Lakshmi Nivasa:ಅಜ್ಜಿಗೆ ಮರಳಿದ ಪ್ರಜ್ಞೆ; ಜಯಂತ್ ನ ಬಣ್ಣವನ್ನು ಬಯಲು ಮಾಡುತ್ತಾರಾ ಅಜ್ಜಿ?

By ಪೂರ್ವ

ಅಜ್ಜಿ ಪ್ರಾಣ ಪಕ್ಷಿ ಹೋಗುತ್ತೆ ಎಂದುಕೊಂಡಿದ್ದ ಜಯಂತ್‌ಗೆ ಇದೀಗ ಶಾಕಿಂಗ್ ಸುದ್ದಿಯೊಂದು ಬಂದಿದೆ. ಇದನ್ನು ಕೇಳಿದ ಜಯಂತ್‌ಗೆ ಮನಸ್ಸಲ್ಲಿಯೇ ಬಹಳ ಭಯ ಆವರಿಸುತ್ತದೆ. ಜಯಂತ್‌ಗೆ ಮೊದಲಿನಿಂದಲೂ ಆತನ ಗೆಳೆಯ ಹೇಳುತ್ತಲೇ ಇದ್ದ. ಎಲ್ಲಾ ವಿಚಾರಗಳನ್ನು ಜಾಹ್ನವಿಯವರ ಬಳಿ ಹೇಳಿಬಿಡು. ಇಲ್ಲವಾದರೆ ನೀನು ಖಂಡಿತವಾಗಿಯೂ ಜಾಹ್ನವಿಯವರನ್ನು ಕಳೆದುಕೊಂಡು ಬಿಡುತ್ತೀಯಾ ಎಂದಿದ್ದ. ಆದರೆ, ಜಯಂತ್‌ ಗೆಳೆಯನ ಮಾತನ್ನು ಕೇಳದೆ ಆತನನ್ನು ಮನೆಯಿಂದ ಹೊರಗೆ ಹಾಕಿಬಿಡುತ್ತಾನೆ.

ಇದೆಲ್ಲವನ್ನ ಗುಟ್ಟಾಗಿ ಆಲಿಸುತ್ತಿದ್ದ ಅಜ್ಜಿಯ ಪ್ರಾಣ ತೆಗೆಯಲು ಜಯಂತ್ ಹಿಂದೆ ಮುಂದೆ ನೋಡಲಿಲ್ಲ. ಅಜ್ಜಿ ಪ್ರಜ್ಞೆ ತಪ್ಪಿದ್ದನ್ನು ನೋಡಿ ಜಯಂತ್ ಅಲ್ಲಿಂದ ಪರಾರಿಯಾಗಿರುತ್ತಾನೆ. ಜಾಹ್ನವಿ ತನ್ನ ಅಜ್ಜಿಯ ಬಳಿ ಮಾತನಾಡಲು ಬಂದಾಗ ಅಜ್ಜಿಗೆ ಪ್ರಜ್ಞೆ ಇಲ್ಲದ್ದನ್ನು ಕಂಡು ಗಾಬರಿಗೊಂಡ ಜಾಹ್ನವಿ ಆಸ್ಪತ್ರೆಗೆ ದಾಖಲು ಮಾಡುತ್ತಾಳೆ. ಈ ವಿಚಾರವನ್ನು ತಂದೆ, ತಾಯಿ ಹಾಗೂ ಮನೆ ಮಂದಿಗೆ ತಲುಪಿಸುತ್ತಾಳೆ. ಇತ್ತ ಜಯಂತ್ ಮನಸ್ಸಿನಲ್ಲಿಯೇ ಬಹಳಷ್ಟು ಖುಷಿ ಪಡುತ್ತಾನೆ. ಅಜ್ಜಿ ಬದುಕುವುದಿಲ್ಲ ಎಂದು ಜಯಂತ್ ಅಂದುಕೊಂಡಿದ್ದ ಆದರೆ, ಜಯಂತ್ ಅಂದುಕೊಂಡಿದ್ದು ಒಂದು. ಅಲ್ಲಿ ಆದದ್ದು ಇನ್ನೊಂದು.

Lakshmi Nivasa Kannada serial January 08th 2025 episode 468 update

ಭಾವನಾ ಕೂಡ ತನ್ನ ಅಜ್ಜಿಗೆ ಹುಷಾರಿಲ್ಲ ಎಂದು ತಿಳಿದು ಗಾಬರಿಯಿಂದ ಆಸ್ಪತ್ರೆಗೆ ಬರುತ್ತಾಳೆ. ಅಜ್ಜಿಗೆ ಏನಾಗಿದೆಯೋ ಏನೋ ಎನ್ನುವ ಸಣ್ಣ ಅಳುಕು ಭಾವನಾಗೆ ಇರುತ್ತೆ. ಸಿದ್ದೇ ಗೌಡ್ರು ಹಾಗೂ ಭಾವನಾ ಮನೆಯಿಂದ ಹೊರಡುವ ವೇಳೆ ಅವರನ್ನು ತಡೆಯಲು ಸಿದ್ದೇಗೌಡರ ತಾಯಿ ಪ್ರಯತ್ನ ಪಟ್ಟರು. ಆದರೆ, ರೇಣುಕಾ ಮಾತಿಗೆ ಆತನ ಮಗನೇ ಬೆಲೆ ಕೊಡಲಿಲ್ಲ. ಭಾವನಾಗೆ ಅತ್ತೆಯ ಮಾತಿನಿಂದ ಬಹಳಷ್ಟು ನೋವಾಗಿದ್ದರೂ ಕೂಡ ತನ್ನ ಅಜ್ಜಿಯನ್ನು ನೋಡಲೇಬೇಕು ಎನ್ನುವ ಕಾರಣಕ್ಕಾಗಿ ಆಸ್ಪತ್ರೆಗೆ ಓಡೋಡಿ ಬರುತ್ತಾಳೆ.

