ಶ್ರೀಕಾಂತ್ ಕಾರು ಅಪಘಾತ.. ಲಕ್ಷ್ಮೀ ಕನಸು ಮತ್ತೆ ನುಚ್ಚು ನೂರಾಗುತ್ತಾ? ಮೂಲ ನಕ್ಷತ್ರದಿಂದ ಹೀಗಾಯ್ತಾ?
ಕೆಲವೊಂದು ಮೂಢನಂಬಿಕೆಗಳು ಈಗಲೂ ಚಾಲ್ತಿಯಲ್ಲಿವೆ. ಅದರಲ್ಲಿ ಜಾತಕ ನೋಡಿ ಮದುವೆ ಮಾಡುವುದು ಒಂದು. ಇಷ್ಟೇ ಗಣಗಳು ಕೂಡಬೇಕು, ಎದುರು ಬದುರು ಗುಣದವರೇ ಆಗಬೇಕು. ಇಲ್ಲ ಅಂದರೆ ಸುಖ ಸಂಸಾರಕ್ಕೆ ಅಡ್ಡಿಯಾಗುತ್ತದೆ. ಇಂತಹದ್ದೇ ಏನೇನೋ ನಂಬಿಕೆಗಳನ್ನು ಆಚರಿಸುತ್ತಾ ಬಂದಿದ್ದಾರೆ. ಅದರಲ್ಲೂ ಮೂಲ ನಕ್ಷತ್ರದಲ್ಲಿ ಯಾರಾದರೂ ಜನಿಸಿದರೆ, ಮುಗಿದೇ ಹೋಯ್ತ. ಆ ನಕ್ಷತ್ರದ ಹುಡುಗಿಯನ್ನು ಮದುವೆಯಾದರೆ ಗಂಡನಿಗೆ ಆಪತ್ತು ಎನ್ನಲಾಗುತ್ತದೆ. ಹೀಗಾಗಿಯೇ ಆ ನಕ್ಷತ್ರದಲ್ಲಿ ಹುಟ್ಟಿದ ಹುಡುಗಿ ಮದುವೆ ಎಂಬುದು ಮರಿಚೀಕೆಯಾಗುತ್ತದೆ.
ಈಗ ಭಾವನಾ ವಿಚಾರದಲ್ಲೂ ಅದೇ ಆಗಿದೆ. ಆರಂಭದಲ್ಲಿ ಹುಡುಗಿಯನ್ನು ಒಪ್ಪಿದ್ದವರು, ಬಳಿಕ ಜಾತಕದ ವಿಚಾರ ಬಂದ ಕೂಡಲೇ ಜಾರಿಕೊಂಡು ಬಿಡುತ್ತಿದ್ದರು. ಆದರೆ, ಭಾವನಾಳ ಬಾಸ್ ಇದ್ಯಾವುದನ್ನು ನಂಬದೆ ಇದ್ದ ಕಾರಣಕ್ಕೆ ಮದುವೆಯಾಗುವುದಕ್ಕೆ ಒಪ್ಪಿಗೆ ಸೂಚಿಸಿದರು. ಮದುವೆಯ ತಯಾರಿಯಾಗಿದೆ, ಮಂಟಪಕ್ಕೆ ಬರಬೇಕಾದವರು ಆಸ್ಪತ್ರೆ ಸೇರುವಂತೆ ಆಗಿದೆ.

ಮಂಟಪದ ತನಕ ಬಂತು ಲಕ್ಷ್ಮೀ ಕನಸು
ಶ್ರೀಕಾಂತ್ ಹಾಗೂ ಅವರ ತಾಯಿ ಜಾತಕವನ್ನು ನಂಬುವುದಿಲ್ಲ. ಹೀಗಾಗಿ ಭಾವನಾಳ ಗುಣಕ್ಕೆ ಒಪ್ಪಿಗೆ ನೀಡಿದ್ದರು. ಮದುವೆ ಆಗುತ್ತಾ ಇಲ್ಲವಾ ಎಂದು ಚಿಂತೆಯಲ್ಲಿದ್ದ ಮನೆಯವರಿಗೆ ಇದು ಸಂತಸದ ವಿಚಾರವೇ ಸರಿ. ಸದ್ಯ ಹಣವನ್ನು ಸಾಲ ಮಾಡಿ ಒದಗಿಸಿ, ಮಗಳ ಮದುವೆಯನ್ನು ಕೈಲಾದಷ್ಟು ಅದ್ದೂರಿಯಾಗಿ ಮಾಡುವುದಕ್ಕೆ ಶ್ರೀನಿವಾಸ್ ನಿಂತಿದ್ದಾರೆ. ಈಗಾಗಲೇ ಎಲ್ಲಾ ತಯಾರಿಯೂ ಆಗಿದೆ. ಲಕ್ಷ್ಮೀ ಮನೆಯವರ ದಿಬ್ಬಣ ಛತ್ರಕ್ಕೂ ಬಂದಾಗಿದೆ. ಛತ್ರದಲ್ಲೂ ಶಾಸ್ತ್ರ-ಸಂಪ್ರದಾಯಗಳನ್ನು ಮಾಡಿಕೊಂಡಿದ್ದಾರೆ.
ಅಮ್ಮನನ್ನು ಕಾಣುವ ಸಂತಸದಲ್ಲಿ ಖುಷಿ
ಖುಷಿಗೆ ಅಮ್ಮನನ್ನು ಕಾಣುವ ಆಸೆ, ಶ್ರೀಕಾಂತ್ ಖುಷಿಗೆ ಅಮ್ಮ ಸಿಕ್ಕ ಸಂಭ್ರಮ. ಜಾನಕಿಗೆ ಮಗನ ಸಂಸಾರ ಸರಿ ಆಯಿತಲ್ಲ ಎಂಬ ನೆಮ್ಮದಿ. ಎಲ್ಲರೂ ಮದುವೆಗೆ ರೆಡಿಯಾಗಿ ಹೊರಟಿದ್ದಾರೆ. ಖುಷಿಯನ್ನು ಬ್ಯೂಟಿಫುಲ್ ಆಗಿ ರೆಡಿ ಮಾಡಲಾಗಿದೆ. ಶ್ರೀಕಾಂತ್‌ಗೆ ಕೂಡ ಮಧುಮಗನ ಲುಕ್ ಬಂದಿದೆ. ಇನ್ನೂ ಜಾನಕಿ ಖುಷಿಯಲ್ಲಿದ್ದು, ಎರಡು ಕಾರಿನಲ್ಲಿ ಮಂಟಪದತ್ತ ಪಯಣ ಬೆಳೆಸಿದ್ದಾರೆ. ನಗು ನಗುತ್ತಾ ಸಾಗಿದವರ ಕಣ್ಣಲ್ಲಿ ನೀರು ಬರುವಂತ ಪರಿಸ್ಥಿತಿ ಉಂಟಾಗಿದೆ.

