Lakshmi Nivasa: ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದ 'ಲಕ್ಷ್ಮಿ ನಿವಾಸ'; ತಂಡ ಫುಲ್ ಸಂಭ್ರಮ!

By ಅನಿತಾ ಬನಾರಿ

ಜೀ ಕನ್ನಡ ವಾಹಿನಿ ಇತ್ತೀಚೆಗೆ ಹಲವಾರು ಹೊಸ ಧಾರಾವಾಹಿಗಳನ್ನು ಲಾಂಚ್ ಮಾಡಿದೆ. ಅದರಲ್ಲಿ 'ಲಕ್ಷ್ಮಿ ನಿವಾಸ' ಕೂಡಾ ಒಂದು. ಬಹಳ ದೊಡ್ಡ ಕಲಾವಿದರ ತಂಡವನ್ನು ಹೊಂದಿರುವ ಈ ಧಾರಾವಾಹಿ ವಿಭಿನ್ನ ಕಥೆಯನ್ನು ಒಳಗೊಂಡಿದೆ. ಪಕ್ಕಾ ಮಿಡಲ್ ಕ್ಲಾಸ್ ಜೀವನವನ್ನು ಅದ್ಭುತವಾಗಿ ತೋರಿಸುವ ಪ್ರಯತ್ನದಲ್ಲಿರುವ ಈ ಧಾರಾವಾಹಿ ಕಥೆಗೆ ಹಲವಾರು ಆಯಾಮಗಳಿದ್ದು ಪ್ರೇಕ್ಷಕರಂತೂ ಬಹಳ ಎಂಜಾಯ್ ಮಾಡುತ್ತಿದ್ದಾರೆ.

ಧಾರಾವಾಹಿಯಲ್ಲಿ ಈಗಾಗಲೇ ಹಲವಾರು ತಿರುವುಗಳಿದ್ದು ಬಹಳ ಆಸಕ್ತಿದಾಯಕವಾಗಿ ಮುನ್ನಡೆಯುತ್ತಿದೆ. ಮಿಡಲ್ ಕ್ಲಾಸ್ ಜೀವನವನ್ನು ತೋರಿಸುವ ಈ ಧಾರಾವಾಹಿ ಬೇರೆಲ್ಲಾ ಧಾರವಾಹಿಗಳಿಗಿಂತಲೂ ವಿಭಿನ್ನವಾಗಿ ನಿಂತಿದೆ. ಕೂಡು ಕುಟುಂಬ, ಸ್ವಂತ ಮನೆ ಕಟ್ಟಬೇಕೆಂಬ ಆಸೆ, ದುಡ್ಡಿನ ತುರ್ತು, ಕುಟುಂಬ ಹಾಗೂ ವೈಯಕ್ತಿಕ ಜೀವನದ ನಡುವಿನ ಕಲಹಗಳು, ಮದುವೆ ಮಾಡುವ ಜವಾಬ್ದಾರಿಗಳು, ಕೆಲಸಕ್ಕೆ ಪರದಾಡುವ ಪರಿಸ್ಥಿತಿ, ಸಣ್ಣಪುಟ್ಟ ಕಲಹ, ಬ್ಯಾಂಕ್ ಸಾಲ ಅವಮಾನ ಅನುಮಾನಗಳನ್ನು ಚೆನ್ನಾಗಿ ತೋರಿಸಿತ್ತಿರುವ ಈ ಧಾರಾವಾಹಿ ಪ್ರೇಕ್ಷಕರಿಗಂತು ಬಹಳ ಹತ್ತಿರವಾಗಿದೆ.

Lakshmi Nivasa Kannada serial 100 episodes celebration

ಪ್ರೇಕ್ಷಕರು ತಮ್ಮ ಜೀವನಕ್ಕೆ ಧಾರಾವಾಹಿಯನ್ನು ಒಳ್ಳೆಯ ರೀತಿಯಲ್ಲಿ ಕನೆಕ್ಟ್ ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ. ವಯಸ್ಸಾದ ತಂದೆ ತಾಯಿ, ಲಕ್ಷ್ಮಿ ಹಾಗೂ ಶ್ರೀನಿವಾಸ್ ಅವರು ತಮ್ಮ ಮಕ್ಕಳ ಏಳಿಗೆಯನ್ನೇ ಮುನ್ನೊಡುತ್ತಾ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ದಡ ಸೇರಿಸುತ್ತಾ, ನಿವೃತ್ತಿಯ ಜೀವನವನ್ನು ಶಾಂತವಾಗಿ ಕಳೆಯಬೇಕೆಂಬ ಕನಸಿನಲ್ಲಿದ್ದಾರೆ.

