Lakshmi Nivasa Serial:ಅಜ್ಜಿ ಕನವರಿಕೆಯ ವಿಷಯ ತಿಳಿದು ಬಾಲ ಸುಟ್ಟ ಬೆಕ್ಕಿನಂತಾದ ಜಯಂತ್.. ಮುಂದೇನು?

By ಪೂರ್ವ

ಅಜ್ಜಿಗೆ ಪ್ರಜ್ಞೆ ಮರಳಿ ಬರುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಜಯಂತ್‌ನ ಬಂಡವಾಳ ಹೊರಬರುವ ದಿನ ಹತ್ತಿರ ಬಂದಿದೆ. ಅಜ್ಜಿಗೆ ಪ್ರಜ್ಞೆ ಬಂದರೆ ಏನು ಗತಿ ಎನ್ನುವ ಚಿಂತೆ ಜಯಂತ್‌ಗೆ ಕಾಡುತ್ತಿದೆ. ಅಜ್ಜಿ ಖಂಡಿತವಾಗಿಯೂ ಹುಷಾರಗುವುದಿಲ್ಲ. ಅವರು ಹುಷಾರಾಗದೆ ಇರುವ ಹಾಗೆ ನಾನು ನೋಡಿಕೊಳ್ಳಬೇಕು ಎಂದು ಅದೆಷ್ಟೋ ಪ್ರಯತ್ನ ಪಟ್ಟಿದ್ದ. ಅದೆಲ್ಲವೂ ಈಗ ಜಾಹ್ನವಿಗೆ ಗೊತ್ತಾಗಿದೆ. ಈಗ ಅಜ್ಜಿಗೆ ಪ್ರಜ್ಞೆ ಬಂದರೆ, ಮನೆಯವರಿಗೂ ಗೊತ್ತಾಗುತ್ತೆ. ಈ ಟೆನ್ಷನ್‌ನಲ್ಲಿ ಜಯಂತ್ ಇದ್ದಾನೆ.

ಜಾಹ್ನವಿಯನ್ನು ಆಕೆಯ ತಂದೆಯ ಮನೆಯಿಂದ ಕರೆದುಕೊಂಡು ಹೋದ ಜಯಂತ್ ಹೊಸ್ತಿಲಲ್ಲಿ ನಿಲ್ಲಿಸಿ ಆರತಿ ಎತ್ತಿ ಒಳಗೆ ಕರೆದುಕೊಂಡಿದ್ದಾನೆ. ಆದರೆ ಜಯಂತ್ ಬುದ್ದಿ ಗೊತ್ತಿದ್ದ ಜಾಹ್ನವಿ ಮಾತ್ರ ಪತಿಯ ಈ ವರ್ತನೆಗೆ ಕರಗಲೇ ಇಲ್ಲ. ಆತ ಏನೇ ಹೇಳಿದರೂ ಆತನ ಮಾತಿಗೆ ತಿರುಗೇಟು ಕೊಟ್ಟು ಅಲ್ಲಿಂದ ಹೊರಟು ಹೋಗಿದ್ದಾಳೆ. ಆದರೆ ಜಯಂತ್‌ಗೆ ಜಾಹ್ನವಿಯ ಮನಸನ್ನು ಹೇಗಾದರೂ ಮಾಡಿ ತನ್ನತ್ತ ಮಾಡಿಕೊಳ್ಳಬೇಕು ಎನ್ನುವ ಹಂಬಲ. ಅದಕ್ಕೆ ಏನೆಲ್ಲ ಪ್ರಯತ್ನ ಮಾಡುತ್ತಿದ್ದಾನೆ. ಇತ್ತ ಶ್ರೀನಿವಾಸ್ ಅಮ್ಮನ ಬಳಿ ತಾನು ಆಟೋ ಓಡಿಸುವುದನ್ನು ಬಿಟ್ಟು ಬೇರೆ ಕೆಲಸ ಹುಡುಕಾಡಲೇಬೇಕಾದ ಅನಿವಾರ್ಯ ಸ್ಥಿತಿಯ ಬಗ್ಗೆ ಹೇಳಿದ್ದಾರೆ.