ಶ್ರೀಕಾಂತ್ ಅಂಡ್ ಫ್ಯಾಮಿಲಿಗೆ ಆಕ್ಸಿಡೆಂಟ್
ಶ್ರೀಕಾಂತ್ ತುಂಬಾ ಎಚ್ಚರದಿಂದಾನೇ ಕಾರು ಓಡಿಸುತ್ತಿದ್ದರು. ಖುಷಿ ಅಪ್ಪನ ಬಳಿ ಖುಷಿಯಾಗಿಯೇ ಮಾತನಾಡುತ್ತಿದ್ದಳು. ಆ ಕಡೆ ಮಂಟಪದಲ್ಲಿ ಗೌರಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಗಂಡನ ಆಯಸ್ಸು ಹೆಚ್ಚಾಗಬೇಕೆಂದರೆ ಗೌರಿ ಪೂಜೆ ಮಾಡುವ ಸಂಪ್ರದಾಯವಿದೆ. ಭಾವನಾ, ಗೌರಿ ಪೂಜೆಗೆ ಕುಳಿತಾಗಲೇ ಈ ಕಡೆ ಶ್ರೀಕಾಂತ್‌ಗೆ ಆಕ್ಸಿಡೆಂಟ್ ಆಗಿದೆ. ಕಾರಿಗೆ ಎದುರು ಬಂದ ಲಾರಿಗೆ ಶ್ರೀಕಾಂತ್ ಕಾರು ಡಿಕ್ಕಿ ಹೊಡೆದಿದೆ. ಲಾರಿಯಿಂದ ತಪ್ಪಿಸಿಕೊಳ್ಳಲು ಸ್ಟೇರಿಂಗ್ ಎಳೆದರು. ದೊಡ್ಡಮಟ್ಟದ ಆಕ್ಸಿಡೆಂಟ್ ನಡೆದೆ ಹೋಗಿದೆ.
ಆಕ್ಸಿಡೆಂಟ್ ವಿಚಾರ ಕೇಳಿ ಲಕ್ಷ್ಮೀಗೆ ಆಘಾತ
ಮದುವೆ ಮಂಟಪದಲ್ಲಿ ಖುಷಿ ಖುಷಿಯಾಗಿದ್ದವರಿಗೆ ಆಘಾತವಾಗಿದೆ. ಶ್ರೀಕಾಂತ್ ಮನೆಯವರಿಗೆ ಆಕ್ಸಿಡೆಂಟ್ ಆಗಿದೆ ಎಂಬ ವಿಚಾರ ಕೇಳಿ ಕಂಗಲಾಗಿದ್ದಾರೆ. ಮೊದಲೇ ಭಾವನಾಳದ್ದು ಮೂಲ ನಕ್ಷತ್ರ ಅಂತೆಲ್ಲಾ ಜನ ದೂಷಿಸುತ್ತಿದ್ದರು. ಈಗ ಮಂಟಪಕ್ಕೆ ಬರಬೇಕಾದವರೂ ಆಸ್ಪತ್ರೆ ಪಾಲಾಗಿದ್ದಾರೆ. ಭಾವನಾ ಇನ್ನೆಷ್ಟು ಜನರ ನಿಂದನೆಗಳನ್ನು ಸಹಿಸಬೇಕೋ ಏನೋ ತಿಳಿಯುತ್ತಿಲ್ಲ. ಅತ್ತ ಜವರೇಗೌಡ ಹಾಗೂ ಸಿದ್ದೆಗೌಡರಿದ್ದ ಕಾರಿಗೂ ಆಕ್ಸಿಡೆಂಟ್ ಆಗಿದೆ. ಮದುಮಗಳ ಲುಕ್‌ನಲ್ಲಿ ಅದೆಷ್ಟು ಮುದ್ದಾಗಿ ಕಾಣುತ್ತಾ ಇದ್ದಿಯೇ ಎಂದು ಲಕ್ಷ್ಮೀ ಸಂತಸ ಪಟ್ಟಿದರ ಹಿಂದೆಯೇ ಮಗಳ ಮುಖದಲ್ಲಿ ನೋವು ಉಂಟಾಗುವ ಸನ್ನಿವೇಶ ಎದುರಾಗಿದೆ.


Click it and Unblock the Notifications











