ಭಾವನಾಗೆ ಖಡಕ್ ವಾರ್ನಿಂಗ್ ಕೊಟ್ಟ ತಾಯವ್ವ; ಅಜ್ಜಿಯ ಮಾತನ್ನು ಇನ್ನಾದರೂ ಕೇಳುತ್ತಾಳ ಭಾವನಾ?
ಭಾವನಾ ಹಾಗೂ ಸಿದ್ದೇಗೌಡರು ಶ್ರೀಕಾಂತ್ ಕಾರಿಗೆ ಆಕ್ಸಿಡೆಂಟ್ ಮಾಡಿದ್ದು ಯಾರು ಎನ್ನುವುದನ್ನು ಪತ್ತೆ ಹಚ್ಚುವುದಕ್ಕೆ ಪೊಲೀಸ್ ಸ್ಟೇಶನ್‌ಗೆ ಹೋಗುತ್ತಾರೆ. ಈ ಮೊದಲೇ ಪೊಲೀಸರ ಬಳಿ ಜವರೇ ಗೌಡರೇ ಖುದ್ದಾಗಿ ಮಾತನಾಡಿರುತ್ತಾರೆ. ಮೊದಲಾಗಿ ಜವರೇಗೌಡರು ಮಿನಿಸ್ಟರ್ ಅವರ ಮಾತನ್ನು ಪೊಲೀಸರು ಕೇಳಲೇಬೇಕಾಗಿತ್ತು. ಜವರೇಗೌಡರೂ ಪೊಲೀಸರ ಬಳಿ ಯಾರಾದರೂ ಬ್ಯುಸಿನೆಸ್ ಮ್ಯಾನ್ ಶ್ರೀಕಾಂತ್ ಸಾವಿನ ಬಗ್ಗೆ ದೂರು ನೀಡಲು ಬಂದರೆ ತನಗೆ ಸುದ್ದಿ ಮೊದಲು ಮುಟ್ಟಿಸಬೇಕು. ಆ ಕಂಪ್ಲೇಂಟ್ ತೆಗೆದುಕೊಳ್ಳಬಾರದು ಅಂತ ತಾಕೀತು ಮಾಡಿರುತ್ತಾರೆ.
ಆದರೆ ಇದೀಗ ಜವರೇಗೌಡರ ಸೊಸೆ ಹಾಗೂ ಮಗನೇ ಶ್ರೀಕಾಂತ್ ಸಾವಿನ ಬಗ್ಗೆ ಕೆದಕುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದೇಗೌಡರು ಹೇಳಿದ ಮಾತುಗಳನ್ನು ಕೇಳಿಸಿಕೊಂಡ ಪೊಲೀಸ್ ಅಧಿಕಾರಿ ಮೊದಲಿಗೆ ಮೌನವಾಗಿದ್ದಾಗ ಸಿದ್ದೇಗೌಡರು ಕೊಂಚ ಅನುಮಾನ ವ್ಯಕ್ತಪಡಿಸುತ್ತಾರೆ. ಈ ಮೊದಲು ಭಾವನಾ ಹಾಗೂ ಶ್ರೀಕಾಂತ್ ಸಾವಿನ ಬಗ್ಗೆ ತನಿಖೆ ನಡೆಸಲು ಪೊಲೀಸರ ಬಳಿ ಮನವಿ ಮಾಡಿರುತ್ತಾಳೆ. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡದ ಪೊಲೀಸರು ದೂರನ್ನು ತೆಗೆದುಕೊಂಡಿರುವುದಿಲ್ಲ. ಈ ಬಾರಿ ಭಾವನಾ ಪೊಲೀಸ್ ಸ್ಟೇಷನ್‌ಗೆ ಹೋಗುವಾಗ ಸಿದ್ದೇಗೌಡರನ್ನು ಕೂಡ ಕರೆದುಕೊಂಡು ಹೋಗುತ್ತಾಳೆ.