ಸ್ವಾರ್ಥಿ ಸಂತೋಷ್ ಗೆ ಬುದ್ದಿ ಹೇಳಿದ ವೀಣಾ

ಇತ್ತ ಸಂತೋಷ್‌ಗೆ ಆತನ ಬಗ್ಗೆಯೇ ಚಿಂತೆ. ಮನೆಯಲ್ಲಿ ಯಾರು ಇರಲಿ, ಯಾರು ಹೋಗಲಿ ಆತನಿಗೆ ಸಂಬಂಧವೇ ಇಲ್ಲ. ಆತನಿಗೆ ಹಣ ಆತ ಮನೆ ಕಟ್ಟುವ ವಿಚಾರ ಹಾಗೆಯೇ ಆತನ ಹೆಂಡತಿ ಮಕ್ಕಳು ಇಷ್ಟು ವಿಚಾರಗಳು ಆತನ ತಲೆಯಲ್ಲಿ ಕೊರೆಯುತ್ತಿರುತ್ತೆ ವಿನಃ ತನ್ನ ತಂದೆಯ ತಾಯಿಗೆ ಕಷ್ಟ ಆಗಿದೆ. ಬದುಕುತ್ತಾರೋ ಇಲ್ಲವೋ ಎನ್ನುವುದೇ ಗೊತ್ತಿಲ್ಲ. ಹೀಗಿದ್ದರೂ ಅವರನ್ನು ನೋಡಲು ಆಸ್ಪತ್ರೆಗೆ ಕೂಡ ಸಂತೋಷ ಹೋಗಲಿಲ್ಲ. ಆಸ್ಪತ್ರೆಗೆ ಹೋದರೆ ಎಲ್ಲಿ ಹಣವನ್ನು ನಾನೇ ಪಾವತಿ ಮಾಡಬೇಕೊ ಎನ್ನುವ ದೃಷ್ಟಿಯಿಂದ ಸಂತೋಷ್ ಮನೆಯಲ್ಲಿಯೇ ಇರುತ್ತಾನೆ. ಗಂಡನಿಗೆ ಅದೆಷ್ಟೇ ಬುದ್ಧಿ ಹೇಳಿದರೂ ವೀಣಾ ಮಾತನ್ನು ಸಂತೋಷ ತಲೆಗೆ ಹಾಕಿಕೊಳ್ಳುವುದೇ ಇಲ್ಲ.

Lakshmi Nivasa Kannada serial January 08th 2025 episode 468 update

ಅಜ್ಜಿ ಮಾತು ಕೇಳಿ ಮನೆ ಮಂದಿ ಶಾಕ್

ಇತ್ತ ಅಜ್ಜಿ ಬದುಕುವುದೇ ಇಲ್ಲ ಎಂದುಕೊಂಡಿದ್ದ ಜಯಂತ್‌ಗೆ ಶಾಕ್ ಆಗಿದೆ. ಡಾಕ್ಟರ್ ಬಹಳ ಖುಷಿಯಿಂದಲೇ ಆಗಮಿಸಿ ಅಜ್ಜಿಗೆ ಪ್ರಜ್ಞೆ ಬಂದಿದೆ. ಅವರು ಬಹಳಷ್ಟು ರಿಕವರಿ ಆಗಿದ್ದಾರೆ ಎಂದು ತಿಳಿದು ಮನೆ ಮಂದಿ ಖುಷಿ ಪಡುತ್ತಾರೆ. ಅಜ್ಜಿಯನ್ನು ನೋಡಲು ಎಲ್ಲರೂ ಓಡೋಡಿ ವಾರ್ಡ್‌ಗೆ ಹೋಗುತ್ತಾರೆ. ಅಜ್ಜಿ ಒಮ್ಮೆಲೆ ಎಲ್ಲರ ಮುಖ ನೋಡಿ "ಜಯಂತ್ ಒಳ್ಳೆಯವನಲ್ಲ. ಒಳ್ಳೆತನ ಮುಖವಾಡ ತೊಟ್ಟ ರಾಕ್ಷಸ. ಆತನೇ ನನ್ನನ್ನು ಕೊಲ್ಲಲು ಪ್ರಯತ್ನ ಪಟ್ಟ. ಆತ ಒಳ್ಳೆಯವನಲ್ಲ" ಎಂದು ಹೇಳಿದಾಗ ಎಲ್ಲರಿಗೆ ಬಹಳ ಶಾಕ್ ಆಗುತ್ತೆ. ಜಯಂತ್‌ಗೆ ಬಹಳ ಭಯ ಆಗುತ್ತೆ. ಮನೆ ಮಂದಿಯೆಲ್ಲ ಜಯಂತ್‌ನತ್ತ ಚಿತ್ತ ಹರಿಸುತ್ತಾರೆ.

More from Filmibeat

English summary
Lakshmi Nivasa Kannada serial January 08th 2025 episode 468 update;
Read more about: serial filmibeat original poorva
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X