Lakshmi Nivasa Serial:ಅಜ್ಜಿ ಆರೋಗ್ಯದಲ್ಲಿ ಚೇತರಿಕೆ; ಜಯಂತ್ ಕಥೆ ಏನಾಗುತ್ತೆ?
ಜಾಹ್ನವಿ ತನ್ನ ತವರು ಮನೆಯಲ್ಲಿ ಬಹಳಷ್ಟು ಖುಷಿಯಲ್ಲಿ ಕಾಲ ಕಳೆಯುತ್ತಿರುತಾಳೆ. ಆಕೆಗೆ ತನ್ನ ಗಂಡನ ಮನೆಗಿಂತ ತಾಯಿಯ ಮನೆಯಲ್ಲಿ ಬಹಳಷ್ಟು ಖುಷಿ ಸಿಗುತ್ತಿತ್ತು. ಅಜ್ಜಿ ಜೊತೆ ಮಾತನಾಡಿ ತಂದೆ ತಾಯಿಗಳ ಜೊತೆಗೆ ಬಹಳ ಖುಷಿಯಲ್ಲಿ ಕಾಲ ಕಳೆದಳು. ಆಕೆಗೆ ಈ ದಿನ ಹೇಗೆ ಕಳೆಯಿತು ಎನ್ನುವುದೇ ಗೊತ್ತಾಗಲಿಲ್ಲ. ಅಜ್ಜಿಯ ರೂಮಿನೊಳಗೆ ಬಂದ ಜಾಹ್ನವಿ, ಜಯಂತ್ ಒಳ್ಳೆಯ ಉದ್ದೇಶ ಇಟ್ಟುಕೊಂಡು ಖಂಡಿತ ಬರಲಿಲ್ಲ. ಬದಲಿಗೆ ಆತನ ಮನದಲ್ಲಿ ಬೇರೆ ಕೆಟ್ಟ ಉದ್ದೇಶವೇ ಇತ್ತು.
ಅಜ್ಜಿ ಬೇಗನೇ ರಿಕವರಿ ಆದರೆ ಜಯಂತ್‌ಗೆ ಆಪತ್ತು. ಹೀಗಾಗಿ ಅಜ್ಜಿ ಎಲ್ಲಿ ಇರುತ್ತಾರೋ ಅಲ್ಲಿಯೇ ಸಿಸಿ ಕ್ಯಾಮರ ಇಟ್ಟಿರುತ್ತಾನೆ. ಅಜ್ಜಿಯ ಬಗ್ಗೆ ಪಿಂಟು ಪಿಂಟು ಪಿನ್ ಮಾಹಿತಿ ತಿಳಿದುಕೊಳ್ಳಬಹುದು ಎನ್ನುವುದು ಇದರ ಉದ್ದೇಶ. ಜಾಹ್ನವಿ ತನ್ನ ಗಂಡ ಅಜ್ಜಿಯ ರೂಮ್‌ನಲ್ಲಿ ಸಿಸಿ ಕ್ಯಾಮರಾವನ್ನು ಇಟ್ಟಿರಬಹುದು ಎಂದು ಮನೆಯೆಲ್ಲಾ ಜಲಾಡುತ್ತಾಳೆ. ಆಗ ಆಕೆಗೆ ಸಿಸಿ ಕ್ಯಾಮರಾ ಸಿಗುತ್ತೆ. ಆಕೆ ಆ ಕೂಡಲೇ ಆ ಕ್ಯಾಮರಾವನ್ನು ಪುಡಿ ಪುಡಿ ಮಾಡಿ ಬಿಸಾಡುತ್ತಾಳೆ.

ಇತ್ತ ಜಯಂತ್ ಜಾಹ್ನವಿ ಮನೆಯಲ್ಲಿಲ್ಲದೆ ಬಹಳಷ್ಟು ತಲೆ ಕೆಡಿಸಿಕೊಂಡು ಒದ್ದಾಡುತ್ತಿರುತ್ತಾನೆ. ಚಿನ್ನುಮರಿ ಯಾಕೆ ಹೀಗೆಲ್ಲ ಮಾಡಿದರು. ತನ್ನನ್ನು ಬಿಟ್ಟು ಯಾಕೆ ಅವರ ತಂದೆ ತಾಯಿ ಬಳಿಗೆ ಯಾಕೆ ಹೋದರು. ಇರಲಿ, ನಾನು ನಾಳೆಯೇ ಅವರನ್ನು ಕರೆದುಕೊಂಡು ಬರುತ್ತೇನೆ ಎನ್ನುತ್ತಾ, ಅಜ್ಜಿ ಏನು ಮಾಡುತ್ತಿರಬಹುದು ಎಂದು ಮೊಬೈಲ್‌ನಲ್ಲಿ ನೋಡಿದಾಗ ಸಿಸಿ ಕ್ಯಾಮರ ವರ್ಕ್ ಆಗದೆ ಇರುವುದನ್ನು ಕಂಡು ಜಯಂತ್‌ಗೆ ತಲೆ ಕೆಡುತ್ತದೆ.