ಇತ್ತ ಸ್ಟಾರ್ಟ್ ಅಪ್ ಮಾಡಬೇಕೆಂಬ ಕನಸು ಹೊತ್ತ ಮಗನೊಬ್ಬ ಯಾವುದೇ ಕೆಲಸವಿಲ್ಲದೆ ಹೆಂಡತಿಯ ಸಂಬಳದಲ್ಲಿ ಬದುಕುತ್ತಿದ್ದಾನೆ. ಅತ್ತ ಬಂದ ಸಂಬಳವನ್ನೆಲ್ಲ ಕದ್ದು ಕೂಡಿಟ್ಟು ಬೇರೆಯದೇ ಪ್ಲಾನ್‌ನಲ್ಲಿರುವ ಇನ್ನೊಬ್ಬ ಮಗ, ಜಾತಕದಲ್ಲಿ ದೋಷವಿದ್ದು ಸಂಬಂಧಗಳೇ ಕೂಡಿ ಬರದೆ ಮನೆಯಲ್ಲಿ ಉಳಿದಿರುವ ಮನೆಮಗಳು, ಶ್ರೀಮಂತನೊಬ್ಬನನ್ನು ಮದುವೆಯಾಗಿರುವ ಚಿಕ್ಕಮಗಳು, ಸದಾ ತವರು ಮನೆಯ ವಿಚಾರಗಳಲ್ಲಿ ಮೂಗು ತೂರಿಸಿಕೊಂಡು ಆಸೆ ಬಿರುಕುತನದಿಂದ ಇರುವ ಮತ್ತೊಬ್ಬ ಮಗಳು, ಬಾಯಿ ಬರೆದ ಅನಾಥನಿಗೆ ಜೀವನ ಕೊಟ್ಟ ಈ ಮನೆ, ಮನೆಯಲ್ಲಿ ಅಜ್ಜಿ ಎಂಬ ಹಿರಿಯ ಜೀವ ಬಹಳ ವಿಭಿನ್ನವಾಗಿ ನಿಜ ಜೀವನಕ್ಕೆ ಹತ್ತಿರವಾಗಿರುವಂತಹ ಪಾತ್ರಗಳೇ ಈ ಧಾರವಾಹಿಯಲ್ಲಿವೆ.

Lakshmi Nivasa Kannada serial 100 episodes celebration

ತ್ಯಾಗ, ಪ್ರೀತಿ, ನಗು, ಸಂಭ್ರಮ, ಸಂಬಂಧಗಳ ನಡುವಿನ ಭಾವನಾತ್ಮಕ ಬಂದ ಲವ್ ಸ್ಟೋರಿ, ಬೆಳದಿಂಗಳ ಊಟ ಹೀಗೆ ಸಣ್ಣ ಪುಟ್ಟ ಅಂಶಗಳು ಈ ಧಾರಾವಾಹಿಯನ್ನು ಬಹಳ ಎಚ್ಚರಿಕೆ ನಿಲ್ಲಿಸಿದೆ. ಪ್ರಮುಖ ನಟರ ತಾರಾಗಣವೇ ಆಗಿರುವ ಈ ಧಾರಾವಾಹಿಯಲ್ಲಿ 'ಚೈತ್ರದ ಪ್ರೇಮಾಂಜಲಿ', 'ಲಕ್ಷ್ಮಿ ಮಹಾಲಕ್ಷ್ಮಿ' ಇತ್ಯಾದಿ ಸಿನಿಮಾಗಳಲ್ಲಿ ನಟಿಸಿದ ಶ್ವೇತಾ ಅವರು ಲಕ್ಷ್ಮಿಯಾಗಿ ಕಾಣಿಸಿಕೊಂಡಿದ್ದಾರೆ.

ಸದ್ಯಕ್ಕೆ ಈ ಧಾರಾವಾಹಿ ನೂರು ಎಪಿಸೋಡ್‌ಗಳನ್ನು ಮುಗಿಸಿದ್ದು ಆ ಸಂಭ್ರಮದಲ್ಲಿದೆ. ಮಾನಸಿಕ ರೋಗದಿಂದ ಹಿಡಿದು ಹಲವಾರು ಆಯಾಮಗಳನ್ನು ಪ್ರತಿಬಿಂಬಿಸುತ್ತಿರುವ ಈ ಧಾರಾವಾಹಿ ಯಾವುದೇ ಬೋರಿಂಗ್ ಎಲಿಮೆಂಟ್ ಇಲ್ಲದೆ ಸಾಗುತ್ತಿರುವುದು ಖುಷಿಯ ವಿಚಾರ.

More from Filmibeat

English summary
Lakshmi Nivasa Kannada serial 100 episodes celebration
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X