Lakshmi Nivasa Kannada serial March 15th full episode review

ಆಗ ಆತನ ತಾಯಿ ಅಂದರೆ ಜಾಹ್ನವಿ ಅಜ್ಜಿ ಕೈಗಳನ್ನು ಮಿಟುಕಿಸಿದ್ದಾರೆ. ಇದನ್ನು ನೋಡಿ ಶ್ರೀನಿವಾಸ್ ಮನೆ ಮಂದಿಯನ್ನೆಲ್ಲ ಕರೆದು ಬಹಳ ಖುಷಿಪಟ್ಟಿದ್ದಾರೆ. ಅಬ್ಬಾ ತನ್ನ ಅಮ್ಮ ಈಗಲಾದರೂ ಪ್ರತಿಕ್ರಿಯೆ ನೀಡಿದರಲ್ಲ ಎಂದು ಶ್ರೀನಿವಾಸ ರಾಯರು ಖುಷಿಪಡುತ್ತಾರೆ. ಈ ವಿಚಾರವನ್ನು ಮನೆಮಂದಿಗೆ ತಿಳಿಸಿದಾಗ ಮನೆಯವರೆಲ್ಲರೂ ಖುಷಿ ಪಡುತ್ತಾರೆ. ಹಾಗೆಯೇ ಓಡಿಕೊಂಡು ಅಜ್ಜಿಯ ಬಳಿಗೆ ಬರುತ್ತಾರೆ. ಶ್ರೀನಿವಾಸ ರಾಯರು ಕೂಡಲೇ ಡಾಕ್ಟರ್‌ಗೆ ಕರೆ ಮಾಡುತ್ತಾರೆ. ಡಾಕ್ಟರ್ ಮನೆಗೆ ಬಂದು ಅಜ್ಜಿಯನ್ನು ನೋಡುವ ವೇಳೆಗೆ ಜಯಂತ್ ಎಂದು ಕನವರಿಸುತ್ತಿರುತ್ತಾರೆ. ಡಾಕ್ಟರ್ ಆಕೆಯ ಸ್ಥಿತಿ ನೋಡಿ ಶ್ರೀನಿವಾಸ್ ಬಳಿ ಜಯಂತ್ ಯಾರು? ನಿಮ್ಮ ಅಳಿಯ ಅಲ್ವಾ. ಅವರು ಆದಷ್ಟು ಬೇಗ ನಿಮ್ಮ ಮನೆಗೆ ಬಂದರೆ ಒಳ್ಳೆಯದು. ಅವರ ಬಗ್ಗೆ ಕನವರಿಕೆ ಮಾಡುತ್ತಿರುವುದರಿಂದ ಅವರನ್ನು ಆದಷ್ಟು ಬೇಗ ಇಲ್ಲಿಗೆ ಕರೆಸಿದರೆ ಉತ್ತಮ. ಅವರಿಗೆ ಪ್ರಜ್ಞೆ ಬರಬಹುದು ಎಂದು ಹೇಳುತ್ತಾರೆ.

ಜಯಂತ್‌ಗೆ ಕರೆ ಮಾಡಿದ ವೀಣಾ

ಡಾಕ್ಟರ್ ಹೇಳಿದ ಮಾತು ಕೇಳಿ ವೀಣಾ ಜಯಂತ್‌ಗೆ ಕರೆ ಮಾಡುತ್ತಾಳೆ. ಆದರೆ, ಜಯಂತ್ ವೀಣಾ ಕರೆಯನ್ನು ಸ್ವೀಕಾರಿಸುವುದಿಲ್ಲ. ಜಯಂತ್ ಪಕ್ಕದಲ್ಲಿಯೇ ಜಾಹ್ನವಿ ಇದ್ದಿದ್ದರಿಂದ ಕರೆಯನ್ನು ಸ್ವೀಕರಿಸುವುದಿಲ್ಲ. ಆಗ ಗಂಡನಿಗೆ ನಿಮ್ಮ ಮೊಬೈಲ್‌ಗೆ ಅಷ್ಟೆಲ್ಲ ಕರೆ ಬರುತ್ತಿದ್ದರೂ ಯಾಕೆ ಮಾತನಾಡುತ್ತಿಲ್ಲ ಎಂದಾಗ, ಜಯಂತ್ ಅದ್ಯಾವುದೋ ನಂಬರ್‌ ನಾನು ಹಾಗೆಲ್ಲ ಕರೆಗಳನ್ನು ರಿಸೀವ್ ಮಾಡಲ್ಲ ಎಂದು ಹೇಳುತ್ತಾನೆ. ಕೂಡಲೇ ಜಾಹ್ನವಿ ಜಯಂತ್ ಮೊಬೈಲ್ ಅನ್ನು ಕಿತ್ತುಕೊಂಡು ಯಾರು ಕರೆ ಮಾಡುತ್ತಿರುವುದು ಎಂದು ನೋಡಿದಾಗ ಜಾಹ್ನವಿಗೆ ಆಶ್ಚರ್ಯ ಆಗುತ್ತೆ. ಜಯಂತ್‌ಗೆ ಕರೆ ಮಾಡಿದ್ದು ಬೇರೆ ಯಾರೂ ಅಲ್ಲ ಜಾಹ್ನವಿ ಅತ್ತಿಗೆ ವೀಣಾ. ಜಾಹ್ನವಿ ಜಯಂತ್ ಬಳಿ ವೀಣಾ ಅತ್ತಿಗೆ ಕರೆ ಮಾಡಿದ್ದಾರೆ. ವೀಣಾ ಅತ್ತಿಗೆ ಯಾರಿಗೂ ಹಾಗೆಲ್ಲ ಕರೆ ಮಾಡಿದವರಲ್ಲ. ಏನಾದರೂ ಕಾರಣ ಇದ್ದರೆ ಮಾತ್ರ ಅವರು ಕರೆ ಮಾಡುತ್ತಾರೆ ಎಂದು ಹೇಳಿ ಜಯಂತ್‌ಗೆ ಪೋನ್ ರಿಸೀವ್ ಮಾಡಲು ಹೇಳುತ್ತಾರೆ.