ಜಾಹ್ನವಿ ಬಗ್ಗೆ ಜಯಂತ್‌ಗೆ ಕೋಪ
ಇದೆಲ್ಲ ಜಾಹ್ನವಿ ಅವರದೇ ಕೆಲಸ ಎಂದು ಜಯಂತ್ ಕೋಪ ನೆತ್ತಿಗೇರುತ್ತೆ. ಮರುದಿನ ಜಾಹ್ನವಿ ಎದ್ದು ಮನೆಯ ತುಳಸಿ ದೇವರಿಗೆ ಪೂಜೆ ಮಾಡಬೇಕು ಎಂದುಕೊಂಡ ವೇಳೆ ಜಯಂತ್ ಮನೆಯ ಎದುರು ನಿಂತಿರುತ್ತಾನೆ. ಜಾಹ್ನವಿ ತನ್ನ ಗಂಡನ ಬಳಿ ಏನು ಮಾತನಾಡದೆ ತುಳಸಿ ದೇವರಿಗೆ ಪೂಜೆ ಮಾಡುತ್ತಾಳೆ. ಜಯಂತ್ ಜಾಹ್ನವಿ ಜೊತೆ ಮನೆಗೆ ಹೋಗುವುದಾದರೆ ಒಂದು ಮಾತು ನನ್ನ ಜೊತೆ ಹೇಳಬಹುದಾಗಿತ್ತು ಎಂದಾಗ ಜಾಹ್ನವಿ ಬಹಳ ಕೋಪದಿಂದ ನೀವು ನನ್ನ ಬಳಿ ಹೇಳಿದೆ ನನ್ನ ತವರು ಮನೆಗೆ ಬಂದ್ರಾ? ಇಲ್ಲ ಅಲ್ವಾ ಅದಕ್ಕೆ ನಾನು ಹೇಳಿಲ್ಲ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾಳೆ.
ಅಳಿಯನನ್ನು ನೋಡಿ ಶಾಕ್ ಆದ ಲಕ್ಷ್ಮೀ-ಶ್ರೀನಿವಾಸ
ಜಯಂತ್ ಮನೆಗೆ ಬಂದಿರುವುದನ್ನು ಕಂಡ ಲಕ್ಷ್ಮಿ ಹಾಗೂ ಶ್ರೀನಿವಾಸ್ ಇದೇನು ಇಷ್ಟು ಬೇಗ ಬಂದು ಬಿಟ್ಟಿರಿ. ಜಾಹ್ನವಿ ಒಂದು ನಾಲ್ಕೈದು ದಿವಸ ಇರಲಿ ಎಂದು ತಿಳಿಸಬೇಕು ಅಂದುಕೊಂಡಿದ್ವಿ ಎಂದಾಗ ಜಯಂತ್, "ನಾನು ಜಾಹ್ನವಿಯವರನ್ನು ಕರೆದುಕೊಂಡು ಹೋಗಬೇಕು ಎಂದುಕೊಂಡು ಬಂದೆ ಎಂದು ಹೇಳುತ್ತಾನೆ. ಹಾಗೆಯೇ ಜಾಹ್ನವಿಯನ್ನು ಕನ್ವಿನ್ಸ್ ಮಾಡಿ ಕರೆದುಕೊಂಡು ಹೋಗುತ್ತಾನೆ. ಜಾಹ್ನವಿಗೆ ಮಾತ್ರ ಜಯಂತ್ ಮೇಲೆ ಸಿಟ್ಟು ಇಳಿದಿರುವುದಿಲ್ಲ. ಅಜ್ಜಿಯನ್ನು ಅಮ್ಮನ ಮನೆಗೆ ಕರೆದುಕೊಂಡು ಹೋದರು ಅಜ್ಜಿಗೆ ನೆಮ್ಮದಿ ಇಲ್ಲ ಎಂದು ಮನಸ್ಸಿನಲ್ಲಿ ಬೇಸರ ಹೊರ ಹಾಕಿದ್ದಾಳೆ.
ತಾಯಿಯ ಬಳಿ ಆಶೀರ್ವಾದ ಬೇಡಿದ ಶ್ರೀನಿವಾಸ
ಶ್ರೀನಿವಾಸ ತನ್ನ ತಾಯಿಯ ಬಳಿಗೆ ಬಂದು ಅಮ್ಮ ನಾನು ಬೇರೆ ಕೆಲಸ ಹುಡುಕಬೇಕು ಎಂದುಕೊಂಡಿದ್ದೇನೆ. ನನಗೆ ಆಶೀರ್ವಾದ ಮಾಡು ಎಂದು ತನ್ನ ತಾಯಿಯ ಕೈ ಹಿಡಿದುಕೊಂಡು ತಲೆ ಮೇಲೆ ಇಟ್ಟು ಅಮ್ಮ ನನ್ನ ಕೆಲಸಕ್ಕೆ ನಿನ್ನ ಆಶೀರ್ವಾದ ನನ್ನ ಮೇಲೆ ಇರಬೇಕು ಎಂದು ಬಹಳ ಭಾವುಕದಿಂದ ಹೇಳುತ್ತಾನೆ. ಕೂಡಲೇ ಶ್ರೀನಿವಾಸ ಅವರ ತಾಯಿಯ ಕೈಗಳು ಅಲುಗಾಡಲು ಶುರು ಮಾಡಿತು. ತಾನಾಡಿದ ಮಾತಿಗೆ ತಾಯಿಯ ಸ್ಪಂದನೆ ಕಂಡು ಶ್ರೀನಿವಾಸ್‌ಗೆ ಬಹಳ ಖುಷಿ ಆಗುತ್ತದೆ.


Click it and Unblock the Notifications











