಳ ಅಚ್ಚುಕಟ್ಟಾಗಿ ಕೊಡುತ್ತಾರೆ ಎಂಬ ಹೆಸರನ್ನು ಗಳಿಸಿದ್ದಾರೆ.
ಇನ್ನು ನಟನೆಯಿಂದಾಗಿ ಈಕೆಯ ಸೆಲೂನ್ ಗೂ ಹೆಚ್ಚಿನ ಪಾಪ್ಯುಲಾರಿಟಿ ಬಂದಿದ್ದು ಸದಾ ಸೆಲೆಬ್ರಿಟಿಗಳಿಂದ ಬ್ಯುಸಿಯಾಗಿರುತ್ತದೆ. ಹೌದು ನಟಿಯರಾದ ಸ್ವಾತಿ, ಅಭಿಜ್ಞಾ ಭಟ್, ವಿಜಯಲಕ್ಷ್ಮಿ, ರುಹಾನಿ ಶೆಟ್ಟಿ, ತನಿಷಾ ಕುಪ್ಪಂದ, ಪೂಜಾ ದುಗ್ಗಣ್ಣ ಹೀಗೆ ಹಲವು ಸೆಲೆಬ್ರಿಟಿಗಳು ಇವರ ಸೆಲೂನ್ ಗೆ ಭೇಟಿ ನೀಡುತ್ತಿರುತ್ತಾರಂತೆ.


Click it and Unblock the Notifications











