ಜಯಂತ್ ಮತ್ತೊಂದು ಮುಖ ಅಜ್ಜಿಗೆ ಗೊತ್ತಾಯ್ತು; ಇವ್ರಿಗೆ ಏನಾಗುತ್ತೋ ಅಂತ ಫ್ಯಾನ್ಸ್‌ಗೆ ಆತಂಕ
ಜಯಂತ್ ಕೆಟ್ಟ ಮುಖ ಅಜ್ಜಿ ಮುಂದೆ ಬಯಲಾಗಿದೆ. ಜಯಂತ್ ಗೆಳೆತನಕ್ಕೆ ಇದೀಗ ಆತನ ಸುಳ್ಳು ಮುಳುವಾಗಿ ಹೋಗಿದೆ. ವೆಂಕಿಗೆ ಜಯಂತ್ ಎಂದರೆ ಬಹಳಷ್ಟು ಪ್ರೀತಿ. ತನ್ನ ತಂಗಿಯ ಗಂಡನೇ ಬಾಲ್ಯದ ಗೆಳೆಯ ಎಂದು ವೆಂಕಿಗೆ ತಿಳಿದರೆ ಮಾತ್ರ ಅವನಷ್ಟು ಖುಷಿ ಪಡುವವರು ಮತ್ಯಾರೂ ಇಲ್ಲ. ಜಯಂತ್ ಮನೆಗೆ ಬಂದ ಗೆಳೆಯನ ಬಳಿ ತನ್ನ ಹೆಂಡತಿ ಜಾಹ್ನವಿ ಬಗ್ಗೆ ಬಹಳ ಕೆಟ್ಟದಾಗಿ ಬಿಂಬಿಸಿದ್ದಾನೆ. ಈ ವಿಚಾರ ಜಯಂತ್ ಗೆಳೆಯನಿಗೆ ಬಹಳಷ್ಟು ನೋವು ನೀಡಿದೆ. ಜಯಂತ್ ಹೆಂಡತಿ ಬಹಳಷ್ಟು ಒಳ್ಳೆಯವಳು. ಆದರೆ, ಜಯಂತ್ ಸುಳ್ಳು ಹೇಳಿ ಆತನಿಗೆ ಬೇಕಾದ ಹಾಗೆ ನಡೆಸಿಕೊಳ್ಳುತ್ತಿದ್ದಾನೆ ಎನ್ನುವುದು ಜಯಂತ್ ಗೆಳೆಯನಿಗೆ ತಿಳಿದುಬಿಟ್ಟಿದೆ.
ಇದನ್ನು ಜಯಂತ್ ಬಳಿ ಬಹಳಷ್ಟು ಬಾರಿ ಹೇಳಿದ್ದಾನೆ. "ನಿನ್ನ ಸುಳ್ಳೇ ನಿನಗೆ ಮುಳುವಾಗುವುದು ಮಾತ್ರ ಖಂಡಿತ. ನೀನು ಈ ರೀತಿ ಸುಳ್ಳು ಹೇಳಬೇಡ. ಜಾಹ್ನವಿ ಬಳಿ ನಿಜ ಹೇಳಿ ನಿನ್ನ ಪ್ರೀತಿ ಉಳಿಸಿಕೊ. ಹಾಗೆ ಜಾಹ್ನವಿ ಅಣ್ಣ ವೆಂಕಿ ಬಳಿ ನೀನೇ ಜಯಂತ್. ಆತನ ಬಾಲ್ಯದ ಗೆಳೆಯ ಎನ್ನುವ ವಿಚಾರ ಹೇಳು. ಸಣ್ಣ ವಯಸ್ಸಿನಿಂದ ವೆಂಕಿ ತನ್ನ ಗೆಳೆಯನಿಗಾಗಿ ಹಂಬಲಿಸುತ್ತಿದ್ದಾನೆ. ಈಗಲೂ ಹುಡುಕುತ್ತಿದ್ದಾನೆ." ಎಂದು ಬಾಲ್ಯದ ಗೆಳೆಯ ಹೇಳುತ್ತಾನೆ.