ಪೊಲೀಸರು ಸಿದ್ದೇಗೌಡ ಹಾಗೂ ಭಾವನಾ ಕೈಯಿಂದ ದೂರನ್ನು ತೆಗೆದುಕೊಳ್ಳುತ್ತಾರೆ. ಹಾಗೆಯೇ ಜವರೇಗೌಡರಿಗೆ ಕರೆ ಮಾಡಿ ಸುದ್ದಿಯನ್ನು ಮುಟ್ಟಿಸುತ್ತಾರೆ. ಶ್ರೀಕಾಂತ್ ಅವರ ಸಾವಿನ ತನಿಖೆಗೆ ನಿಮ್ಮ ಮಗ ಹಾಗೂ ಸೊಸೆ ಬಂದು ದೂರು ಕೊಟ್ಟು ಹೋಗಿದ್ದಾರೆ ಎಂದಾಗ ಜವರೇಗೌಡರಿಗೆ ಬಹಳ ಭಯವಾಗುತ್ತೆ. ಏಕೆಂದರೆ ಬಿಸಿನೆಸ್ ಮ್ಯಾನ್ ಶ್ರೀಕಾಂತ್ ಅವರ ಸಾವಿಗೆ ಹಾಗೂ ಅವರ ಅಮ್ಮನ ಸಾವಿಗೆ ಸಿದ್ದೇಗೌಡ ಕಾರಣನಾಗಿರುತ್ತಾನೆ. ಈ ವಿಚಾರ ಯಾರಿಗೂ ಕೂಡ ತಿಳಿಯಬಾರದು ಎಂದು ಜವರೇಗೌಡರು ಅದೆಷ್ಟೇ ಪ್ರಯತ್ನ ಪಟ್ಟರು ಕೂಡ ಸಾಧ್ಯವಾಗುತ್ತಿಲ್ಲ.
ಭಾವನಾ ಹೊರಗೆ ಹೋಗದಂತೆ ತಾಯವ್ವ ಆಜ್ಞೆ
ಭಾವನಾ ಹಾಗೂ ಸಿದ್ದೇಗೌಡರು ಪೊಲೀಸ್ ಸ್ಟೇಷನ್‌ನಿಂದ ನೇರವಾಗಿ ಮನೆಗೆ ಬಂದಾಗ ಮನೆಯಲ್ಲಿ ತಾಯವ್ವ ಬಹಳ ಕೋಪದಿಂದ ಸಿದ್ದೇಗೌಡರು ಹಾಗೂ ಭಾವನಾ ಮನೆಯ ಒಳಗೆ ಹೋಗದಂತೆ ತಡೆದಿದ್ದಾರೆ. ಹಾಗೆಯೇ ಭಾವನಾಗೆ ಈ ಮೊದಲೇ ತಾಯವ್ವ ಬಹಳ ಖಡಕ್ಕಾಗಿ ವಾರ್ನಿಂಗ್ ಅನ್ನು ನೀಡಿರುತ್ತಾಳೆ. ಆದರೆ, ಭಾವನಾ ತಾಯವ್ವನ ಮಾತು ಕೇಳದೆ ಗಂಡನ ಜೊತೆ ಮನೆಯಿಂದ ಆಚೆ ಹೋಗಿರುತ್ತಾಳೆ. ಇದನ್ನೇ ಇಟ್ಟುಕೊಂಡ ತಾಯವ್ವ ಭಾವನಾ ಮನೆಗೆ ಮರಳುತ್ತಿದ್ದಂತೆ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಹಾಗೆಯೇ ಭಾವನಾ ತಂದೆ-ತಾಯಿಗೆ ಕೂಡ ತಾಯವ್ವ ಬಯ್ಯುತ್ತಾಳೆ. ನಿನಗೆ ನಿನ್ನ ತಂದೆ ತಾಯಿ ಸಂಸ್ಕಾರವನ್ನು ಕಲಿಸಿಲ್ಲವೇ. ಮನೆಯಿಂದ ಹೊರಗೆ ಹೋಗುವಾಗ ಹಿರಿಯರ ಬಳಿ ಒಂದು ಮಾತು ಹೇಳಿ ಹೋಗಬೇಕೆನ್ನುವ ಪ್ರಜ್ಞೆ ಕೂಡ ನಿನಗೆ ಇಲ್ಲ. ದೊಡ್ಡವರ ಮಕ್ಕಳನ್ನು ಬುಟ್ಟಿಗೆ ಹಾಕಿಕೊಳ್ಳುವ ಕೆಲಸ ನಿನ್ನದು "ಎಂದಾಗ ಭಾವನಾ ಕಣ್ಣುಗಳು ನೀರಾಗುತ್ತವೆ.

ಸಿದ್ದೇಗೌಡರ ಮಾತು ಕೇಳದ ಅಜ್ಜಿ
ತಾನು ಮಾಡದೆ ತಪ್ಪಿಗೆ ಏನಿಲ್ಲ ಮಾತುಗಳನ್ನು ಅನ್ನಿಸಿಕೊಳ್ಳಬೇಕು ಎನ್ನುವ ಆಲೋಚನೆ ಯಾಕೆಗೆ ಮೂಡದಿರದು. ಇತ್ತ ಸಿದ್ದೇಗೌಡ ಅದೆಷ್ಟೇ ತನ್ನ ಅಜ್ಜಿಯ ಬಾಯಿಯನ್ನು ಮುಚ್ಚಿಸಲು ನೋಡಿದರೂ ಆ ಮಾತನ್ನು ತಾಯವ್ವ ಕೇಳಲು ಸಿದ್ದರಿರಲಿಲ್ಲ. ಭಾವನೆಗೆ ಇನ್ನು ಮುಂದೆ ಮನೆಯಿಂದ ಹೇಳದೆ ಕೇಳದೆ ಹೊರಟು ಹೋದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.


Click it and Unblock the Notifications