Lakshmi Nivasa Kannada serial March 15th full episode review

ಅಜ್ಜಿ ವಿಚಾರಕ್ಕೆ ಭಯಗೊಂಡ ಜಯಂತ್

ಜಯಂತ್ ವೀಣಾ ಬಳಿ ಮಾತನಾಡಿದಾಗ "ದಯವಿಟ್ಟು ಕ್ಷಮಿಸಿ, ನೀವು ಬ್ಯುಸಿ ಇದ್ದೀರಿ ಎಂದು ಕಾಣುತ್ತೆ. ಆದರೆ, ಒಂದು ವಿಚಾರ ನಿಮಗೆ ತಿಳಿಸಲು ನಾನು ಕರೆ ಮಾಡಬೇಕಾಯಿತು. ಅಜ್ಜಿ ಈಗಾಗಲೇ ನಿಮ್ಮ ಹೆಸರನ್ನು ಕನವರಿಸುತ್ತಿದ್ದಾರೆ. ನೀವು ಇಲ್ಲಿಗೆ ಬರಲು ಮಾವ ಹೇಳಿದ್ರು. ಹಾಗೆಯೇ ಡಾಕ್ಟರ್ ಕೂಡ ನೀವು ಇಲ್ಲಿಗೆ ಬರಬೇಕು ಎಂದು ಹೇಳಿದ್ದಾರೆ ಎಂದಾಗ, ಜಯಂತ್ ಜೀವ ಬಾಯಿಗೆ ಬಂದ ಹಾಗೆ ಆಗುತ್ತದೆ. ಆಗ ಜಯಂತ್ ಬಹಳಷ್ಟು ಭಯಪಡುತ್ತಾನೆ. ಜಯಂತ್ ಪಾಡು ನೋಡಿ ಜಾಹ್ನವಿಗೆ ನಗು ತಡೆದುಕೊಳ್ಳಲು ಆಗುವುದಿಲ್ಲ. ಈ ಬಾರಿ ತನ್ನ ಗಂಡ ಎಲ್ಲರ ಮುಂದೆ ಸಿಕ್ಕಿಬೀಳುವುದು ಖಂಡಿತ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ.

ಭಾವನಾಗೆ ಸಿದ್ದು ಮೇಲೆ ಪ್ರೀತಿಯಾಗಿದ್ಯಾ?

ಭಾವನಾ, ಸಿದ್ದು ಹಾಗೂ ಸಿದ್ದು ತಾಯಿಯನ್ನು ಒಂದುಗೂಡಿಸುವ ಪ್ರಯತ್ನ ಪಡುತ್ತಿದ್ದಾಳೆ. ಭಾವನಾಗೆ ತನ್ನಿಂದಾಗಿ ಸಿದ್ದು ಹಾಗೂ ಅವರ ತಾಯಿ ದೂರ ಇರುವುದು ಸರಿ ಕಾಣಿಸುತ್ತಿಲ್ಲ. ಆದ್ದರಿಂದ ಸಿದ್ದು ಹಾಗೂ ಆತನ ತಾಯಿಯನ್ನು ದೂರದಿಂದಲೇ ಒಂದು ಮಾಡುತ್ತಿದ್ದಾಳೆ. ಭಾವನಾಗೆ ಸಿದ್ದು ಮೇಲೆ ಕೊಂಚ ಮಟ್ಟಿಗೆ ಪ್ರೀತಿ ಶುರುವಾಗಿರುವುದು ವೀಕ್ಷಕರ ಗಮನಕ್ಕೂ ಬಂದಿದೆ.

More from Filmibeat

English summary
Lakshmi Nivasa Kannada serial March 15th full episode review
Read more about: tv show serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X