ಆದರೆ, ವೆಂಕಿಯ ಬಳಿ ತಾನೇ ಜಯಂತ್ ಎನ್ನುವ ವಿಚಾರ ಇನ್ನೂ ಕೂಡ ಎಲ್ಲಿಯೂ ಹೇಳಿಲ್ಲ. ಜಾಹ್ನವಿ ತನ್ನ ಅಣ್ಣನ ಗೆಳೆಯನನ್ನು ಹುಡುಕಾಡಿ ಸೋತಿದ್ದಾಳೆ. ಆದರೆ, ಜಯಂತ್ ಇದೀಗ ಮತ್ತೊಂದು ದೊಡ್ಡ ತಪ್ಪು ಮಾಡಿದ್ದಾನೆ. ಜಯಂತ್ ಗೆಳೆಯ ನಿಜ ವಿಚಾರ ಹೇಳಲು ಒತ್ತಾಯಿಸಿದಾಗ ಆತನನ್ನೇ ಹೆದರಿಸಿ ಮನೆ ಬಿಟ್ಟು ಕಳಿಸಿದ್ದಾನೆ. ಈ ವಿಚಾರ ಅಜ್ಜಿ ತನ್ನ ಕಣ್ಣಾರೆ ನೋಡಿದ್ದಾರೆ. ಜಯಂತ್ ಕರಾಳ ಮುಖ ಅಜ್ಜಿಗೆ ಮದುವೆ ಆದ ಮೊದಲಿನಲ್ಲಿಯೇ ತಕ್ಕ ಮಟ್ಟಿಗೆ ತಿಳಿದಿತ್ತು. ಆದರೆ, ಇದೀಗ ಆತನಿಗೆ ಜಯಂತ್ ಬಂಡವಾಳ ತಿಳಿದು ಹೋಗಿದೆ.
ಜಯಂತ್ ಮೇಲೆ ಕೊಪಿಸಿಕೊಂಡ ಅಜ್ಜಿ
ಜಯಂತ್ ಮನೆಯಲ್ಲಿ ಆರಾಮವಾಗಿ ಓಡಾಡುತ್ತ ಅಜ್ಜಿ ಬಳಿ ಮಾತನಾಡಿಸಿದಾಗ ಸಿಟ್ಟು ಬಂದಿದೆ. ಕೂಡಲೇ ಜಯಂತ್ ಮಾಡಿದ ಕೆಟ್ಟ ಕೆಲಸವನ್ನು ಆತನ ಮುಂದೆಯೇ ಅನಾವರಣ ಮಾಡಿದ್ದಾರೆ. ಈ ಮಾತನ್ನು ಕೇಳಿ ಜಯಂತ್‌ಗೆ ಬಹಳಷ್ಟು ಸಿಟ್ಟು ಬಂದಿದೆ. "ನೀನು ಜಾಹ್ನವಿಯನ್ನು ಮದುವೆ ಆಗುವ ಮೊದಲೇ ನನಗೆ ನಿನ್ನ ಬಗ್ಗೆ ಅನುಮಾನ ಇತ್ತು. ಆದರೆ ಇದೀಗ ಅದೆಲ್ಲವೂ ನನಗೆ ತಿಳಿದು ಹೋಗಿದೆ" ಎಂದು ಹೇಳಿದಾಗ ಜಯಂತ್‌ಗೆ ಆಘಾತ ಆಗುತ್ತೆ. ಇದನ್ನು ನೋಡಿ ವೀಕ್ಷಕರು ಮಾತ್ರ ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. "ಅಜ್ಜಿ, ನೀವು ನಿಜ ಹೇಳಲು ಯಾಕೆ ಹೋದಿರಿ. ಇನ್ನೂ ನಿಮ್ಮ ಕಥೆ ಅಷ್ಟೇ" ಎಂದು ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಜಯಂತ್‌ಗೆ ಜಾಹ್ನವಿ ಎಂದರೆ ಅತಿಯಾದ ಪ್ರೀತಿ. ಆ ಪ್ರೀತಿಯೇ ಜಾಹ್ನವಿಗೆ ಉರುಳಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.
ಸಾವಿನ ರಹಸ್ಯ ಭೇದಿಸುತ್ತಾಳಾ ಭಾವನಾ
ಇತ್ತ ಭಾವನಾ ಹಾಗೂ ಸಿದ್ದೇಗೌಡರು ಖುಷಿಯಿಂದಾಗಿ ಒಂದಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಸಿದ್ದು ಜೊತೆ ಇರುವ ತನಕ ಭಾವನಾಗೆ ಭಯ ಎನ್ನುವುದನ್ನು ಹತ್ತಿರ ಕೂಡ ಸುಳಿಯಲು ಬಿಡುವುದಿಲ್ಲ. ಆದರೆ, ಭಾವನಾ ಅತ್ತೆಗೆ ಖುಷಿ ಮನೆಗೆ ಬಂದಿರುವುದು ಸ್ವಲ್ಪವೂ ಇಷ್ಟವಿಲ್ಲ. ಭಾವನಾ ಖುಷಿ ತಂದೆ ಸಾವಿನ ಬಗ್ಗೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಒಂದು ವೇಳೆ ಖುಷಿಯ ತಂದೆಗೆ ಆಕ್ಸಿಡೆಂಟ್ ಮಾಡಿದ್ದು ಸಿದ್ದೇಗೌಡ ಎಂದು ಭಾವನಾಗೆ ತಿಳಿಯುತ್ತಾ? ತಿಳಿದರೆ ಮುಂದೇನು?


Click it and Unblock the Notifications











